ಸರ್ಕಾರದ ಆದೇಶವನ್ನ ಗಾಳಿಗೆ ತೂರಿದ ಪ್ರತಿಷ್ಠಿತ ಹೋಟೆಲ್ ವಿರುದ್ಧ ದೂರು ದಾಖಲು!
ಬೆಳಗಿನ ಜಾವ ನಾಲ್ಕು ಗಂಟೆಯವರೆಗೂ ಅನಧಿಕೃತವಾಗಿ ಎಂಪೈರ್ ಹೋಟೆಲ್ ಓಪನ್!
ನಗರದಾದ್ಯಂತ ಎಲ್ಲ ಹೋಟೆಲ್ಗಳು ಸರ್ಕಾರದ ನೀಡಿದ ಆದೇಶ ಪಾಲನೆಗೆ ಒತ್ತಾಯ!
ಬೆಂಗಳೂರು: ರೂಲ್ಸ್ ಅಂದ್ರೆ ರೂಲ್ಸ್ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆಯಂತಿದ್ದರೇ ಹೇಗೆ? ನಿಯಮ ಎಲ್ಲರಿಗೂ ಒಂದೇ ಆಗಿರ್ಬೇಕಲ್ವಾ? ಆದರೆ ಇಲ್ಲೊಂದು ಪ್ರತಿಷ್ಠಿತ ಹೋಟೆಲ್ ನಾನು ಈ ಗುಂಪಿಗೆ ಸೇರಲ್ಲ ಅಂತ ರಾಜಾರೋಷವಾಗಿ ಸರ್ಕಾರದ ನಿಯಮ ಬ್ರೇಕ್ ಮಾಡ್ತಿದೆಯಂತೆ. ಬೆಂಗಳೂರು ನಗರದಾದ್ಯಂತ ಹೋಟೆಲ್ ಉದ್ಯಮ ನಡೆಸಲಿಕ್ಕೆ ತಡರಾತ್ರಿ ಒಂದು ಗಂಟಯವರೆಗೂ ಅವಕಾಶವಿರುತ್ತದೆ. ಆದ್ರೆ, ಸರ್ಕಾರದ ಆದೇಶವನ್ನ ಗಾಳಿಗೆ ತೂರಿರೋ ಆರೋಪ ನಗರದ ಪ್ರತಿಷ್ಠಿತ ಹೋಟೆಲ್ ವಿರುದ್ಧ ಕೇಳಿ ಬಂದಿದೆ.
ಎಂಪೈರ್ ಹೋಟೆಲ್ ವಿರುದ್ಧ ಇಂತಹದೊಂದು ಆರೋಪ ಕೇಳಿ ಬಂದಿದೆ. ಈ ಬಗ್ಗೆ ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಗಿರೀಶ್ ಕುಮಾರ್ ನಾಯ್ಡು ನಗರ ಪೊಲೀಸ್ ಆಯುಕ್ತ ಹಾಗೂ ಗೃಹಸಚಿವರಿಗೆ ಎರಡನೇ ಬಾರಿಗೆ ದೂರು ನೀಡಿದ್ದಾರೆ. ಕಳೆದ ಜನವರಿ ಮೂರರಂದು ಖುದ್ದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ರನ್ನ ಭೇಟಿ ಮಾಡಿ ಗಿರೀಶ್ ಕುಮಾರ್ ನಾಯ್ಡು ಎಂಪೈರ್ ಹೋಟೆಲ್ ವಿರುದ್ಧ ದೂರು ನೀಡಿದ್ರು. ತಡರಾತ್ರಿ ಒಂದರ ನಂತರ ಬೆಳಗಿನ ಜಾವ ಮೂರು ಗಂಟೆ ಇಲ್ಲ ಅಂದ್ರೆ ನಾಲ್ಕು ಗಂಟೆಯವರೆಗೂ ಅನಧಿಕೃತವಾಗಿ ನಿಯಮಗಳನ್ನ ಗಾಳಿಗೆ ತೂರಿ ಹೋಟೆಲ್ ನಡೆಸ್ತಿದ್ದಾರೆಂದು ಆರೋಪಿಸಿದ್ರು. ರಾತ್ರಿ ಒಂದರ ನಂತರ ಎಂಪೈರ್ ಹೋಟೆಲ್ ಗ್ರಾಹಕರಿಗೆ ನೀಡಿದ್ದ ಬಿಲ್ ಸಮೇತವಾಗಿ ದೂರು ಸಲ್ಲಿಸಿದ್ದರು.
ಈ ವೇಳೆ ಖುದ್ದು ಪೊಲೀಸ್ ಕಮಿಷನರ್ ಸೂಕ್ತ ಕ್ರಮದ ಭರವಸೆ ನೀಡಿದ್ರು. ಆದ್ರೆ, ಮೊದಲ ದೂರು ನೀಡಿ ಹತ್ತು ದಿನ ಕಳೆದ್ರು ಯಾವುದೇ ಕ್ರಮವಾಗದ ಹಿನ್ನಲೆ, ಇಂದು ಮತ್ತೆ ಪೊಲೀಸ್ ಕಮಿಷನರ್, ಬಿಬಿಎಂಪಿ ಆರೋಗ್ಯಾಧಿಕಾರಿಗಳು ಹಾಗೂ ಗೃಹ ಸಚಿವರಿಗೆ ಗಿರೀಶ್ ಕುಮಾರ್ ನಾಯ್ಡು ದೂರು ನೀಡಿದ್ದಾರೆ. ನಗರದಾದ್ಯಂತ ಎಲ್ಲ ಹೋಟೆಲ್ಗಳು ಸರ್ಕಾರದ ಆದೇಶವನ್ನ ಕಟ್ಟುನಿಟ್ಟಾಗಿ ಪಾಲನೆ ಮಾಡ್ತಿವೆ. ಆದ್ರೆ, ಪ್ರತಿಷ್ಠಿತ ಎಂಪೈರ್ ಹೋಟೆಲ್ಗೆ ಈ ರೂಲ್ಸ್ ಅನ್ವಯವಾಗಲ್ವ ಅಂತ ಪೊಲೀಸ್ ಆಯುಕ್ತರನ್ನ ದೂರುದಾರರು ಪ್ರಶ್ನಿಸಿದ್ದಾರೆ. ಅಲ್ಲದೇ ಸಂಬಂಧಪಟ್ಟ ಕೆಲ ಅಧಿಕಾರಿಗಳು ಸಹ ಎಲ್ಲವೂ ಗೊತ್ತಿದ್ರು ಏನು ತಿಳಿಯದ ಹಾಗೇ ಜಾಣ ಕುರುಡುತನ ಪ್ರದರ್ಶನ ಮಾಡ್ತಿದ್ದಾರೆ ಎಂಬ ಆರೋಪವೂ ಇದೆ. ಅದೇನೇ ಇರಲಿ ಸರ್ಕಾರದ ಆದೇಶವನ್ನ ಉಲ್ಲಂಘಿಸುವವರು ಯಾರೇ ಆದರೂ ಕಾನೂನು ಅಡಿಯಲ್ಲಿ ಕ್ರಮ ಆಗಬೇಕಲ್ವಾ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ