ಸ್ಟಾರ್ ನಟ ವಿಜಯ್ ಮಾಡಿದ ತಪ್ಪಾದರೂ ಏನು..?
RTC ಕಾರ್ಯಕರ್ತ ನೀಡಿದ ದೂರಿನ ಮೇಲೆ ಕೇಸ್
ವಿಜಯ್ ಸೇರಿ ಯಾರೆಲ್ಲ ವಿರುದ್ಧ ಕೇಸ್ ಆಗಿದೆ ಗೊತ್ತಾ?
ತಲಪತಿ ವಿಜಯ್ ವಿರುದ್ಧ ಡ್ರಗ್ಸ್ ವೈಭವೀಕರಣ ಆರೋಪದ ಮೇಲೆ ಕೇಸ್ ದಾಖಲಾಗಿದೆ. ವಿಜಯ್ ಅಭಿನಯದ 2023ರ ಬಹು ನಿರೀಕ್ಷಿತ ಚಿತ್ರ ‘ಲಿಯೋ’. ಲೋಕೇಶ್ ಕನಗರಾಜ್ ನಿರ್ದೇಶನದ ಈ ಚಿತ್ರವು ಅಕ್ಟೋಬರ್ನಲ್ಲಿ ತೆರೆ ಕಾಣಲಿದೆ.
ಜೂನ್ 22 ರಂದು ವಿಜಯ್ ತಮ್ಮ 49ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಂಭ್ರಮದಲ್ಲಿ ಚಿತ್ರ ತಂಡವು ‘ನಾ ರೆಡಿ’ (Naa Ready ) ಹಾಡನ್ನು ರಿಲೀಸ್ ಮಾಡಿತ್ತು. ಈ ಹಾಡು ಸಖತ್ ಹಿಟ್ ಆಗಿದ್ದು, ಎಲ್ಲರ ಬಾಯಲ್ಲೂ ಗುನುಗುತ್ತಿದೆ. ಇದರ ಮಧ್ಯೆ ಇದೇ ಹಾಡಿಗೆ ವಿಜಯ್ ಸೇರಿ ಇಡೀ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ.
ಹಾಡಿನಲ್ಲಿ ಡ್ರಗ್ಸ್ ವೈಭವೀಕರಣ ಆಗಿದೆ ಎಂದು ಆರೋಪಿಸಿ ಆರ್ಟಿಐ ಕಾರ್ಯಕರ್ತ ಸೆಲ್ವಂ ದೂರು ದಾಖಲಿಸಿದ್ದಾರೆ. ಚೆನ್ನೈ ಕೊರುಕ್ಕುಪ್ಪೆಟ್ಟೈ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ಡ್ರಗ್ಸ್ ಮಾತ್ರವಲ್ಲ ರೌಡಿಸಂಗೂ ಹಾಡಿನಲ್ಲಿ ಪ್ರಚೋದನೆ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ಜೂನ್ 25 ರಂದು ಕೇಸ್ ದಾಖಲಾಗಿದ್ದು, ನಾರ್ಕೊಟಿಕ್ಸ್ ಕಂಟ್ರೋಲ್ ಅಡಿಯಲ್ಲಿ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ದೇಶದಲ್ಲಿ ಡ್ರಗ್ಸ್ ದಂಧೆ ಕೇಳಿಬಂದ ಬೆನ್ನಲ್ಲೇ, ಚೆನ್ನೈನ ಪೊಲೀಸರು ಅಭಿಯಾನ ನಡೆಸಿದ್ದರು. ರಾಜ್ಯಾದ್ಯಂತ ನಡೆದ ಈ ಅಭಿಯಾನದಲ್ಲಿ ನಟ ಕಾರ್ತಿ ಮತ್ತು ವಿಜಯ್ ಕೂಡ ಪ್ರಮುಖ ರೂವಾರಿಗಳಾಗಿದ್ದರು.
ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್