newsfirstkannada.com

ನಂಗೂ ಫ್ರೀ.. ನಿಂಗೂ ಫ್ರೀ.. ಎಲ್ಲರಿಗೂ ಫ್ರೀನಾ.. ಇವತ್ತು ಗ್ಯಾರಂಟಿ ಯೋಜನೆಗಳಿಗೆ ಕಂಡೀಷನ್ಸ್‌ ಫೈನಲ್! 

Share :

01-06-2023

  ‘ಗ್ಯಾರಂಟಿ’ಗಳ ಜಾರಿ ಮಾಡಲು ಕಾಂಗ್ರೆಸ್ ಕಸರತ್ತು

  ಇವತ್ತು 3 ‘ಗ್ಯಾರಂಟಿ’ಗಳಿಗೆ ಷರತ್ತು ಫೈನಲ್ ಸಾಧ್ಯತೆ

  ‘ಗ್ಯಾರಂಟಿ’ ಯೋಜನೆಗೆ ಹಾಕೋ ಕಂಡೀಷನ್ಸ್ ಏನು?

ರಾಜ್ಯದಲ್ಲಿ ಎಲ್ಲಿ ಹೋದ್ರೂ ಗ್ಯಾರಂಟಿಗಳದ್ದೇ ಚರ್ಚೆ.. ಗ್ಯಾರಂಟಿಗಳದ್ದೇ ಮಾತು.. ಮತದಾರರಿಗೆ ಪಂಚ ಗ್ಯಾರಂಟಿಗಳನ್ನ ನೀಡಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಇದೀಗ ಸರ್ಕಾರದ ಮೇಲೆ ಗ್ಯಾರಂಟಿಯ ಒತ್ತಡ ಹೆಚ್ಚಾಗಿದೆ. ಈ ಗ್ಯಾರಂಟಿ ಗುದ್ದಾಟಗಳಿಗೆ ಬ್ರೇಕ್ ಹಾಕಲು ಸಿಎಂ ಸಿದ್ದರಾಮಯ್ಯ ಸಜ್ಜಾಗಿದ್ದಾರೆ. ಇವತ್ತು ಗ್ಯಾರಂಟಿಗಳಿಗೆ ಹಾಕುವ ಕಂಡೀಷನ್ಸ್‌ ಫೈನಲ್ ಮಾಡಲಿದ್ದಾರೆ.

ನಂಗೂ ಫ್ರೀ.. ನಿಂಗೂ ಫ್ರೀ.. ಎಲ್ಲರಿಗೂ ಫ್ರೀ ಅಂತಾ ಎಲೆಕ್ಷನ್‌ಗೂ ಮುನ್ನ ‘ಕೈ’ ಪಾಳಯ ಗ್ಯಾರಂಟಿ ಘೋಷಣೆಗಳನ್ನ ತೂರಿ ಬಿಟ್ಟಿತ್ತು. ಕಾಂಗ್ರೆಸ್‌ನ ಗ್ಯಾರಂಟಿಗಳಿಗೆ ಮರುಳಾಗಿದ್ದ ಜನ ಕಾಂಗ್ರೆಸ್ ಕೈ ಹಿಡಿದಿದ್ರು.. ಇದೀಗ ಗ್ಯಾರಂಟಿಗಳ ಜಾರಿಗೆ ಕಾಂಗ್ರೆಸ್ ನಾಯಕರು ಕಸರತ್ತು ನಡೆಸ್ತಿದ್ದಾರೆ.. ಎರಡನೇ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಪಂಚ ಗ್ಯಾರಂಟಿಗಳನ್ನ ಘೋಷಿಸಲು ಸಿದ್ಧತೆ ನಡೆಸಿದ್ದಾರೆ.

ಗೃಹಲಕ್ಷ್ಮೀ, ಅನ್ನಭಾಗ್ಯ.. ಗೃಹ ಜ್ಯೋತಿ.. ಯುವನಿಧಿ.. ಮಹಿಳೆಯರಿಗೆ ಫ್ರೀ ಬಸ್ ಪಾಸ್‌.. ಈ ಐದು ಗ್ಯಾರಂಟಿಗಳ ಜಾರಿಗೆ ಸಿಎಂ ಸಿದ್ದರಾಮಯ್ಯ ಸರ್ಕಾರ ಷರತ್ತುಗಳ ಮೊರೆ ಹೋಗಿದೆ.. ಅದರಲ್ಲೂ 200 ಯುನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಫ್ರೀ ಬಸ್‌, ಮನೆ ಯಜಮಾನಿಗೆ 2 ಸಾವಿರ ರೂಪಾಯಿ ನೀಡೋದೆ ಸರ್ಕಾರಕ್ಕೆ ತಲೆನೋವು ತರಿಸಿದೆ. ಸಾಲು ಸಾಲು ಸಭೆಗಳು, ಸಮಾಲೋಚನೆಗಳು, ಚರ್ಚೆಗಳೂ ನಡೆದಿವೆ.. ಇದೀಗ ಗ್ಯಾರಂಟಿಗಳ ಘೋಷಣೆಗೆ ಫೈನಲ್ ಹಂತಕ್ಕೆ ಬಂದಿದ್ದು, ಇವತ್ತು ಮೂರು ಗ್ಯಾರಂಟಿಗಳ ಮೇಲೆ ಹಾಕಬಹುದಾದ ಷರತ್ತುಗಳ ಬಗ್ಗೆ ಚರ್ಚೆ ನಡೆಯಲಿದೆ.

ಇವತ್ತು ‘ಗ್ಯಾರಂಟಿ’ಗೆ ಕಂಡೀಷನ್ಸ್‌!

 • 200 ಯೂನಿಟ್ ಉಚಿತ ವಿದ್ಯುತ್, 10 ಕೆ.ಜಿ ಅನ್ನಭಾಗ್ಯ ಅಕ್ಕಿ
 • ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಬಗ್ಗೆ ನಿಯಮ
 • ಕನಿಷ್ಠ ಪ್ರಮಾಣದ ಷರತ್ತು, ಗರಿಷ್ಠ ಲಾಭ ಸಿಗುವಂತೆ ಯೋಜನೆ
 • ಗ್ಯಾರಂಟಿಗಳಿಗೆ ಷರತ್ತು ಜಟಿಲವಾದ್ರೆ ಜನ ತಿರುಗಿಬೀಳಬಹುದು
 • ಮೊದಲು ಸರಳ ಷರತ್ತುಗಳೇ ಇರಲಿ, ಕೂಡಲೇ ಗ್ಯಾರಂಟಿ ಬರಲಿ
 • ಮುಂದಿನ ದಿನಗಳಲ್ಲಿ ಷರತ್ತುಗಳ ಬದಲಿಸಲು ಅವಕಾಶ ಇರುತ್ತೆ
 • ಪರಿಸ್ಥಿತಿ ನೋಡಿಕೊಂಡು ಷರತ್ತುಗಳನ್ನು ಬದಲಾಯಿಸಬಹುದು
 • ಬಜೆಟ್ ಬಳಿಕ ನಿರುದ್ಯೋಗ ಭತ್ಯೆ 3 ಸಾವಿರ ಜಾರಿ ಸಾಧ್ಯತೆ
 • ವರಮಹಾಲಕ್ಷ್ಮಿ ಹಬ್ಬ ಅಥವಾ ಗೌರಿಹಬ್ಬಕ್ಕೆ ಗೃಹಲಕ್ಷ್ಮಿ ಜಾರಿ
 • ದಾವಣಗೆರೆಯಲ್ಲಿ ದೊಡ್ಡ ಸಮಾವೇಶ ಮಾಡಿ ಗ್ಯಾರಂಟಿ ಜಾರಿ

200 ಯೂನಿಟ್ ಉಚಿತ ವಿದ್ಯುತ್, 10 ಕೆ.ಜಿ ಅನ್ನಭಾಗ್ಯ ಅಕ್ಕಿ, ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಮೇಲೆ ಹಾಕಲಾಗುವ ಷರತ್ತುಗಳ ಬಗ್ಗೆ ಮತ್ತೆ ಇವತ್ತು ಚರ್ಚೆ ನಡೆಯಲಿದೆ. ಈಗಾಗಲೇ ಸಚಿವರು ಕೆಲ ಸಲಹೆಗಳನ್ನ ನೀಡಿದ್ದು, ಕನಿಷ್ಠ ಪ್ರಮಾಣದ ಷರತ್ತು. ಗರಿಷ್ಠ ಲಾಭ ಸಿಗುವಂತೆ ಯೋಜನೆ ಜಾರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಗ್ಯಾರಂಟಿಗಳಿಗೆ ಹಾಕುವ ಷರತ್ತು ಜಠಿಲವಾದ್ರೆ ಜನ ತಿರುಗಿಬೀಳಬಹುದು. ಹೀಗಾಗಿ ಮೊದಲು ಸರಳ ಷರತ್ತುಗಳೇ ಇರಲಿ, ಕೂಡಲೇ ಗ್ಯಾರಂಟಿ ಜಾರಿಗೆ ಬರಲಿ ಎಂಬ ಅಭಿಪ್ರಾಯ ತಿಳಿಸಿದ್ದಾರಂತೆ. ಇನ್ನೂ ಮುಂದಿನ ದಿನಗಳಲ್ಲಿ ಷರತ್ತುಗಳ ಬದಲಿಸಲು ಅವಕಾಶ ಇರುತ್ತೆ. ಪರಿಸ್ಥಿತಿ ನೋಡಿಕೊಂಡು ಷರತ್ತುಗಳನ್ನು ಬದಲಾಯಿಸಬಹುದು ಅಂತಾ ನಿನ್ನೆ ನಡೆದ ಸಭೆಯಲ್ಲಿ ಸಚಿವರು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇನ್ನೂ ಬಜೆಟ್ ಬಳಿಕ ನಿರುದ್ಯೋಗ ಭತ್ಯೆ 3 ಸಾವಿರ ಜಾರಿಯಾಗುವ ಸಾಧ್ಯತೆ ಇದೆ. ವರಮಹಾಲಕ್ಷ್ಮಿ ಹಬ್ಬ ಅಥವಾ ಗೌರಿಹಬ್ಬಕ್ಕೆ ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಲು ಚಿಂತನೆ ನಡೆದಿದೆ. ದಾವಣಗೆರೆಯಲ್ಲಿ ದೊಡ್ಡ ಸಮಾವೇಶ ಮಾಡಿ ಗ್ಯಾರಂಟಿಗಳ ಜಾರಿಗೆ ಕಾಂಗ್ರೆಸ್ ನಾಯಕರು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಸಿಎಂ ಸಿದ್ದರಾಮಯ್ಯ ನಡೆಸಿದ್ದ ಸಭೆಯಲ್ಲಿ ಗ್ಯಾರಂಟಿ ಜಾರಿ ಮಾಡಿಯೂ ಉಳಿತಾಯ ಮಾಡೋದು ಹೇಗೆ ಎಂಬ ಲೆಕ್ಕವನ್ನ ಅಧಿಕಾರಿಗಳು ಸಿದ್ಧಪಡಿಸಿದ್ದಾರೆ.

‘ಗ್ಯಾರಂಟಿ’ ಉಳಿತಾಯ ಲೆಕ್ಕ

 • ಶೇ.17.5 ಕುಟುಂಬಗಳನ್ನ ಮಹಿಳೆಯರು ನಡೆಸುತ್ತಿದ್ದಾರೆ
 • ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಮಾಹಿತಿ
 • ಕರ್ನಾಟಕದಲ್ಲಿ ಇದರ ಪಾಲು ಶೇ. 25ರಷ್ಟಿರುವ ಮಾಹಿತಿ
 • ಕುಟುಂಬ ದತ್ತಾಂಶದಲ್ಲಿ 57.5 ಲಕ್ಷ ಮಹಿಳೆಯರಿಗೆ ಪಿಂಚಣಿ
 • ಒಂದಲ್ಲ ಒಂದು ಪಿಂಚಣಿ ಪಡೆಯುತ್ತಿರುವ ಮಹಿಳೆಯರು
 • ಪಿಂಚಣಿ ಸರಾಸರಿ 1,000 ರೂ. ಎಂದು ಪಡೆದರೆ ಕಡಿತ
 • ಗೃಹಲಕ್ಷ್ಮೀ ಯೋಜನೆ ₹2 ಸಾವಿರದಲ್ಲಿ ₹1,000 ಕಡಿತ
 • 1,000 ಕಡಿತಗೊಳಿಸಿದ್ರೆ ಒಟ್ಟು 3,600 ಕೋಟಿ ವೆಚ್ಚ ಇಳಿಕೆ
 • ಬೇರೆ ರಾಜ್ಯಗಳಿಂದ ಅಕ್ಕಿಯನ್ನ ಖರೀದಿಸಿದರೆ ವೆಚ್ಚ ಅಧಿಕ
 • ರಾಜ್ಯದಲ್ಲಿ ಭತ್ತ ಖರೀದಿಸಿ, ಮಿಲ್ಲಿಂಗ್ ಮಾಡಿಸಿದರೆ ಒಳಿತು
 • ರೈತರಿಗೆ ನೆರವಾಗುವ ಜೊತೆಗೆ ಕಡಿಮೆ ದರದಲ್ಲಿ ಅಕ್ಕಿ ಸಿಗಲಿದೆ
 • ಸಭೆಯಲ್ಲಿ ಸರ್ಕಾರಕ್ಕೆ ಮಾಹಿತಿ ನೀಡಿರುವ ಅಧಿಕಾರಿಗಳು

ದೇಶದಲ್ಲಿ ಶೇ.17.5ರಷ್ಟು ಕುಟುಂಬಗಳನ್ನ ಮಹಿಳೆಯರು ನಡೆಸುತ್ತಿದ್ದಾರೆ ಅಂತಾ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಮಾಹಿತಿ ನೀಡಿದೆ.. ಕರ್ನಾಟಕದಲ್ಲಿ ಇದರ ಪಾಲು ಶೇಕಡ 25ರಷ್ಟಿದೆ ಎಂಬ ಮಾಹಿತಿ ಇದೆ.. ಇನ್ನೂ ಕುಟುಂಬ ದತ್ತಾಂಶದಲ್ಲಿ 57.5 ಲಕ್ಷ ಮಹಿಳೆಯರು ಒಂದಲ್ಲ ಒಂದು ಪಿಂಚಣಿ ಪಡೆಯುತ್ತಿದ್ದಾರೆ. ಈ ಪಿಂಚಣಿ ಸರಾಸರಿ 1,000 ರೂಪಾಯಿ ಎಂದು ಪಡೆಯುತ್ತಿದ್ದರೆ ಅದನ್ನ ಕಡಿತಗೊಳಿಸುವ ಲೆಕ್ಕಾಚಾರ ಹಾಕಲಾಗಿದೆ.. ಅಂದ್ರೆ ಗೃಹ ಲಕ್ಷ್ಮೀ ಯೋಜನೆಗೆ ನೀಡಲಾಗುವ ₹2 ಸಾವಿರದಲ್ಲಿ ₹1,000 ಕಡಿತಗೊಳಿಸುವುದು. 1,000 ಕಡಿತಗೊಳಿಸಿದ್ರೆ ಒಟ್ಟು 3,600 ಕೋಟಿ ರೂಪಾಯಿ ವೆಚ್ಚ ಇಳಿಕೆಯಾಗಲಿದೆ ಅಂತಾ ಅಧಿಕಾರಿಗಳು ಸಲಹೆ ನೀಡಿದ್ದಾರೆ.. ಇನ್ನೂ ಅನ್ನಭಾಗ್ಯಕ್ಕೆ ಬೇರೆ ರಾಜ್ಯಗಳಿಂದ ಅಕ್ಕಿಯನ್ನ ಖರೀದಿಸಿದರೆ ವೆಚ್ಚ ಅಧಿಕವಾಗಲಿದೆ.. ಹೀಗಾಗಿ ರಾಜ್ಯದಲ್ಲಿ ಭತ್ತ ಖರೀದಿಸಿ, ಮಿಲ್ಲಿಂಗ್ ಮಾಡಿಸಿದರೆ ಒಳಿತು.. ರೈತರಿಗೆ ನೆರವಾಗುವ ಜೊತೆಗೆ ಕಡಿಮೆ ದರದಲ್ಲಿ ಅಕ್ಕಿ ಸಿಗಲಿದೆ ಅಂತಾ ಸರಣಿ ಸಭೆಗಳಲ್ಲಿ ಸರ್ಕಾರಕ್ಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾಂಗ್ರೆಸ್​ ಗ್ಯಾರಂಟಿ ಘೋಷಣೆ ಕುರಿತು ಸಿಎಂ ಸಿದ್ದರಾಮಯ್ಯ ಸರಣಿ ಸಭೆಗಳನ್ನು ನಡೆಸಿದ್ದಾರೆ. ಇದೀಗ ಇವತ್ತೂ ಗ್ಯಾರಂಟಿಯ ಬಗ್ಗೆ ಮತ್ತಷ್ಟು ಚರ್ಚೆ ನಡೆಸುವ ಸಾಧ್ಯತೆ ಇದೆ. ಹೀಗಾಗಿ ಇವತ್ತು ನಡೆಯಬೇಕಿದ್ದ ಸಚಿವ ಸಂಪುಟ ಸಭೆಯನ್ನು ನಾಳೆಗೆ ಮುಂದೂಡಿಕೆ ಮಾಡಿದ್ದಾರೆ. ಶುಕ್ರವಾರ ಅಂದ್ರೆ ನಾಳೆ ಗ್ಯಾರೆಂಟಿ ಜಾರಿ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ನಾಳೆ ನಡೆಯಲಿರೋ ಸಂಪುಟ ಸಭೆಯಲ್ಲಿ ಗ್ಯಾರಂಟಿಗೆ ಜಾರಿಗೆ ಗ್ರೀನ್ ಸಿಗ್ನಲ್ ಸಿಗುತ್ತಾ? ರಾಜ್ಯದ ಜನರಿಗೆ ಗ್ಯಾರಂಟಿ ಶುಭ ಶುಕ್ರವಾರವಾಗುತ್ತಾ? ಅನ್ನೋದೇ ಈಗಿರೋ ಪ್ರಶ್ನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ನಂಗೂ ಫ್ರೀ.. ನಿಂಗೂ ಫ್ರೀ.. ಎಲ್ಲರಿಗೂ ಫ್ರೀನಾ.. ಇವತ್ತು ಗ್ಯಾರಂಟಿ ಯೋಜನೆಗಳಿಗೆ ಕಂಡೀಷನ್ಸ್‌ ಫೈನಲ್! 

https://newsfirstlive.com/wp-content/uploads/2023/06/Congress-3.jpg

Load More