ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಮಹಾ ನಿರ್ಧಾರಕೈಗೊಂಡ ಕಾಂಗ್ರೆಸ್ ಪಕ್ಷ
ಲೋಕಸಭೆ, ಇತರೆ ರಾಜ್ಯ ವಿಧಾನಸಭೆ ಎಲೆಕ್ಷನ್ಗೆ ಸಿದ್ದರಾಮಯ್ಯ ಫೇಸ್
ಸಿದ್ದರಾಮಯ್ಯರ ಜನಪ್ರಿಯತೆ ಎನ್ಕ್ಯಾಶ್ ಮಾಡಿಕೊಳ್ಳಲು ‘ಕೈ’ ರಣತಂತ್ರ!
ಸಿಎಂ ಸಿದ್ದರಾಮಯ್ಯರನ್ನ ದೇಶವ್ಯಾಪಿ ಸ್ಟಾರ್ ಕ್ಯಾಂಪೇನರ್ ಆಗಿ ಬಳಸಿಕೊಳ್ಳಲು ಕಾಂಗ್ರೆಸ್ ಪ್ಲಾನ್ ಮಾಡಿದೆ. ಮಹಾರಾಷ್ಟ್ರಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯಮ ಈ ಬಗ್ಗೆ ಸುಳಿವು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಲೋಕಸಭೆ ಚುನಾವಣೆ ಮತ್ತು ಬೇರೆ ರಾಜ್ಯಗಳ ವಿಧಾನಸಭೆಯಲ್ಲೂ ಸಿದ್ದರಾಮಯ್ಯ ಇಮೇಜ್ ಬಳಕೆಗೆ ಹೈಕಮಾಂಡ್ ಮುಂದಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಅಹಿಂದ ವರ್ಗಗಳ ಜನಪ್ರಿಯ ನಾಯಕ. ರಾಜ್ಯದ ಮಾಸ್ ಲೀಡರ್.. ಸೈದ್ಧಾಂತಿಕವಾಗಿ ಬದ್ಧ ಸಿದ್ದು, ಈ ವಿಚಾರದಲ್ಲಿ ರಾಜೀ ಇಲ್ಲದ ರಾಜಕೀಯ ನೇತಾರ. ಸದ್ಯ, ಪ್ರಧಾನಿ ಮೋದಿಯನ್ನೂ ಎದುರಿಸುವ ಎದೆಗಾರಿಕೆ ಇರೋದು ಇದೇ ಸಿದ್ದರಾಮಯ್ಯರಿಗೆ. ಕಳಂಕ ರಹಿತ ಅನ್ನರಾಮಯ್ಯ, ಮುಂದಿನ ಲೋಕಸಭೆ, ವಿಧಾನಸಭೆ ಚುನಾವಣೆಗಳಿಗೆ ಬಹುಬೇಡಿಕೆ ಬಂದು ಬಿಟ್ಟಿದೆ.
ಸಿದ್ದು ಜನಪ್ರಿಯತೆ ಎನ್ಕ್ಯಾಶ್ ಮಾಡಿಕೊಳ್ಳಲು ‘ಕೈ’ ರಣತಂತ್ರ!
ಡೆಲ್ಲಿಯಿಂದ ಬಲಿಷ್ಠ ಸೇನೆಯೊಂದಿಗೆ ಲಗ್ಗೆಯಿಟ್ಟ ಮೋದಿ ಟೀಮ್ಗೆ ಸೋಲಿನ ರುಚಿ ಉಣಿಸಿದ್ದು ಅಹಿಂದರಾಮಯ್ಯ. ಡಬಲ್ ಎಂಜಿನ್, ಹಿಂದುತ್ವದ ಕಾರ್ಡ್, ಮೋದಿ ಫೇಸ್ ಎಲ್ಲವೂ ಅರಗಿನಂತೆ ಕರಗಿಹೋಯ್ತು. ಕರ್ನಾಟಕದ ಇದೇ ಗೆಲುವು ಸಿದ್ದರಾಮಯ್ಯರ ಚರಿಷ್ಮಾ ಬದಲಿಸಿದೆ. ನ್ಯಾಷನಲ್ ಫೇಸ್ ಆಗಿ ಬಳಕೆ ಮಾಡಿಕೊಳ್ಳಲು ಪ್ಲಾನ್ ರೂಪಿಸಲಾಗಿದೆ. ನೆರೆ ರಾಜ್ಯಗಳಲ್ಲೂ ತಮ್ಮ ಹವಾ ಕ್ರಿಯೇಟ್ ಮಾಡಿದ್ದಾರೆ. ಇದಕ್ಕೆ ಉದಾಹರಣೆ ನಿನ್ನೆ ನಡೆದ ಮಹಾರಾಷ್ಟ್ರದ ಈ ಸಮಾವೇಶ. ಮಹಾರಾಷ್ಟ್ರ, ತೆಲಂಗಾಣ, ಆಂಧ್ರ, ಕೇರಳದಲ್ಲೂ ಸಿದ್ದರಾಮಯ್ಯ ಇಮೇಜ್ ಇದೆ. ರಾಜ್ಯದ ಯಾವ ನಾಯಕರಿಗೂ ಸಿದ್ದು ಇಮೇಜ್ ಸರಿಸಾಟಿ ಇಲ್ಲ. ಮುಂದಿನ ಕೆಲವೇ ದಿನಗಳಲ್ಲಿ ಬಂದೆರಗುವ ಚುನಾವಣೆ ಬಿರುಗಾಳಿ ಎದುರಿಸಲು ಸಿದ್ದರಾಮಯ್ಯ ಸಮರ್ಥ ಸಾರಥಿ ಅಂತ ಹೈಕಮಾಂಡ್ ಅರಿತಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ, ಈ ಬಾರಿ ಚುನಾವಣೆ ಜವಾಬ್ದಾರಿ ಕೇವಲ ರಾಜ್ಯದ್ದಷ್ಟೇ ಅಲ್ಲ, ನೆರೆ ರಾಜ್ಯಗಳಲ್ಲೂ ಕಾಂಗ್ರೆಸ್ ಬಾವುಟ ಹಾರಿಸುವ ಚಾಲೆಂಜ್ ನೀಡಿದೆ ಅಂತ ಗೊತ್ತಾಗಿದೆ. ಈವರೆಗೆ ರಾಹುಲ್ ಗಾಂಧಿ, ರಾಜ್ಯದವರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಪ್ರಿಯಾಂಕಾ ಗಾಂಧಿ ನ್ಯಾಷನಲ್ ಫೇಸ್ ಆಗಿ ಕಂಡಿದ್ದ ಕಾಂಗ್ರೆಸ್ಗೆ ಈ ಮೂವರ ಜೊತೆ ಸಿದ್ದು ವರ್ಚಸ್ಸು ಕೈ ಜೋಡಿಸಲಿದೆ.
ಸಿದ್ದರಾಮಯ್ಯರನ್ನ ರಾಷ್ಟ್ರ ಮಟ್ಟದಲ್ಲಿ ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳಲು ಕಾಂಗ್ರೆಸ್ ಪ್ಲಾನ್ ರೂಪಿಸಿದೆ. ಸಿದ್ದರಾಮಯ್ಯ ಅಹಿಂದ ವರ್ಗದ ಜನಪ್ರಿಯ, ಮಾಸ್ ಲೀಡರ್ ಅನ್ನೋದು ಚುನಾವಣೆ ಫಲಿತಾಂಶವೇ ಉತ್ತರ ಕೊಟ್ಟಿದೆ. ಕಳಂಕ ರಹಿತರಾಗಿರುವ ಕಾರಣ ಸಿಎಂ ಸಿದ್ದ್ದು ಹೆಚ್ಚು ಜನಪ್ರಿಯತೆ ಹೊಂದಿದ್ದಾರೆ. ಅಲ್ಲದೆ, ಮೋದಿಯನ್ನ ಪರಿಣಾಮಕಾರಿಯಾಗಿ ಎದುರಿಸುವ ಛಾತಿ ಸಿದ್ದುಗೆ ಮಾತ್ರ ಅನ್ನೋದು ಬಹಿರಂಗ ಸತ್ಯ. ಇದಕ್ಕೆ ತಾಜಾ ಉದಾಹರಣೆ ವಿಧಾನಸಭೆಯಲ್ಲಿ ಬಿಜೆಪಿಗೆ ಪ್ರಬಲ ಫೈಟ್ ಕೊಟ್ಟು ಗೆಲುವು ದಾಖಲಿಸಿರೋದು.
ಮುಂದಿನ ಕೆಲ ತಿಂಗಳಲ್ಲೇ ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢ ಚುನಾವಣೆ ನಡೆಯಲಿದೆ. ಆ ಬಳಿಕ ಮಹಾರಾಷ್ಟ್ರ ಎಲೆಕ್ಷನ್ ಆಗಲಿದೆ. ಹಾಗಾಗಿ ನಿನ್ನೆ ಮಹಾರಾಷ್ಟ್ರದ ಸಾಂಗ್ಲಿಯ ಸಮಾವೇಶದಲ್ಲಿ ಸಿದ್ದು ಭಾಗಿಯಾಗಿ ಅಬ್ಬರಿಸಿದ್ದರು. ಒಟ್ಟಾರೆ, ಕಳೆದ 2018ರಲ್ಲಿ ಸೋತ ಕಾಂಗ್ರೆಸ್ಗೆ 2023ರ ಈ ಚುನಾವಣೆಯಲ್ಲಿ ಬೂಸ್ಟ್ ನೀಡಿದ ಸಿದ್ದು-ಡಿಕೆ ಜೋಡೆತ್ತು, ರಾಜ್ಯದಲ್ಲಿ ಕಾಂಗ್ರೆಸ್ ದಿಗ್ವಿಜಯದ ಇತಿಹಾಸ ಸೃಷ್ಟಿಸಿದ್ದಾರೆ. ಸದ್ಯ ಈ ಇಬ್ಬರನ್ನ ಅನ್ಯ ರಾಜ್ಯಗಳ ಚುನಾವಣೆಯಲ್ಲಿ ಬೇರೆ ಬೇರೆ ರೂಪದಡಿ ಬಳಕೆ ಮಾಡಿಕೊಳ್ಳಲು ಪ್ಲಾನ್ ರೂಪಿಸಿದೆ. ಅಷ್ಟಕ್ಕೂ ಉತ್ತರ ಏನಾಗಿರಲಿದೆ ಅನ್ನೋದು ಮತದಾರ ಬರೆಯುವ ತೀರ್ಪನ್ನು ಅವಲಂಭಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ