newsfirstkannada.com

×

10 ಕೆಜಿ ಅಕ್ಕಿ ಸಿಗೋದು ಡೌಟಾ..? ಕಾಂಗ್ರೆಸ್​​, ಬಿಜೆಪಿ ಜಗಳದ ಮಧ್ಯೆ ಅನ್ನಭಾಗ್ಯಕ್ಕೆ ಬೀಳುತ್ತಾ ಕಲ್ಲು..?

Share :

Published June 21, 2023 at 6:40am

Update June 21, 2023 at 7:00am

    ಕಾಂಗ್ರೆಸ್​, ಬಿಜೆಪಿ ಮಧ್ಯೆ ತಾರಕಕ್ಕೇರಿದ ರೈಸ್​​ ಪಾಲಿಟಿಕ್ಸ್​​

    ಮುಂದಿನ ತಿಂಗಳಿಂದ ಬಡವರಿಗೆ ಸಿಗುತ್ತಾ 10 ಕೆಜಿ ಅಕ್ಕಿ..?

    CM ಸಿದ್ದರಾಮಯ್ಯ ಕನಸಿನ ಭಾಗ್ಯಕ್ಕೆ ಕಲ್ಲು ಹಾಕಿತಾ ಕೇಂದ್ರ?

ಬೆಂಗಳೂರು: ಇತ್ತ ರಾಜ್ಯಕ್ಕೆ ಅಕ್ಕಿ ಕೊಡಿ ಎಂದು ಕಾಂಗ್ರೆಸ್ ಕೆಂಡಾಮಂಡಲ. ಅತ್ತ ಮೊದಲು ​ಅನ್ನಭಾಗ್ಯ ಯೋಜನೆ ಜಾರಿ ಮಾಡಿ ಎಂದು ಬಿಜೆಪಿ ಜಗಳ. ಹೀಗೆ ಎರಡೂ ಪಕ್ಷಗಳ ಮಧ್ಯೆ ರೈಸ್ ವಾರ್‌ ನಡೆಯುತ್ತಲೇ ಇದೆ. ಅದರಲ್ಲೂ ಬೀದಿಗಳಿದು ಬಿಜೆಪಿ-ಕಾಂಗ್ರೆಸ್ ನಾಯಕರು ರಂಪಾಟ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿಗರು ಕೇಂದ್ರದ ವಿರುದ್ಧ ಕೆಂಡಕಾರುತ್ತಿದ್ದರೆ, ಬಿಜೆಪಿಗರು ಸಿಎಂ ಸಿದ್ದರಾಮಯ್ಯ ಧಮ್ಮು ತಾಕತ್ತಿನ ಬಗ್ಗೆ ಪ್ರಶ್ನಿಸಿದ್ದಾರೆ.

‘ಸಿದ್ದರಾಮಯ್ಯ ಸರ್ಕಾರ.. ಇದೊಂದು ಸುಳ್ಳ-ಮಳ್ಳ ಸರ್ಕಾರ’

ಗ್ಯಾರಂಟಿಗಳನ್ನ ಜಾರಿಗೊಳಿಸದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮಾತಿನ ಸಮರವನ್ನ ಮುಂದುವರಿಸಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಬಳಿಕ ಮಾತಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಆರ್. ಅಶೋಕ್ ಕೆಂಡಕಾರಿದ್ದಾರೆ. ಇದೊಂದು ಸುಳ್ಳ-ಮಳ್ಳ ಸರ್ಕಾರ ಎನ್ನುತ್ತಾ ಸಿದ್ದರಾಮಯ್ಯ ಸರ್ಕಾರದ ಧಮ್ಮು ತಾಕತ್ತಿನ ಪ್ರಶ್ನಿಸಿ ಸವಾಲ್​ ಹಾಕಿದ್ದಾರೆ.

‘ಬಡವರ ಅಕ್ಕಿಯಲ್ಲೂ ರಾಜಕೀಯ ಅಂತಾ ಸಿಎಂ ಸಿದ್ದು ಕಿಡಿ

ಕೇಂದ್ರ ಸರ್ಕಾರ ಕೊಡುತ್ತಿರುವ 5 ಕೆಜಿ ಸೇರಿ 15 ಕೆಜಿ ಅಕ್ಕಿ ಕೊಡಿ ಎಂದು ಸರ್ಕಾರಕ್ಕೆ ಬಿಜೆಪಿ ಸವಾಲು ಹಾಕಿದ್ರೆ, ಇತ್ತ ಬಡವರ ಅಕ್ಕಿಯಲ್ಲಿ ರಾಜಕೀಯ ಮಾಡಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ. ಬೊಮ್ಮಾಯಿ ಆಡಿದ್ದ ಧಮ್ಮು-ತಾಕತ್ತಿನ ಮಾತಿಗೂ ತಿರುಗೇಟು ಕೊಟ್ಟಿದ್ದಾರೆ.

ಆಹಾರ ಸಚಿವ ಕೆ.ಹೆಚ್‌. ಮುನಿಯಪ್ಪರಿಂದ ಸ್ಪಷ್ಟನೆ

ಇನ್ನೂ ಅನ್ನಭಾಗ್ಯ ಅಕ್ಕಿಯನ್ನ ಹೊಂದಿಸಲು ರಾಜ್ಯ ಸರ್ಕಾರದ ಸರ್ಕಸ್ ಮುಂದುವರಿದಿದೆ. ಇದೀಗ ಅನ್ನಭಾಗ್ಯ ಅಕ್ಕಿಗಾಗಿ ಕೇಂದ್ರದ ನಾಯಕರನ್ನ ಭೇಟಿಯಾಗಲು ಆಹಾರ ಸಚಿವ ಕೆ.ಹೆಚ್‌. ಮುನಿಯಪ್ಪ ದೆಹಲಿಗೆ ತೆರಳಲಿದ್ದಾರೆ. ಅಲ್ಲದೇ ಅನ್ನಭಾಗ್ಯ ಯೋಜನೆ ಜಾರಿ ವಿಳಂಬವಾಗುವ ಸುಳಿವನ್ನೂ ನೀಡಿದ್ದಾರೆ. ಇತ್ತ ಅಕ್ಕಿಗೆ ರಾಜ್ಯದ ನಾಯಕರೇ ಅಡ್ಡಿಪಡಿಸಿದ್ದಾರೆ ಅಂತಾ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ರೈಸ್ ವಾಕ್ಸಮರ ಮತ್ತಷ್ಟು ತಾರಕ್ಕೇರಿದೆ. ಬರೀ ಏಟು-ಎದಿರೇಟಿನಲ್ಲೇ ಅನ್ನಭಾಗ್ಯ ಯೋಜನೆ ಕೆಸರೆರಚಾಟ ನಡೆಯುತ್ತಿದೆ. ಇವರಿಬ್ಬರ ಜಗಳದಲ್ಲಿ ಬಡವರ ಭಾಗ್ಯಕ್ಕೆ ಕಲ್ಲು ಬೀಳದಿರಲಿ ಅನ್ನೋದೆ ರಾಜ್ಯದ ಜನರ ಮನವಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

10 ಕೆಜಿ ಅಕ್ಕಿ ಸಿಗೋದು ಡೌಟಾ..? ಕಾಂಗ್ರೆಸ್​​, ಬಿಜೆಪಿ ಜಗಳದ ಮಧ್ಯೆ ಅನ್ನಭಾಗ್ಯಕ್ಕೆ ಬೀಳುತ್ತಾ ಕಲ್ಲು..?

https://newsfirstlive.com/wp-content/uploads/2023/06/Siddaramaiah_2-2.jpg

Load More