newsfirstkannada.com

ಮುಂದಿನ ಚುನಾವಣೆಗೆ ಅಕ್ಕಿಯೇ ಅಸ್ತ್ರ.. ಮೋದಿ ವಿರುದ್ಧ ಮುಗಿಬಿದ್ದ ಕಾಂಗ್ರೆಸ್​​..!

Share :

18-06-2023

    ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಧ್ಯೆ ತಾರಕಕ್ಕೇರಿದ ಅಕ್ಕಿ ವಾರ್​

    ನೀ ಕೊಡೆ, ನಾ ಬಿಡೆ ಎಂಬಂತೆ ಅಕ್ಕಿಗಾಗಿ ರಾಜ್ಯ, ಕೇಂದ್ರದ ತಿಕ್ಕಾಟ

    ಅನ್ನಭಾಗ್ಯಕ್ಕೆ ಅಕ್ಕಿ ಖರೀದಿಗಾಗಿ ಸಿದ್ದರಾಮಯ್ಯ ಸರ್ಕಾರದ ಸರ್ಕಸ್

ಬೆಂಗಳೂರು: ಅನ್ನಭಾಗ್ಯ ಯೋಜನೆ ವಿಚಾರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಧ್ಯೆ ಸಂಘರ್ಷ ಶುರುವಾಗಿದೆ. ನೀ ಕೊಡೆ, ನಾ ಬಿಡೆ ಎಂಬಂತೆ ಅಕ್ಕಿಗಾಗಿ ತಿಕ್ಕಾಟ ನಡೆಯುತ್ತಲೇ ಇದೆ. ರೈಸ್ ಖರೀದಿಗೆ ಸಿದ್ದರಾಮಯ್ಯ ಸರ್ಕಾರ ಸರ್ಕಸ್ ಕೂಡಾ ಮಾಡುತ್ತಿದೆ. ಈಗ ಅಕ್ಕಿಯನ್ನೇ ಅಸ್ತ್ರವಾಗಿಸಿಕೊಂಡು ಮೋದಿ ವಿರುದ್ಧ ಪ್ರಯೋಗಿಸಲು ಕೈ ಸಜ್ಜಾಗಿದೆ. ಕೇಂದ್ರದ ವಿರುದ್ಧ ಕಾಂಗ್ರೆಸ್ ನಾಯಕರ ರೈಸ್‌ ವಾಕ್ಸಮರ ನಿಲ್ಲದಾಗಿದೆ.

ಕರುನಾಡಿನಲ್ಲಿ ಗ್ಯಾರಂಟಿ ಜಾರಿಗೆ ಕಾಂಗ್ರೆಸ್ ಸರ್ಕಾರ ಸರ್ಕಸ್‌ ಮಾಡುತ್ತಿದೆ. ಈ ಹೊತ್ತಲ್ಲೇ ಅನ್ನಭಾಗ್ಯಕ್ಕೆ ಕೇಂದ್ರ ಸರ್ಕಾರ ಸಹಕಾರ ನೀಡ್ತಿಲ್ಲ ಎಂಬ ಆರೋಪ ಸದ್ದು ಮಾಡಿದೆ. ಕಳೆದ ನಾಲ್ಕು ದಿನಗಳಿಂದ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಮಧ್ಯೆ ಅಕ್ಕಿ ರಾಜಕೀಯ ತಾರಕಕ್ಕೇರಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡಬೇಕಿದ್ದ 5 ಕೆ.ಜಿ ಅಕ್ಕಿಯನ್ನ ತಡೆ ಹಿಡಿದಿದೆ ಅಂತಾ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಇದೀಗ ಇದೇ ಅಕ್ಕಿಯನ್ನೇ ಲೋಕಾಸ್ತ್ರವಾಗಿ ಪ್ರಯೋಗಿಸಲು ಕಾಂಗ್ರೆಸ್ ತಯಾರಿ ನಡೆಸಿದೆ.

ಕೇಂದ್ರ, ರಾಜ್ಯ ಸರ್ಕಾರಗಳ ಮಧ್ಯೆ ‘ಅಕ್ಕಿ’ ಸಂಘರ್ಷ

ಅನ್ನಭಾಗ್ಯ ಗ್ಯಾರಂಟಿಯನ್ನ ಬಡವರ ಮಡಿಲಿಗೆ ಹಾಕಲು ಕಾಂಗ್ರೆಸ್ ಸರ್ಕಾರ ಮುಂದಾಗಿತ್ತು. ಹಸಿದವರ ಹೊಟ್ಟೆ ತುಂಬಿಸಲು 10 ಕೆಜಿ ಗ್ಯಾರಂಟಿ ಅಕ್ಕಿ ನೀಡಲು ನಿರ್ಧರಿಸಿತ್ತು. ಆದ್ರೆ ಅನ್ನಭಾಗ್ಯ ಯೋಜನೆ ಜಾರಿಗೆ ಕೇಂದ್ರ ಅಡ್ಡಗಾಲು ಹಾಕಿದೆ. ಇದು ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ ಹಾದಿ ತುಳಿಯುವಂತೆ ಮಾಡಿದೆ. ಇದ್ರ ಮಧ್ಯೆ ಮೊನ್ನೆ ನೀವು ಸುಳ್ಳು ರಾಮಯ್ಯ ಅಲ್ಲವಾದ್ರೆ ಅಕ್ಕಿ ಕೊಡ್ತೀವಿ ಅಂತಾ ಎಫ್‌ಸಿಐ ರಾಜ್ಯಕ್ಕೆ ನೀಡಿರೋ ಕಮಿಟ್ಮೆಂಟ್‌ ಪತ್ರ ಬಿಡುಗಡೆ ಮಾಡಿ ಅಂತಾ ಸಿ.ಟಿ.ರವಿ ಸವಾಲು ಹಾಕಿದ್ರು. ಸಿ.ಟಿ. ರವಿ ಚಾಲೆಂಜ್‌ನ ಅಕ್ಸೆಪ್ಟ್ ಮಾಡಿದ್ದ ಸಿಎಂ ಸಿದ್ದರಾಮಯ್ಯ, ಕಮಿಟ್ಮೆಂಟ್ ಪತ್ರವನ್ನ ಬಿಡುಗಡೆ ಮಾಡಿದ್ದಾರೆ. ಬಿಜೆಪಿ ನಾಯಕನಿಗೆ ತಿರುಗೇಟು ನೀಡಿದ್ದಾರೆ.

ಇದಷ್ಟೇ ಅಲ್ಲ.. ಅನ್ನಭಾಗ್ಯಕ್ಕೆ ಬಿಜೆಪಿ ಅಡ್ಡಿಯಾಗಿದೆ. ಇದ್ರಿಂದ ಗ್ಯಾರಂಟಿಗಳ ಜಾರಿ ವಿಳಂಬಕ್ಕೆ ಬಿಜೆಪಿ ಕಾರಣವಾಗಿದೆ ಅತಾ ಬಿಂಬಿಸಲು ಕಾಂಗ್ರೆಸ್ ಪ್ಲಾನ್ ರೂಪಿಸಿದೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್​​ ಗ್ಯಾರಂಟಿ ತಂತ್ರ..!

ಅನ್ನಭಾಗ್ಯ ಜಾರಿಗೆ ಸಹಕರಿಸ್ತಿಲ್ಲ ಅಂತಾ ಆರೋಪಿಸಿರೋ ಕಾಂಗ್ರೆಸ್‌, ಕೇಂದ್ರ ಸರ್ಕಾರ ಬಡವರ ವಿರೋಧಿ ಎಂದು ಬಿಂಬಿಸಲು ತಂತ್ರ ರೂಪಿಸಿದೆ. ಈ ಮೂಲಕ ಬಿಜೆಪಿಯ ವರ್ಚಸ್ಸು ಕಳೆಗುಂದುವಂತೆ ಮಾಡುವುದು ಕೈ ಪಡೆ ಪ್ಲಾನ್‌ ಆಗಿದೆ. ಇನ್ನೂ ಗ್ಯಾರಂಟಿ ಸ್ಕೀಮ್‌ಗಳನ್ನ​​ ಲೋಕಸಭೆ ಚುನಾವಣೆ ತನಕ ಜೀವಂತವಾಗಿ ಇಡುವುದು. ಈ ಮೂಲಕ ಗ್ಯಾರಂಟಿ ಜಾರಿಗೆ ಬಿಜೆಪಿ ಅಡ್ಡಿಯಾಗಿದ್ದು, ಬಿಜೆಪಿ ನಾಯಕರೇ ಇದಕ್ಕೆ ಹೊಣೆ ಎಂದು ಬಿಂಬಿಸುವುದು ಹಸ್ತಪಡೆಯ ರಣತಂತ್ರವಾಗಿದೆ. ಅಲ್ಲದೇ ಕೇಂದ್ರ ಗ್ಯಾರಂಟಿಗಳ ಜಾರಿಗೆ ಸಹಕಾರ ನೀಡ್ತಿಲ್ಲ ಎಂದು ಜನರ ಮನಸಿಗೆ ನಾಟುವಂತೆ ಮಾಡಲು ಕಾಂಗ್ರೆಸ್‌ ಮಾಸ್ಟರ್‌ ಪ್ಲಾನ್‌ ರೂಪಿಸಿದೆ ಎಂದು ತಿಳಿದುಬಂದಿದೆ.

ಅಕ್ಕಿ ಖರೀದಿಗೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತು

ಕೊಟ್ಟ ಮಾತಿನಂತೆ ಜುಲೈ ವೇಳೆಗೆ 10 ಕೆಜಿ ಪಡಿತರ ಅಕ್ಕಿಯನ್ನ ಬಡ ಜನರಿಗೆ ನೀಡಬೇಕಿದೆ. ಹೀಗಾಗಿ ಹೊರ ರಾಜ್ಯಗಳಿಂದ ಅಕ್ಕಿ ಖರೀದಿಸಲು ಸಿದ್ದರಾಮಯ್ಯ ಸರ್ಕಾರ ಸಜ್ಜಾಗಿದೆ. ತೆಲಂಗಾಣ ಸಿಎಂ ಜೊತೆಯೂ ಮಾತುಕತೆ ನಡೆಸಿದ್ದಾರೆ. ಆದ್ರೆ, ಕೆಸಿಆರ್ ರಾಜ್ಯದಲ್ಲೂ ಅಕ್ಕಿ ಕೊರತೆ ಇದೆ. ಹೀಗಾಗಿ ಆಂಧ್ರ ಸರ್ಕಾರದ ಜೊತೆ ಅಕ್ಕಿಗಾಗಿ ಮಾತುಕತೆ ನಡೆಯುತ್ತಿದೆ ಎಂದು ಸಿಎಂ ತಿಳಿಸಿದ್ದಾರೆ. ಅಲ್ಲದೇ ಅಕ್ಕಿ ಬಗ್ಗೆ ಕುಹಕವಾಡಿದ್ದ ಬಿ.ವೈ ವಿಜಯೇಂದ್ರಗೂ ತಿರುಗೇಟು ನೀಡಿದ್ದಾರೆ.

ಕೇಂದ್ರದಿಂದ ಮಲತಾಯಿ ಧೋರಣೆ ಎಂದ ಮುನಿಯಪ್ಪ

ಇನ್ನೂ ಅಕ್ಕಿ ನೀಡಲು ನಿರಾಕರಿಸಿರೋ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರ ವಾಗ್ದಾಳಿ ಮುಂದುವರಿದಿದೆ. ಅಕ್ಕಿ ಕೊಡುವ ವಿಚಾರದಲ್ಲಿ ಕೇಂದ್ರ ಮಲತಾಯಿ ಧೋರಣೆ ತೋರಿಸ್ತಿದೆ ಅಂತಾ ಆಹಾರ ಸಚಿವ ಕೆ.ಹೆಚ್‌. ಮುನಿಯಪ್ಪ ಕಿಡಿಕಾರಿದ್ದಾರೆ. ಇತ್ತ ಹಸಿದ ವರ್ಗಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡ್ತಿದೆ ಅಂತಾ ಸಂಸದ ಡಿ.ಕೆ. ಸುರೇಶ್ ಗುಡುಗಿದ್ದಾರೆ.

ಒಟ್ಟಾರೆ, ರಾಜ್ಯದಲ್ಲಿ ಅಕ್ಕಿ ರಾಜಕೀಯ ತಾರಕಕ್ಕೇರಿದೆ. ನೀ ಕೊಡೆ.. ನಾ ಬಿಡೆ ಎನ್ನುವಂತೆ ಮೋದಿ ಸರ್ಕಾರ ಮತ್ತು ಸಿದ್ದರಾಮಯ್ಯ ಸರ್ಕಾರದ ಮಧ್ಯೆ ತಿಕ್ಕಾಟ ಜೋರಾಗಿದೆ. ಇದೀಗ ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವಂತೆ ಮುಂದಿನ ತಿಂಗಳು ಬಡಜನರಿಗೆ ಅಕ್ಕಿ ಸಿಗುತ್ತೋ? ಇಲ್ವೋ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಂದಿನ ಚುನಾವಣೆಗೆ ಅಕ್ಕಿಯೇ ಅಸ್ತ್ರ.. ಮೋದಿ ವಿರುದ್ಧ ಮುಗಿಬಿದ್ದ ಕಾಂಗ್ರೆಸ್​​..!

https://newsfirstlive.com/wp-content/uploads/2023/06/Siddaramaiah_12-1.jpg

Load More