newsfirstkannada.com

ಸಿಪಿಐ ತೊರೆದು ಕಾಂಗ್ರೆಸ್​​ ಸೇರಿದ್ದ ಕನ್ಹಯ್ಯ​​ಗೆ ಮಹತ್ವದ ಜವಾಬ್ದಾರಿ.. NSUI ಅಧ್ಯಕ್ಷರಾಗಿ ಆಯ್ಕೆ

Share :

06-07-2023

    ಕಾಂಗ್ರೆಸ್​ ಸೇರಿದ್ದ JNU ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್​

    ಕಮ್ಯೂನಿಸ್ಟ್​​​ ಪಾರ್ಟಿ ಆಫ್​​ ಇಂಡಿಯಾ ತೊರೆದು ಕನ್ಹಯ್ಯ ಕಾಂಗ್ರೆಸ್ ಸೇರಿದ್ರು..!

    ಕನ್ಹಯ್ಯ ಕುಮಾರ್​​ಗೆ ಪಕ್ಷದಲ್ಲಿ ಮಹತ್ವದ ಜವಾಬ್ದಾರಿ ಕೊಟ್ಟ ಕಾಂಗ್ರೆಸ್​ ಹೈಕಮಾಂಡ್​​​

ನವದೆಹಲಿ: ಒಂದೂವರೆ ವರ್ಷದ ಹಿಂದೆ ಕಮ್ಯೂನಿಸ್ಟ್​​​ ಪಾರ್ಟಿ ಆಫ್​​ ಇಂಡಿಯಾ ತೊರೆದು ಕಾಂಗ್ರೆಸ್​ ಸೇರಿದ್ದ JNU ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್​ಗೆ ಪಕ್ಷ ದೊಡ್ಡ ಜವಾಬ್ದಾರಿ ನೀಡಿದೆ. ನ್ಯಾಷನಲ್​​ ಸ್ಟೂಡೆಂಟ್​​ ಯೂನಿಯನ್​ ಆಫ್​ ಇಂಡಿಯಾ (NSUI) ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಕನ್ಹಯ್ಯಾ ಕುಮಾರ್ ಅವರನ್ನು ನೇಮಕ ಮಾಡಿ ಕಾಂಗ್ರೆಸ್​ ಆದೇಶಿಸಿದೆ.

ಈ ಸಂಬಂಧ ಪತ್ರಿಕಾ ಹೇಳಿಕೆ ರಿಲೀಸ್​ ಮಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡಲೇ ಜಾರಿಗೆ ಬರುವಂತೆ ಕನ್ಹಯ್ಯಾ ಕುಮಾರ್​​​ ಅವರನ್ನು NSUI ಉಸ್ತುವಾರಿಯಾಗಿ ನೇಮಕ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿ ಹೋರಾಟದಿಂದಲೇ ಮುನ್ನೆಲೆಗೆ ಬಂದ ಕನ್ಹಯ್ಯಾ ಕುಮಾರ್ ಈ ಹಿಂದೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು. ಬಳಿಕ ಒಂದಷ್ಟು ದಿನ ಅಖಿಲ ಭಾರತ ವಿದ್ಯಾರ್ಥಿ ಫೆಡರೇಶನ್ ನಾಯಕರಾಗಿ ನಂತರ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. 2021ರ ಸೆಪ್ಟೆಂಬರ್​​​ ತಿಂಗಳಲ್ಲಿ ಕಾಂಗ್ರೆಸ್​ ಸೇರಿದ್ದ ಕನ್ಹಯ್ಯ ಅವರನ್ನು NSUI ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಪಿಐ ತೊರೆದು ಕಾಂಗ್ರೆಸ್​​ ಸೇರಿದ್ದ ಕನ್ಹಯ್ಯ​​ಗೆ ಮಹತ್ವದ ಜವಾಬ್ದಾರಿ.. NSUI ಅಧ್ಯಕ್ಷರಾಗಿ ಆಯ್ಕೆ

https://newsfirstlive.com/wp-content/uploads/2023/07/Kanhaiya-Kumar.jpg

Load More