ಇಂದು ದೆಹಲಿಗೆ ಸಿಎಂ, ಅಮಿತ್ ಶಾರನ್ನು ಭೇಟಿ ಮಾಡುವ ಸಾಧ್ಯತೆ
ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲು ರಾಜ್ಯ ಸರ್ಕಾರ ಬಿಗ್ ಪ್ಲಾನ್
ರಸ್ತೆ, ಅಕ್ಕಿ, ಮೂಲಭೂತ ಸೌಕರ್ಯ ಸೇರಿ ಹಲವು ಪ್ರಸ್ತಾಪ
ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದಿದ್ದರಲ್ಲಿ ಪ್ರಮುಖವಾದ್ದದ್ದೇ ಗ್ಯಾರಂಟಿಗಳು. ಇದೀಗ ಅದೇ ಗ್ಯಾರಂಟಿಗಳು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಜಾರಿಯಾಗಿರೋ ಶಕ್ತಿ ಯೋಜನೆಯು ಸುಸ್ತು ಮಾಡ್ತಿದೆ. ಜಾರಿಯಾಗಬೇಕಿರುವ ಗ್ಯಾರಂಟಿಗಳು ಗೊಂದಲದಲ್ಲಿ ಸಿಲುಕಿವೆ.
ಗೃಹಜ್ಯೋತಿಗೆ ಆರಂಭದಲ್ಲೇ ಕಾಡ್ತಿದೆ ಸರ್ವರ್ ಸಮಸ್ಯೆ
ಒಂದಾ, ಎರಡಾ ಗ್ಯಾರಂಟಿ ಜಾರಿಯಿಂದ ಕಾಂಗ್ರೆಸ್ಗೆ ಎದುರಾಗಿರೋ ಸಾಲು ಸಾಲು ಸವಾಲುಗಳಿದು. ಅದರಲ್ಲಿ ಸದ್ಯಕ್ಕೆ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಿರೋದು ಅನ್ನಭಾಗ್ಯದ ಅಕ್ಕಿ. ನಿನ್ನೆ ಪ್ರತಿಭಟನಾ ಕಾಳಗಕ್ಕೆ ಸಾಕ್ಷಿಯಾಗಿದ್ದ ಅಕ್ಕಿ ಕದನ ಇದು ರಾಷ್ಟ್ರ ರಾಜಧಾನಿಗೆ ಶಿಫ್ಟ್ ಆಗಲಿದೆ. ಖುದ್ದು ಸಿದ್ದರಾಮಯ್ಯ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ.
ಅಕ್ಕಿಗಾಗಿ ಸಿದ್ದು ದೆಹಲಿ ಸಂಚಾರ!
ಇದಿಷ್ಟು ಅನ್ನಭಾಗ್ಯದ ಸಮರವಾದ್ರೆ, ಅತ್ತ ಶಕ್ತಿ ಯೋಜನೆ ಮಹಾಕಾಳಗಕ್ಕೆ ದಾರಿ ಮಾಡಿಕೊಟ್ಟಿದೆ. ಒಂದಷ್ಟು ಸೈಡ್ ಎಫೆಕ್ಟನ್ನೂ ಸೃಷ್ಟಿಸಿದೆ. ಹುಬ್ಬಳ್ಳಿಯಲ್ಲಿ ಮಹಿಳೆಯರಿಂದಲೇ ಸಾರಿಗೆ ಬಸ್ಗಳು ಭರ್ತಿಯಾಗ್ತಿವೆ. ಹೀಗಾಗಿ ಬಸ್ಗಾಗಿ ವಿದ್ಯಾರ್ಥಿಗಳು, ವೃದ್ಧರು ಪರದಾಡುವಂತಾಗಿದೆ. ಬಸ್ನಲ್ಲಿ ನೇತಾಡುವ ಪರಿಸ್ಥಿತಿ ಎದುರಾಗಿದೆ. ಕೊಪ್ಪಳದ ಕೆಲವು ಹಳ್ಳಿಗಳಲ್ಲಿ ಬಸ್ ಕೊರತೆ ಎದುರಾಗಿದ್ದು, ವಿದ್ಯಾರ್ಥಿಗಳು ಜೆಸಿಬಿಯಲ್ಲಿ ಕುಳಿತು ಪ್ರಯಾಣಿಸೋ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಗೊಂದಲಗಳ ನಡುವೆ ನಾರಿ ಶಕ್ತಿ ಹೌಸ್ಫುಲ್ ಪ್ರದರ್ಶನವಾಗಿದ್ದು. ಶತಕೋಟಿ ಕಲೆಕ್ಷನ್ ಮಾಡಿದೆ. ಒಂದೇ ವಾರಕ್ಕೆ ಮಹಿಳೆಯರ ಉಚಿತ ಸಂಚಾರದ ಟಿಕೆಟ್ ಮೊತ್ತ 100 ಕೋಟಿ ರೂ. ದಾಟಿದೆ. ಮಹಿಳೆಯರ ಓಡಾಟದ ಟಿಕೆಟ್ ಮೌಲ್ಯ ಒಟ್ಟು 100 ಕೋಟಿಯ 23 ಲಕ್ಷದ 8 ಸಾವಿರದ 338 ರೂಪಾಯಿ. 4 ಕೋಟಿಗೂ ಹೆಚ್ಚು ಮಹಿಳೆಯರ ಉಚಿತ ಸಂಚಾರದ ಫಲಾನುಭವಿಗಳಾಗಿದ್ದಾರೆ.
ಗೃಹಜ್ಯೋತಿಗೂ ಅಡ್ಡಿಯಾಗುತ್ತಿದೆ ಸರ್ವರ್ ಸಮಸ್ಯೆ
ಅತ್ತ ಗೃಹಜ್ಯೋತಿ ಪಡೆಯಲು ನೋಂದಣಿ ಕಾರ್ಯ ಜೋರಾಗಿ ನಡೀತಿದೆ. ಈವರೆಗೆ ಒಟ್ಟು 8 ಲಕ್ಷದ16 ಸಾವಿರದ 631 ಮಂದಿ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ. ನೋಂದಣಿ ಡಬಲ್ ಆಗ್ತಿದ್ರೂ ಅರ್ಜಿ ಸಲ್ಲಿಕೆ ಕೇಂದ್ರಗಳಲ್ಲಿ ಸಮಸ್ಯೆ ಮುಂದುವರಿದಿದೆ. ಸರಾಗವಾಗಿ ಕಾರ್ಯನಿರ್ವಹಿಸಲು ಸರ್ವರ್ ಸಮಸ್ಯೆ ಅಡ್ಡಿಯಾಗುತ್ತಿದೆ. ಜನರು ಪರದಾಡುವಂತಾಗಿದೆ.
ಇನ್ನು, ರಾಜ್ಯ ಸರ್ಕಾರ ಕೇಂದ್ರವನ್ನೇ ಟಾರ್ಗೆಟ್ ಮಾಡಿದೆ. ಸರ್ವರ್ ಸಮಸ್ಯೆಗೂ ಹ್ಯಾಕ್ ಆರೋಪ ಮಾಡಿದೆ. ಅದು ಕೂಡ ಕೇಂದ್ರ ಸರ್ಕಾರದ ವಿರುದ್ಧವೇ..
ಸರ್ವರ್ ಹ್ಯಾಕ್ ಮಾಡಿದ್ದಾರೆ
ಯೋಜನೆಗಳ ಬಗ್ಗೆ ಪ್ಲಾನ್ ಮಾಡಿದ್ದೀವಿ. ಆದ್ರೆ ಕೇಂದ್ರ ಸರ್ಕಾರದವರು ನಮ್ಮ ಮೆಷಿನ್ ಅನ್ನು ಹ್ಯಾಕ್ ಮಾಡಿದ್ದಾರೆ. ಇವಿಎಂ ಹೇಗೆ ಮಾಡ್ತಾರೆ ಅದೇ ಥರಾ ಇದನ್ನು ಮಾಡಲಾಗಿದೆ. ರಿಪೇರಿ ಮಾಡಲು ನಾವೆಲ್ಲ ಸಿದ್ಧರಾಗಿದ್ದೇವೆ.
ಸತೀಶ್ ಜಾರಕಿಹೊಳಿ, ಸಚಿವಹ್ಯಾಕ್ ಮಾಡಿದ್ರೆ, ಕಂಪ್ಲೆಂಟ್ ಕೊಡಿ
ಇದೊಂದು ಅತ್ಯಂತ ಹಾಸ್ಯಸ್ಪಾದ ಆಗಿರುವಂತದ್ದು. ಮಂತ್ರಿಯಾಗಿರಿ, ಮುಂದಿನ ಅವಧಿಗೆ ಮುಖ್ಯಮಂತ್ರಿ ಎಂದು ಹೇಳಿಕೊಂಡು ಇರಿ. ಆದ್ರೆ ಗಂಭೀರವಾಗಿರಿ. ಅತ್ಯಂತ ಹಾಸ್ಯಸ್ಪಾದವಾಗಿ ಮಾತನಾಡಿ ರಾಜ್ಯದ ಮಾನ ಮರ್ಯಾದೆ ಕಳೆಯಬೇಡಿ. ಸೈಬರ್ ಕ್ರೈಂ ಬಗ್ಗೆ ಯಾರದರೂ ಹ್ಯಾಕ್ ಮಾಡಿದರೇ ಆ ಬಗ್ಗೆ ಕಂಪ್ಲೇಟ್ ಮಾಡಿ.
ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವ
ಕಾಂಗ್ರೆಸ್ ಸರ್ಕಾರ ತಂದಿರುವ ಯೋಜನೆಗಳು ಅವಾಂತರಗಳನ್ನು ಸೃಷ್ಟಿಸ್ತಿವೆ. ಅತ್ತ ರಾಜಕೀಯ ಯುದ್ಧವೂ ಜೋರಾಗಿ ನಡೀತಿದೆ. ಇದರ ನಡುವೆ ಜನಸಾಮಾನ್ಯ ಅಂತಂತ್ರನಾಗದಿದ್ರೆ ಸಾಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಮ್ಮ ಸರ್ಕಾರದ ಮೆಷಿನ್ ಅನ್ನ ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ. ಹೀಗಾಗಿ ಸರ್ವರ್ ಡೌನ್ ಆಗಿದೆ. EVM ರೀತಿಯಲ್ಲಿ ಹ್ಯಾಕ್ ಮಾಡಲಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದಾರೆ. #NewsFirstKannada #Newsfirstlive #KannadaNews #Annabhagya #Congressguaranteescheme#Siddaramaiah #KarnatakaCM… pic.twitter.com/jRZSstWajf
— NewsFirst Kannada (@NewsFirstKan) June 20, 2023