newsfirstkannada.com

‘ವಿದೇಶದಲ್ಲಿ ಭಾರತದ ಮಾನ ಹರಾಜು ಹಾಕಿದ ಪ್ರಧಾನಿ ನರೇಂದ್ರ ಮೋದಿ’- ಕಾಂಗ್ರೆಸ್​

Share :

28-06-2023

    ಮೋದಿಗೆ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಪ್ರಶ್ನೆ ಕೇಳಿದ್ದ ಪತ್ರಕರ್ತೆಗೆ ನಿಂದನೆ

    ವಿದೇಶದಲ್ಲಿ ಭಾರತದ ಮಾನ ಹರಾಜು ಹಾಕಿ ಬಂದ ಮೋದಿ ಎಂದ ಕಾಂಗ್ರೆಸ್​

    ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಕಾಂಗ್ರೆಸ್​​ ವಿವಾದಾತ್ಮಕ ಟ್ವೀಟ್​​!

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿದೇಶದಲ್ಲೂ ಭಾರತದ ಮಾನ ಹರಾಜು ಹಾಕಿ ಬಂದಿದ್ದಾರೆ ಎಂದು ಕಾಂಗ್ರೆಸ್​​ ವಿವಾದಾತ್ಮಕ ಟ್ವೀಟ್​ವೊಂದು ಮಾಡಿದೆ. ಈಗ ಪ್ರಧಾನಿ ಮೋದಿ ಬಗ್ಗೆ ಕಾಂಗ್ರೆಸ್​ ಮಾಡಿದ್ದ ವಿವಾದಾತ್ಮಕ ಟ್ವೀಟ್​​​​ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಟ್ವೀಟ್​​ನಲ್ಲಿ ಏನಿತ್ತು..?

ಪ್ರಶ್ನೆಗಳನ್ನು ಎದುರಿಸಲು ಹಿಂದೇಟು ಹಾಕುವ ಮೋದಿಗೆ ಏಕಾಏಕಿ ಪ್ರಶ್ನೆ ಕೇಳಿದ್ದಕ್ಕೆ ಅಮೆರಿಕಾದ ಪತ್ರಕರ್ತೆಯನ್ನು ಬಿಜೆಪಿಯ ಟ್ರಾಲ್ ಆರ್ಮಿ ಟಾರ್ಗೆಟ್ ಮಾಡಿದ ಪರಿಣಾಮ ದೇಶದ ಮರ್ಯಾದೆ ಮಣ್ಣುಪಾಲಾಗಿದೆ. ಭಾರತದ ಪತ್ರಕರ್ತರನ್ನು ಹತ್ತಿಕ್ಕಿದಂತೆ ಅಮೆರಿಕಾದಲ್ಲೂ ಹತ್ತಿಕ್ಕಲು ಮುಂದಾಗುವ ಬಿಜೆಪಿ ಟೂಲ್​​ ಕಿಟ್​​ ಆರ್ಮಿಗೆ ದೇಶದ ಘನತೆಯ ಬಗ್ಗೆ ಕಿಂಚಿತ್ ಕಾಳಜಿ ಇಲ್ಲವೇಕೆ? ಎಂದು ಕಾಂಗ್ರೆಸ್​ ಪ್ರಶ್ನಿಸಿದೆ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕಗೆ ಭೇಟಿ ನೀಡಿದ್ದರು. ಈ ವೇಳೆ ಸುದ್ದಿಗೋಷ್ಠಿಯಲ್ಲಿ ಅಮೆರಿಕಾದ ಪತ್ರಕರ್ತರೊಬ್ಬರು ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಮೋದಿಗೆ ಪ್ರಶ್ನೆ ಕೇಳಿದ್ದರು. ಪ್ರಧಾನಿ ಮೋದಿಗೆ ಪ್ರಶ್ನೆ ಕೇಳಿದ್ದ ಪತ್ರಕರ್ತರಿಗೆ ಆನ್​​ಲೈನ್​​ನಲ್ಲಿ ನಿಂದಿಸಲಾಗಿದೆ. ಹೀಗಾಗಿ ಈ ಘಟನೆಯನ್ನು ಅಮೆರಿಕದ ಶ್ವೇತ ಭವನ ತೀವ್ರವಾಗಿ ಖಂಡಿಸಿದೆ.

ವಾಲ್ ಸ್ಟ್ರೀಟ್ ಜರ್ನಲ್‌ ಸಬ್ರಿನಾ ಸಿದ್ದಿಕಿ ಎಂಬುವರು ಭಾರತದಲ್ಲಿನ ಅಲ್ಪಸಂಖ್ಯಾತರ ಹಕ್ಕುಗಳನ್ನು ಸುಧಾರಿಸಲು ಸರ್ಕಾರ ಏನು ಮಾಡಿದೆ ಎಂದು ಪ್ರಧಾನಿ ಮೋದಿಗೆ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಪ್ರಧಾನಿ ಮೋದಿ, ಪ್ರಜಾಪ್ರಭುತ್ವ ನಮ್ಮ ರಕ್ತನಾಳಗಳಲ್ಲಿ ಹರಿಯುತ್ತಿದೆ. ಭಾರತದಲ್ಲಿ ಜಾತಿ, ಧರ್ಮದ ಆಧಾರದ ಮೇಲೆ ತಾರತಮ್ಯಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಲ್ಲ ಎಂದಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ವಿದೇಶದಲ್ಲಿ ಭಾರತದ ಮಾನ ಹರಾಜು ಹಾಕಿದ ಪ್ರಧಾನಿ ನರೇಂದ್ರ ಮೋದಿ’- ಕಾಂಗ್ರೆಸ್​

https://newsfirstlive.com/wp-content/uploads/2023/06/Modi_1.jpg

Load More