newsfirstkannada.com

ತೆಲಂಗಾಣ ಕಾಂಗ್ರೆಸ್‌ನಿಂದ ಕರ್ನಾಟಕ ಮಾದರಿ ಪಾಲನೆ: ಇಂದು ಬೃಹತ್ ಸಮಾವೇಶ.. ಆರು ಫ್ರೀ ಯೋಜನೆ ಘೋಷಣೆ

Share :

17-09-2023

  ಬೃಹತ್ ಸಮಾವೇಶದಲ್ಲಿ ಸಿದ್ದರಾಮಯ್ಯ ಸೆಂಟರ್‌ ಆಫ್ ಅಟ್ರ್ಯಾಕ್ಷನ್‌

  ಸೋನಿಯಾ ಗಾಂಧಿ ಉಚಿತ ಘೋಷಣೆಗಳನ್ನು ಬಿಡುಗಡೆ ಮಾಡಲಿದ್ದಾರೆ

  ಬಿಪಿಎಲ್ ಕಾರ್ಡ್‌ದಾರ ಮಹಿಳೆಯರಿಗೆ 3,000 ರೂಪಾಯಿ ಘೋಷಣೆ

ಕರ್ನಾಟಕ ಕದನದ ಗೆಲುವು ಕೈಪಾಳಯಕ್ಕೆ ಅಕ್ಷರಶಃ ನವಚೇತನವನ್ನೇ ತಂದಿದೆ. ಹಾಗೆಯೇ, ರಾಷ್ಟ್ರಮಟ್ಟದಲ್ಲಿ ಬಿಜೆಪಿ ವಿರುದ್ಧ ಹೋರಾಡುವ ಶಕ್ತಿ ಸಾಮರ್ಥ್ಯ ದಯಪಾಲಿಸಿದೆ. ಈ ನಿಟ್ಟಿನಲ್ಲಿ ತೆಲಂಗಾಣದಲ್ಲಿ ಕೆಸಿಆರ್‌ನ ಕಟ್ಟಿಹಾಕಲು ಕಾಂಗ್ರೆಸ್‌ ಉಚಿತ ಯೋಜನೆಗಳ ಮೊರೆ ಹೋಗಿದೆ. ಈ ಮಧ್ಯೆ ಇಲ್ಲಿಯವರೆಗೂ ಕರ್ನಾಟಕ ಸ್ಟಾರ್‌ ಆಗಿದ್ದ ಸಿಎಂ ಸಿದ್ದರಾಮಯ್ಯ ಸೌತ್‌ ಇಂಡಿಯಾ ಸ್ಟಾರ್‌ ಆಗಿದ್ದಾರೆ. ತೆಲಂಗಾಣದಲ್ಲಿ ಇವತ್ತು ನಡೆಯಲಿರೋ ಬೃಹತ್ ಸಮಾವೇಶದಲ್ಲಿ ಸೆಂಟರ್‌ ಆಫ್ ಅಟ್ರ್ಯಾಕ್ಷನ್‌ ಆಗಿದ್ದಾರೆ.

ಕರ್ನಾಟಕದಲ್ಲಿ ಸಿಕ್ಕಿರೋ ಗೆಲುವು ಕಾಂಗ್ರೆಸ್‌ ಪಾಲಿಗೆ ಅಕ್ಷರಶಃ ರಾಷ್ಟ್ರ ರಾಜಕೀಯದಲ್ಲಿ ಪುನರ್‌ಜನ್ಮ ಪಡೆಯಲು ಸಿಕ್ಕಿರೋ ಪಾಶುಪತಾಸ್ತ್ರವಾದಂತಿದೆ. ಹೀಗಾಗಿಯೇ ಕರ್ನಾಟಕ ಎಲೆಕ್ಷನ್‌ ಆದ್ಮೇಲೆ ಪಂಚ ರಾಜ್ಯಗಳ ಎಲೆಕ್ಷನ್‌ ಅತ್ತ ಕಾಂಗ್ರೆಸ್‌ ಮುನ್ನುಗ್ಗಿ ಹೋಗ್ತಿದೆ. ಅದ್ರಲ್ಲಿಯೂ ತೆಲಂಗಾಣದಲ್ಲಿ ಗೆಲುವು ಪಡೆಯಲೇಬೇಕು ಅನ್ನೋ ಹುಮ್ಮಸ್ಸಿನಲ್ಲಿ ರಣತಂತ್ರ ರೂಪಿಸ್ತಿದೆ. ಈ ವರ್ಷದ ಕೊನೆಗೆ ಶುರುವಾಗಲಿರೋ ತೆಲಂಗಾಣ ಚುನಾವಣೆಯನ್ನ ಟಾರ್ಗೆಟ್‌ ಆಗಿ ಮಾಡಿ ಕಾಂಗ್ರೆಸ್ ಪಾಳಯ ಇವತ್ತು ರಣಕಹಳೆಯನ್ನ ಮೊಳಗಿಸಲು ಸಜ್ಜಾಗಿದೆ.

ತೆಲಂಗಾಣ ಕಾಂಗ್ರೆಸ್‌ನಿಂದ ಕರ್ನಾಟಕ ಮಾದರಿ ಪಾಲನೆ!

ಇವತ್ತು ಸಿಎಂ ಚಂದ್ರಶೇಖರ್‌ ರಾವ್‌ ಕೋಟೆಯಲ್ಲಿ ಕಾಂಗ್ರೆಸ್‌ ಪಾಳಯದ ರಣಕಹಳೆ ಮೊಳಗಲಿದೆ. ತೆಲಂಗಾಣದ ತಕ್ಕುಗುಡಾದಲ್ಲಿ ಕಾಂಗ್ರೆಸ್‌ ವಿಜಯಭೇರಿ ಸಮಾವೇಶ ನಡೆಸುತ್ತಿದೆ. ಎಲೆಕ್ಷನ್‌ಗೂ ಮುನ್ನ ಮತಬೇಟೆಗೆ ತೆಲಂಗಾಣ ಕಾಂಗ್ರೆಸ್‌ ಕರ್ನಾಟಕ ಮಾದರಿಯನ್ನೇ ಪಾಲಿಸಲು ಮುಂದಾಗಿದೆ. ಸುಮಾರು 6 ಉಚಿತ ಯೋಜನೆಗಳನ್ನ ಕಾಂಗ್ರೆಸ್ ಇವತ್ತು ಘೋಷಿಸಲಿದೆ. ಈ ಬೃಹತ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಸ್ಟಾರ್‌ ಕ್ಯಾಂಪೇನರ್ ಆಗಿದ್ದು, ಈಗಾಗಲೇ ತೆಲಂಗಾಣಕ್ಕೆ ತೆರಳಿದ್ದಾರೆ. ಸಮಾವೇಶದಲ್ಲಿ ಭಾಗಿಯಾಗಲು ಎಐಸಿಸಿ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಕೂಡಾ ಹೈದ್ರಾಬಾದ್‌ಗೆ ಆಗಮಿಸಿದ್ದಾರೆ. ಇವತ್ತು ಸೋನಿಯಾ ಗಾಂಧಿ ಉಚಿತ ಘೋಷಣೆಗಳನ್ನು ಬಿಡುಗಡೆ ಮಾಡಲಿದ್ದಾರೆ.

‘ಕೈ’ ಆರು ‘ಉಚಿತ’ ಅಸ್ತ್ರ

 • ಬಿಪಿಎಲ್ ಕಾರ್ಡ್‌ದಾರ ಮಹಿಳೆಯರಿಗೆ 3,000 ರೂಪಾಯಿ
 • ಪ್ರತಿ ಅಡುಗೆ ಸಿಲಿಂಡರ್‌ 500 ರೂಪಾಯಿಗೆ ನೀಡುವುದು
 • ಮನೆ ನಿರ್ಮಾಣಕ್ಕೆ ಪ್ರತಿ ಕುಟುಂಬಕ್ಕೆ ₹5 ಲಕ್ಷ ಹಣ ನೆರವು
 • ನಿರುದ್ಯೋಗ ಸಮಸ್ಯೆ ನಿವಾರಣೆಗೆ 2 ಲಕ್ಷ ಉದ್ಯೋಗ ಸೃಷ್ಟಿ
 • ದಲಿತ ಬಂಧು ಸ್ಕೀಂ ಅಡಿ ಎಸ್‌ಸಿ-ಎಸ್‌ಟಿಗೆ 12 ಲಕ್ಷವರೆಗೆ ಸಾಲ
 • ವಿಶೇಷ ಚೇತನರು, ವೃದ್ಧರು, ವಿಧವೆಯರಿಗೆ 4,000 ಪಿಂಚಣಿ

ಇದಷ್ಟೇ ಅಲ್ಲ, ಇಂದಿರಮ್ಮ ಭರೋಸಾ ಯೋಜನೆ ಅಡಿಯಲ್ಲಿ ರೈತರಿಗೆ 15 ಸಾವಿರ ರೂಪಾಯಿ ನೀಡುವ ಘೋಷಣೆ ಹೊರಡಿಸುವ ಸಾಧ್ಯತೆ ಇದೆ. ತೆಲಂಗಾಣದ ತಕ್ಕುಡುಗಾದಲ್ಲಿ ನಡೆಯಲಿರೋ ವಿಜಭೇರಿ ಸಮಾವೇಶಕ್ಕೆ 10 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗೋ ನಿರೀಕ್ಷೆ ಇದೆ. ವಿಜಯ ಭೇರಿ ಸಭೆಯು ಭಾರತದ ಅತಿದೊಡ್ಡ ರಾಜಕೀಯ ರ್ಯಾಲಿಗಳಲ್ಲಿ ಒಂದಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಒಟ್ಟಾರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಇಷ್ಟು ವರ್ಷ ಕರ್ನಾಟಕಕ್ಕೆ ಮಾತ್ರ ಮಾಸ್‌ ಲೀಡರ್‌ ಆಗಿದ್ರು. ಇದೀಗ ಸೌತ್‌ ಸ್ಟಾರ್‌ ಆಗಿ ಹೊರ ಹೊಮ್ಮುವ ಕಾಲ ಕೂಡಿ ಬಂದಿದೆ. ಇನ್ನು ತೆಲಂಗಾಣದಲ್ಲಿ ಹಿಂದುಳಿದ ವರ್ಗಗಳ ಸಮಾವೇಶಕ್ಕೂ ಪ್ಲಾನ್‌ ನಡೆಯುತ್ತಿದೆ. ಅದೂ ಸಿದ್ದರಾಮಯ್ಯ ನೇತೃತ್ವದಲ್ಲಿಯೇ ನಡೆಯುತ್ತೆ. ಹಾಗಾದ್ರೆ, ತೆಲಂಗಾಣ ಕಾಂಗ್ರೆಸ್‌ ಪಾಲಿಗೆ ಸಿದ್ದುನೇ ಶಕ್ತಿ ನೀಡೋ ಟಾನಿಕ್ ಆಗ್ತಾರಾ? ಲೆಟ್ಸ್ ವೇಯ್ಟ್‌ ಅಂಡ್ ವಾಚ್‌.

ವಿಶೇಷ ವರದಿ: ಜಗದೀಶ್, ನ್ಯೂಸ್‌ಫಸ್ಟ್, ನವದೆಹಲಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತೆಲಂಗಾಣ ಕಾಂಗ್ರೆಸ್‌ನಿಂದ ಕರ್ನಾಟಕ ಮಾದರಿ ಪಾಲನೆ: ಇಂದು ಬೃಹತ್ ಸಮಾವೇಶ.. ಆರು ಫ್ರೀ ಯೋಜನೆ ಘೋಷಣೆ

https://newsfirstlive.com/wp-content/uploads/2023/09/Telangana-Cong.jpg

Load More