ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ ಕೊರೊನಾ
ಕಾಂಗ್ರೆಸ್ - ಬಿಜೆಪಿ ಮಧ್ಯೆ ತನಿಖೆ ವಾಗ್ಯುದ್ಧ!
ಬಿಜೆಪಿ ವಿರುದ್ಧ ಸತೀಶ್ ಜಾರಕಿಹೊಳಿ ವಾಗ್ದಾಳಿ
ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ ಕೊರೊನಾ. ಕರುನಾಡನ್ನೂ ಅಲ್ಲೋಲ-ಕಲ್ಲೋಲ ಮಾಡಿತ್ತು. ರಾಜ್ಯಾದ್ಯಂತ ಆತಂಕ ಮನೆಮಾಡಿ ಸಾವು-ನೋವುಗಳ ಸರಮಾಲೆಯೇ ಸೃಷ್ಟಿಯಾಗಿತ್ತು. ಅದರಲ್ಲೂ ಚಾಮರಾಜನಗರದಲ್ಲಿ ನಡೆದ ದುರಂತ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿತ್ತು. ಜುಲೈ 2, 2021. ಈ ದಿನ ಇಡೀ ಕರ್ನಾಟಕದ ಜನರ ಕಣ್ಣುಗಳನ್ನ ತೇವಗೊಳಿಸಿದ್ದ ದಿನ. ಅದಕ್ಕೆ ಕಾರಣವಾಗಿದ್ದು, ಪ್ರಾಣವಾಯು ಅರ್ಥಾತ್ ಆಕ್ಸಿಜನ್.
ಇದೇ ಆಕ್ಸಿಜನ್ ಕೊರತೆಯಿಂದ ಗಡಿಜಿಲ್ಲೆಯ ಚಾಮರಾಜನಗರದಲ್ಲಿ 36 ಜನರ ಪ್ರಾಣ ಪಕ್ಷಿ ಹಾರಿಹೋಗಿತ್ತು. ಒಂದ್ಕಡೆ ಕೋವಿಡ್ ಆತಂಕ, ಮತ್ತೊಂದ್ಕಡೆ ಆಕ್ಸಿಜನ್ ಆಘಾತ, ಇವೆರಡೂ 36 ಕುಟಂಬಗಳನ್ನ ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿತ್ತು.. ಅಂದು ನಡೆದ ಈ ದುರಂತ ಹಾಗೂ ರಾಜ್ಯದಲ್ಲಿ ಕೊವೀಡ್ನಂತ ಸಂಕಷ್ಟದಲ್ಲಿ ಅಂದಿನ ಸಚಿವರು ನಡೆಸಿದ್ದಾರೆ ಎನ್ನಲಾದ ಅಕ್ರಮಗಳ ಆಟಾಟೋಪ ರಾಜ್ಯದ ಜನರ ಕೆಂಗಣ್ಣಿಗೆ ಗುರಿಯಾಗಿತ್ತು.
ಕಾಂಗ್ರೆಸ್ ಸರ್ಕಾರದಿಂದ ಹೊರಬಿತ್ತು ಮಹತ್ವದ ಆದೇಶ
ಅಂದು ಕೆಪಿಸಿಸಿ ಅಧಕ್ಯರಾಗಿದ್ದ ಡಿ.ಕೆ ಶಿವಕುಮಾರ್ ಆಡಿದ್ದ ಮಾತುಗಳು ಇಂದು ಸತ್ಯವಾಗುವ ಸಮಯ ಸನಿಹವಾಗಿದೆ. ರಾಜ್ಯದಲ್ಲಿ ಕೋವಿಡ್ ಸಂಕಷ್ಟದ ನಡುವೆಯೂ ಅಕ್ರಮಗಳ ಆಟವಾಡಿದ ಕ್ರಿಮಿಗಳನ್ನ ಕೆಡ್ಡಾಗೆ ಕೆಡವಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಸರ್ಕಾರ ಆಯೋಗವೊಂದನ್ನೂ ರಚನೆಮಾಡಿದೆ. ನಿವೃತ್ತ ನ್ಯಾಯಾಧೀಶ ಮೈಕೆಲ್ ಡಿ. ಕುನ್ಹಾ ನೇತೃತ್ವದಲ್ಲಿ ಕೋವಿಡ್ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಒಳಾಡಳಿತ ಇಲಾಖೆಯಿಂದ ಮಹತ್ವದ ಆದೇಶ ಹೊರಬಿದ್ದಿದೆ. 3 ತಿಂಗಳೊಳಗೆ ಈ ಬಗ್ಗೆ ವರದಿ ಕೊಡಲು ಸೂಚನೆ ಸಹ ನೀಡಲಾಗಿದೆ. ಗಡಿಜಿಲ್ಲೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತದಲ್ಲಿ 36 ಮಂದಿ ಮೃತಪಟ್ಟ ಪ್ರಕರಣವನ್ನೇ ಮೈನ್ ಟಾರ್ಗೆಟ್ ಮಾಡಿ ತನಿಖೆ ನಡೆಸಲಾಗುತ್ತೆ. ಇನ್ನೂ ಕೋವಿಡ್ ಅವಧಿಯಲ್ಲಿ ರಾಜ್ಯದಲ್ಲಿ ನಡೆದ ಔಷಧಿ ಖರೀದಿ ಮತ್ತು ಉಪಕರಣ ಖರೀದಿಯಲ್ಲಿ ಅಕ್ರಮ ನಡೆದಿದೆ ಎನ್ನಲಾಗಿದ್ದು ಈ ಬಗ್ಗೆಯೂ ತನಿಖೆ ನಡೆಯಲಿದೆ.. ಇದರ ಜೊತೆ ಕೋವಿಡ್ ವೇಳೆ ರೋಗಿಗಳಿಗೆ ಬೆಡ್ ಹಂಚಿಕೆಯಲ್ಲೂ ಅಕ್ರಮ ನಡೆದಿರೋ ಆರೋಪ ಕೇಳಿಬಂದಿರೋದ್ರಿಂದ ಈ ಆಯಮದಲ್ಲೂ ತನಿಖೆ ನಡೆಯಲಿದೆ.
ಕಾಂಗ್ರೆಸ್ – ಬಿಜೆಪಿ ಮಧ್ಯೆ ತನಿಖೆ ವಾಗ್ಯುದ್ಧ!
ಕಾಂಗ್ರೆಸ್ ಸರ್ಕಾರ ಕೋವಿಡ್ ಅಕ್ರಮಗಳ ಮೇಲೆ ತನಿಖಾ ತಂಡವನ್ನ ಛೂ ಬಿಡುತ್ತಿದ್ದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ವಾಗ್ಯುದ್ಧವೇ ಏರ್ಪಟ್ಟಿದೆ. ಈ ಬಗ್ಗೆ ಮಾತನಾಡಿರೋ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೋವಿಡ್ ಅಕ್ರಮದ ಜೊತೆ ಬಿಜೆಪಿ ಸರ್ಕಾರದ 40% ಕಮಿಷನ್ ಆರೋಪದ ಬಗ್ಗೆಯೂ ತನಿಖೆ ನಡೆಲಿದೆ ಎಂದಿದ್ದಾರೆ. ಇದಕ್ಕೆ ತಿರುಗೇಟು ನೀಡಿರೋ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, 40% ಬಗ್ಗೆ ಯಾವುದೇ ಸಾಕ್ಷಿಗಳಿಲ್ಲ, ಎರಡು ವರ್ಷವಾದರೂ ಗುತ್ತಿಗೆದಾರರ ಸಂಘ ಕೋರ್ಟ್ಗೆ ದಾಖಲೆಗಳನ್ನ ಕೊಟ್ಟಿಲ್ಲ ಅಂತ ಟಾಂಗ್ ನೀಡಿದ್ದಾರೆ.
ಬಿಜೆಪಿ ವಿರುದ್ಧ ಸತೀಶ್ ಜಾರಕಿಹೊಳಿ ವಾಗ್ದಾಳಿ
ಬಿಜೆಪಿ ಸರ್ಕಾರದ ಅವಧಿಯ ಅಕ್ರಮದ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ, ಕೋವಿಡ್ ಅವಧಿಯಲ್ಲಿ ಬಿಜೆಪಿ ಸರ್ಕಾರ 10 ರೂಪಾಯಿಗೆ ಇದ್ದ ವಸ್ತುಗಳನ್ನ 100 ರೂಪಾಯಿಗೆ ಖರೀದಿ ಮಾಡಿದೆ ಅಂತ ಆರೋಪಿಸಿದ್ದಾರೆ. ರಾಜ್ಯರಾಜಕೀಯದಲ್ಲಿ ತನಿಖಾಸ್ತ್ರದ ಪ್ರಯೋಗ ಮತ್ತೆ ಮುನ್ನೆಲೆಗೆ ಬಂದಿದೆ. ತನಿಖೆಯ ಗುಮ್ಮವನ್ನ ಬಿಟ್ಟು ಬಿಜೆಪಿ ನಾಯಕರ ನಿದ್ದೆಗೆಡಸಲು ಕೈ ಪಡೆ ರಣತಂತ್ರ ರಚಿಸಿದೆ. ಕೋವಿಡ್ ಅಕ್ರಮಗಳ ತನಿಖೆಯಲ್ಲಿ ಆರೋಪ ಪ್ರತ್ಯಾರೋಪಗಳ ಅಸಲಿ ಸತ್ಯ ಬಯಲಿಗೆ ಬರುತ್ತಾ ಅಂತ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ