ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಕಾಂಗ್ರೆಸ್ ತಯಾರಿ
ಬಿಬಿಎಂಪಿ ಚುನಾವಣೆ ಹೊತ್ತಲ್ಲೇ ಡಿಕೆಶಿ, ಸಿದ್ದರಾಮಯ್ಯಗೆ ಟೆನ್ಶನ್..!
ಐದು ಗ್ಯಾರಂಟಿ ಜಾರಿ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ ಹೊಸ ಚಾಲೆಂಜ್
ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಕೈ ಪಡೆ ಭರ್ಜರಿ ತಯಾರಿ ನಡೆಸುತ್ತಿದೆ. ಈಗಾಗಲೇ ಬೆಂಗಳೂರು ಉಸ್ತುವಾರಿ ತೆಗೆದುಕೊಂಡಿರೋ ಡಿಕೆ ಶಿವಕುಮಾರ್ ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರು ಹಾಗೂ ಸಚಿವರು ಜೊತೆಗೆ ಅಧಿಕಾರಿಗಳ ಸಭೆ ನಡೆಸಿದ್ರು. ಈ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೀವಾಲಾ ಕೂಡ ಭಾಗಿಯಾಗಿ ಹೊಸ ವಿವಾದಕ್ಕೆ ಕಾರಣವಾಗಿದ್ದಾರೆ.
ನಗರದ ಹೋಟೆಲ್‌ನಲ್ಲಿ ಇವತ್ತು ಪಾಲಿಕೆ ಚುನಾವಣೆ ವಿಚಾರವಾಗಿ ಸಭೆ ನಡೆದಿದೆ. ಈ ಸಭೆಯಲ್ಲಿ ಬೆಂಗಳೂರಿನ ಸಚಿವರು, ಶಾಸಕರು ಮತ್ತು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಮತ್ತು ಬಿಡಿಎ ಅಧ್ಯಕ್ಷರು ಇರೋ ಫೋಟೋ ಈಗ ಈ ವಿವಾದ ಏಳಲು ಕಾರಣವಾಗಿದೆ. ಸರ್ಕಾರದ ಭಾಗವಾಗದಿದ್ರೂ ಸಭೆಯಲ್ಲಿದ್ದ ಸುರ್ಜೇವಾಲಾ ಭಾಗವಹಿಸಿದ್ದು ಯಾಕೆ? ಅನ್ನೋ ಪ್ರಶ್ನೆ ಎದ್ದಿದ್ದು ಈ ಬಗ್ಗೆ ಬಿಜೆಪಿ ವ್ಯಂಗ್ಯವಾಡಿ ಟ್ವೀಟ್ ಮಾಡಿ ಪ್ರಶ್ನೆ ಮಾಡಿದೆ.
85% ಡೀಲ್ ಫಿಕ್ಸಿಂಗ್ ಸಭೆನಾ?
ಶಾಂಗ್ರಿಲಾ ಹೋಟೆಲ್‌ನಲ್ಲಿ ಎಟಿಎಂ ಸರ್ಕಾರದದ ಗೌಪ್ಯ ಸಭೆಯ ರಹಸ್ಯವೇನು.? ರಾಜ್ಯ ಸರ್ಕಾರದೊಟ್ಟಿಗಾಗಲಿ, ಬಿಬಿಎಂಪಿ ಒಟ್ಟಿಗಾಗಲಿ ಯಾವುದೇ ರೀತಿಯ ಅಧಿಕೃತ ಸಂಬಂಧವಿರದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲರಿಗೆ ಬಿಬಿಎಂಪಿ ಉನ್ನತ ಅಧಿಕಾರಿಗಳೊಟ್ಟಿಗೇನು ಕೆಲಸ? ಇದು 85% ಡೀಲ್ ಫಿಕ್ಸಿಂಗ್ ಸಭೆಯೇ? ಉತ್ತರಿಸಿ ಮಾನ್ಯ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ರವರೇ..
-ಬಿಜೆಪಿ ಕರ್ನಾಟಕ
ಹೀಗೆ ಬಿಜೆಪಿ ಸಾಕ್ಷಿ ಸಮೇತ ಟ್ವೀಟ್ ಮಾಡ್ತಿದ್ದಂತೆ ಡಿಸಿಎಂ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಅಧಿಕಾರಿಗಳು ನನ್ನ ಬಿಡಿಎ ಕಚೇರಿಗೆ ಕರೆದೊಯ್ಯಲು ಬಂದಿದ್ದಷ್ಟೇ ಸಭೆಯಲ್ಲಿ ಭಾಗವಹಿಸಿಲ್ಲ ಎಂದಿದ್ದಾರೆ.
ಡಿಸಿಎಂ ಸಾಹೇಬ್ರೇನೋ ಹೀಗೆ ಹೇಳ್ತಿದ್ದಾರೆ. ಆದ್ರೆ ಫೋಟೋದಲ್ಲಿ ಅಧಿಕಾರಿಗಳು ಇರೋದು ಗೊತ್ತಾಗ್ತಿದೆ. ಒಟ್ನಲ್ಲಿ ಇವತ್ತಿನ ಸುರ್ಜೇವಾಲ ಸಭೆ ವಿವಾದ ಸೃಷ್ಟಿಸೋ ಮೂಲಕ ಬಿಜೆಪಿಗೆ ಆಹಾರವಾಗಿದೆ. ಇನ್ನು ಸಭೆಯಲ್ಲಿ ಪ್ರಮುಖವಾಗಿ ಬಿಜೆಪಿ ಸರ್ಕಾರದಲ್ಲಿ ಮಾಡಿದ್ದ ವಾರ್ಡ್ ಮರುವಿಂಗಡನೆ ಹಾಗೂ ಮೀಸಲಾತಿ ಬಗ್ಗೆ ಚರ್ಚೆ ನಡೆಸಲಾಗಿದೆ. ಶೀಘ್ರ ಚುನಾವಣೆ ನಡೆಸಲು ಕಾನೂನು ತೊಡಕುಗಳ ಕುರಿತು ಎಜಿ ಶಶಿಕಿರಣ್ ಶೆಟ್ಟಿ ಅವರನ್ನು ಕರೆಸಿಕೊಂಡು ಸಭೆಯಲ್ಲಿ ಚರ್ಚೆ ನಡೆದ್ದಾರೆ.
ಬಿಬಿಎಂಪಿ ಚುನಾವಣೆಗೆ ವರ್ಕೌಟ್ ಮಾಡುತ್ತಿರುವ ಸರ್ಕಾರ ಈಗಾಗಲೇ ಸುಪ್ರಿಂ ಕೋರ್ಟ್ ನಲ್ಲಿ ಬಾಕಿ ಇರುವ ಬಿಬಿಎಂಪಿ ಪ್ರಕರಣವನ್ನ ಇತ್ಯರ್ಥ ಪಡಿಸಲು ಸಕಲ ತಯಾರಿ ಮಾಡಿಕೊಳ್ತಿದೆ. ಜುಲೈ 4ರ ನಂತರ ಬಿಜೆಪಿ ಸರ್ಕಾರ ವಾರ್ಡ್ ವಿಂಗಡಣೆ ವಿಚಾರವಾಗಿ ಸಲ್ಲಿಸಿರೋ ಅಫಿಡವಿಟ್ ಸಮರ್ಪಕವಾಗಿಲ್ಲ ಅಂತ ಸುಪ್ರೀಂ ಕೋರ್ಟ್ಗೆ ಸರ್ಕಾರ ಮಾಹಿತಿ ನೀಡುವ ಸಾಧ್ಯತೆ ಇದೆ. ಅದನ್ನ ಮಾಡದೇ ನಾವು ಚುನಾವಣೆಗೆ ಸಿದ್ದ ಅಂತ ಮೀಸಲಾತಿ ಪಟ್ಟಿ ಸಲ್ಲಿಸಿದ್ರೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ಕೊಡೋ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ