newsfirstkannada.com

ಆಟೋ ಚಾಲಕರಿಗೆ ಗುಡ್​ನ್ಯೂಸ್​​; ಓಲಾ ಊಬರ್​ಗೆ ಸೆಡ್ಡು ಹೊಡೆದ ಸರ್ಕಾರ; ಎಲ್ಲರೂ ಓದಲೇಬೇಕಾದ ಸ್ಟೋರಿ

Share :

05-08-2023

  ಆಟೋ ಚಾಲಕರಿಗೆ ಸಿಕ್ತು ಗುಡ್​ನ್ಯೂಸ್​​..!

  ಓಲಾ ಊಬರ್​ಗೆ ಸೆಡ್ಡು ಹೊಡೆದ ಸರ್ಕಾರ

  ಬೆಂಗಳೂರಿಗರು ಓದಲೇಬೇಕಾದ ಸ್ಟೋರಿ

ಬೆಂಗಳೂರು: ಶಕ್ತಿ ಯೋಜನೆ ಬಂದಾಯ್ತು.. ಫ್ರೀ ರೈಡ್​​​ ಸಿಕ್ಕಾಯ್ತು.. ನಾರಿಮಣಿಯರಂತೂ ಫುಲ್​ ರೌಂಡ್ಸ್​​ ಹೊಡೆಯಲು ಶುರು ಮಾಡಾಯ್ತು. ಆದ್ರೆ ಈ ಮಧ್ಯೆ ಕೂಸು ಬಡವಾಯ್ತು ಅನ್ನೋ ಹಾಗೇ ಆಟೋ ಚಾಲಕರ ಗೋಳು ಕೇಳೋರಿಲ್ಲ ಅನ್ನುವಂತಾಗಿತ್ತು. ದಿನ ದೂಡಲು ಕೂಡ ಕಷ್ಟ ಆಗ್ತಿದೆ. ಸರ್ಕಾರ ಅನ್ಯಾಯ ಮಾಡಿ ಬಿಡ್ತಲ್ಲ ಎಂದು ಹಿಡಿಹಿಡಿ ಶಾಪ ಹಾಕುತ್ತಿದ್ದ ಆಟೋ ಚಾಲಕರ ಕಣ್ಣೀರು ಒರೆಸಿ ಗುಡ್​​ನ್ಯೂಸ್​​ ಕೊಟ್ಟಿದೆ.

ಓಲಾ, ಉಬರ್​​ನಂತಹ ಅಗ್ರಿಗೇಟರ್ ಕಂಪನಿಗಳಿಗೆ ಸೆಡ್ಡು ಹೊಡೆಯೋದಕ್ಕೆ ಸರ್ಕಾರ ‘ನಮ್ಮ ಆ್ಯಪ್’ ಎಂಬ ಹೊಸ ಮಾರ್ಗವನ್ನ ಕಂಡು ಹಿಡಿದೆ. ಆಟೋ, ಕ್ಯಾಬ್​​ ಚಾಲಕರ ಬೇಡಿಕೆಯಂತೆ ಸಚಿವರು ಈ ನಿರ್ಧಾರಕ್ಕೆ ಬಂದಿದ್ದಾರೆ. ಈಗಾಗಲೇ ಸಾರಿಗೆ ಇಲಾಖೆ ಆಯುಕ್ತರು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಇನ್ನೆರಡು ತಿಂಗಳಲ್ಲಿ ನಮ್ಮ ಆ್ಯಪ್ ಲಾಂಚ್​​ಗೆ ಚಿಂತನೆ ನಡೆಸಿದ್ದಾರೆ.

ಏನಿದು ‘ನಮ್ಮ ಆ್ಯಪ್’?

ನಮ್ಮ ಆ್ಯಪ್​​ ಓಲಾ, ಉಬರ್​​​ನಂತಹ ಅಗ್ರಿಗೇಟರ್​​ ಕಂಪನಿಗಳಂತೆ ಕಾರ್ಯನಿರ್ವಹಿಸಲಿದ್ದು, ನೋ ಲಾಸ್ ನೋ ಪ್ರಾಫಿಟ್ ರೀತಿಯಲ್ಲಿ ರೆಡಿಯಾಗಲಿದೆ. ಸರ್ಕಾರದ ಈ ಆ್ಯಪ್​​ನಲ್ಲಿ ಆಟೋ ಟ್ಯಾಕ್ಸಿ ಎಲ್ಲವೂ ಸೇರಿರುತ್ತೆ. ಮಳೆ ಬಂದ್ರೆ ಅಥವಾ ಪೀಕ್ ಅವರ್ ಅಂತಹ ಸಮಸ್ಯೆಯಲ್ಲಿ ಯಾವುದೇ ರೇಟ್ ನಿಗದಿಯಾಗಲ್ಲ. ಅಂದ್ರೆ ಹೆಚ್ಚಿನ ಹಣವನ್ನ ನೀವು ಪಾವತಿಸುವಂತಿಲ್ಲ. ಯಾವ ಟೈಮ್​​​​ನಲ್ಲಿ ವೆಹಿಕಲ್ ಓಡಾಟ ನಡೆಸಿದ್ರು ಒಂದೇ ಚಾರ್ಜ್ ಅನ್ವಯಿಸುತ್ತೆ. ಸರ್ಕಾರದ ಆದೇಶ ಎಷ್ಟಿದೆಯೋ ಅಷ್ಟು ಮಾತ್ರ ಹಣ ಪಡೆಯೋದಕ್ಕೆ ಸರ್ಕಾರ ಚಿಂತನೆ ನಡೆಸಿದೆ.

ಖಾಸಗಿ ಕ್ಯಾಬ್‌ ಸಂಸ್ಥೆಗಳು ಗ್ರಾಹಕರಿಂದ ಜಾಸ್ತಿ ದುಡ್ಡು ತಗೊಂಡ್ರೂ ಚಾಲಕರಿಗೆ ಕಡಿಮೆ ಕೊಡ್ತಿದ್ದಾರೆ ಅನ್ನೋ ಆರೋಪ ಇತ್ತು. ಆದ್ರೆ ಅದೆಲ್ಲದ್ರಿಂದ ಮುಕ್ತಿ ನೀಡೋಕೆ, ಚಾಲಕರು, ಪ್ರಯಾಣಿಕರ ಸಹಾಯಕ್ಕಾಗಿ ಸಾರಿಗೆ ಇಲಾಖೆ ನಮ್ಮ ಌಪ್ ಆರಂಭ ಮಾಡ್ತಿದೆ. ಆದ್ರಿದನ್ನ ಬೆಂಗಳೂರಿಗರು ಎಷ್ಟರ ಮಟ್ಟಿಗೆ ಬಳಕೆ ಮಾಡ್ತಾರೆ ಕಾದು ನೋಡ್ಬೇಕು.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಆಟೋ ಚಾಲಕರಿಗೆ ಗುಡ್​ನ್ಯೂಸ್​​; ಓಲಾ ಊಬರ್​ಗೆ ಸೆಡ್ಡು ಹೊಡೆದ ಸರ್ಕಾರ; ಎಲ್ಲರೂ ಓದಲೇಬೇಕಾದ ಸ್ಟೋರಿ

https://newsfirstlive.com/wp-content/uploads/2023/07/Auto-Taxi-Bundh.jpg

Load More