newsfirstkannada.com

ಇಂದಿನಿಂದ ವಿಧಾನಸಭೆ ಅಧಿವೇಶನ; ಸಿದ್ದು ಸರ್ಕಾರವನ್ನು ಕಟ್ಟಿ ಹಾಕಲು ಬಿಜೆಪಿ ಪ್ಲಾನ್​ ಏನು?

Share :

03-07-2023

    16ನೇ ವಿಧಾನಸಭೆಯ ಚೊಚ್ಚಲ ಅಧಿವೇಶನ

    ಜುಲೈ 14ರವರೆಗೆ 10 ದಿನಗಳ ಕಾಲ ಅಧಿವೇಶನ

    14ನೇ ಬಜೆಟ್​ ಮಂಡಿಸಲಿರುವ ಸಿದ್ದರಾಮಯ್ಯ

ಬೆಂಗಳೂರು: ಇಂದಿನಿಂದ 10 ದಿನಗಳ ಕಾಲ ವಿಧಾನಮಂಡಲದ ಅಧಿವೇಶನ ನಡೆಯಲಿದೆ. ಸಿದ್ದರಾಮಯ್ಯ ತಮ್ಮ 14ನೇ ಬಜೆಟ್​​ ಮಂಡಿಸುವ ಮೂಲಕ ಹೊಸ ದಾಖಲೆ ಬರೆಯಲಿದ್ದಾರೆ. ಇತ್ತ, ಬಿಎಸ್​ವೈ, ಈಶ್ವರಪ್ಪ, ಕಾರಜೋಳ, ಸಿ.ಟಿ ರವಿ ಸೇರಿ ಮಾತಿನ ಮಲ್ಲರಿಲ್ಲದೇ ಸಿದ್ದು ಸೇನೆ ಎದುರಿಸಲು ಕಮಲ ಪಡೆ ಸಜ್ಜಾಗಿದೆ. ಗ್ಯಾರೆಂಟಿ ಬಗ್ಗೆ ಸದನದ ಹೊರಗೂ, ಒಳಗೂ ಹೋರಾಟಕ್ಕೆ ಬಿಜೆಪಿ ಸಿದ್ಧತೆ ನಡೆಸಿದೆ.

ರಾಜ್ಯ ವಿಧಾನ ಮಂಡಲದ ಜಂಟಿ ಅಧಿವೇಶನ ಇಂದು ಶುರುವಾಗಲಿದೆ. ಮಧ್ಯಾಹ್ನ 12 ಗಂಟೆಗೆ ವಿಧಾನಸಭೆ ಸಭಾಂಗಣದಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಗೆಹಲೋತ್​​​ ಭಾಷಣ ಮಾಡಲಿದ್ದಾರೆ. ನೂತನ ಸರ್ಕಾರದ ಮುನ್ನೋಟ, ಅಭಿವೃದ್ಧಿ ಯೋಜನೆಗಳನ್ನ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಲಿದ್ದಾರೆ. ಈ ಭಾಷಣದೊಂದಿಗೆ ಕೈ ಸರ್ಕಾರದ ಮೊದಲ ಅಧಿವೇಶನಕ್ಕೆ ಕೀ ಕೊಡಲಿದ್ದಾರೆ.

ಸದನದ ಒಳಗೆ-ಹೊರಗೆ ಗ್ಯಾರಂಟಿ ಹೋರಾಟಕ್ಕೆ ಕಮಲ ಸಜ್ಜು!

ಸಿದ್ದರಾಮಯ್ಯ ನೇತೃತ್ವದ 2.O ಸರ್ಕಾರಕ್ಕೆ ಇದು ಚೊಚ್ಚಲ ಅಧಿವೇಶನ. ಎಲೆಕ್ಷನ್​​​ನಲ್ಲಿ ಭರ್ಜರಿ ಗೆಲುವು ದಾಖಲಿಸಿದ ಕೈಪಡೆ, ಗ್ಯಾರಂಟಿ ಗುಂಗಿನಲ್ಲಿದೆ. ಈ ಅಧಿವೇಶನ ಮುಖ್ಯವಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ವೇದಿಕೆಯಾಗಲಿದೆ. ಕಾರಣ ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ್ದ ಪಂಚ ಖಾತ್ರಿಗಳು. ಹೀಗಾಗಿ ಉಭಯ ಸದನಗಳಲ್ಲಿ ಗ್ಯಾರಂಟಿಗಳು ಪ್ರತಿಧ್ವನಿಸಲಿವೆ.

ಉಭಯ ಸದನದಲ್ಲಿ ಗ್ಯಾರಂಟಿ ಕದನ ಖಚಿತ!

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಆಡಳಿತ-ವಿಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪ ನಡೆಯುತ್ತಿದೆ. ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ ಕಂಡೀಷನ್​​​ ಅಪ್ಲೈ ಎಂದಿದ್ದಕ್ಕೆ ಖಂಡಿಸಿವೆ. ಗ್ಯಾರಂಟಿ ವಿಚಾರದಲ್ಲಿ ಉಂಟಾಗಿರುವ ಗೊಂದಲವನ್ನು ಬಿಜೆಪಿ ಮತ್ತು ಜೆಡಿಎಸ್ ಪ್ರಮುಖ ಅಸ್ತ್ರವಾಗಿ ಬಳಸಲು ಸಜ್ಜಾಗಿವೆ. ಅದೇ ರೀತಿ ಸರ್ಕಾರದ ನಿಲುವು ಸಮರ್ಥಿಸಲು ಸರ್ಕಾರವೂ ತಯಾರಾಗಿದೆ. ಇದರ ಜೊತೆ ಇನ್ನಷ್ಟು ವಿಷಯಗಳು ಸದನದಲ್ಲಿ ಮಾರ್ದನಿಸಲಿವೆ.

ಸದನದಲ್ಲಿ ನಡೆಯೋ ಚರ್ಚೆಗಳೇನು?

ವಿದ್ಯುತ್ ದರ ಹೆಚ್ಚಳ, ಅನ್ನಭಾಗ್ಯದ ಹೆಚ್ಚುವರಿ ಅಕ್ಕಿ ಬದಲು ಹಣ ನೀಡುವ ಆಲೋಚನೆ ಪ್ರತಿಧ್ವನಿಸಲಿವೆ. ಗ್ಯಾರಂಟಿ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲ ಒದಗಿಸುವ ಬಗ್ಗೆ ಸರ್ಕಾರವನ್ನ ವಿಪಕ್ಷಗಳು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ. ರಾಜ್ಯದಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ಜನ-ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳ ಮೇವಿನ ಅಭಾವ, ಮುಂಗಾರು ಹಂಗಾಮಿನ ಬಿತ್ತನೆ ಕುಂಠಿತ, ಸರ್ಕಾರ ಪರಿಹಾರ ಕ್ರಮಗಳು ಪ್ರಸ್ತಾಪವಾಗಲಿವೆ. ಇನ್ನು, ಎಪಿಎಂಸಿ ತಿದ್ದುಪಡಿ ವಿಧೇಯಕ, ಗೋಹತ್ಯೆ ನಿಷೇಧ ತಿದ್ದುಪಡಿ ವಿಧೇಯಕ, ಮತಾಂತರ ನಿಷೇಧ ತಿದ್ದುಪಡಿ ವಿಧೇಯಕಗಳನ್ನ ವಾಪಸ್ ಪಡೆಯುವುದಾಗಿ ಸರ್ಕಾರ ಹೇಳಿದೆ. ಪಠ್ಯ ಪುಸ್ತಕ ಮರು ಪರಿಷ್ಕರಣೆ ಸೇರಿ ಇನ್ನು ಕೆಲ ವಿಚಾರಗಳು ಪ್ರತಿಧ್ವನಿಸುವ ಸಾಧ್ಯತೆ ಇದೆ.

ಇನ್ನು, ಸಿದ್ದು ನೇತೃತ್ವದ ಬಲಿಷ್ಠ ಸರ್ಕಾರ ಕಟ್ಟಿ ಹಾಕಲು ಬಿಜೆಪಿ ಸನ್ನದ್ಧಗೊಳ್ತಿದೆ. ಗ್ಯಾರೆಂಟಿಯನ್ನೇ ಟಾರ್ಗೆಟ್​​ ಮಾಡಿ ಸರ್ಕಾರವನ್ನ ಮುಜುಗರಕ್ಕೆ ತಳ್ಳಲು ಪ್ಲಾನ್​ ಮಾಡ್ಕೊಂಡಿದೆ.

ಅಧಿವೇಶನಕ್ಕೂ ಮುನ್ನ ಮೇಷ್ಟ್ರು ರಾಮಯ್ಯ, ತಮ್ಮ ಕ್ಯಾಂಪ್​ನ ಸಚಿವರು, ಶಾಸಕರಿಗೆ ಪಾಠ ಮಾಡಿದ್ದಾರೆ. ಸದನದಲ್ಲಿ ಎಡವದಂತೆ ಮತ್ತು ಯಾವುದೇ ಗೊಂದಲದ ಹೇಳಿಕೆ ನೀಡದಂತೆ ಕಟ್ಟಪ್ಪಣೆ ಹೊರಡಿಸಿದ್ದಾರೆ ಎಂದು ಗೊತ್ತಾಗಿದೆ.

ಕ್ಯಾಪ್ಟನ್​​ ಸಿದ್ದು ಕಟ್ಟಾಜ್ಞೆ!

ಗ್ಯಾರಂಟಿ ಜವಾಬ್ದಾರಿ ಹೊಂದಿರುವ ಸಾರಿಗೆ, ಇಂಧನ, ಆಹಾರ ಇಲಾಖೆ ಸಚಿವರು ಅಲರ್ಟ್​ ಆಗಿರಿ ಅಂತ ಸಿದ್ದರಾಮಯ್ಯ ಸೂಚಿಸಿದ್ದಾರೆ. ಅಲ್ಲದೆ, ತಮ್ಮ ಇಲಾಖೆ ಬಗ್ಗೆ ನಿಖರ ಅಂಕಿ ಅಂಶಗಳನ್ನ ಹೊಂದಿರಬೇಕು. ಜೊತೆಗೆ ಗ್ಯಾರಂಟಿ ಯೋಜನೆಗಳ ಅಂಕಿ-ಅಂಶಗಳನ್ನ ಎಲ್ಲಾ ಸಚಿವರು ಅರಿತಿರಬೇಕು ಅಂತ ಸಿದ್ದರಾಮಯ್ಯ ಕಿವಿ ಮಾತು ಹೇಳಿದ್ದಾರೆ ಎನ್ನಲಾಗಿದೆ. ಇನ್ನು, ಸರ್ಕಾರದ ಮೊದಲ ಅಧಿವೇಶನ ಕಾರಣಕ್ಕೆ ತಪ್ಪದೇ ಎಲ್ಲಾ ಸಚಿವರು ಹಾಜರಾಗಿರಬೇಕು. ಅಷ್ಟೇ ಅಲ್ಲದೆ, ಹೊಸ ಶಾಸಕರಿಗೆ ಹಿರಿಯರು ಮಾರ್ಗದರ್ಶನ ಮಾಡಿ ಅಂತ ಸಲಹೆ ನೀಡಿದ್ದಾರೆ. ಶುಕ್ರವಾರ ಬಜೆಟ್​​ ಮಂಡನೆ ಆಗ್ತಿದ್ದು, ಈ ವಿಚಾರದಲ್ಲಿ ಯಾವುದೇ ಗೊಂದಲ ಬೇಡ ಅಂತ ಸಚಿವರಿಗೆ ಕಟ್ಟಪ್ಪಣೆ ಹೊರಡಿಸಿದ್ದಾರೆ.

ಜು.4 ರಿಂದ ಪ್ರಶ್ನೋತ್ತರ, ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಸೇರಿದಂತೆ ಕಾರ್ಯ ಕಲಾಪಗಳು ನಡೆಯಲಿವೆ. ಒಟ್ಟಾರೆ ಈ ಸರ್ಕಾರದ ಮೊದಲ ಅವೇಶನ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಕಾವೇರಿದ ಚರ್ಚೆಗೆ ವೇದಿಕೆ ಆಗೋದು ನಿಶ್ಚಿತ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದಿನಿಂದ ವಿಧಾನಸಭೆ ಅಧಿವೇಶನ; ಸಿದ್ದು ಸರ್ಕಾರವನ್ನು ಕಟ್ಟಿ ಹಾಕಲು ಬಿಜೆಪಿ ಪ್ಲಾನ್​ ಏನು?

https://newsfirstlive.com/wp-content/uploads/2023/07/Siddaramaiah_Session.jpg

Load More