ತೆರಿಗೆ ಕಟ್ಟೋರ ಮನೆಗೆ ‘ಗೃಹಲಕ್ಷ್ಮಿ’ ಬರಲ್ಲ ಎಂದಿದ್ದ ಸರ್ಕಾರ!
ಟ್ಯಾಕ್ಸ್ ಪೇಯರ್ಸ್‌ಗೆ ಗೃಹಲಕ್ಷ್ಮೀ ಇಲ್ಲ ಎಂದ ಸಿಎಂ
ಗೊಂದಲ ಬೇಡ ಎಂದ ಸಚಿವ ಕೃಷ್ಣಬೈರೇಗೌಡ
ದಿನಕ್ಕೊಂದು ಗೊಂದಲ. ಕ್ಷಣಕ್ಕೊಂದು ಸಂಶಯ. ಏನೇನೋ ಡೌಟ್. ಇದು ಕಾಂಗ್ರೆಸ್ ಸರ್ಕಾರ ಜಾರಿಗೆ ತರಲು ಹೊರಟಿರೋ ಗ್ಯಾರಂಟಿಗಳ ಪರಿಸ್ಥಿತಿ. ಸಿದ್ದರಾಮಯ್ಯ ಸರ್ಕಾರವೇನೋ ಕೊಟ್ಟ ಮಾತಿಗೆ ತಪ್ಪದೇ ಗ್ಯಾರಂಟಿ ಜಾರಿ ಮಾಡಲು ಸಜ್ಜಾಗಿದೆ. ಆದ್ರೆ, ಒಂದಲ್ಲ ಒಂದು ಗೊಂದಲ ಹುಟ್ಟಿಕೊಳ್ತಾನೆ ಇದೆ. ಗೃಹಜ್ಯೋತಿ ಬಗೆಗಿನ ಡೌಟ್ ಕ್ಲಿಯರ್ ಆಗ್ತಿದ್ದಂತೆ ಯಾವೆಲ್ಲಾ ಗೃಹಗಳಿಗೆ ಲಕ್ಷ್ಮೀ ಒಲಿಯುತ್ತಾಳೆ ಎಂಬ ಪ್ರಶ್ನೆ ಎದ್ದಿತ್ತು. ಆದ್ರೆ, ಈ ಬಗ್ಗೆ ಸರ್ಕಾರಕ್ಕೆ ಇನ್ನೂ ಕ್ಲಾರಿಟಿ ಇಲ್ವಾ ಅನ್ನೋ ಪ್ರಶ್ನೆ ಮೂಡಿದೆ.
ಕಾಂಗ್ರೆಸ್ ಸರ್ಕಾರಕ್ಕೆ ಆಡಳಿತ ನಡೆಸೋದಕ್ಕಿಂತ ಗ್ಯಾರಂಟಿಗಳನ್ನು ಜಾರಿಗೆ ತರೋದು ದೊಡ್ಡ ಸವಾಲಾಗಿದೆ. ನಿತ್ಯವೂ ನೂರಾರು ಗೊಂದಲಗಳು ಸಿದ್ದರಾಮಯ್ಯ ಸರ್ಕಾರಕ್ಕೆ ಗ್ಯಾರಂಟಿ ತಲೆನೋವಾಗಿ ಕಾಡ್ತಿವೆ. ಗೃಹಜ್ಯೋತಿ ಗೊಂದಲ ಮುಗೀತು ಎನ್ನುತ್ತಿದ್ದಂತೆ ಶಕ್ತಿ. ಶಕ್ತಿ ಡೌಟ್ ಕ್ಲಿಯರ್ ಆಗ್ತಿದ್ದಂತೆ ಯುವನಿಧಿ. ಇದೂ ಬಗೆಹರೀತು ಎನ್ನುತ್ತಿದ್ದಂತೆ ಇದೀಗ ಗೃಹಲಕ್ಷ್ಮೀ ಗೊಂದಲ ಶುರುವಾಗಿದೆ. ಅದರಲ್ಲೂ ಸರ್ಕಾರಕ್ಕೆ ಇದ್ರ ಬಗ್ಗೆ ಕ್ಲಾರಿಟಿ ಇಲ್ವೇನೋ ಎಂಬ ಪ್ರಶ್ನೆಯೂ ಕಾಡ್ತಿದೆ. ಅದಕ್ಕೆ ಮತ್ತೊಂದು ಎಕ್ಸಾಂಪಲ್ ಗೃಹಲಕ್ಷ್ಮೀ ಗ್ಯಾರಂಟಿ.

ಪ್ರತಿ ಮನೆಯ ಯಜಮಾನಿಗೆ ಕಾಂಗ್ರೆಸ್ ಸರ್ಕಾರ ಘೋಷಿಸಿರೋ 2 ಸಾವಿರ ರೂಪಾಯಿ ಸಿಗುವ ಮಹತ್ವಾಕಾಂಕ್ಷಿ ಯೋಜನೆ. ಆದ್ರೆ ಈ ಸ್ಕೀಂ ಬಗ್ಗೆ ಸರ್ಕಾರ ಇದೀಗ ಉಲ್ಟಾ ಹೊಡೆದಿದೆ. ಮೊದಲು, ಟ್ಯಾಕ್ಸ್ ಪೇಯರ್ಸ್ ಮನೆಗೆ ಗೃಹಲಕ್ಷ್ಮೀ ಬರಲ್ಲ ಅಂತಾ ಸರ್ಕಾರ ಹೇಳಿತ್ತು. ಮನೆಯಲ್ಲಿ ಗಂಡ ಅಥವಾ ಮಗ ಯಾರೇ ಸರ್ಕಾರಕ್ಕೆ ತೆರಿಗೆ ಕಟ್ತಿದ್ರೆ, ಜಿಎಸ್‌ಟಿ ಕಟ್ತಿದ್ರೆ ಅವರ ಮನೆಯ ಯಜಮಾನಿಗೆ ಗೃಹಲಕ್ಷ್ಮೀ ಯೋಜನೆ ಸಿಗಲ್ಲ ಅಂತಾನೇ ಸರ್ಕಾರ ಹೇಳಿತ್ತು. ಆದ್ರೀಗ ಗೃಹಲಕ್ಷ್ಮೀ ಯೋಜನೆ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತೆ ಸ್ಪಷ್ಟನೆ ನೀಡಿದ್ದು. ಮಗ ತೆರಿಗೆ ಕಟ್ಟಿದ್ರೂ ಆತನ ತಾಯಿಗೆ 2 ಸಾವಿರ ರೂಪಾಯಿ ಗೃಹಲಕ್ಷ್ಮೀ ಬರೋದು ಗ್ಯಾರಂಟಿ ಎಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಗೃಹಲಕ್ಷ್ಮಿ ಯೋಜನೆಯ ಅರ್ಜಿಯ ಚಿತ್ರ ವೈರಲ್ ಆಗುತ್ತಿದೆ ಅಲ್ಲವೇ ಅದು ಅಸಲಿ. ಆದರೆ ಅದರಲ್ಲಿ ಕೆಲವು ಬದಲಾವಣೆ ಮಾಡಲಿದ್ದೇವೆ. ಅದರಲ್ಲಿ ಬ್ಯಾಂಕ್ ಪಾಸ್‍ಬುಕ್ ಅಕೌಂಟ್ ನಂಬರ್ ಕೇಳಿದ್ದೇವೆ. ಜಾತಿ ಬದಲಿಗೆ ವರ್ಗ ಎಂದು ಬದಲಾಯಿಸಲಾಗುವುದು. ಮಗ ತೆರಿಗೆ ಕಟ್ಟೋದು ಗೃಹಲಕ್ಷ್ಮಿಗೆ ಅನ್ವಯ ಆಗಲ್ಲ. ಗಂಡ-ಮಗ ತೆರಿಗೆ ಪಾವತಿದಾರರಾಗಿದ್ರೆ ಸಿಗಲ್ಲ ಎಂದಿದ್ರು. ಮಗ ತೆರಿಗೆದಾರನಾಗಿದ್ರೂ 2 ಸಾವಿರ ಸಿಗಲಿದೆ.
ಲಕ್ಷ್ಮೀ ಹೆಬ್ಬಾಳ್ಕರ್, ಸಚಿವೆ
ತೆರಿಗೆ ಪಾತಿದಾರರಿಗೆ ಗೃಹ ಲಕ್ಷ್ಮಿ ಇಲ್ಲ ಅನ್ನೋ ವಿಚಾರದಲ್ಲಿ ಸರ್ಕಾರದ ನಿಲುವು ಬದಲಾಗಿಲ್ಲ. ಆದ್ರೆ ಮಗನನ್ನೂ ಈ ವ್ಯಾಪ್ತಿಗೆ ಸೇರಿಸಿದ್ದು ಗೊಂದಲಕ್ಕೆ ಕಾರಣವಾಗಿತ್ತು. ಸದ್ಯ ಪತಿ ತೆರಿಗೆ ಪಾವತಿಸುತ್ತಿದ್ದರಷ್ಟೇ ಪತ್ನಿಗೆ ಯೋಜನೆ ಸಿಗಲ್ಲ ಅನ್ನೋದನ್ನ ಸಿಎಂ ಸಿದ್ದರಾಮಯ್ಯ ಕೂಡ ಸ್ಪಷ್ಟ ಪಡಿಸಿದ್ದಾರೆ.
ಆದಾಯ ತೆರಿಗೆ ರಿಜಿಸ್ಟರ್ ಮಾಡಿಕೊಂಡಿವವರು ಕಟ್ಟೋದು ಬೇಡ ಅಂತ ಹೇಳಿದ್ದೇನೆ. ಬಡವರಿಗೂ 2000 ರೂಪಾಯಿಯನ್ನು ಕೊಡೋಣ.
–ಸಿಎಂ ಸಿದ್ದರಾಮಯ್ಯ
ಪಿಂಚಣಿ ಬರೋರಿಗೂ ‘ಗೃಹಲಕ್ಷ್ಮೀ’ ಗ್ಯಾರಂಟಿ
ಅತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಒಂದು ಕಥೆ ಹೇಳ್ತಿದ್ರೆ, ಸಿಎಂ ಸಿದ್ದರಾಮಯ್ಯ ಬೇರೆಯದ್ದೇ ಕಥೆ ಹೇಳ್ತಿದ್ದಾರೆ. ಇತ್ತ ಸಚಿವ ಕೃಷ್ಣಬೈರೇಗೌಡ ಗೃಹಲಕ್ಷ್ಮೀ ಬಗ್ಗೆ ಮಾತನಾಡಿದ್ದು, ಪಿಂಚಣಿ ಬರುವ ಮನೆ ಯಜಮಾನಿಗೂ ಗೃಹಲಕ್ಷ್ಮೀ ಸಿಗುತ್ತೆ ಎಂಬ ಸ್ಪಷ್ಟನೆ ನೀಡಿದ್ದಾರೆ.
ಅವರಿಗೆ ಯಾವುದೇ ರೀತಿಯ ಪಿಂಚಣಿ ಬರ್ತಾ ಇರಲಿ. ಅದು ವಿಕಲಚೇತನ ಪಿಂಚಣಿ, ವೃದ್ಯಾಪ ವೇತನ, ಸಂಧ್ಯಾ ಸುರಕ್ಷಾ ಪಿಂಚಣಿ ಇರಬಹುದು ಅದನ್ನು ಮುಟ್ಟುಗೋಲು ಹಾಕದೇ, ಮೊಟಕು ಮಾಡದೇ, ಅದರ ಜೊತೆಗೆ 2000 ಸಾವಿರ ರೂಪಾಯಿಯನ್ನು ಪಿಂಚಣಿಯಾಗಿ ನೀಡಬಹುದು ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಒಟ್ಟಾರೆ, ರಾಜ್ಯದಲ್ಲಿ ಗ್ಯಾರಂಟಿಗಳು ಯಾವಾಗ ಜಾರಿಯಾಗುತ್ತೋ ಏನೋ? ಆದ್ರೆ ಸಚಿವರು ಒಂದು ಹೇಳಿದ್ರೆ ಸಿಎಂ ಮತ್ತೊಂದು ಹೇಳ್ತಾರೆ. ಪ್ರತಿಪಕ್ಷಗಳು ಅದಕ್ಕೆ ಉಪ್ಪು, ಖಾರ ಹಾಕಿ ಗ್ಯಾರಂಟಿಗಳ ಬಗ್ಗೆ ಪುಕಾರ್ ಎಬ್ಬಿಸ್ತಿರೋದು ನೋಡ್ತಿರೋ ಜನರು ತೆರಿಗೆಯಲ್ಲಿ ಹುಳ ಬಿಟ್ಕೊಂಡಿರೋದಂತೂ ಗ್ಯಾರಂಟಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ