newsfirstkannada.com

ಗೃಹ ‘ಜ್ಯೋತಿ’ ನೋಂದಣಿ; ಸರ್ವರ್‌ ಡೌನ್ ಕಾಟದಿಂದ ಜನರು ಗರಂ

Share :

20-06-2023

    ಫ್ರೀ ಶಕ್ತಿ ಎಫೆಕ್ಟ್‌.. ಮಾದಪ್ಪನ ಸನ್ನಿಧಿಗೆ ಮಹಿಳಾ ದಂಡು

    ಗೃಹ‘ಜ್ಯೋತಿ’ ನೋಂದಣಿಗೆ ಸರ್ವರ್‌ ಡೌನ್ ಕಾಟ

    ಸರ್ವರ್‌ ಸಮಸ್ಯೆ ಬಗ್ಗೆ ಸೈಬರ್ ಎಕ್ಸ್‌ಪರ್ಟ್​ ಸ್ಪಷ್ಟನೆ

ಪಂಚ ಗ್ಯಾರಂಟಿಗಳ ಜಾರಿಗೆ ಸಿದ್ದರಾಮಯ್ಯ ಸರ್ಕಾರ ಪ್ರಯತ್ನ ಮಾಡುತ್ತಲೇ ಇದೆ. ಆದ್ರೆ, ಒಂದಲ್ಲ ಒಂದು ಸಮಸ್ಯೆಗಳು ಗ್ಯಾರಂಟಿಗಳಿಗೆ ಎದುರಾಗುತ್ತಿವೆ. ಗೃಹಜ್ಯೋತಿ ನೋಂದಣಿಗೆ ಸರ್ಕಾರ ಚಾಲನೆ ನೀಡಿದೆ. ಆದ್ರೀಗ ಗೃಹಜ್ಯೋತಿಗೆ ಸರ್ವರ್‌ ಸಮಸ್ಯೆ ಕಾಡುತ್ತಿದೆ. ಈ ಮಧ್ಯೆ ರಾಜ್ಯದಲ್ಲಿ ನಾರಿ ಶಕ್ತಿಯ ಅನಾವರಣ ಆಗುತ್ತಲೇ ಇದೆ. ಎಲ್ಲೆಲ್ಲೂ ಬಸ್‌ಗಳಲ್ಲಿ ಮಹಿಳೆಯರದ್ದೇ ಕಾರುಬಾರು ಶುರುವಾಗಿದೆ. ಗೃಹಜ್ಯೋತಿ. 200 ಯೂನಿಟ್‌ವರೆಗೆ ರಾಜ್ಯದ ಜನರಿಗೆ ಉಚಿತ ವಿದ್ಯುತ್ ನೀಡ್ತಿರೋ ಯೋಜನೆ. ಎಲ್ಲರ ಮನೆ ಬೆಳಗೋ ಗೃಹಜ್ಯೋತಿಗೆ ನಿನ್ನೆಯಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.. ಆದ್ರೆ, ನೋಂದಣಿ ಆರಂಭವಾದಾಗಿನಿಂದ್ಲೂ ಉಚಿತ ವಿದ್ಯುತ್ ಭಾಗ್ಯಕ್ಕೆ ವಿಘ್ನ ಕಾಡುತ್ತಲೇ ಇದೆ.

ಕೈಕೊಟ್ಟ ಸೇವಾ ಸಿಂಧು ಪೋರ್ಟಲ್‌.. ಗ್ರಾಹಕರು ಗರಂ

ನಿನ್ನೆಯಿಂದ ಗೃಹಜ್ಯೋತಿ ಯೋಜನೆಗೆ ನೋಂದಣಿ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿತ್ತು. ಆದ್ರೆ, ಅರ್ಜಿ ಸಲ್ಲಿಕೆಗೆ ಸರ್ವರ್‌ ಡೌನ್ ಸಮಸ್ಯೆ ಕಾಡುತ್ತಲೇ ಇದೆ. ಅರ್ಜಿ ಸಲ್ಲಿಕೆಯ 2ನೇ ದಿನವಾದ ಇಂದೂ ಕೂಡ ಬೆಂಗಳೂರಿನ ಅರ್ಜಿ ಸಲ್ಲಿಕೆ ಕೇಂದ್ರಗಳಲ್ಲಿ ಸೇವಾಸಿಂಧು ಪೋರ್ಟಲ್‌ ಕೈಕೊಟ್ಟಿತ್ತು. ಬೆಳಗ್ಗೆಯಿಂದ ವೆಬ್​ಸೈಟ್ ಸ್ಲೋ ಆಗಿ ಅರ್ಜಿ ಸ್ವೀಕಾರವಾಗದೇ ಜನರು ಸುಸ್ತಾಗಿ ಹೋಗಿದ್ರು. ಅರ್ಜಿ ಸಲ್ಲಿಕೆ ಮಾಡಿ ಸಬ್ಮಿಟ್ ಮಾಡಿದ್ರೆ ಅಕ್ಸೆಪ್ಟ್ ಆಗ್ತಿಲ್ಲ ಅಂತಾ ಜನರು ಸರ್ಕಾರದ ವಿರುದ್ಧ ಗರಂ ಆಗಿದ್ರು.

‘ಏಕಕಾಲದಲ್ಲಿ ಎಲ್ಲರೂ ಲಾಗ್ಇನ್ ಆಗಿದ್ರಿಂದ ಸಮಸ್ಯೆ’

ಇತ್ತ, ಕಲಬುರಗಿಯಲ್ಲೂ ಸರ್ವರ್‌ ಡೌನ್‌ ಸಮಸ್ಯೆ ತಲೆ ದೋರಿತ್ತು. ಕರ್ನಾಟಕ 1 ಕೇಂದ್ರದಲ್ಲಿ ಜನರು ಅರ್ಜಿ ಸಲ್ಲಿಸಲು ಬಂದಿದ್ರು. ಆದ್ರೆ, ಸರ್ವರ್ ಸ್ಲೋ ಹಿನ್ನೆಲೆ ಗಂಟೆಗಟ್ಟಲೆ ಕಾದು ಕಾದು ಸುಸ್ತಾಗಿ ಹೋದರು. ಸ್ಲೋ ಆಗೇ ಅರ್ಜಿ ಸಲ್ಲಿಸಿದ ಗ್ರಾಹಕರು ಫುಲ್ ಖುಷ್ ಆದರು. ಕುಂದಾನಗರಿ ಬೆಳಗಾವಿಯಲ್ಲಿ ಅರ್ಜಿ ಸಲ್ಲಿಕೆ ಭರದಿಂದ ಸಾಗಿತ್ತು. ಅಶೋಕ ನಗರದ ಕರ್ನಾಟಕ ಒನ್ ಕೇಂದ್ರದಲ್ಲಿ ಮುಗಿಬಿದ್ದು ಜನರು ಗೃಹಜ್ಯೋತಿಗೆ ನೋಂದಣಿ ಮಾಡಿಕೊಂಡ್ರು. ಆಗಾಗ ಸರ್ವರ್ ಡೌನ್ ಆಗ್ತಿದ್ದ ಕಾರಣ ಜನದಟ್ಟಣೆ ಏರ್ಪಟ್ಟಿತ್ತು. ಇದಿಷ್ಟು ಗೃಹಜ್ಯೋತಿ ಯೋಜನೆಯ ಸಮಸ್ಯೆಯಾಗಿದ್ರೆ, ಇತ್ತ ರಾಜ್ಯದಲ್ಲಿ ನಾರಿ ಶಕ್ತಿಯ ಕಾರುಬಾರು ಜೋರಾಗಿತ್ತು. ಆಷಾಡ ಅಮವಾಸ್ಯೆ ಕಳೆದ್ರೂ ಸಾರಿಗೆ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಚಾಮರಾಜನಗರದ ಮಲೆ ಮಹದೇಶ್ವರನ ಬೆಟ್ಟದಲ್ಲಿ ಮಹಿಳಾ ಭಕ್ತರೇ ಕಾಣಸಿಕ್ತಿದ್ರು. ನಿನ್ನೆ ಒಂದೇ ದಿನ 4 ಲಕ್ಷ ಭಕ್ತರು ಮಾದಪ್ಪನ ದರ್ಶನ ಪಡೆದಿದ್ರೆ, ಇವತ್ತೂ ಕೂಡಾ ಮಲೆ ಮಹದೇಶನ ಕಾಣಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದರು. ಬೆಟ್ಟಕ್ಕೆ ಬಂದವರಲ್ಲಿ ಶೇಕಡ 60ರಷ್ಟು ಮಹಿಳಾ ಭಕ್ತರೇ ಇದ್ರು ಅನ್ನೋದೇ ಫ್ರೀ ಶಕ್ತಿಯ ಪ್ರಭಾವ.

ಮಂಡ್ಯದಲ್ಲಿ ನಾರಿ‘ಶಕ್ತಿ’ಗೆ ಮುರಿದೇ ಹೋಯ್ತು ಬಸ್‌ ಡೋರ್

ಈಕಡೆ ಮಂಡ್ಯದಲ್ಲಿ ನಾರಿ ಶಕ್ತಿಗೆ KSRTC ಬಸ್‌ನ ಡೋರ್ ಮುರಿದುಹೋದ ಪ್ರಸಂಗ ನಡೆದಿದೆ. ಮಳವಳ್ಳಿ ಕೆಎಸ್​ಆರ್​ಟಿಸಿ ನಿಲ್ದಾಣದಲ್ಲಿ ಮಹಿಳೆಯರ ಸಂಖ್ಯೆ ಹೇಚ್ಚಾಗಿ ನೂಕುನುಗ್ಗಲು ಉಂಟಾಗಿತ್ತು. ಇದರಿಂದ ಕೆಎಸ್‌ಆರ್‌ಟಿಸಿ ಬಸ್‌ನ ಡೋರ್ ಕಿತ್ತು ಕಂಡಕ್ಟರ್‌ ಕೈ ಬಂದಿತ್ತು. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರನ್ನ ಕೇಳಿದ್ರೆ ಆರಂಭದಲ್ಲಿ ಸಮಸ್ಯೆ ಇರುತ್ತೆ. ಮುಂದೆ ಸರಿ ಹೋಗುತ್ತೆ ಬಿಡಿ ಎಂದಿದ್ದಾರೆ. ಒಟ್ಟಾರೆ, ರಾಜ್ಯದಲ್ಲಿ ಗ್ಯಾರಂಟಿಗಳ ಸದ್ದು ಜೋರಾಗಿದೆ. ಒಂದ್ಕಡೆ ಸರ್ವರ್‌ ಸಮಸ್ಯೆ ಆಗ್ತಿದ್ರೆ ಮತ್ತೊಂದೆಡೆ ಫ್ರೀ ಬಸ್ ಯೋಜನೆಯಿಂದ ನೂಕುನುಗ್ಗಳು ಉಂಟಾಗ್ತಿದೆ. ಈ ಎಲ್ಲಾ ಸಮಸ್ಯೆಗಳು ಅದ್ಯಾವಾಗ ನಿವಾರಣೆ ಮಾಡ್ತೀರಾ ಅಂತಾ ಜನರು ಸರ್ಕಾರವನ್ನ ಪ್ರಶ್ನಿಸ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗೃಹ ‘ಜ್ಯೋತಿ’ ನೋಂದಣಿ; ಸರ್ವರ್‌ ಡೌನ್ ಕಾಟದಿಂದ ಜನರು ಗರಂ

https://newsfirstlive.com/wp-content/uploads/2023/06/New-Project-2.jpg

Load More