newsfirstkannada.com

ಮಧ್ಯಪ್ರದೇಶದಲ್ಲೂ ಗ್ಯಾರಂಟಿ ಅಸ್ತ್ರ ಪ್ರಯೋಗ; ಕರ್ನಾಟಕದ ಫಾರ್ಮುಲಾ ಇಲ್ಲಿ ಸಕ್ಸಸ್​ ಕಾಣುತ್ತಾ?

Share :

Published May 23, 2023 at 9:57am

Update September 25, 2023 at 10:18pm

    ಮಧ್ಯಪ್ರದೇಶ ‘ಕೈ’ವಶಕ್ಕೆ ಕರ್ನಾಟಕದ ಫಾರ್ಮುಲಾ

    ಗ್ಯಾಸ್ ಸಿಲಿಂಡರ್‌ಗೆ ₹500, ಗೃಹಿಣಿಗೆ ತಿಂಗಳಿಗೆ ₹ 1500

    100 ಯೂನಿಟ್ ಉಚಿತ, 200 ಯೂನಿಟ್​ಗೆ ಅರ್ಧ ಹಣ

ಕರ್ನಾಟಕದಲ್ಲಿ ಜಯಭೇರಿ ಬೆನ್ನಲ್ಲೇ ‘ಪಂಚ ರಾಜ್ಯಗಳ’ ಮೇಲೆ ಕಾಂಗ್ರೆಸ್ ಕಣ್ಣು ಇಟ್ಟಿದೆ. ವರ್ಷಾಂತ್ಯಕ್ಕೆ ಎದುರಾಗಲಿರುವ ಮಧ್ಯಪ್ರದೇಶ ಚುನಾವಣೆಯಲ್ಲಿ ಕಮಾಲ್​ ಮಾಡಲು, ಕಾಂಗ್ರೆಸ್​ ಪಕ್ಷದ ಕರ್ನಾಟಕ ಕುರುಕ್ಷೇತ್ರ ಗೆದ್ದ ಫಾರ್ಮುಲವನ್ನೇ ಬಳಸಿಕೊಳ್ಳಲು ಮುಂದಾಗಿದೆ. 5 ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ.

ಮಧ್ಯಪ್ರದೇಶ ‘ಕೈ’ವಶಕ್ಕೆ ಕರ್ನಾಟಕದ ಫಾರ್ಮುಲಾ
ಹೌದು. ಸತತ ಸೋಲು ಹಾಗೂ ಆಪರೇಷನ್ ಕಮಲದ ಮೂಲಕ ಹಲವು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದ್ದ ಕಾಂಗ್ರೆಸ್​ಗೆ, ಕರ್ನಾಟಕ ಮತಯುದ್ಧದಲ್ಲಿ ಸಿಕ್ಕ, ಅಮೋಘ ವಿಜಯದಿಂದ ಕೈ ಪಾಳಯದಲ್ಲಿ ಹೊಸ ಉತ್ಸಾಹ ಮೂಡಿದೆ. ಸದ್ಯ ಕರ್ನಾಟಕದಲ್ಲಿ ಭರ್ಜರಿ ಬಹುಮತ ಸಾಧಿಸಿ, ಸರ್ಕಾರ ರಚಿಸಿರುವ ಕಾಂಗ್ರೆಸ್‌ನ ಮುಂದಿನ ಹಾದಿ ಅಷ್ಟು ಸುಲಭವಿಲ್ಲ. ಮುಂಬರುವ ಪಂಚ ರಾಜ್ಯಗಳ ಚುನಾವಣೆ ಮೇಲೆ ಕಾಂಗ್ರೆಸ್​ ಕಣ್ಣಿಟ್ಟಿದೆ. ಇದರ ಜೊತೆಗೆ 2024ರ ಲೋಕಸಭಾ ಚುನಾವಣೆಯಲ್ಲಿಯೂ ಕಮಾಲ್ ಮಾಡಲು ಭರ್ಜರಿ ರಣತಂತ್ರ ರೂಪಿಸುತ್ತಿದೆ. ಇದಕ್ಕೆ ಮತ್ತೊಂದು ಉದಾಹರಣೆಯೇ ಮಧ್ಯಪ್ರದೇಶ.

ಕರ್ನಾಟಕದಲ್ಲಿ ಐದು ಗ್ಯಾರಂಟಿಯನ್ನು ಘೋಷಣೆ ಮಾಡುವ ಮೂಲಕ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿ ಅಧಿಕಾರದ ಗದ್ದುಗೆ ಹಿಡಿದ್ದ ಕಾಂಗ್ರೆಸ್‌, ಈಗ ಮಧ್ಯಪ್ರದೇಶದಲ್ಲೂ ಅದೇ ಫಾರ್ಮುಲಾವನ್ನು ಕೈಗೆತ್ತಿಕೊಂಡಿದೆ. ಮಧ್ಯಪ್ರದೇಶದಲ್ಲಿ ಅಧಿಕಾರದ ಗದ್ದುಗೆ ಏರಲೇಬೇಕೆಂದು ಪಣತೊಟ್ಟ ಕಾಂಗ್ರೆಸ್​ ಪಕ್ಷ ಅಲ್ಲೂ ಕೂಡ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿ. ಚುನಾವಣಾ ಕಹಳೆ ಮೊಳಗಿಸಿದೆ.

ಮಧ್ಯಪ್ರದೇಶಕ್ಕೂ ಗ್ಯಾರಂಟಿ ಅಸ್ತ್ರ
ಗ್ಯಾರಂಟಿ 1. ಗ್ಯಾಸ್ ಸಿಲಿಂಡರ್ ₹500
ಗ್ಯಾರಂಟಿ 2. ಪ್ರತಿ ಗೃಹಿಣಿಗೆ ತಿಂಗಳಿಗೆ ₹ 1500
ಗ್ಯಾರಂಟಿ 3. 100 ಯೂನಿಟ್ ಉಚಿತ, 200 ಯೂನಿಟ್​ಗೆ ಅರ್ಧ ಹಣ
ಗ್ಯಾರಂಟಿ 4. ಕೃಷಿ ಸಾಲ ಮನ್ನಾ
ಗ್ಯಾರಂಟಿ 5. ಹಳೆಯ ಪಿಂಚಣಿ ಯೋಜನೆ ಜಾರಿ

ಮೊದಲನೆ ಗ್ಯಾರಂಟಿಯಾಗಿ 500 ರೂಪಾಯಿಗೆ ಗ್ಯಾಸ್‌ ಸಿಲಿಂಡರ್‌ ನೀಡೋದಾಗಿ ಕಾಂಗ್ರೆಸ್​ ಭರವಸೆ ನೀಡಿದೆ. ಇನ್ನು ಪ್ರತಿ ತಿಂಗಳು ರಾಜ್ಯದ ಎಲ್ಲಾ ಗೃಹಿಣಿಯರಿಗೆ ತಿಂಗಳಿಗೆ 1500 ರೂಪಾಯಿ ನೀಡೋದಾಗಿ 2ನೇ ಗ್ಯಾರಂಟಿ ಕೊಟ್ಟಿದೆ. ಇನ್ನು 3ನೇ ಗ್ಯಾರಂಟಿಯಲ್ಲಿ 100 ಯುನಿಟ್‌ಗಳ ಉಚಿತ ವಿದ್ಯುತ್‌, ಹಾಗೂ 200 ಯುನಿಟ್​ವರೆಗೆ ಅರ್ಧದಷ್ಟು ಹಣ ನೀಡೋದಾಗಿ ಘೋಷಿಸಿದೆ. ಇನ್ನು ನಾಲ್ಕನೇ ಗ್ಯಾರಂಟಿಯಾಗಿ ರೈತರ ಸಾಲ ಮನ್ನಾ, 5ನೇ ಗ್ಯಾರಂಟಿಯಾಗಿ ಹಳೆ ಪಿಂಚಣಿ ಯೋಜನೆಯ ಜಾರಿಗೊಳಿಸುತ್ತೇವೆಂದು ಘೋಷಿಸೋದಾಗಿ, ಮಧ್ಯಪ್ರದೇಶದ ಕಾಂಗ್ರೆಸ್​ ಅಧಿಕೃತ ಟ್ವಿಟ್ಟರ್​​ನಲ್ಲಿ ಪ್ರಕಟಿಸಿದೆ.

ಈ ವರ್ಷದ ಅಂತ್ಯಕ್ಕೆ ಅಂದ್ರೆ, ಡಿಸೆಂಬರ್​ನಲ್ಲಿ ಮಧ್ಯಪ್ರದೇಶ ಚುನಾವಣೆ ಎದುರಾಗಲಿದೆ. ಇದಕ್ಕಾಗಿ ಈಗಿನಿಂದಲೇ ಕಾಂಗ್ರೆಸ್​ ಮತ್ತು ಆಡಳಿತದಲ್ಲಿ ಬಿಜೆಪಿ ಪಕ್ಷ, ಮತದಾರರ ಮನಗೆಲ್ಲಲು ರಣತಂತ್ರವನ್ನು ರೂಪಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್​ನ ಕೈ ಹಿಡಿದ ಗ್ಯಾರಂಟಿ ಫಾರ್ಮುಲಾ, ಮಧ್ಯಪ್ರದೇಶದಲ್ಲೂ ಕಾಂಗ್ರೆಸ್​ಗೆ ವರವಾಗುತ್ತಾ. ಇಲ್ವಾ ಅನ್ನೋದನ್ನ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಧ್ಯಪ್ರದೇಶದಲ್ಲೂ ಗ್ಯಾರಂಟಿ ಅಸ್ತ್ರ ಪ್ರಯೋಗ; ಕರ್ನಾಟಕದ ಫಾರ್ಮುಲಾ ಇಲ್ಲಿ ಸಕ್ಸಸ್​ ಕಾಣುತ್ತಾ?

https://newsfirstlive.com/wp-content/uploads/2023/05/MP-Congress.jpg

Load More