newsfirstkannada.com

ನಿಮ್ಮ ಕೈ ಸೇರಲಿದೆ ಉಚಿತ ವಿದ್ಯುತ್​​ ಬಿಲ್​​; ಯಾರಿಗೆಲ್ಲಾ ಸಿಗುತ್ತೆ ಫ್ರೀ ಕರೆಂಟ್​​?

Share :

02-08-2023

  ಜೂನ್ ತಿಂಗಳ ಹಾಗೂ ಜುಲೈ ತಿಂಗಳ ಬಿಲ್​ನಲ್ಲಿ ವ್ಯತ್ಯಾಸ

  ಗ್ರಾಹಕರ ವಿದ್ಯುತ್ ಬಳಕೆಯ ಮಾಹಿತಿ ಬಿಲ್​ನಲ್ಲಿ ಮುದ್ರಣ

  ಎಸ್ಕಾಂನಲ್ಲಿ ಏಕರೂಪದ ಬಿಲ್ ನೀಡಲು ಇಲಾಖೆ ನಿರ್ಧಾರ

ಕಾಂಗ್ರೆಸ್​ ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಜಾರಿ ಯಾವಾಗಪ್ಪ ಅಂತಿದ್ದವರಿಗೆ ಕೊನೆಗೂ ಕ್ಲಾರಿಟಿ ಸಿಕ್ಕಿದೆ. ಮನೆ ಬೆಳಗುವ ಜ್ಯೋತಿ ಶೂನ್ಯ ಬಿಲ್​ ಹೆಸರಲ್ಲಿ ಬಲಗಾಲಿಟ್ಟು ಎಂಟ್ರಿ ಕೊಡಲಿದ್ದಾಳೆ. ಅಂದರೆ ಜುಲೈ ತಿಂಗಳ ವಿದ್ಯುತ್​ ಬಿಲ್​ ಈ ತಿಂಗಳಲ್ಲಿ ಫ್ರೀ. ರಾಜ್ಯದ ಜನರಿಗೆ ಬೆಲೆ ಏರಿಕೆಯ ಬಿಸಿ ಒಂದ್ಕಡೆಯಾದರೆ, ಸರ್ಕಾರದ ಗ್ಯಾರಂಟಿಗಳ ಸಿಹಿ ಇನ್ನೊಂದ್ಕಡೆಯಾಗಿದೆ.

5 ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆ ನಾರಿಯರಿಗೆ ಈಗಾಗಲೇ ದಾರಿ ತೋರಿದೆ. ಇದೀಗ ಮನೆ ಬೆಳಗುವ ಗೃಹಜ್ಯೋತಿಯ ಎಂಟ್ರಿ. ಹೌದು, ಗೃಹಜ್ಯೋತಿ ಯೋಜನೆ ಅಧಿಕೃತವಾಗಿ ಆರಂಭವಾಗಿದೆ. ಇವತ್ತಿಂದ ಉಚಿತ ವಿದ್ಯುತ್​ನ ಶೂನ್ಯ ಬಿಲ್ ನಿಮ್ಮ ಕೈ ಸೇರಲಿದೆ. ಜುಲೈ 25ರೊಳಗೆ ಯಾರೆಲ್ಲಾ ಅರ್ಜಿ ಸಲ್ಲಿಸಿದ್ದಾರೋ ಅವರ ಮನೆಯನ್ನ ಮಾತ್ರ ಜ್ಯೋತಿ ಫ್ರೀ ಆಗಿ ಬೆಳಗಲಿದ್ದಾಳೆ.

ಅರ್ಜಿ ಸಲ್ಲಿಸಿದವರಿಗೆ ಮಾತ್ರ ಉಚಿತ ವಿದ್ಯುತ್ ಸಿಗಲಿದೆ. ಆದರೆ ಗೃಹಜ್ಯೋತಿಗೆ ಅರ್ಜಿ ಸಲ್ಲಿಸದ ಬಹುತೇಕ ಮಂದಿ ಇದ್ದಾರೆ. ರಾಜ್ಯದಲ್ಲಿ 2.5 ಕೋಟಿ ಗೃಹಜ್ಯೋತಿ ಫಲಾನುಭವಿಗಳಿದ್ದಾರೆ. ಜುಲೈ 27ರವರೆಗೆ 1,23,10,788 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೆ. ಇನ್ನೂ, 40% ಜನ ಅರ್ಜಿ ಸಲ್ಲಿಸುವುದು ಬಾಕಿ ಇದೆ. ಈ ತಿಂಗಳು ಅರ್ಜಿ ಸಲ್ಲಿಸುತ್ತಿರುವವರಿಗೆ ಸೆಪ್ಟೆಂಬರ್​ನಲ್ಲಿ ​ ಉಚಿತ ವಿದ್ಯುತ್​ ಸೇವೆ ಸಿಗಲಿದೆ.

ಗೃಹಜ್ಯೋತಿ ಬಿಲ್​ ಹೇಗಿರುತ್ತೆ?

ಜೂನ್ ತಿಂಗಳ ಹಾಗೂ ಜುಲೈ ತಿಂಗಳ ಬಿಲ್​ನಲ್ಲಿ ವ್ಯತ್ಯಾಸ ಇರಲಿದೆ. ಗೃಹಜ್ಯೋತಿ ಅನುಷ್ಠಾನ ಹಿನ್ನೆಲೆ ಕರೆಂಟ್ ಬಿಲ್ ಬದಲಾವಣೆ ಮಾಡಲಾಗಿದೆ. ಗ್ರಾಹಕರ ವಿದ್ಯುತ್ ಬಳಕೆಯ ಮಾಹಿತಿಯನ್ನು ಬಿಲ್​ನಲ್ಲಿ ಮುದ್ರಿಸಲಾಗುತ್ತದೆ. ಎಸ್ಕಾಂನಲ್ಲಿ ಏಕರೂಪದ ಬಿಲ್ ನೀಡಲು ಇಲಾಖೆ ನಿರ್ಧಾರ ಮಾಡಿದೆ. ಬಿಲ್‌ ಮುಂಬದಿಯಲ್ಲಿ ಗೃಹಜ್ಯೋತಿ ಯೂನಿಟ್ ಮಾಹಿತಿ, ಪ್ರತಿ ಕಾಲಂನಲ್ಲಿ ಸ್ಪಷ್ಟವಾಗಿ ಹೆಚ್ಚುವರಿ ಸರಾಸರಿ ಮಾಹಿತಿ ಇರಲಿದೆ. ವಿದ್ಯುತ್ ಬಳಕೆ ಪರಿಗಣಿಸಿ ಯೂನಿಟ್ ಅಂಶ ಕಾಲಂ ಕೂಡ ಸೇರ್ಪಡೆ ಮಾಡಲಾಗಿದೆ. ಇನ್ನು ಬಿಲ್ ಹಿಂಬದಿಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಜೊತೆ ಇಂಧನ ಸಚಿವ ಕೆ.ಜೆ ಜಾರ್ಜ್ ಭಾವಚಿತ್ರ ಮುದ್ರಿಸಲಾಗಿದೆ. ಇದರ ಜೊತೆ ಗೃಹಜ್ಯೋತಿ ಲಾಂಛನದಡಿ ಬಿಲ್ ಹಾಗೂ ಗ್ರಾಹಕರಿಗೆ ಒಂದಷ್ಟು ಸೂಚನೆಗಳು ಇರಲಿದೆ.

ಗೃಹಜ್ಯೋತಿ ಲಾಂಛನದಡಿ ಗ್ರಾಹಕರಿಗೆ ನೀಡಿದ ಸೂಚನೆಯನ್ನ ನೋಡುವಾದ್ರೆ, ವರ್ಷದ ಸರಾಸರಿ 80 ಯೂನಿಟ್ ಇರುವವರಿಗೆ +10% ಗ್ರೇಸ್ ಸೇರಿಸಿ 88 ಯೂನಿಟ್ ಫ್ರೀ ನೀಡಲಾಗುತ್ತೆ. 88 ಯೂನಿಟ್ ಫ್ರೀ ಬಳಕೆ ಪಡೆದವರು 88 ಯೂನಿಟ್​ಗಿಂತ ಮೇಲ್ಪಟ್ಟ ಯೂನಿಟ್ ಬಳಕೆ ಮಾಡಿದ್ರೇ ಹೆಚ್ಚಿನ ಯೂನಿಟ್ ಹಣ ಕಟ್ಟಬೇಕಾಗುತ್ತದೆ. ಹೀಗಾಗಿ, ಫ್ರೀ ಫ್ರೀ ಅಂತ ಅನಾವಶ್ಯಕವಾಗಿ ವಿದ್ಯುತ್​ ಬಳಕೆ ಮಾಡಿದ್ರೆ. ನಿಮಗೆ ನೀವೇ ಲಾಸ್​​ ಮಾಡಿಕೊಂಡಂತೆ ಎಚ್ಚರ. ಜೊತೆಗೆ ಅರ್ಜಿ ಸಲ್ಲಿಸದವರು ಈ ಬಾರಿಯಾದ್ರು ಅರ್ಜಿ ಸಲ್ಲಿಸಿ, ಗ್ಯಾರಂಟಿ ಪಡೆಯಿರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿಮ್ಮ ಕೈ ಸೇರಲಿದೆ ಉಚಿತ ವಿದ್ಯುತ್​​ ಬಿಲ್​​; ಯಾರಿಗೆಲ್ಲಾ ಸಿಗುತ್ತೆ ಫ್ರೀ ಕರೆಂಟ್​​?

https://newsfirstlive.com/wp-content/uploads/2023/07/siddu-10.jpg

Load More