newsfirstkannada.com

ರಾಜಸ್ಥಾನದಲ್ಲೂ ಕಾಂಗ್ರೆಸ್​​ ಗ್ಯಾರಂಟಿ ಅಸ್ತ್ರ; ​ದೇಶ ದಿವಾಳಿ ಎಂದ ಮೋದಿ

Share :

01-06-2023

    ಕರ್ನಾಟಕದ ಗ್ಯಾರಂಟಿ ಅಸ್ತ್ರ ರಾಜಸ್ಥಾನದಲ್ಲೂ ಪ್ರಯೋಗ

    ಉಚಿತ.. ಉಚಿತ..100 ಯೂನಿಟ್​ ವಿದ್ಯುತ್​ ಉಚಿತ

    ರಾಜಸ್ಥಾನದಲ್ಲಿ ಚುಕ್ಕಾಣಿ ಹಿಡಿಯಲು ಕೈ ನಾಯಕರ ಸರ್ಕಸ್​

ಗುಜರಾತ್ ಮಾಡೆಲ್, ಯುಪಿ ಮಾಡೆಲ್‌ ಎಂಬ ಸದ್ದು ಚುನಾವಣೆ ವೇಳೆ ಕೇಳಿಬರುತ್ತೆ. ಈ ರಾಜ್ಯಗಳಲ್ಲಿ ಅನುಸಿದ ಮಾದರಿಯನ್ನ ಬೇರೆ ರಾಜ್ಯಗಳಲ್ಲಿ ಬಿಜೆಪಿ ಪ್ರಯೋಗಿಸುತ್ತೆ. ಇದೀಗ ಕಾಂಗ್ರೆಸ್ ಕೂಡಾ ಕರ್ನಾಟಕ ಮಾಡೆಲ್‌ ಮೊರೆ ಹೋಗಿದೆ. ರಾಜಸ್ಥಾನದಲ್ಲಿ ಮತ್ತೆ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಘೋಷಿಸಿದ್ದ ಗ್ಯಾರಂಟಿ ಮಾಡೆಲ್‌ನೇ ಪ್ರಯೋಗಿಸಿದೆ. ಚುನಾವಣೆಗೂ ಮುನ್ನವೇ ಗ್ಯಾರಂಟಿಯೊಂದು ಘೋಷಣೆಯೂ ಆಗಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಪಾಳಯ ಗ್ಯಾರಂಟಿಯನ್ನ ಜಾರಿ ಮಾಡಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಇದೀಗ ಪಂಚ ಗ್ಯಾರಂಟಿಗಳ ಅನುಷ್ಠಾನಕ್ಕೆ ಸರ್ಕಸ್ ನಡೆಸ್ತಿದೆ. ಇದೀಗ ರಾಜ್ಯ ಕಾಂಗ್ರೆಸ್ ಅನುಸರಿಸಿದ್ದ ಚುನಾವಣಾ ನೀತಿಯೇ ಮತ್ತೊಂದು ರಾಜ್ಯಕ್ಕೆ ಮಾಡೆಲ್ ಆಗಿದೆ. ಕರ್ನಾಟಕ ಕಾಂಗ್ರೆಸ್‌ನ ಗೃಹಜ್ಯೋತಿಯ ಗ್ಯಾರಂಟಿಯಂತೆ ರಾಜಸ್ಥಾನದಲ್ಲಿ ಮಹತ್ವದ ಘೋಷಣೆ ಆಗಿದೆ.

ರಾಜಸ್ಥಾನದ ಜನರಿಗೆ 100 ಯೂನಿಟ್ ಫ್ರೀ ವಿದ್ಯುತ್!

ವರ್ಷದ ಕೊನೆ ಅಂದ್ರೆ ನವೆಂಬರ್ ಅಥವಾ ಡಿಸೆಂಬರ್‌ಗೆ ರಾಜಸ್ಥಾನ ವಿಧಾನಸಭಾ ಚುನಾವಣೆ ನಡೆಯಲಿದೆ. ರಾಜಸ್ಥಾನ ಕದನಕ್ಕೆ ಕಾಂಗ್ರೆಸ್ ಈಗಾಗಲೇ ರಣಕಹಳೆ ಮೊಳಗಿಸಿದೆ. ಸಿಎಂ ಗೆಹ್ಲೋಟ್‌-ಸಚಿನ್ ಪೈಲಟ್ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಇದೀಗ ಮತದಾರರ ಮನ ಗೆಲ್ಲಲು ಉಚಿತ ವಿದ್ಯುತ್‌ ಎಂಬ ಬಂಪರ್ ಗಿಫ್ಟ್ ಘೋಷಣೆ ಮಾಡಿದ್ದಾರೆ. ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್‌ ಗೃಹಬಳಕೆ ವಿದ್ಯುತ್‌ನಲ್ಲಿ ತಿಂಗಳಿಗೆ 100 ಯೂನಿಟ್‌ವರೆಗೂ ಫ್ರೀ ಎಂಬ ಘೋಷಣೆ ಹೊರಡಿಸಿದ್ದಾರೆ.

ತಿಂಗಳಿಗೆ 100 ಯೂನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡುವ ಕುಟುಂಬಗಳಿಗೆ ಮೊದಲ 100 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುವುದು. ಅಂದ್ರೆ ಎಷ್ಟೇ ಬಿಲ್ ಬಂದರೂ ಮೊದಲ 100 ಯೂನಿಟ್‌ಗಳಿಗೆ ಯಾವುದೇ ವಿದ್ಯುತ್ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ವಿಶೇಷವಾಗಿ ಮಧ್ಯಮ ವರ್ಗದ ಜನರು, ತಿಂಗಳಿಗೆ 200 ಯೂನಿಟ್‌ವರೆಗೆ ವಿದ್ಯುತ್ ಬಳಸುವ ಗ್ರಾಹಕರಿಗೆ ಮೊದಲ 100 ಯೂನಿಟ್ ವಿದ್ಯುತ್ ಉಚಿತ.

ಸಿಎಂ ಅಶೋಕ್ ಗೆಹ್ಲೋಟ್‌

ಸಿಎಂ ಏನೋ 100 ಯೂನಿಟ್ ಫ್ರೀ ಎಂದಿದ್ದಾರೆ. ಇದು ಯಾರಿಗೆಲ್ಲಾ ಉಚಿತ. 100 ಯೂನಿಟ್‌ಗಿಂತ ಹೆಚ್ಚು ಬಳಕೆ ಮಾಡಿದ್ರೆ ಹೇಗೆ? ಪೂರ್ತಿ ವಿದ್ಯುತ್ ಶುಲ್ಕ ಕಟ್ಬೇಕಾ? ಎಲ್ಲವನ್ನೂ ವಿವರಿಸ್ತೀವಿ ಕೇಳಿ.

ತಿಂಗಳಿಗೆ 100 ಯೂನಿಟ್‌ವರೆಗೆ ಉಚಿತ ವಿದ್ಯುತ್ ಯೋಜನೆಯನ್ನ ರಾಜಸ್ಥಾನ ಸರ್ಕಾರ ಘೋಷಿಸಿದೆ. ಈ ಮೂಲಕ 100 ಯೂನಿಟ್‌ವರೆಗೆ ಬಳಸುವ ಜನರು ಯಾವುದೇ ಶುಲ್ಕವನ್ನ ಪಾವತಿಸುವಂತಿಲ್ಲ. ಅಲ್ಲದೇ ಎಷ್ಟೇ ಬಿಲ್ ಬಂದ್ರೂ ಮೊದಲ 100 ಯೂನಿಟ್ ವಿದ್ಯುತ್ ಬಿಲ್ ಫ್ರೀ ಆಗಿರಲಿದೆ. 100 ಯೂನಿಟ್ ಮೇಲೆ ಬಂದ ಬಿಲ್‌ಗೆ ಮಾತ್ರ ಹಣ ಪಾವತಿಸಬಹುದಾಗಿದೆ. ಈ ಮೂಲಕ ರಾಜಸ್ಥಾನ ಸರ್ಕಾರ ಮಧ್ಯಮ ವರ್ಗದ ಜನರಿಗೆ ಬಂಪರ್ ಗಿಫ್ಟ್ ನೀಡಿದೆ. ಇದ್ರಿಂದ ರಾಜಸ್ಥಾನದ 1 ಕೋಟಿ ಫಲಾನುಭವಿಗಳಿಗೆ ಲಾಭವಾಗಲಿದ್ದು, ವಾರ್ಷಿಕವಾಗಿ ಸರ್ಕಾರಕ್ಕೆ ₹5,200 ಕೋಟಿ ರೂಪಾಯಿ ಹೊರೆಯಾಗಲಿದೆ.

ಕಾಂಗ್ರೆಸ್ ಪಾರ್ಟಿ ಆಡಳಿತವಿರೋ ಎಲ್ಲಾ ರಾಜ್ಯಗಳಲ್ಲೂ ಉಚಿತ ಘೋಷಣೆಗಳ ಹೊಳೆ ಹರಿಯುತ್ತಿದೆ. ಇದೀಗ ಕಾಂಗ್ರೆಸ್‌ ಉಚಿತ ಘೋಷಣೆಗಳ ಬಗ್ಗೆ ಟೀಕೆಗಳೂ ವ್ಯಕ್ತವಾಗುತ್ತಿವೆ.

‘ಕಾಂಗ್ರೆಸ್ ಗ್ಯಾರಂಟಿ ಸೂತ್ರದಿಂದ ದೇಶ ದಿವಾಳಿ’

ಕಾಂಗ್ರೆಸ್ ಉಚಿತ ಗ್ಯಾರಂಟಿ ಪದ್ಧತಿ 50 ವರ್ಷಗಳ ಹಳೇದು. ಇದ್ರಿಂದ ದೇಶ ದಿವಾಳಿಯಾಗಲಿದೆ ಅಂತಾ ಪ್ರಧಾನಿ ಮೋದಿ ಕಿಡಿಕಾರಿದ್ದಾರೆ. ಈ ರೀತಿ ಭರವಸೆಯಿಂದ ಬಡವರಿಗೆ ದ್ರೋಹವಾಗಲಿದೆ ಅಂತಾ ಗ್ಯಾರಂಟಿಗಳ ವಿರುದ್ಧ ಗುಡುಗಿದ್ದಾರೆ.

ಒಟ್ಟಾರೆ, ಚುನಾವಣಾ ರಣಕಣದಲ್ಲಿ ಮತದಾರರನ್ನ ಗೆಲ್ಲಲು ಕಾಂಗ್ರೆಸ್‌ಗೆ ಗ್ಯಾರಂಟಿಗಳೇ ಅಸ್ತ್ರವಾಗಿವೆ.. ಇದೀಗ ರಾಜಸ್ಥಾನದಲ್ಲೂ ಫ್ರೀ ಭರವಸೆಗಳ ಹೊಳೆ ಹರಿಯುತ್ತಿದೆ.. ಇದೇ ಗ್ಯಾರಂಟಿಗಳು ರಾಜಸ್ಥಾನದಲ್ಲೂ ಮೋಡಿ ಮಾಡುತ್ತಾ ಅನ್ನೋದೇ ಮುಂದಿರೋ ಪ್ರಶ್ನೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜಸ್ಥಾನದಲ್ಲೂ ಕಾಂಗ್ರೆಸ್​​ ಗ್ಯಾರಂಟಿ ಅಸ್ತ್ರ; ​ದೇಶ ದಿವಾಳಿ ಎಂದ ಮೋದಿ

https://newsfirstlive.com/wp-content/uploads/2023/06/Ashok-Gehlot-Modi.jpg

Load More