ಭ್ರಷ್ಟಾಚಾರದ ಆರೋಪ, ರಾಹುಲ್ ಖಡಕ್ ಸಂದೇಶ!
ಕರ್ನಾಟಕದ ಆಡಳಿತವೇ ಕಾಂಗ್ರೆಸ್ಗೆ ಗೆಲುವಿನ ಅಸ್ತ್ರ
ಭ್ರಷ್ಟಾಚಾರ ರಹಿತ ಆಡಳಿತ ನೀಡೋದು ನಮ್ಮ ಆದ್ಯತೆ ಆಗಬೇಕು
ಈಗ ತಾನೇ ಜನ್ಮತಾಳಿದ ಕಾಂಗ್ರೆಸ್ ಸರ್ಕಾರಕ್ಕೆ ಶಿಸ್ತಿನ ಪಾಠ ಆಗಿದೆ. ಭ್ರಷ್ಟಾಚಾರ ರಹಿತ, ಪಾರದರ್ಶಕ ಆಡಳಿತ ಅನ್ನೋ ಅಂಕುಶದ ಪ್ರಯೋಗ ಆಗಿದೆ. ಬಿಜೆಪಿ ವಿರುದ್ಧ ಇದೇ ಆರೋಪಗಳ ಮೂಟೆ ಹೊರೆಸಿ, ಚುನಾವಣೆಯ ಸಮುದ್ರ ಈಜಿದ ಕಾಂಗ್ರೆಸ್ ಗೆದ್ದಿದೆ. ಈಗ ಅದೇ ಪಾಪದ ಕಳಂಕವನ್ನ ಕೈಗೆ ಅಂಟದಂತೆ ಜಾಗೃತೆ ವಹಿಸುವ ಅಗತ್ಯತೆಯನ್ನ ಹೈಕಮಾಂಡ್, ಒತ್ತಿ ಹೇಳಿದ್ದು, ಇದನ್ನೇ ಬಿತ್ತುವಂತೆ ಆದೇಶ ಹೊರಡಿಸಿದೆ.
ಕರ್ನಾಟಕದ ಆಡಳಿತವೇ ಕಾಂಗ್ರೆಸ್ಗೆ ಗೆಲುವಿನ ಅಸ್ತ್ರ!
ಹೌದು, ಭ್ರಷ್ಟಾಚಾರದ ಪಳೆಯುಳಿಕೆ ಎಂದು ವಿಪಕ್ಷಗಳಿಂದ ಟೀಕಿಸಿಕೊಳ್ಳುವ ಕಾಂಗ್ರೆಸ್, ಈಗ ಲಂಚಮುಕ್ತ ರಾಜ್ಯದ ಕನಸು ಕಾಣ್ತಿದೆ. ಮೊನ್ನೆ ನಡೆದ ದೆಹಲಿ ಸಭೆಯಲ್ಲಿ ರಾಜ್ಯ ನಾಯಕರಿಗೆ ನೀತಿ ಬೋಧನೆ ಆಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಖರ್ಗೆ ನೇತೃತ್ವದಲ್ಲಿ ನಡೆದ ರಾಜ್ಯ ನಾಯಕರ ಸಭೆಯಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ಪರಿಕಲ್ಪನೆಯ ಪಾಠ ಮಾಡಿದ್ದಾರೆ. ನಿನ್ನೆ ಮಧ್ಯಾಹ್ನ ಆರಂಭವಾದ ಸಭೆ ರಾತ್ರಿವರೆಗೆ ನಡೆದಿದೆ. ಸಭೆಯಲ್ಲಿ ಹಲವು ಮಹತ್ವದ ವಿಷಯಗಳು ಚರ್ಚೆ ಆಗಿವೆ. ಶಾಸಕರ ಪತ್ರ ಸಮರ, ಅನುದಾನ ಕೊರತೆ, ವರ್ಗಾವಣೆ ವಿಚಾರದಲ್ಲಿ ಕೆಲ ಸಚಿವರ ಮೇಲೆ ಮುನಿಸಿನ ಬಗ್ಗೆ ವರಿಷ್ಠರು ಮಾಹಿತಿ ಪಡೆದಿದ್ದಾರೆ. ರಾಜ್ಯ ನಾಯಕರ ಜೊತೆ ಒಟ್ಟು 2 ಸುತ್ತಿನ ಸಭೆ ಆಗಿದೆ. ರಾಜ್ಯ ಕಾಂಗ್ರೆಸ್ನಿಂದ 37ಕ್ಕೂ ಹೆಚ್ಚು ನಾಯಕರು ಭಾಗಿ ಆಗಿದ್ದರು. ಈ ಹೈವೋಲ್ಟೇಜ್ ಸಭೆಯಲ್ಲಿ ಲೋಕಸಭೆಗೆ 20 ಸೀಟ್ಗಳ ಟಾರ್ಗೆಟ್ ನೀಡಲಾಯಿತು. ಅದಾದ ಬಳಿಕ ಶುರುವಾಗಿದ್ದು ರಾಹುಲ್ ಪಾಠ.
ಭ್ರಷ್ಟಾಚಾರದ ವಿರುದ್ಧ ‘ರಾಗ’!
‘ಬಿಜೆಪಿಯ ಭ್ರಷ್ಟ ಆಡಳಿತದ ವಿರುದ್ಧ ರೋಸಿ ಜನರು ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಹೀಗಾಗಿ, ಎಐಸಿಸಿಯು ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ಪಾಲಿಸಲಿದೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಹೋರಾಡಿ ಕಾಂಗ್ರೆಸ್ ಗೆದ್ದಿದೆ. ಇದರಿಂದ ಕಂಗೆಟ್ಟಿರುವ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಮುಂಬರುವ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ಸಿಗೂ ಭ್ರಷ್ಟಾಚಾರದ ಕಳಂಕ ಹಚ್ಚುವ ಪ್ರಯತ್ನ ಮಾಡಬಹುದು. ಇದಕ್ಕೆ ಆಸ್ಪದ ನೀಡದಂತೆ ರಾಜ್ಯದ ಸಚಿವರು ಆಡಳಿತ ನಡೆಸಬೇಕು’.
– ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ಇದು ಮೊನ್ನೆ ನಡೆದ ಕಾಂಗ್ರೆಸ್ ನಾಯಕರ ಸಭೆಯಲ್ಲಿ ರಾಹುಲ್ ನೀಡಿರುವ ಖಡಕ್ ಎಚ್ಚರಿಕೆ. ಇದೇ ವೇಳೆ ಎಐಸಿಸಿ ಅಧ್ಯಕ್ಷ ಖರ್ಗೆ, ಕೂಡ ಹಿತವಚನ ನೀಡಿದ್ದಾರೆ. ರಾಜ್ಯ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದ ನಂತರ ಭ್ರಷ್ಟಾಚಾರದ ಬಗ್ಗೆ ವಿಪರೀತ ಊಹಾಪೋಹ ಹರಡ್ತಿವೆ. ಹಾಗಂತ ಸಚಿವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಅಂತಲ್ಲ. ಆಡಳಿತದ ಬಗ್ಗೆ ಈ ರೀತಿಯ ಊಹಾಪೋಹ ಹಬ್ಬುವಿಕೆಗೆ ಆಸ್ಪದ ನೀಡಬೇಡಿ ಅಂತ ಎಚ್ಚರಿಸಿದ್ದಾರೆ ಎಂದು ಗೊತ್ತಾಗಿದೆ. ಈ ವೇಳೆ, ರಾಜ್ಯ ಸರ್ಕಾರ ಮತ್ತು ಸಿಎಂ ಸಿದ್ದರಾಮಯ್ಯ ಬಗ್ಗೆ ಸಭೆಯಲ್ಲಿ ಉಭಯ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಹೈವೋಲ್ಟೇಜ್ ಸಭೆಯಲ್ಲಿ ಕೆಲ ವಿಷಯಗಳು ಭ್ರಷ್ಟಾಚಾರ ವಿಚಾರವಾಗೇ ಹೆಚ್ಚು ಚರ್ಚೆ ಆಗಿದೆ.
ಹೈವೋಲ್ಟೇಜ್ ಮೀಟಿಂಗ್ ಹೈಲೇಟ್ಸ್!
ಭ್ರಷ್ಟಾಚಾರ ವಿರುದ್ಧ ಹೋರಾಡಿ ಅಧಿಕಾರಕ್ಕೆ ಬಂದಿದ್ದೇವೆ. ವಿರೋಧ ಪಕ್ಷದಲ್ಲಿದ್ದಾಗ ನಿರಂತರವಾಗಿ ಹೋರಾಡಿದ್ದೀವಿ. ಪೇ ಸಿಎಂ, 40%ನಂಥ ಹೋರಾಟದಿಂದ ಪಕ್ಷಕ್ಕೆ ಅಧಿಕಾರ ಸಿಕ್ಕಿದೆ. ಈಗಾಗಲೇ ಇಲಾಖಾವಾರು ಭ್ರಷ್ಟಾಚಾರ ತನಿಖೆಯ ಭರವಸೆ ನೀಡಿದ್ದೇವೆ. ಆದ್ರೆ, ಪಕ್ಷದ ವಿರುದ್ಧ ಸದ್ಯ ಭ್ರಷ್ಟಾಚಾರ ಆರೋಪ ಕೇಳಿ ಬರ್ತಿದೆ. ಮಾಜಿ ಸಿಎಂ ಹೆಚ್ಡಿಕೆ ಪೆನ್ಡ್ರೈವ್ ಆರೋಪ ಮಾಡ್ತಿದ್ದಾರೆ. ಯಾವ ಕಾರಣಕ್ಕೂ ಎಳ್ಳಷ್ಟೂ ಭ್ರಷ್ಟಾಚಾರ ಸಹಿಸೋದಿಲ್ಲ. ಸಚಿವರಿಗೆ ಕಳಂಕರಹಿತ ಆಡಳಿತ ನೀಡಲು ಸ್ಪಷ್ಟ ಸಂದೇಶ ಸಭೆಯಲ್ಲಿ ರವಾನಿಸಲಾಗಿದೆ. ಭ್ರಷ್ಟಾಚಾರ ರಹಿತ ಆಡಳಿತ ನೀಡೋದು ನಮ್ಮ ಆದ್ಯತೆ ಆಗಬೇಕು ಅಂತ ಸಭೆಯಲ್ಲಿ ಸೂಚನೆ ನೀಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ