newsfirstkannada.com

ಲೋಕಸಭಾ ಚುನಾವಣೆ ಗೆಲ್ಲಲು ಮಾಸ್ಟರ್​ ಪ್ಲಾನ್​​; ಇಂದು ದೆಹಲಿಯಲ್ಲಿ ಕಾಂಗ್ರೆಸ್​ ಮಹತ್ವದ ಸಭೆ

Share :

02-08-2023

  ಲೋಕಸಭಾ ಎಲೆಕ್ಷನ್​​​ಗೆ ಹೈಕಮಾಂಡ್​​ ಸಿದ್ಧತೆ

  ‘ಲೋಕ’ ಸಮರಾಭ್ಯಾಸಕ್ಕೆ ಇಂದು ‘ಕೈ’ ಕಹಳೆ

  ಪತ್ರ ಸಮರ ಬಳಿಕ ಮತ್ತೊಂದು ಕದನಕ್ಕೆ ಸಜ್ಜು!

ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕ ಮಾಡೆಲ್​​​​ ದಶದಿಕ್ಕಲ್ಲೂ ಪ್ರತಿಫಲವಾಗಲಿದೆ. ಇದೇ ಮಾಡೆಲ್​​​​ ಕಾಂಗ್ರೆಸ್‌ ಗದ್ದುಗೆ ಹಿಡಿಯುವ ಗ್ಯಾರಂಟಿ ನೀಡಿದೆ. ಇಂದು ಡೆಲ್ಲಿ ಅಂಗಳದಲ್ಲಿ ಹೈವೋಲ್ಟೇಜ್​​​ ಸಭೆ ನಡೆಯಲಿದ್ದು, ರಾಜ್ಯ ನಾಯಕರು ಡೆಲ್ಲಿಗೆ ಆಗಮಿಸಿದ್ದಾರೆ. ಇಂಟ್ರಸ್ಟಿಂಗ್​​​ ಅಂದರೆ ಪತ್ರ ಸಮರ ಸಾರಿದ್ದ ಅಸಮಾಧಾನಿತರಿಗೆ ಆಹ್ವಾನ ಇಲ್ಲದಿದ್ದರೂ ಡೆಲ್ಲಿ ಫ್ಲೈಟ್‌ ಹತ್ತಿದ್ದಾರೆ.

ಕರ್ನಾಟಕದ ಅಭೂತಪೂರ್ವ ಗೆಲುವು, ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್​ ಪುಟಿದೇಳಲು ಮತ್ತು ಪಕ್ಷದ ಪುನರುಜ್ಜೀವನಕ್ಕೂ ನಾಂದಿ ಹಾಡಿದೆ. ದಕ್ಷಿಣದ ಹೆಬ್ಬಾಗಿಲಿನ ದಿಗ್ವಿಜಯ, ದೆಹಲಿ ಕುರ್ಚಿ ಹೆಬ್ಬಯಕೆಯನ್ನ ಹೆಬ್ಬಂಡೆಯಷ್ಟು ಹೆಚ್ಚಿಸಿದೆ. ಮುಂಬರುವ ಪಂಚ ರಾಜ್ಯಗಳ ಚುನಾವಣೆಗೂ ಮುನ್ನ ನಡೆಯುತ್ತಿರುವ ಈ ಡೆಲ್ಲಿ ಪಂಚಾಯ್ತಿ ಭಾರೀ ಗಮನ ಸೆಳೆಯುತ್ತಿದೆ. ಇಂದು ಡೆಲ್ಲಿ ಅಂಗಳದಲ್ಲಿ ರಾಜ್ಯ ನಾಯಕರ ಜೊತೆ ಸಮರ ನೀತಿ ಸಿದ್ಧವಾಗಲಿದೆ.

ಇಂದು ಡೆಲ್ಲಿಯಲ್ಲಿ ಕಾಂಗ್ರೆಸ್‌ನ ಹೈವೋಲ್ಟೇಜ್‌ ಮೀಟಿಂಗ್‌!
ಲೋಕಸಭಾ ಎಲೆಕ್ಷನ್​​​ಗೆ ಸಿದ್ಧತೆ ಆರಂಭಿಸಿದ ಹೈಕಮಾಂಡ್​​

ಕರ್ನಾಟಕದ ಗೆಲುವಿನ ಓಟ ಮುಂದುವರಿಸಲು ಕಾಂಗ್ರೆಸ್​​, ಸಮರಾಭ್ಯಾಸಕ್ಕೆ ಇಂದು ಕಹಳೆ ಮೊಳಗಿಸ್ತಿದೆ. ರಾಜ್ಯ ನಾಯಕರ ದಂಡು, ಡೆಲ್ಲಿಯಲ್ಲಿ ಢೇರೆ ಹಾಕಿದೆ. ಇಂದು ಇಡೀ ದಿನ ರಾಜ್ಯ ಕೈ ಪಡೆ ಜೊತೆ ರಂಗ ತಾಲೀಮು ನಡೆಯಲಿದ್ದು, ಸರಣಿ ಚುನಾವಣೆಗಳಿಗೆ ರಣನೀತಿ ಸಿದ್ಧಗೊಳ್ಳಲಿದೆ. ಹೈಕಮಾಂಡ್​​ ರಾಜ್ಯ ನಾಯಕರಿಗೆ ನಿಗದಿತ ಟಾರ್ಗೆಟ್​​​ ನೀಡಲಿದೆ. ಇಂದು ಬೆಳಗ್ಗೆಯಿಂದಲೇ ಮ್ಯಾರಾಥಾನ್​ ಮೀಟಿಂಗ್​​ ನಡೆಯಲಿದೆ. ರಾಹುಲ್​​-ಖರ್ಗೆ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಸಿಎಂ, ಡಿಸಿಎಂ, ಸಚಿವರ ಜೊತೆಯಲ್ಲಿ ಮಾತುಕತೆ ಆಗಲಿದೆ. ಸರ್ಕಾರದ ಭಾಗವಾಗಿರುವರನ್ನ ಬಿಟ್ಟು ಪ್ರಮುಖ ನಾಯಕರಿಗೂ ವರಿಷ್ಠರು ಆಹ್ವಾನ ಕೊಟ್ಟಿದ್ದಾರೆ. ಹೀಗಾಗಿ ಒಟ್ಟು 37 ನಾಯಕರನ್ನ ಬುಲಾವ್​ ನೀಡಿರುವ ಈ ಸಭೆ ಬಗ್ಗೆ ಸದ್ಯ ಕುತೂಹಲ ಇಮ್ಮಡಿಸಿದೆ.

ಆತಂಕ-ಅನುಮಾನ.. ಸವಾಲು-ಟಾರ್ಗೆಟ್​​​
ರಾಹುಲ್ ನೇತೃತ್ವದ ಸಭೆ ಬಗ್ಗೆ ಕುತೂಹಲ!

2 ಹಂತದಲ್ಲಿ ಸಭೆ ನಡೆಯಲಿದ್ದು, ಎರಡೂ ಸಭೆಗಳ ಮುಖ್ಯ ವಿಚಾರ ಲೋಕಸಭೆ ಚುನಾವಣೆ ಸಿದ್ಧತೆ. ಮೊದಲಿಗೆ ರಾಹುಲ್‌, ಮಲ್ಲಿಕಾರ್ಜುನ ಖರ್ಗೆ ಜತೆಗೆ ಸಿಎಂ ಸಿದ್ದರಾಮಯ್ಯ, ಕೆ.ಸಿ. ವೇಣುಗೋಪಾಲ್‌, ಡಿಸಿಎಂ ಡಿಕೆಶಿ, ರಾಜ್ಯ ಕೈ ಉಸ್ತುವಾರಿ ಸುರ್ಜೇವಾಲಾ, ಎಐಸಿಸಿ ಸದಸ್ಯರು, ಕೆಪಿಸಿಸಿ ಕಾರ್ಯಾಧ್ಯಕ್ಷರು ಸೇರಿ 15 ಮಂದಿ ಪ್ರಮುಖ ಸಚಿವರೊಂದಿಗೆ ಸಭೆ ನಡೆಯಲಿದೆ. ಸುಮಾರು 2 ಗಂಟೆಗಳ ಕಾಲ ಹೈವೋಲ್ಟೇಜ್​ ಸಭೆ ನಡೆಯಲಿದೆ.

37 ನಾಯಕರ ಜೊತೆಗಿನ ಸಭೆಯ ಅಜೆಂಡಾ ಸಿಂಪಲ್​!
ವಿಧಾನಸಭೆ ತಂತ್ರ ಪ್ರಯೋಗಕ್ಕೆ ಕಾಂಗ್ರೆಸ್​ ಪಡೆ ಪ್ಲಾನ್​​!

ಲೋಕಸಭೆ ಎಲೆಕ್ಷನ್​​ ಈ ಸಭೆಯ ಮುಖ್ಯ ಅಜೆಂಡಾ ಆಗಿದೆ. ಪ್ರತಿಯೊಂದು ಲೋಕಸಭಾ ಕ್ಷೇತ್ರದಲ್ಲಿನ ಸಂಭವನೀಯರ ಬಗ್ಗೆ ಪ್ರಾಥಮಿಕ ಚರ್ಚೆ ನಡೆಯಲಿದೆ. ಯಾವ ಕ್ಷೇತ್ರದಲ್ಲಿ ಯಾಱರು ಆಕಾಂಕ್ಷಿಗಳಿದ್ದಾರೆ. ಆಕಾಂಕ್ಷಿಗಳ ಬಗ್ಗೆ ಪೂರಕ ವಾತಾವರಣ ಇದ್ಯಾ ಎಂಬ ಮಂಥನ ನಡೆಯಲಿದೆ. ಅಭ್ಯರ್ಥಿ ಆಯ್ಕೆಯಲ್ಲಿ ಗೆಲುವೊಂದೆ ಮಾನದಂಡವಾಗಲಿದೆ. ಗೆಲ್ಲುವ ಸಾಮರ್ಥ್ಯ, ಜಾತಿ ಬಲ ಸೇರಿ ಎಲ್ಲಾ ಸಮೀಕರಣ ಪರಿಶೀಲಿಸಿ ಸಂಭವನೀಯರ ಪಟ್ಟಿ ಸಿದ್ಧಪಡಿಸಲು ಸೂಚಿಸುವ ಸಾಧ್ಯತೆಯಿದೆ. ಇನ್ನು, ವರಿಷ್ಠರ ಸಭೆಗೆ ಡಿಸಿಎಂ ಡಿಕೆ ಶಿವಕುಮಾರ್ ಈಗಾಗಲೇ ಡೆಲ್ಲಿಗೆ ಲ್ಯಾಂಡ್​ ಆಗಿದ್ದಾರೆ. ಡಿಕೆಶಿಗೆ ಸಚಿವ ನಾಗೇಂದ್ರ ಮತ್ತು ಮಧು ಬಂಗಾರಪ್ಪ ಸಾಥ್​ ನೀಡಿದ್ದಾರೆ. ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಮಾತನಾಡಿದ ಡಿಕೆಶಿ. ಪಕ್ಷದ ಕೆಲಸ ಇದೆ, ಸರ್ಕಾರದ ಕೆಲಸ ಇದೆ. ಲೋಕಸಭೆ ಚುನಾವಣೆ, ಪಕ್ಷದ ಹಿತದೃಷ್ಟಿಯಿಂದ ಹೋಗ್ತಿದ್ದೇವೆ ಅಂತ ಕ್ಲ್ಯೂ ಬಿಟ್ಟುಕೊಟ್ಟಿದ್ದಾರೆ. ಈ ಸಭೆಗೂ ಕಾಂಗ್ರೆಸ್​ನಲ್ಲಿನ ಅಸಮಾಧಾನದ ಬಿಸಿ ತಟ್ಟಿದೆ. ಪತ್ರ ಸಮರ ಬಳಿಕ ಮತ್ತೊಂದು ಕದನಕ್ಕೆ ಟೀಂ-30 (ಥರ್ಟಿ) ಸನ್ನದ್ಧಗೊಳ್ತಿದೆ.

ಆಹ್ವಾನವಿಲ್ಲದ ಕೆಲ ಶಾಸಕರೂ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಸರ್ಕಾರದಲ್ಲಿ ಅನುದಾನ, ವರ್ಗಾವಣೆ ವಿಚಾರಗಳಲ್ಲಿ ಕ್ಲ್ಯಾರಿಟಿ ಸಿಗದ ಕಾರಣ ದೆಹಲಿಗೆ ತೆರಳುವುದಕ್ಕೆ ಕೆಲ ಶಾಸಕರು ಸಿದ್ಧತೆ ನಡೆಸಿದ್ದಾರೆ. ಸಚಿವರ ಅಸಹಕಾರವನ್ನ ಹೈಕಮಾಂಡ್​​ ಗಮನಕ್ಕೆ ತರಲು ನಿರ್ಧರಿಸಿದ್ದಾರೆ. ಆದ್ರೆ, ವರಿಷ್ಠರು ಬೇರೆ ವಿಷಯಗಳಲ್ಲಿ ಬ್ಯುಸಿ ಆಗಿರುವ ಕಾರಣ ಶೆಡ್ಯೂಲ್​​ ಇಲ್ಲದ ಕಾರಣಕ್ಕೆ ಈ ಶಾಸಕರ ಭೇಟಿಗೆ ಅವಕಾಶ ನೀಡೋದು ಡೌಟು ಎನ್ನಲಾಗಿದೆ. ಒಟ್ಟಾರೆ, ಲೋಕಸಭೆ ಚುನಾವಣೆಗೂ ಮುನ್ನ ರಾಜ್ಯದಲ್ಲಿನ ಕಾಂಗ್ರೆಸ್​ ವರ್ಚಸ್ಸು ವೃದ್ಧಿಸಲು ಸೂಚನೆ ಹೊರ ಬೀಳಲಿದೆ. ದೇಶದ ಉದ್ದಗಲಕ್ಕೂ ​ಕರ್ನಾಟಕ ಮಾಡೆಲ್ ಎಲೆಕ್ಷನ್​​ ವಸ್ತುವಾಗಿಸೋ ಲೆಕ್ಕಾಚಾರದಲ್ಲಿದೆ. ಹಾಗಾಗಿ ರಾಜ್ಯ ನಾಯಕರಿಗೆ ಹಿತವಚನಗಳ ಮಳೆ ಸುರಿಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಸಭಾ ಚುನಾವಣೆ ಗೆಲ್ಲಲು ಮಾಸ್ಟರ್​ ಪ್ಲಾನ್​​; ಇಂದು ದೆಹಲಿಯಲ್ಲಿ ಕಾಂಗ್ರೆಸ್​ ಮಹತ್ವದ ಸಭೆ

https://newsfirstlive.com/wp-content/uploads/2023/08/siddu-2.jpg

Load More