ಸಭೆಯಲ್ಲಿ ಅನುಭವಗಳ ಧಾರೆ ಎರೆದ ಜಗದೀಶ್ ಶೆಟ್ಟರ್
ಖರ್ಗೆ-ರಾಹುಲ್ ನೇತೃತ್ವದಲ್ಲಿ ಕಾಂಗ್ರೆಸ್ ‘ಲೋಕ’ತಂತ್ರ
ಹೈಕಮಾಂಡ್ ರಾಜ್ಯ ನಾಯಕರಿಗೆ ಕೊಟ್ಟ ಟಾರ್ಗೆಟ್ ಸಂಖ್ಯೆ ಎಷ್ಟು
ಡೆಲ್ಲಿ ಗದ್ದುಗೆಗಾಗಿ ಕಾಂಗ್ರೆಸ್ ಫೈನಲ್ ಬ್ಯಾಟಲ್ಗೆ ಇಳಿದಿದೆ. ಹೇಗಾದ್ರೂ ಮಾಡಿ 2004ರ ರಿಸಲ್ಟ್ ರಿಪೀಟ್ ಮಾಡಲು ತಾಲೀಮು ಆರಂಭಿಸಿದೆ. ಕರ್ನಾಟಕ ಅಖಾಡದಲ್ಲಿ ಸಾಧಿಸಿದ ಗೆಲುವು, ಕೈಪಡೆಯ ರಣೋತ್ಸಾಹವನ್ನ ಇಮ್ಮಡಿಸಿದೆ. ಇಲ್ಲಿ ಬಳಸಿದ ಪಂಚತಂತ್ರವೇ ದೇಶದ ಉದ್ದಗಲಕ್ಕೂ ವಿಸ್ತರಿಸುವ ಇರಾದೆ ಹೊಂದಿದೆ. ಡೆಲ್ಲಿ ಅಂಗಳದಲ್ಲಿ ಲೋಕಸಭೆ ಮಹಾಯುದ್ಧದ ಚಿಂತನ ಮಂಥನ ನಡೆಸಿದೆ. ಹಾಗಾದ್ರೆ ಕಾಂಗ್ರೆಸ್ ಹೈಕಮಾಂಡ್ ಸಭೆಯಲ್ಲಿ ಚರ್ಚೆಯಾಗಿದ್ದೇನು?
ಲೋಕಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಹೈಕಮಾಂಡ್ ಅಲರ್ಟ್ ಆಗಿದೆ.. ಕರ್ನಾಟಕ ಕಾಂಗ್ರೆಸ್ ನಾಯಕರೊಂದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಸಭೆ ನಡೆಸಿದ್ದಾರೆ.. ಒಟ್ಟು ಎರಡು ಸುತ್ತಿನ ಸಭೆ ನಡೆದಿದ್ದು, ಈ ಸಭೆಯಲ್ಲಿ ನೀಡಲಾಗಿರುವ ಜವಾಬ್ದಾರಿಗೆ ಸಚಿವರ ಟೆನ್ಶನ್ ಹೆಚ್ಚಿಸಿದೆ. ಅಲ್ಲದೇ, ಹಲವು ಸಚಿವರನ್ನು ಲೋಕಸಭೆ ಕದನಕ್ಕೆ ಅಣಿಯಾಗುವಂತೆ ಸೂಚನೆ ಕೂಡ ಹೊರಬಿದ್ದಿದೆ.
ಕಾಂಗ್ರೆಸ್ ನಾಯಕರಿಗೆ ರಾಹುಲ್ ಗಾಂಧಿ ಕಿವಿಮಾತು
ನಿನ್ನೆ ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ಹೈ ಕಮಾಂಡ್ ಸಭೆ ನಡೆದಿದೆ.. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ರಾಜ್ಯ ನಾಯಕರಿಗೆ ಸರ್ಕಾರ ನಡೆಸುವ ಕಾರ್ಯತಂತ್ರಗಳ ಬಗ್ಗೆ ಹೈ ನಾಯಕರು ಪಾಠ ಮಾಡಿದ್ದಾರೆ. ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಮಾಡಬೇಕಾದ ಮಾಸ್ಟರ್ ಪ್ಲಾನ್‌ಗಳ ಬಗ್ಗೆಯೂ ಮಹತ್ವದ ಚರ್ಚೆ ನಡೆದಿದೆ. ದೆಹಲಿಯಲ್ಲಿ ನಡೆದ ಎರಡು ಸುತ್ತಿನ ಸಭೆಯಲ್ಲಿ ಮೊದಲ ಸಭೆಯನ್ನ 2 ಗಂಟೆ 30 ನಿಮಿಷ ಮಾಡಲಾಗಿದೆ. ಎರಡನೇ ಸಭೆ 20 ರಿಂದ 25 ನಿಮಿಷ ಮಾತ್ರ ನಡೆದಿದೆ ಎಂದು ತಿಳಿದುಬಂದಿದೆ.. ಈ ಮೀಟಿಂಗ್‌ನಲ್ಲಿ ರಾಹುಲ್ ಗಾಂಧಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ಕೆಲ ನೀತಿ ಪಾಠಗಳ ಬೋಧಿಸಿದ್ದಾರೆ ಎಂದು ತಿಳಿದುಬಂದಿದೆ.
ರಾಹುಲ್ ಗಾಂಧಿ ಪಾಠವೇನು?
ಕಾಂಗ್ರೆಸ್‌ನ ಸಚಿವರಿಗೆ, ಮಂತ್ರಿಗಿರಿ ಜವಾಬ್ದಾರಿ ಜೊತೆ ಕಾರ್ಯಾಧ್ಯಕ್ಷ ಸ್ಥಾನವನ್ನೂ ನೀಡಲಾಗಿದೆ. ಹೀಗಾಗಿ ಎರಡೂ ಕಡೆ ಸಕ್ರಿಯವಾಗಿ ಕಾರ್ಯ ನಿರ್ವಹಿಸಲು ಸಾದ್ಯವಾಗೋದಿಲ್ಲ ಎಂಬ ಅಭಿಪ್ರಾಯವಿತ್ತು. ಈ ಈ ಬಗ್ಗೆ ಗಮನಹರಿಸೋದಾಗಿ ಹೈಕಮಾಂಡ್ ನಾಯಕರು ತಿಳಿಸಿದ್ದಾರೆ.
ಸಭೆಯಲ್ಲಿ ಮೊದಲ ಬಾರಿಗೆ ಭಾಗಿಯಾಗಿದ್ದ ಜಗದೀಶ್ ಶೆಟ್ಟರ್ ಕೂಡಾ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ರಾಜ್ಯ ಬಿಜೆಪಿಯ ಬಳಿ ಯಾವುದೇ ವಿಚಾರಗಳು ಇಲ್ಲ. ಬಿಜೆಪಿ ನಾಯಕರೆಲ್ಲಾ ಮೋದಿಯನ್ನ ಮಾತ್ರ ನಂಬಿಕೊಂಡಿದ್ದಾರೆ. ಹೀಗಾಗಿ ಅದರ ಸದುಪಯೋಗವನ್ನು ನಾವು ಪಡೆದುಕೊಳ್ಳಬೇಕಿದೆ ಅಂತಾ ತಮ್ಮ ಅನುಭವವನ್ನ ಶೆಟ್ಟರ್ ಧಾರೆ ಎರೆದಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯ ನಾಯಕರ ಅಸಮಾಧಾನ ವಿಚಾರವಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಸಭೆಯಲ್ಲಿ ಪ್ರಸ್ತಾಪಿಸಿದ್ದು, ಶಾಸಕರಿಗೆ ವಾರ್ನಿಂಗ್ ಕೂಡಾ ನೀಡಿದ್ದಾರೆ. ಯಾವ ಶಾಸಕರ ಹೆಸರೂ ಉಲ್ಲೇಖ ಮಾಡದೆ ಎಚ್ಚರಿಕೆ ನೀಡಿದ್ದಾರೆ. ಯಾವ ಶಾಸಕರು ಅಥವಾ ಸಚಿವರೂ ಸಹ ಮಾಧ್ಯಮಗಳ ಮುಂದೆ ಹೇಳಿಕೆಗಳನ್ನ ನೀಡಬೇಡಿ. ಪಕ್ಷಕ್ಕೆ ವಿರುದ್ಧವಾಗಿರೋ ಹೇಳಿಕೆಗಳನ್ನ ನೀಡುವುದು ಸಮಂಜಸವಲ್ಲ. ನಿಮ್ಮ ಸಮಸ್ಯೆಗಳನ್ನ ವರಿಷ್ಟರ ಗಮನಕ್ಕೆ ತಂದು ಬಗೆಹರಿಸಿಕೊಳ್ಳಿ ಅಂತಾ ಕಿವಿಮಾತು ಹೇಳುವ ಜೊತೆದೆ ವಾರ್ನಿಂಗ್ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಅಸಮಧಾನಿತ ಶಾಸಕರ ಅಭಿಪ್ರಾಯ ಕೇಳಲು ಕಾಂಗ್ರೆಸ್ ಹೈ ಕಮಾಂಡ್ ಮುಂದಾಗಿದೆ. ಮುಂದಿನ ವಾರ ಸುರ್ಜೇವಾಲ ಕರ್ನಾಟಕಕ್ಕೆ ಭೇಟಿ ಕೊಟ್ಟು ಶಾಸಕ ಬಸವರಾಜ ರಾಯರೆಡ್ಡಿ ಸೇರಿ ಹಲವರ ಜೊತೆ ಮಾತುಕತೆ ನಡೆಸಲಿದ್ದಾರೆ. ಒಟ್ಟಾರೆ, ಕಾಂಗ್ರೆಸ್‌ನ ಗೊಂದಲಗಳು, ಅಸಮಾಧಾನಗಳಿಗೆ ಈ ಸಭೆ ಮೂಲಕ ಹೈ ನಾಯಕರು ಶಮನ ಮಾಡಿದ್ದಾರೆ.
ವಿಶೇಷ ವರದಿ: ಜಗದೀಶ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ