newsfirstkannada.com

×

ಸಿಎಂಗಳಿಗೆ ಸಿಗದ ಮೋದಿ ಡಿಕೆಶಿಗೆ ಸಿಕ್ಕಿದ್ದು ಹೇಗೆ? ಕಾಂಗ್ರೆಸ್‌ ಹೈಕಮಾಂಡ್ ಅಸಮಾಧಾನ; ಏನಿದರ ಸೀಕ್ರೆಟ್‌?

Share :

Published September 9, 2024 at 1:54pm

Update September 9, 2024 at 1:56pm

    ಮೋದಿ ಭೇಟಿ ಸಿಎಂಗಳಿಗೇ ಸಿಗೋದಿಲ್ಲ, ಡಿಕೆಶಿಗೆ ಸಿಕ್ಕಿದ್ದು ಹೇಗೆ?

    ಡಿ.ಕೆ ಶಿವಕುಮಾರ್‌ಗೆ ಕಾಂಗ್ರೆಸ್‌ ಹೈಕಮಾಂಡ್ ಕೇಳಿದ ಪ್ರಶ್ನೆಗಳೇನು?

    ಸಿಎಂ ರೇಸ್​ನಲ್ಲಿರೋರರದ್ದು ಒಬ್ಬೊಬ್ಬರದ್ದೊಂದು ಮಾರ್ಗ ಎಂದ ಬಿಜೆಪಿ

ಬೆಂಗಳೂರು: ಮುಡಾ ಸೈಟು ಅಕ್ರಮ ಆರೋಪದ ಬಳಿಕ ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆಯ ಚರ್ಚೆ ಸದ್ದಿಲ್ಲದೇ ನಡೆಯುತ್ತಿದೆ. ಮುಂದಿನ ಸಿಎಂ ಆಗುವ ಆಸೆಯನ್ನು ಸಚಿವರು, ಕಾಂಗ್ರೆಸ್ ನಾಯಕರು ವ್ಯಕ್ತಪಡಿಸಿದ ಮೇಲೆ ಕಾಂಗ್ರೆಸ್ ಪಾಳಯದಲ್ಲಿ ಹೊಸದೊಂದು ಚರ್ಚೆ ಶುರುವಾಗಿದೆ. ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಈ ನಡೆಗೆ ಕಾಂಗ್ರೆಸ್‌ ಹೈಕಮಾಂಡ್ ನಾಯಕರು ಅಸಮಾಧಾನ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಬೆಳಗಾವಿಗೆ ಮುಂದಿನ ಸಿಎಂ ಪಕ್ಕಾನಾ? ಸೈಲೆಂಟ್‌ ಸಾಹುಕಾರ್‌ ಪ್ಲಾನ್ ಏನು? ಪೋಸ್ಟರ್‌ ಹಿಂದೆ ಮಾಸ್ಟರ್ ಮೈಂಡ್‌! 

ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ ಶಿವಕುಮಾರ್ ಮೇಲೆ ಹೈಕಮಾಂಡ್ ಗರಂ ಆಗಿದೆ. ಕಾರಣ ಕೂಡ ಗಂಭೀರವಾಗಿದೆ. ಕಳೆದ ಬಾರಿ ದೆಹಲಿಗೆ ಭೇಟಿ ನೀಡಿದ್ದ ಡಿ.ಕೆ ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದರು. ಇದೇ ಈಗ ಕಾಂಗ್ರೆಸ್ ಹೈಕಮಾಂಡ್‌ನ ಕೆಂಗಣ್ಣಿಗೆ ಗುರಿಯಾಗಿದೆ. ರಣದೀಪ್ ಸಿಂಗ್ ಸುರ್ಜೇವಾಲಾ, ಕೆ.ಸಿ. ವೇಣುಗೋಪಾಲ್ ಅವರು ಈ ಭೇಟಿ ಹಿಂದಿನ ಸೀಕ್ರೆಟ್ ತಿಳಿಯಲು ಮುಂದಾಗಿದ್ದಾರೆ.

ಡಿಸಿಎಂ ಡಿಕೆಶಿ ಅವರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿರುವುದಕ್ಕೆ ಹೈಕಮಾಂಡ್ ಅಸಮಾಧಾನಗೊಂಡಿದೆ. ಈ ಹಿನ್ನೆಲೆಯಲ್ಲಿ 5 ಅನುಮಾನದ ಪ್ರಶ್ನೆಗಳನ್ನು ಕೇಳಲಾಗಿದೆ. ಇದಕ್ಕೆ ಡಿಕೆ ಶಿವಕುಮಾರ್ ಅವರು ಹೈಕಮಾಂಡ್ ನಾಯಕರಿಗೆ ಉತ್ತರಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಕುಟುಂಬ ಸಮೇತ ಅಮೆರಿಕಗೆ ಹೋದ ಡಿಕೆ ಶಿವಕುಮಾರ್​; ಕಮಲಾ ಹ್ಯಾರಿಸ್ ಆಹ್ವಾನದ ಬಗ್ಗೆ ಸ್ಪಷ್ಟನೆ 

ಡಿಕೆಶಿಗೆ ಹೈಕಮಾಂಡ್ ಕೇಳಿದ ಪ್ರಶ್ನೆಗಳೇನು?

ಡಿಕೆಶಿಗೆ ಪ್ರಶ್ನೆ-1: ಮೋದಿ ಭೇಟಿ ಸಿಎಂಗಳಿಗೇ ಸಿಗೋದಿಲ್ಲ, ನಿಮಗೆ ಸಿಕ್ಕಿದ್ದು ಹೇಗೆ?
ಡಿಕೆಶಿಗೆ ಪ್ರಶ್ನೆ-2: ನೀವೇಕೆ ಮೋದಿ ಭೇಟಿಯಾಗಿದ್ರಿ? ಅವ್ರನ್ನ ಭೇಟಿಯಾಗಲು ಹೇಳಿದ್ಯಾರು?
ಡಿಕೆಶಿಗೆ ಪ್ರಶ್ನೆ-3: ಅವ್ರು ನಮ್ಮ ರಾಜಕೀಯ ಎದುರಾಳಿ, ಈಗವರ ಭೇಟಿ ಅವಶ್ಯಕತೆ ಏನಿತ್ತು?
ಡಿಕೆಶಿಗೆ ಪ್ರಶ್ನೆ-4: ರಾಜ್ಯ ಸಂಘಟನೆಯಲ್ಲಿ ಉನ್ನತ ಹುದ್ದೆಯಲ್ಲಿದ್ದೀರಿ, ಅನುಮಾನ ಹುಟ್ಟಿಸುತ್ತೆ
ಡಿಕೆಶಿಗೆ ಪ್ರಶ್ನೆ-5: ಸರ್ಕಾರದಲ್ಲಿ ಉಪಮುಖ್ಯಮಂತ್ರಿಗಳಾಗಿದ್ದು, ಇಂತಹ ಕೆಲಸ ಮಾಡಬಾರದು

ಡಿಸಿಎಂ ಕೊಟ್ಟ ಉತ್ತರವೇನು?

ಡಿಕೆಶಿ ಉತ್ತರ-1: ನಾನು, ನನ್ನ ಇಲಾಖೆಯ ಕೆಲಸದ ವಿಚಾರವಾಗಿ ಅವರನ್ನ ಭೇಟಿಯಾಗಿದ್ದೆ
ಡಿಕೆಶಿ ಉತ್ತರ-2: ನರೇಂದ್ರ ಮೋದಿ ಭೇಟಿ, ಯಾವುದೇ ರಾಜಕೀಯ ಉದ್ದೇಶಕ್ಕಾಗಿ ಮಾಡಿಲ್ಲ
ಡಿಕೆಶಿ ಉತ್ತರ-3: ನನ್ನ ಹಾಗೂ ಪ್ರಧಾನಿ ಭೇಟಿಯಲ್ಲಿ ರಾಜಕಾರಣವನ್ನ ಬೆರೆಸುವ ಅಗತ್ಯವಿಲ್ಲ
ಡಿಕೆಶಿ ಉತ್ತರ-4: ಇಲ್ಲಿನ ರಾಜಕೀಯ ಬೆಳವಣಿಗೆಗೂ, ನನ್ನ ಭೇಟಿಗೂ ಯಾವುದೇ ಸಂಬಂಧವಿಲ್ಲ

ಬಿಜೆಪಿ ನಾಯಕರಿಗೂ ಆಶ್ಚರ್ಯ!
ಪ್ರಧಾನಿ ನರೇಂದ್ರ ಮೋದಿ ಅವರ ಅಪಾಯಿಂಟ್ಮೆಂಟ್ ಅಷ್ಟು ಸುಲಭ ಸಿಗಲ್ಲ. ಡಿಕೆ ಶಿವಕುಮಾರ್ ಅವರಿಗೆ ಸಿಕ್ಕಿದ್ದು ಹೇಗೆ ಅನ್ನೋದು ಕುತೂಹಲದ ಪ್ರಶ್ನೆಯಾಗಿದೆ. ಡಿಕೆಶಿ, ಮೋದಿ ಭೇಟಿ ಬಗ್ಗೆ ವಿಪಕ್ಷ ನಾಯಕ ಆರ್. ಅಶೋಕ್ ಅವರು ಪ್ರತಿಕ್ರಿಯಿಸಿದ್ದಾರೆ.

ಮೋದಿ ಅವರನ್ನ ಡಿಕೆಶಿವಕುಮಾರ್ ಭೇಟಿಯಾಗಿದ್ದು ಯಾಕೆ ಅನ್ನೋದನ್ನ ಅವರ ಹೈಕಮಾಂಡ್ ನಾಯಕರು ನೇರವಾಗಿ ಕೇಳಿದ್ದಾರೆ. ರಾಜ್ಯದಲ್ಲಿ ಸಿಎಂ ಬದಲಾವಣೆಗಾಗಿ ಕಾಂಗ್ರೆಸ್​ನವ್ರೇ ಟವೆಲ್ ಹಾಕ್ತಿದ್ದಾರೆ. ಅದ್ರಲ್ಲಿ ಡಿಕೆಶಿವಕುಮಾರ್ ಕೂಡ ಒಬ್ಬರು. ಸಿಎಂ ರೇಸ್​ನಲ್ಲಿರೋರರದ್ದು ಒಬ್ಬೊಬ್ಬರದ್ದೊಂದು ಮಾರ್ಗ. ಮುಂದೆ ತೊಂದರೆ ಆಗದಂತೆ ಮಾರ್ಗ ಅನುಸರಿಸುತ್ತಿದ್ದಾರೆ ಎಂದು ಮಾರ್ಮಿಕ ಹೇಳಿಕೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಎಂಗಳಿಗೆ ಸಿಗದ ಮೋದಿ ಡಿಕೆಶಿಗೆ ಸಿಕ್ಕಿದ್ದು ಹೇಗೆ? ಕಾಂಗ್ರೆಸ್‌ ಹೈಕಮಾಂಡ್ ಅಸಮಾಧಾನ; ಏನಿದರ ಸೀಕ್ರೆಟ್‌?

https://newsfirstlive.com/wp-content/uploads/2024/09/Dkshivakumar-modi.jpg

Load More