ಸುಧಾಮ್ ದಾಸ್ ನಾಮನಿರ್ದೇಶನಕ್ಕೆ ಹೈಕಮಾಂಡ್ ಗ್ರೀನ್‌ಸಿಗ್ನಲ್
ಪರಮೇಶ್ವರ್, ಮುನಿಯಪ್ಪ, ಮಹದೇವಪ್ಪ ಅವರ ವಿರೋಧ ಯಾಕೆ?
ಕಾಂಗ್ರೆಸ್ ಹೈಕಮಾಂಡ್ ಮುಂದೆ ದಲಿತ ಸಚಿವರ ಬೇಡಿಕೆ ಏನಿತ್ತು?
ಬೆಂಗಳೂರು: ವಿಧಾನಪರಿಷತ್ ನಾಮನಿರ್ದೇಶನ ಸ್ಥಾನಕ್ಕೆ ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ಸುಧಾಮ್ ದಾಸ್ ಅವರನ್ನೇ ಸೂಚಿಸಿದೆ. ಸುಧಾಮ್ ದಾಸ್ ಅವರ ನಾಮನಿರ್ದೇಶನಕ್ಕೆ ಸಚಿವರಾದ ಡಾ.ಜಿ ಪರಮೇಶ್ವರ್, ಮುನಿಯಪ್ಪ, ಮಹದೇವಪ್ಪ ಹಾಗೂ ತಿಮ್ಮಾಪುರ ಅವರ ವಿರೋಧವಿತ್ತು. ಹಿರಿಯ, ದಲಿತ ಸಚಿವರ ವಿರೋಧದ ಮಧ್ಯೆಯೂ ಕಾಂಗ್ರೆಸ್ ಹೈಕಮಾಂಡ್ ಸುಧಾಮ್ ದಾಸ್ ಅವರನ್ನೇ ನಾಮನಿರ್ದೇಶನ ಮಾಡುವಂತೆ ಸೂಚನೆ ಕೊಟ್ಟಿದೆ. ಹೈಕಮಾಂಡ್‌ನ ಈ ನಿರ್ಧಾರದಿಂದ ದಲಿತ ಸಚಿವರಿಗೆ ಭಾರೀ ಹಿನ್ನೆಡೆಯಾಗಿದೆ.
ಸುಧಾಮ್ ದಾಸ್ ಅವರ ಮೇಲ್ಮನೆ ನಾಮನಿರ್ದೇಶನವನ್ನು ವಿರೋಧಿಸಿ ಸಚಿವರಾದ ಪರಮೇಶ್ವರ್, ಮುನಿಯಪ್ಪ, ಮಹದೇವಪ್ಪ, ತಿಮ್ಮಾಪುರ ಅವರು ಪತ್ರ ಬರೆದಿದ್ದರು. ಈ ಪತ್ರ ಬದಿಗಿಟ್ಟ ಕಾಂಗ್ರೆಸ್ ಹೈಕಮಾಂಡ್ ನಾಮನಿರ್ದೇಶನ ಮಾಡುವಂತೆ ಸೂಚನೆ ನೀಡಿದೆ. ಹಿರಿಯ ಸಚಿವರು ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದರೂ ಹೈಕಮಾಂಡ್ ಸೊಪ್ಪೇ ಹಾಕಿಲ್ಲ. ಕಾಂಗ್ರೆಸ್ ವರಿಷ್ಠರ ಈ ನಿರ್ಧಾರದಿಂದ ಸಚಿವರಿಗೆ ಭಾರೀ ಹಿನ್ನೆಡೆಯಾಗಿದೆ ಎಂದು ಪಕ್ಷದಲ್ಲೇ ಚರ್ಚೆಯಾಗುತ್ತಿದೆ.
ದಲಿತ ಸಚಿವರ ಬೇಡಿಕೆ ಏನಿತ್ತು?
ಸುಧಾಮ್ ದಾಸ್ ಅವರ ನಾಮನಿರ್ದೇಶನವನ್ನು ವಿರೋಧಿಸಿದ್ದ ಹಿರಿಯ ಸಚಿವರು, ಹೆಸರನ್ನ ಅಂತಿಮಗೊಳಿಸುವಾಗ ನಮ್ಮ ಅಭಿಪ್ರಾಯ ಸಂಗ್ರಹಿಸದೇ ಇರೋದ್ರಿಂದ ಬೇಸರವಾಗಿದೆ. ಪ್ರಾದೇಶಿಕ ಸಮಾನತೆ, ಸಾಮಾಜಿಕ ನ್ಯಾಯ ಪಾಲಿಸಬೇಕಿತ್ತು. ಪಕ್ಷ ಸಂಘಟನೆಯಲ್ಲಿ ಸುಧಾಮ್ ದಾಸ್ ಅವರ ಸೇವೆ ಇಲ್ಲವೇ ಇಲ್ಲ. ಕಳೆದ ವಿಧಾನಸಭೆ ಚುನಾವಣೆಲ್ಲೂ ಸುಧಾಮ್ ದಾಸ್ ಅವರು ಕೆಲಸ ಮಾಡಿಲ್ಲ. ಹೀಗಾಗಿ ಸುಧಾಮ್ ದಾಸ್ ಪರಿಷತ್ ಆಯ್ಕೆಯನ್ನ ನಾವು ವಿರೋಧಿಸ್ತೇವೆ ಎಂದಿದ್ದರು.
ಸುಧಾಮ್ ದಾಸ್ ಮೊದಲು ಇ.ಡಿ ಅಧಿಕಾರಿಯಾಗಿದ್ದರು. ಕೆಲ ದಿನಗಳ ಹಿಂದಷ್ಟೇ ಸುಧಾಮ್ ದಾಸ್ ಕಾಂಗ್ರೆಸ್ ಸೇರಿದ್ದಾರೆ. ಪಕ್ಷಕ್ಕೆ ನಿಷ್ಠರಾಗಿ, ಹಗಲಿರುಳು ಸೈನಿಕರಂತೆ ದುಡಿದವರನ್ನ ಪರಿಗಣಿಸಿ. ಅಂಥ ಅರ್ಹ ಹೆಸರನ್ನ ನಾವು ಸೂಚಿಸುತ್ತೇವೆ, ಅವಕಾಶ ಕೊಡಿ. ಕೂಡಲೇ ಸುಧಾಮ್ ದಾಸ್ ಹೆಸರನ್ನ ಕೈ ಬಿಡಲು ಒತ್ತಾಯಿಸುತ್ತೇವೆ ಎಂದು ಪತ್ರದಲ್ಲಿ ಸಚಿವರು ಕೋರಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ