ಕಾಂಗ್ರೆಸ್, ಬಿಜೆಪಿ ನಾಯಕರ ಮಧ್ಯೆ ‘ಕಲಾವತಿ’ಯ ಕದನ!
ಲೋಕಸಭೆಯಲ್ಲಿ ರಾಹುಲ್ ಮೇಲೆ ಅಮಿತ್ ಶಾ ಆರೋಪ
ಕಲಾವತಿ ಬಂಡೂರಕರ್ ಅವರಿಗೆ ಸಹಾಯ ಮಾಡಿದ್ಯಾರು?
ನವದೆಹಲಿ: ಕಾಂಗ್ರೆಸ್, ಬಿಜೆಪಿ ನಾಯಕರು ಇವತ್ತು ಕಲಾವತಿಯ ಜಪ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಂತೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಟಕ್ಕರ್ ಕೊಟ್ಟು ಕಾಂಗ್ರೆಸ್ ನಾಯಕರು ಪೋಸ್ಟ್ ಮಾಡುತ್ತಿದ್ದಾರೆ. ಅಮಿತ್ ಶಾ ಆರೋಪಕ್ಕೆ ವಿಡಿಯೋ, ಫೋಟೋಗಳ ಸಾಕ್ಷ್ಯ ಸಮೇತ ತಿರುಗೇಟು ಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಕಲಾವತಿಗೆ ಆರ್ಥಿಕ ಸಹಾಯ ಮಾಡಿದ್ದು ನಮ್ಮ ಸರ್ಕಾರ, ನಿಮ್ಮ ನಾಯಕ ರಾಹುಲ್ ಗಾಂಧಿ ಯಾವ ನೆರವನ್ನು ಕೊಟ್ಟಿಲ್ಲ ಎಂದು ಹೇಳುತ್ತಿದ್ದಾರೆ. ರಾಷ್ಟ್ರ ರಾಜಕೀಯದಲ್ಲಿ ಕಲಾವತಿ ಎಂಬ ಬಡ ಮಹಿಳೆಯ ವಿಚಾರದಲ್ಲಿ ಕದನವೇ ನಡೆದಿದ್ದು ವಾಗ್ಯುದ್ಧ ರಂಗೇರುವಂತೆ ಮಾಡಿದೆ.
ನಿನ್ನೆ ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸುದೀರ್ಘ ಭಾಷಣ ಮಾಡಿದರು. ಈ ವೇಳೆ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನೇ ಟಾರ್ಗೆಟ್ ಮಾಡಿದ ಅಮಿತ್ ಶಾ ಆರೋಪಗಳ ಸುರಿಮಳೆಗೈದರು. ಸದ್ಯ ಲೋಕಸಭೆಯಲ್ಲಿರುವ ಓರ್ವ ಸದಸ್ಯರನ್ನು ಇದುವರೆಗೂ 13 ಬಾರಿ ರಾಜಕೀಯಕ್ಕೆ ಲಾಂಚ್ ಮಾಡಲಾಗಿದೆ. ಆದರೆ ಅವ್ರು 13 ಬಾರಿಯೂ ವಿಫಲರಾಗಿದ್ದಾರೆ ಎಂದರು. ಇನ್ನು, ಆ ನಾಯಕ ಬುಂದೇಲ್ ಖಂಡ್‌ನ ಕಲಾವತಿ ಎಂಬ ಬಡ ಮಹಿಳೆಯ ಗುಡಿಸಲಿಗೆ ಹೋಗಿ ಬಂದ್ರು. ಆ ಕಲಾವತಿಗೆ ನೀವು ಏನ್ ಕೊಟ್ಟಿರಿ? ನಿಮ್ಮ ಕಾಂಗ್ರೆಸ್ ಸರ್ಕಾರ ಏನು ಕೊಟ್ಟಿದೆ. ಕಲಾವತಿಗೆ ಮನೆ, ವಿದ್ಯುತ್, ನೀರಿನ ಸೌಲಭ್ಯವನ್ನು ಪ್ರಧಾನಿ ಮೋದಿ ನೇತೃತ್ವದ ನಮ್ಮ ಸರ್ಕಾರ ಕೊಟ್ಟಿದೆ ಎಂದು ಹೇಳಿದ್ದರು.
ಲೋಕಸಭೆಯಲ್ಲಿ ಅಮಿತ್ ಶಾ ಅವರು ನೀಡಿದ ಈ ಹೇಳಿಕೆ ಕಾಂಗ್ರೆಸ್ ನಾಯಕರನ್ನು ತೀವ್ರವಾಗಿ ಕೆರಳಿಸಿದೆ. ಇದಕ್ಕೆ ಕೌಂಟರ್ ಕೊಟ್ಟ ಕಾಂಗ್ರೆಸ್ ನಾಯಕರು ಇವತ್ತು ಸಾಲು, ಸಾಲು ಟ್ವೀಟ್‌ಗಳನ್ನು ಮಾಡುತ್ತಿದ್ದಾರೆ. ಕಲಾವತಿ ಎಂಬ ಬಡಮಹಿಳೆಗೆ ರಾಹುಲ್ ಗಾಂಧಿ ಅವರು 30 ಲಕ್ಷ ರೂಪಾಯಿ ಸಹಾಯ ನೀಡಿದ್ದರು. ಇದರಿಂದ ಗುಡಿಸಲಿನಲ್ಲಿ ವಾಸವಿದ್ದ ಕಲಾವತಿ ಇಂದು RCC ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ನಮಗೆ ಸಹಾಯ ಮಾಡಿದ್ದಾರೆ ಎಂದು ಹೇಳಿದ ಕಲಾವತಿ ಅವರ ವಿಡಿಯೋವನ್ನು ಕಾಂಗ್ರೆಸ್ ನಾಯಕರು ಬಿಡುಗಡೆ ಮಾಡಿದ್ದಾರೆ.
ಕಲಾವತಿ ಅವರೇ ರಾಹುಲ್ ಗಾಂಧಿ ಆರ್ಥಿಕ ಸಹಾಯ ಮಾಡಿದ್ದಾರೆ ಎನ್ನುವ ವಿಡಿಯೋ ಬಿಡುಗಡೆ ಮಾಡಿರುವ ಕಾಂಗ್ರೆಸ್ ನಾಯಕರು ಲೋಕಸಭೆಯಲ್ಲಿ ಅಮಿತ್ ಶಾ ಹೇಳಿದ್ದು ಸುಳ್ಳು ಎಂದಿದ್ದಾರೆ. ಅಮಿತ್ ಶಾ ಜೀ ದಯವಿಟ್ಟು ದೇಶದ ಜನತೆ ಮುಂದೆ ಸುಳ್ಳು ಹೇಳಬೇಡಿ. ಕಲಾವತಿ ಬಂಡೂರಕರ್ ಅವರು ಉತ್ತರಪ್ರದೇಶದ ಬುಂದೇಲ್ ಖಂಡ್‌ನವರಲ್ಲ. ಈ ಮಹಿಳೆ ಮಹಾರಾಷ್ಟ್ರದ ಜಲ್ಕಾ ಹಳ್ಳಿಯವರು. 2008ರಲ್ಲಿ ಮೊದಲ ಬಾರಿ ಕಲಾವತಿಯನ್ನು ರಾಹುಲ್ ಗಾಂಧಿ ಅವರು ಭೇಟಿ ಮಾಡಿದ್ದರು. 2022ರಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ವೇಳೆ ಮತ್ತೊಮ್ಮೆ ರಾಹುಲ್ ಗಾಂಧಿ ಅವರು ಕಲಾವತಿಯನ್ನು ಭೇಟಿ ಮಾಡಿದ್ದಾರೆ. ರಾಹುಲ್ ಗಾಂಧಿ ಅವರು ಕಲಾವತಿಗೆ ಆರ್ಥಿಕ ಸಹಾಯ ನೀಡಿದ್ದಾರೆ. ಆರ್ಥಿಕವಾಗಿ ಸಬಲರಾಗಿರುವ ಕಲಾವತಿ ಅವರು ಇದೀಗ ತೆರಿಗೆಯನ್ನು ಕಟ್ಟುತ್ತಿದ್ದಾರೆ ಎಂದಿದ್ದಾರೆ.
ಯಾರು ಈ ಕಲಾವತಿ ಬಂಡೂರಕರ್?
ಕಾಂಗ್ರೆಸ್, ಬಿಜೆಪಿ ನಾಯಕರ ವಾಗ್ಯುದ್ಧದ ಮಧ್ಯೆ ಕಲಾವತಿ ಬಂಡೂರಕರ್ ಯಾರು ಅನ್ನೋ ಚರ್ಚೆ ಜೋರಾಗಿದೆ. ಕಲಾವತಿ ಬಂಡೂರಕರ್ ಮಹಾರಾಷ್ಟ್ರ ಮೂಲದವರು. ಬಡ ರೈತ ಕುಟುಂಬದವರಿಂದ ಬಂದ ಈಕೆಯ ಗಂಡ ಸಾವನ್ನಪ್ಪಿದ್ದು ವಿಧವೆಯಾಗಿದ್ದಾರೆ. ಮಕ್ಕಳು ಇಲ್ಲದ ಈಕೆಯನ್ನು 2008ರಲ್ಲಿ ರಾಹುಲ್ ಗಾಂಧಿ ಭೇಟಿ ಮಾಡಿ ಸಹಾಯ ನೀಡುವ ಭರವಸೆ ನೀಡಿದ್ದರು. ಇದೇ ವಿಚಾರವನ್ನು ಲೋಕಸಭೆಯಲ್ಲಿ ಅಮಿತ್ ಶಾ ಪ್ರಸ್ತಾಪ ಮಾಡಿದ್ದು, ಈ ಬಡ ಮಹಿಳೆಗೆ ಮನೆ, ಪಡಿತರ, ವಿದ್ಯುತ್ ಸೌಲಭ್ಯ ಕೊಟ್ಟಿದ್ದು ಮೋದಿ ಸರ್ಕಾರ ಎಂದಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟಿರುವ ಕಾಂಗ್ರೆಸ್ ನಾಯಕರು ಕಲಾವತಿ ಅವರೇ ರಾಹುಲ್ ಗಾಂಧಿ ಸಹಾಯ ನೀಡಿದ್ದಾರೆ ಎನ್ನುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
Kalavati Bandurkar, a resident of Jalka village in Yavatmal district of Vidarbha, comes from a farmer's family which is affected by farmer's suicide.
She has spent her entire life as an agricultural laborer.
Kalavati's husband Parshuram had committed suicide about a decade… pic.twitter.com/UYNRpbvcKJ
— Swati Dixit ಸ್ವಾತಿ (@vibewidyou) August 9, 2023