newsfirstkannada.com

Video: ಪ್ರಿಯಾಂಕಾ ಗಾಂಧಿಗೆ ಖಾಲಿ ಬೊಕ್ಕೆ ತಂದ್ಕೊಟ್ಟ ಮುಖಂಡ; ನಗುತ್ತಲೇ ‘ಕೈ’ನಾಯಕಿ ಮಾಡಿದ್ದು ಏನಂದರೆ..!

Share :

07-11-2023

    ತುಂಬಿದ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಯಡವಟ್ಟು

    ಪ್ರಚಾರಕ್ಕೆ ಬಂದಿದ್ದ ಪ್ರಿಯಾಂಕಾ ಗಾಂಧಿಗೆ ಮುಜುಗರ

    ಮಧ್ಯ ಪ್ರದೇಶದ ಇಂದೋರ್​​ ವೇದಿಕೆಯಲ್ಲಿ ಘಟನೆ

ಚುನಾವಣೆ ಸಂದರ್ಭದಲ್ಲಿ ನಡೆಯುವ ಱಲಿಗಳಲ್ಲಿ ಇನ್​ಸೈಡ್​ ಸ್ಟೋರಿಗಳಿಗೆನೂ ಕಮ್ಮಿ ಇರಲ್ಲ. ಕೆಲವೊಮ್ಮೆ ಗತಿಸುವ ಸಂಗತಿಗಳು ತುಂಬಾ ಗಂಭೀರ ಸ್ವರೂಪದ್ದಾಗಿದ್ರೆ, ಇನ್ನು ಕೆಲವು ಘಟನೆಗಳು ತೀರಾ ತಮಾಷೆಯ ಪ್ರಸಂಗ ಆಗಿರುತ್ತವೆ. ಅದರಂತೆ ನಿನ್ನೆ ಪ್ರಿಯಾಂಕಾ ಗಾಂಧಿಗೂ ಆಗಿದ್ದು ಅದೇ..!

ಮಧ್ಯ ಪ್ರದೇಶ ವಿಧಾನಸಭೆಗೆ ಚುನಾವಣೆ ಎದುರಾಗಿದೆ. ನವೆಂಬರ್ 17 ರಂದು ಚುನಾವಣೆ ನಡೆಯಲಿದ್ದು, ಭರ್ಜರಿ ಪ್ರಚಾರ ನಡೆಯುತ್ತಿದೆ. ನಿನ್ನೆ ಪ್ರಿಯಾಂಕಾ ಗಾಂಧಿ ಇಂದೋರ್​​ನಲ್ಲಿ ಕ್ಯಾಂಪೇನ್ ನಡೆಸಿದರು. ಕ್ಯಾಂಪೇನ್ ವೇಳೆ ನಡೆದ ಅಚಾತುರ್ಯವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತುಂಬಿದ ವೇದಿಕೆ ಮೇಲೆ ಪ್ರಿಯಾಂಕ ಗಾಂಧಿ ನಿಂತಿದ್ದಾರೆ. ಅವರನ್ನು ಮಧ್ಯಪ್ರದೇಶ ಕಾಂಗ್ರೆಸ್ ನಾಯಕರು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಈ ವೇಳೆ ನಾಯಕರೊಬ್ಬರು ಪ್ರಿಯಾಂಕಾ ಗಾಂಧಿಗೆ ಬೊಕ್ಕೆ ಕೊಡಲು ಬಂದಿದ್ದಾರೆ.

ಬೊಕ್ಕೆ ಕೊಡುವ ಆತುರದಲ್ಲಿ ಅದರಲ್ಲಿದ್ದ ಹೂವುಗಳು ನೆಲಕ್ಕೆ ಬಿದ್ದಿದ್ದವು. ಅದು ಆ ನಾಯಕನ ಗಮನಕ್ಕೆ ಬರುವುದಿಲ್ಲ. ಗಮನಿಸದೇ ನೇರವಾಗಿ ಪ್ರಿಯಾಂಕ ಗಾಂಧಿಗೆ ನೀಡುತ್ತಾರೆ. ಬೊಕ್ಕೆ ಸ್ವೀಕರಿಸಿದ ಪ್ರಿಯಾಂಕ ಗಾಂಧಿ ಅಚ್ಚರಿಗೆ ಒಳಗಾಗುತ್ತಾರೆ. ಇದರಲ್ಲಿ ಏನೂ ಇಲ್ಲ ಎಂದು ತಮಗೆ ಹೂಗುಚ್ಛ ಕೊಟ್ಟ ಮುಖಂಡನಿಗೆ ಸನ್ನೆ ಮಾಡಿ ತಿಳಿಸುತ್ತಾರೆ. ಅಲ್ಲದೇ ನಗಾಡುತ್ತಲೇ ಪ್ರಿಯಾಂಕ ಗಾಂಧಿ ಅದನ್ನು ಸ್ವೀಕಾರ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಪ್ರಿಯಾಂಕಾ ಗಾಂಧಿಗೆ ಖಾಲಿ ಬೊಕ್ಕೆ ತಂದ್ಕೊಟ್ಟ ಮುಖಂಡ; ನಗುತ್ತಲೇ ‘ಕೈ’ನಾಯಕಿ ಮಾಡಿದ್ದು ಏನಂದರೆ..!

https://newsfirstlive.com/wp-content/uploads/2023/11/PRIYANKA.jpg

Load More