ದಲಿತ ಬಲಗೈ ಸಮುದಾಯದವರೇ ಹೆಚ್ಚಿನ ಪ್ರಮಾಣದಲ್ಲಿದ್ದಾರೆ
ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸಿದ್ರೆ ಗೆಲುವು ನಿಶ್ಚಿತ ಅನ್ನೋ ಲೆಕ್ಕಾಚಾರ
ಮಲ್ಲಿಕಾರ್ಜುನ ಖರ್ಗೆಗೆ ಕೋಲಾರ ಆಹ್ವಾನಕ್ಕೆ ಕಾರಣಗಳೇನು?
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೋಲಾರದಿಂದ ಸ್ಪರ್ಧೆ ಮಾಡ್ತಾರಾ ಎಂಬ ಚರ್ಚೆ ಶುರುವಾಗಿದೆ. ಕೋಲಾರದಿಂದಲೇ ಸ್ಪರ್ಧಿಸುವಂತೆ ಖರ್ಗೆ ಮೇಲೆ ಬಂಗಾರಪೇಟೆ ನಾರಾಯಣಸ್ವಾಮಿ ಸೇರಿದಂತೆ ಹಲವರು ಒತ್ತಡ ಹಾಕುತ್ತಿದ್ದಾರಂತೆ. ಮಲ್ಲಿಕಾರ್ಜುನ ಖರ್ಗೆ ಕಲಬುರಗಿಯಿಂದಲೇ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದು, ಮೊನ್ನೆಯಷ್ಟೇ ಗೃಹಜ್ಯೋತಿ ಕಾರ್ಯಕ್ರಮಕ್ಕೆ ಅಲ್ಲಿಯೇ ಚಾಲನೆ ಕೊಟ್ಟಿದ್ರು.
ಆದ್ರೀಗ ಕೋಲಾರದಿಂದ ನಿಲ್ಲುವಂತೆ ಶಾಸಕರ ಒತ್ತರ ಹೇರುತ್ತಿದ್ದಾರೆ. ಕೋಲಾರದಲ್ಲಿ ದಲಿತ ಬಲಗೈ ಸಮುದಾಯದವೇ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಖರ್ಗೆಯವರು ಸ್ಪರ್ಧಿಸಿದರೆ ಗೆಲುವು ನಿಶ್ಚಿತ ಎಂಬುದು ಕೋಲಾರ ಕಾಂಗ್ರೆಸ್ಸಿಗರ ಅಭಿಮತವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಕೂಡ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದರು. ಆದರೆ, ಕೊನೆ ಕ್ಷಣದಲ್ಲಿ ಸಿದ್ದರಾಮಯ್ಯ ಮನಸ್ಸು ಬದಲಾಯಿಸಿದ್ದರು. ಈಗ ಖರ್ಗೆಯವರ ಮೇಲೆ ಜಿಲ್ಲಾ ನಾಯಕರ ಒತ್ತಡ ಶುರು ಮಾಡಿದ್ದಾರಂತೆ.
ಮಲ್ಲಿಕಾರ್ಜುನ ಖರ್ಗೆ ಆಹ್ವಾನಕ್ಕೆ ಕಾರಣಗಳೇನು?
ಕೋಲಾರ ಕಾಂಗ್ರೆಸ್ನ ಭದ್ರ ಕೋಟೆಯಾಗಿದೆ. ಕೋಲಾರದ ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಈಗ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಹಾಗಾಗಿ ಕೋಲಾರದಲ್ಲಿ ಈ ಬಾರಿ ಕಾಂಗ್ರೆಸ್ ಗೆಲ್ಲುವ ಒಳ್ಳೆಯ ವಾತಾವರಣ ಇದೆ. ಸುಲಭವಾಗಿ ಮಲ್ಲಿಕಾರ್ಜುನ ಖರ್ಗೆ ಗೆಲ್ಲಬಹುದು. ಬಣ ರಾಜಕೀಯದಿಂದ ಕಳೆದ ಬಾರಿ ಮುನಿಯಪ್ಪಗೆ ಸೋಲಾಗಿತ್ತು. ಬಣ ರಾಜಕೀಯ ಸರಿಪಡಿಸಲು ಖರ್ಗೆ ಸ್ಪರ್ಧೆಯೇ ಮುಲಾಮು ಅನ್ನೋದು ಜಿಲ್ಲಾ ಕಾಂಗ್ರೆಸ್ ನಾಯಕರ ಅಭಿಪ್ರಾಯ ಎನ್ನಲಾಗಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ