Advertisment

ರಾಹುಲ್​ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್​; ಇಂದು ಸಂಸದ ಸ್ಥಾನ ವಾಪಸ್​ ಸಾಧ್ಯತೆ, ಸ್ಪೀಕರ್ ಸಹಿಯೊಂದೇ ಬಾಕಿ

author-image
AS Harshith
Updated On
ಕರ್ನಾಟಕದಿಂದ ರಾಹುಲ್ ಗಾಂಧಿ ಕಣಕ್ಕಿಳಿಸಲು ಚಿಂತನೆ; ಲೋಕಸಭೆ ಚುನಾವಣೆಗೆ ರಾಜ್ಯ ‘ಕೈ’​ ನಾಯಕರ ಮಾಸ್ಟರ್ ಪ್ಲಾನ್..!
Advertisment
  • ರಾಹುಲ್​ ಗಾಂಧಿಗೆ ಸುಪ್ರೀಂ ಕೋರ್ಟ್​ನಿಂದ ರಿಲೀಫ್
  • ಕಾಂಗ್ರೆಸ್​ ನಾಯಕನಿಗೆ ಅನರ್ಹತೆ ತೆರವುಗೊಳಿಸುವ ಸಾಧ್ಯತೆ
  • ಅನರ್ಹತೆ ಹಿಂಪಡೆಯದಿದ್ರೆ ಸುಪ್ರೀಂ ಮೆಟ್ಟಿಲೇರಲು ಚಿಂತನೆ

ಮಾನನಷ್ಟ ಕೇಸ್​ನಲ್ಲಿ ರಾಹುಲ್​ ಗಾಂಧಿಗೆ ಸುಪ್ರೀಂ ಕೋರ್ಟ್​ನಿಂದ ರಿಲೀಫ್ ಸಿಕ್ಕಿದೆ. ಹಾಗಾಗಿ ಇಂದು ಕಾಂಗ್ರೆಸ್​ ನಾಯಕನಿಗೆ ಅನರ್ಹತೆ ತೆರವುಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Advertisment

ಲೋಕಸಭಾ ಸದಸ್ಯತ್ವದ ಅನರ್ಹತೆ ಹಿಂಪಡೆಯಲು ಸಿದ್ಧತೆ ಮಾಡಲಾಗಿದ್ದು, ಲೋಕಸಭಾ ಸ್ಪೀಕರ್ ಓಂಬಿರ್ಲಾ ಸಹಿ ಹಾಕುವುದು ಮಾತ್ರ ಬಾಕಿ ಇದೆ. ನಾಳೆ ಕೇಂದ್ರದ ವಿರುದ್ಧ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ನಡೆಯಲಿದೆ.

ಸದ್ಯ ಹೊರಬಿದ್ದ ಮಾಹಿತಿಯಂತೆಯೇ, ಇಂದೇ ರಾಹುಲ್ ಅನರ್ಹತೆ ಹಿಂತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅನರ್ಹತೆ ಹಿಂಪಡೆಯದಿದ್ರೆ ಸುಪ್ರೀಂ ಮೆಟ್ಟಿಲೇರಲು ಚಿಂತನೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ನ್ಯಾಶನಲಿಸ್ಟ್​ ಕಾಂಗ್ರೆಸ್​ ಪಕ್ಷದ ಸದಸ್ಯ ಲಕ್ಷದ್ವೀಪ್​ ಸಂಸದ ಪಿಪಿ ಮೊಹ್ಮಮದ್​​ ಫೈಜಲ್​ ಅವರ ಪ್ರಕರಣದಲ್ಲೂ ಸ್ವೀಕರ್​ 1 ತಿಂಗಳ ಕಾಲ ಸಮಯ ತೆಗೆದುಕೊಂಡಿದ್ದರು. 10 ವರ್ಷಗಳ ಜೈಲು ಶಿಕ್ಷೆ ಬಳಿಕ ಅವರನ್ನು ಜನವರಿಯಲ್ಲಿ ಅನರ್ಹಗೊಳಿಸಿದರು. ಬಳಿಕ ಸಂಸದ ಹೈ ಕೋರ್ಟ್​ ಆದೇಶದ ಹೊರತಾಗಿ ಸಂಸದ ಸ್ಥಾನ ಪುನರ್​ಸ್ಥಾಪನೆಗಾಗಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದರು. ಬಳಿಕ ವಿಚಾಋ ನಡೆಸಿದ ಸುಪ್ರೀಂ ಕೋರ್ಟ್​ ಮಾರ್ಚ್​ನಲ್ಲಿ ಸಂಸದರನ್ನಾಗಿ ಅವರನ್ನಾಗಿ ಪುನರ್​ಸ್ಥಾಪಿಸಲಾಯಿತು.

Advertisment

ಇದೀಗ ರಾಹುಲ್​ ಗಾಂಧಿ ವಿಚಾರದಲ್ಲೂ ಅದೇ ರೀತಿಯ ಸಿದ್ಧತೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಅನರ್ಹತೆ ಹಿಂಪಡೆಯಲು ವಿಪಕ್ಷಗಳು ಒತ್ತಡ ಹೇರುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment