newsfirstkannada.com

ಕಾಂಗ್ರೆಸ್​ನಲ್ಲಿ ಮತ್ತೆ CM ಸ್ಥಾನದ ಚರ್ಚೆ.. ಕೆ.ಎನ್​.ರಾಜಣ್ಣ ಹೇಳಿಕೆಗೆ ಪರೋಕ್ಷವಾಗಿ ಬೆಂಬಲ ಸೂಚಿಸಿದ ಜಾರಕಿಹೊಳಿ

Share :

26-06-2023

    ಡಿಕೆಎಸ್​​, ಪರಂ ಬೆನ್ನಲ್ಲೇ ಮತ್ತೊಬ್ಬ ನಾಯಕನ ಹೆಸರು ಪ್ರಸ್ತಾಪ

    CM ಆಗುವ ಆಸೆ ವ್ಯಕ್ತಪಡಿಸಿ ಆದರೆ ಎಂದ ಸಚಿವರು..!

    ಸಚಿವ ರಾಜಣ್ಣ ಏನ್ ಹೇಳಿದ್ದರು ಗೊತ್ತಾ..?

ಬೆಂಗಳೂರು: ಸಿಎಂ ಸ್ಥಾನದ ವಿಚಾರ ಕಾಂಗ್ರೆಸ್​​​ನಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬಾರಿ ಸಚಿವ ಸತೀಶ್ ಜಾರಕಿಹೊಳಿ ಹೆಸರು ಪ್ರಸ್ತಾಪವಾಗಿದೆ.

ಜಾರಕಿಹೊಳಿ ಹೆಸರನ್ನು ಪ್ರಸ್ತಾಪ ಮಾಡಿರೋ ಸಚಿವ ಕೆ.ಎನ್.ರಾಜಣ್ಣ, ನಮ್ಮ ಸಮಾಜಕ್ಕೆ ಸಿಎಂ ಸ್ಥಾನ ಸಿಗಬೇಕು ಎಂಬುದು ಅಭಿಲಾಷೆ. ಹೀಗಾಗಿ ನಮ್ಮ ಸಮಾಜದಿಂದ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗಲಿ ಅನ್ನೋದು ನಮ್ಮ ಆಸೆ ಅಂತಾ ತುಮಕೂರಲ್ಲಿ ನಡೆದ ವಾಲ್ಮೀಕಿ ಸಮುದಾಯದ ಅಭಿನಂದನಾ ಕಾರ್ಯಕ್ರಮದಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.

ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗಲಿ ಅಂತ ಸಹಕಾರ ಸಚಿವ ಕೆ.ಎನ್​.ರಾಜಣ್ಣ ನೀಡಿದ ಹೇಳಿಕೆ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಹುದ್ದೆ ಸಿಗೋದು ಈಗ ಅಲ್ಲ.. ಮುಂದಿನ ಅವಧಿಯಲ್ಲಿ ಎಂದು ಹೇಳುವ ಮೂಲಕ ಭವಿಷ್ಯದಲ್ಲಿ ಸಿಎಂ ಆಗುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಈಗಲ್ಲ, ಅದು ಮುಂದೆ. ಭವಿಷ್ಯದಲ್ಲಿ. ಮುಂದಿನ ಅವಧಿಗೆ ಟ್ರೈ ಮಾಡುತ್ತೇನೆ ಎಂದು ನಿಮಗೆ ಹೇಳಿದ್ದೇನಲ್ವಾ..? ಅದು ಮುಂದೆ, ಈಗಲ್ಲ.
ಸತೀಶ್ ಜಾರಕಿಹೊಳಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್​ನಲ್ಲಿ ಮತ್ತೆ CM ಸ್ಥಾನದ ಚರ್ಚೆ.. ಕೆ.ಎನ್​.ರಾಜಣ್ಣ ಹೇಳಿಕೆಗೆ ಪರೋಕ್ಷವಾಗಿ ಬೆಂಬಲ ಸೂಚಿಸಿದ ಜಾರಕಿಹೊಳಿ

https://newsfirstlive.com/wp-content/uploads/2023/06/SATISH_JARKIHOLI-1.jpg

Load More