ರಾಜಸ್ಥಾನ ಚುನಾವಣಾ ರಣತಂತ್ರ
ರಾಜಸ್ಥಾನದಲ್ಲಿ ಮತ್ತೆ ಒಗ್ಗಟ್ಟಿನ ಮಂತ್ರ ಜಪಿಸಿದ ಕಾಂಗ್ರೆಸ್
ಬೇಡಿಕೆಗಳನ್ನ ಈಡೇರಿಸುವಂತೆ 15 ದಿನಗಳ ಗಡುವು
ಕರ್ನಾಟಕ ವಿಧಾಸಬೆ ಚುನಾವಣೆ ಫಲಿತಾಂಶ ಹೊರ ಬರುತ್ತಿದ್ದಂತೆ ಮೊದಲ ಪ್ರಶ್ನೆ ಉದ್ಭವಿಸಿದ್ದು, ಸಿಎಂ ಯಾರು ಅಂತ ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ದೆಹಲಿಗೆ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಇಬ್ಬರನ್ನೂ ಕರೆಸಿ. ಸರಣಿ ಸಭೆಗಳನ್ನ ನೆಡಸಿ. ರಾಜಸ್ಥಾನದ ಮಾದರಿ ಸರ್ಕಾರ ರಚನೆ ಮಾಡಿದ್ರು. ಇದೆಲ್ಲಾ ಗೊತ್ತಿರೋ ವಿಚಾರ. ಆದ್ರೆ, ಮಾದರಿ ಅಂತ ತಗೆದುಕೊಂಡ ರಾಜಸ್ಥಾನ ಆಡಳಿತ ಸದ್ಯ ಬಿಕ್ಕಟಿಗೆ ಸಿಲುಕಿತ್ತು. ಇದೀಗ ಕಾಂಗ್ರೆಸ್ ಹೈಕಮಾಂಡ್ ಗೆಹ್ಲೋಟ್, ಪೈಲಟ್ ಮದ್ಯೆ ಇದ್ದ ಭಿನ್ನಮತದ ಬೆಂಕಿಯನ್ನ ತಣ್ಣಗಾಗಿಸಿದೆ.
ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಕೆಲ ತಿಂಗಳಷ್ಟೇ ಬಾಕಿ ಇದೆ. ಈ ಹೊತ್ತಲ್ಲಿ ಎತ್ತು ಏರಿಗೆ ಎಳೆದ್ರೆ ಕೋಣ ನೀರಿಗೆ ಎಳೆದಿತ್ತು ಎಂಬಂತೆ. ಸಿಎಂ ಅಶೋಕ್ ಗೆಹ್ಲೋಟ್. ಮಾಜಿ ಡಿಸಿಎಂ ಸಚಿನ್ ಪೈಲಟ್ ಮಧ್ಯೆ ಸಮರ ಶುರುವಾಗಿತ್ತು. ರಾಜಸ್ಥಾನ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಚರ್ಚೆಯನ್ನ ಹುಟ್ಟುಹಾಕಿತ್ತು. ಇದೀಗ ರಾಜಸ್ಥಾನದಲ್ಲಿ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟನ್ನು ಬಗೆಹರಿಸುವಲ್ಲಿ ಕಾಂಗ್ರೆಸ್ ಹೈ ಕಮಾಂಡ್ ಸಕ್ಸಸ್ ಆಗಿದೆ.
ರಾಜಸ್ಥಾನ ಸರ್ಕಾರದ ಬಿಕ್ಕಟ್ಟು ಬಗೆಹರಿಸಿದ ಮಲ್ಲಿಕಾರ್ಜನ ಖರ್ಗೆ
ರಾಜಸ್ಥಾನದಲ್ಲಿ ಇದೇ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಮಧ್ಯೆ ಬಹಿರಂಗ ಕುಸ್ತಿ ನಡೆಯುತ್ತಿದೆ. ಆದ್ರೆ ಅಲ್ಲಿ ತಮ್ಮದೇ ಸರ್ಕಾರದ ವಿರುದ್ಧ ಮಾಜಿ ಡಿಸಿಎಂ ಸಚಿನ್ ಪೈಲಟ್ ಜನ ಸಂಘರ್ಷ ಯಾತ್ರೆ ನಡೆಸಿದ್ರು. ಈ ಹಿನ್ನೆಲೆಯಲ್ಲಿ ಇಬ್ಬರ ನಡುವಿನ ಬಿಕ್ಕಟ್ಟು ಶಮನಕ್ಕಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಸೇರಿ ಹೈಕಮಾಂಡ್ ನಾಯಕರು ಅಖಾಡಕ್ಕಿಳಿದಿದ್ರು. ನಿನ್ನೆ ಉಭಯ ನಾಯಕರ ಜೊತೆ ಪ್ರತ್ಯೇಕವಾಗಿ ಸಭೆ ನಡೆಸಿ ಭಿನ್ನಮತವನ್ನ ಶಮನ ಮಾಡಿದ್ದಾರೆ.. ರಾಜಸ್ಥಾನದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಒಗ್ಗಟ್ಟಿನ ಮಂತ್ರ ಜಪಿಸಿದೆ.
ಬೇಡಿಕೆಗಳನ್ನ ಈಡೇರಿಸುವಂತೆ 15 ದಿನಗಳ ಗಡುವು
ಅಂದಹಾಗೆಯೇ ಸಿಎಂ ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದ ಸಚಿನ್ ಪೈಲಟ್ ಮೂರು ಷರತ್ತುಗಳನ್ನ ಇಟ್ಟು ಜನಸಂಘರ್ಷ ಯಾತ್ರೆ ಕೈಗೊಂಡಿದ್ರು. ಈ ಬೇಡಿಕೆಗಳನ್ನ ಈಡೇರಿಸುವಂತೆ 15 ದಿನಗಳ ಗಡುವನ್ನೂ ಕೊಟ್ಟಿದ್ರು. ಇದನ್ನೆಲ್ಲಾ ಗಮನಿಸ್ತಿದ್ದ ಹೈಕಮಾಂಡ್ ನಾಯಕರು ಇಬ್ಬರ ಜಗಳ ತಾರಕಕ್ಕೇರುತ್ತಿದೆ ಅನ್ನೋದನ್ನ ಗ್ರಹಿಸಿತ್ತು. ಬಳಿಕ ಇಬ್ಬರ ನಡುವೆ ಸಂಧಾನಕ್ಕೆ ಕೈಹಾಕಿತ್ತು. ಇದೀಗ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ನಡುವೆ ಪಕ್ಷವು ಸಮನ್ವಯತೆ ಸಾಧಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಾಲ್ಕು ಗಂಟೆಗಳ ಕಾಲ ನಡೆದ ಸಭೆಯ ನಂತರ ವೇಣುಗೋಪಾಲ್ ಸಮ್ಮುಖದಲ್ಲಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್, ಒಟ್ಟಿಗೆ ಕಾಣಿಸಿಕೊಂಡು ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ರಾಜಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವುದು ಖಚಿತ
ಮುಂಬರುವ ರಾಜಸ್ಥಾನ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಎಐಸಿಸಿ ಅಧ್ಯಕ್ಷರು ಹಾಗೂ ರಾಹುಲ್ ಗಾಂಧಿ ಅಶೋಕ್ ಗೆಹ್ಲೋಟ್, ಸಚಿನ್ ಪೈಲಟ್ ಮತ್ತು ರಾಜಸ್ಥಾನ ಕಾಂಗ್ರೆಸ್ ಉಸ್ತುವಾರಿ ಅವರೊಂದಿಗೆ ನಾಲ್ಕು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದ್ರು. ಈ ಚರ್ಚೆಯಲ್ಲಿ ನಾವು ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ನಿರ್ಧರಿಸಿದ್ದೇವೆ. ಇದಕ್ಕೆ ಇಬ್ಬರು ನಾಯಕರು ಒಪ್ಪಿದ್ದಾರೆ. ರಾಜಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವುದು ಖಚಿತ. ರಾಜಸ್ಥಾನ ಕಾಂಗ್ರೆಸ್ ಪಾಲಿಗೆ ಬಲಿಷ್ಠ ರಾಜ್ಯ ಎಂಬುದು ಸ್ಪಷ್ಟವಾಗಿದೆ. ನಾವು ಖಚಿತವಾಗಿ ಗೆಲ್ಲಲಿದ್ದೇವೆ. ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಇಬ್ಬರೂ ಈ ವಿಷಯಗಳ ಪ್ರಸ್ತಾಪವನ್ನು ಒಗ್ಗಟ್ಟಿನಿಂದ ಮತ್ತು ಸರ್ವಾನುಮತದಿಂದ ಒಪ್ಪಿಕೊಂಡಿದ್ದಾರೆ.
ಒಟ್ಟಾರೆ, ರಾಜಸ್ಥಾನ ರಾಜಕೀಯದಲ್ಲಿ ಭುಗಿಲೆದ್ದಿದ್ದ ಅಸಮಾಧಾನ ಸದ್ಯ ತಾರ್ತಿಕ ಅಂತ್ಯ ಕಂಡಿದೆ. ಇದೀಗ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೋಡೆತ್ತಿನಂತೆ ಕಾರ್ಯನಿರ್ವಹಿಸಲು ಸರ್ವಸನ್ನದ್ಧವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ