newsfirstkannada.com

BREAKING: NDA ವಿರುದ್ಧ ಹೋರಾಡಲು ಸಜ್ಜಾದ ಟೀಮ್ ‘INDIA’; ವಿಪಕ್ಷಗಳ ಒಕ್ಕೂಟದ ಸಭೆಯಲ್ಲಿ ಏನಾಯ್ತು?

Share :

18-07-2023

  ಲೋಕಸಭಾ ಚುನಾವಣೆಯಲ್ಲಿ ‘ಚಕ್‌ ದೇ ಇಂಡಿಯಾ’ ಯುದ್ಧ!

  ಒಕ್ಕೂಟ ಭೆಯಲ್ಲಿ 26 ವಿಪಕ್ಷ ನಾಯಕರಿಂದ ಸಾಮೂಹಿಕ ಸಂಕಲ್ಪ

  ಚುನಾವಣೆಯಲ್ಲಿ ಯಾವ್ಯಾವ ರಾಜ್ಯಗಳಲ್ಲಿ ಎಷ್ಟೆಷ್ಟು ಸೀಟು ಹಂಚಿಕೆ

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಣಿಸಲು ವಿರೋಧ ಪಕ್ಷಗಳು ಸಜ್ಜಾಗಿವೆ. ಕರ್ನಾಟಕದಿಂದಲೇ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ವಿರುದ್ಧ ಸಮರ ಸಾರುತ್ತಿರುವ ವಿಪಕ್ಷಗಳ ಒಕ್ಕೂಟ ಇಂದು ಮಹತ್ವದ ಮಾತುಕತೆ ನಡೆಸಿದೆ. ಪ್ರಮುಖವಾಗಿ ವಿಪಕ್ಷಗಳ ಒಕ್ಕೂಟಕ್ಕೆ INDIA ಎಂದು ನಾಮಕರಣ ಮಾಡುವ ಸಾಧ್ಯತೆ ಇದೆ. INDIA ಹೆಸರಿಗೆ ಬಹುತೇಕ ಸದಸ್ಯರ ಒಪ್ಪಿಗೆ ಇದ್ದು TMC ರಾಜ್ಯಸಭಾ ಸದಸ್ಯ ಡೆರೆಕ್ ಒರ್ಬಿನ್ ಚಕ್‌ ದೇ ಇಂಡಿಯಾ ಎಂದು ಟ್ವೀಟ್ ಮಾಡಿದ್ದಾರೆ. ಈ INDIA ಎನ್ನುವುದಕ್ಕೆ ವಿಪಕ್ಷಗಳು ವಿವರಣೆಯನ್ನು ಸಹ ನೀಡಿದ್ದಾರೆ.

I – ಭಾರತೀಯ (Indian)
N – ರಾಷ್ಟೀಯ (National)
D – ಅಭಿವೃದ್ಧಿ (Development)
I – ಒಳಗೊಳ್ಳುವ (Inclusive)
A – ಮೈತ್ರಿ (Alliance)

ಈ ಒಕ್ಕೂಟದ ಸಭೆಯಲ್ಲಿ 26 ವಿಪಕ್ಷಗಳ ಘಟಾನುಘಟಿ ನಾಯಕರು ಭಾಗಿಯಾಗಿದ್ದಾರೆ. ಈ ವೇಳೆ ಒಕ್ಕೂಟದ ಉದ್ದೇಶ ಹಾಗೂ ಗುರಿಗೆ ಸಂಬಂಧಿಸಿದಂತೆ ಸಾಮೂಹಿಕ ಸಂಕಲ್ಪ ಕೈಗೊಳ್ಳಲಾಗ್ತಿದೆ. ದ್ವೇಷ ರಾಜಕಾರಣದ ವಿರುದ್ಧ ಸಾಮೂಹಿಕ ಹೋರಾಟ, ಸಾರ್ವಜನಿಕ ಉದ್ದಿಮೆಗಳ ಸಂರಕ್ಷಣೆಗೆ ನಿರ್ಣಯ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಮಣಿಪುರದ ಗಲಭೆ ವಿಚಾರ ಕೂಡ ಸಾಮೂಹಿಕ ಸಂಕಲ್ಪದ ವೇಳೆ ಪ್ರಸ್ತಾಪ ಮಾಡಲಾಗಿದೆ. ಲೋಕಸಭಾ ಚುನಾವಣೆಯನ್ನು ಒಟ್ಟಾಗಿ ಸ್ಪರ್ಧೆ ಮಾಡುವ ಚರ್ಚೆಯಾಗಿದೆ. ಯಾವ ಯಾವ ರಾಜ್ಯಗಳಲ್ಲಿ ಎಷ್ಟೆಷ್ಟು ಸೀಟು ಹಂಚಿಕೆ ಎಂಬ ನಿರ್ಧಾರ ಮಾಡಲು ಪ್ರತ್ಯೇಕ ಸಮಿತಿ ಮಾಡಲು ತೀರ್ಮಾನಿಸಲಾಗಿೆ. ರಾಜ್ಯವಾರು ಸಮಿತಿ ಮಾಡಿ ಮುಂದಿನ ದಿನಗಳಲ್ಲಿ ಸೀಟು ಹಂಚಿಕೆ ಸಂಬಂಧ ಚರ್ಚಿಸಲಾಗುತ್ತಿದೆ. ಈ ಸಾಮೂಹಿಕ ಸಂಕಲ್ಪಕ್ಕೆ ಸಮ್ಮತಿ ಸೂಚಿಸಿ 26 ವಿಪಕ್ಷಗಳ ನಾಯಕರು ಸಹಿ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

BREAKING: NDA ವಿರುದ್ಧ ಹೋರಾಡಲು ಸಜ್ಜಾದ ಟೀಮ್ ‘INDIA’; ವಿಪಕ್ಷಗಳ ಒಕ್ಕೂಟದ ಸಭೆಯಲ್ಲಿ ಏನಾಯ್ತು?

https://newsfirstlive.com/wp-content/uploads/2023/07/Congress-Meeting-1.jpg

Load More