‘ಚಪ್ಪಲಿ ಸೇವೆ’ ಹಿಂದೆ ಇದೆ ಒಂದು ನಂಬಿಕೆ
2013, 2018ರಲ್ಲಿ ಸೋತಿರುವ ಕಾಂಗ್ರೆಸ್ ಅಭ್ಯರ್ಥಿ
ಡಿ. 3 ರಂದು ಮಧ್ಯಪ್ರದೇಶ ಚುನಾವಣೆ ಫಲಿತಾಂಶ
ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಮುಕ್ತಾಯವಾಗಿದ್ದು, ಫಲಿತಾಂಶಕ್ಕಾಗಿ ಜನ ಕಾಯುತ್ತಿದ್ದಾರೆ. ಚುನಾವಣೆ ಮುಗಿದರೂ ಮತಪ್ರಚಾರದ ವೇಳೆ ನಡೆದ ಕೆಲವು ಘಟನೆಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಅಂತೇಯೇ ರತ್ಲಮ್ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚಪ್ಪಲಿಯಿಂದ ಏಟು ತಿನ್ನುವ ಮೂಲಕ ಆಶೀರ್ವಾದ ಕೋರಿದ ವಿಡಿಯೋ ಒಂದು ಭಾರೀ ವೈರಲ್ ಆಗುತ್ತಿದೆ. ಪರಸ್ ಸಕ್ಲೆಚಾ ದರ್ಗಾ ಒಂದರಲ್ಲಿ ವಾಸಿಸುವ ಫಕೀರ್ನಿಂದ ಚಪ್ಪಲಿ ಏಟು ತಿಂದ ಅಭ್ಯರ್ಥಿ. 2013, 2018ರಲ್ಲಿ ಸೋತಿದ್ದ ಪರಸ್ ಅವರು, ಈ ಬಾರಿಯೂ ಚುನಾವಣೆಯಲ್ಲಿ ನಿಂತಿದ್ದಾರೆ.
ಹಲವು ಬಾರಿ ಸೋತು ಸಣ್ಣವಾಗಿರುವ ಅವರಿಗೆ ಈ ಬಾರಿ ಗೆಲ್ಲಲೇಬೇಕು ಅನ್ನೋ ಹಠಕ್ಕೆ ಬಿದ್ದಿದ್ದಾರೆ. ವಿಡಿಯೋ ತೋರಿಸುವ ಪ್ರಕಾರ, ಹೊಸ ಚಪ್ಪಲಿಯನ್ನು ಹಿಡಿದು ಫಕೀರ್ನ ಬಳಿ ಆಶೀರ್ವಾದ ಪಡೆಯಲು ಬಂದಿದ್ದಾರೆ. ಚಪ್ಪಲಿಯನ್ನು ನೀಡುತ್ತಿದ್ದಂತೆಯೇ, ಫಕೀರ್ ಅಭ್ಯರ್ಥಿಯ ತಲೆ, ಕೆನ್ನೆಗೆ ಚಪ್ಪಲಿಯಿಂದ ಬಾರಿಸಿದ್ದಾರೆ.
ಯಾಕೆ ಹೀಗೆ..?
ದರ್ಗಾದಲ್ಲಿ ವಾಸಿಸುವ ಈ ಫಕೀರ ಅದೃಷ್ಟದ ಪ್ರತೀಕವಂತೆ. ಅದಕ್ಕಾಗಿ ಅನೇಕ ಜನರು ಇವರ ಬಳಿ ಆಶೀರ್ವಾದ ಪಡೆಯಲು ಬರುತ್ತಾರೆ. ಇವರು ಚಪ್ಪಲಿಯಿಂದ ಹೊಡೆದು ಆಶೀರ್ವಾದ ಮಾಡಿದರೆ ಒಳ್ಳೆಯದಾಗುತ್ತದೆ ಅನ್ನೋದು ಜನರ ನಂಬಿಕೆ ಆಗಿದೆ.
ಕಳೆದ ಶುಕ್ರವಾರ ಮಧ್ಯಪ್ರದೇಶ ವಿಧಾನಸಭೆಗೆ ಚುನಾವಣೆ ನಡೆದಿದೆ. ಶೇಕಡಾ 76.22 ರಷ್ಟು ಮತದಾನ ನಡೆದಿದ್ದು, ಮಧ್ಯಪ್ರದೇಶ ಇತಿಹಾಸದಲ್ಲಿ ಅತ್ಯಧಿಕ ವೋಟಿಂಗ್ ಆಗಿದೆ. ಡಿಸೆಂಬರ್ 3 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ