newsfirstkannada.com

ಲೋಕಸಭಾ ಚುನಾವಣೆ; ಕಾಂಗ್ರೆಸ್​ ಮಹತ್ವದ ಸಭೆ; ಕರ್ನಾಟಕದಲ್ಲಿ ಎಷ್ಟು ಸೀಟು ಗೆಲ್ಲೋ ಪ್ಲಾನ್​​ ಗೊತ್ತಾ?

Share :

02-08-2023

  ‘ಲೋಕ’ ಸಮರಕ್ಕೆ ಕಾಂಗ್ರೆಸ್​ ‘ಹೈ’ ಅಲರ್ಟ್​..!

  ರಾಜ್ಯ ನಾಯಕರ ಜತೆ ಖರ್ಗೆ, ರಾಹುಲ್​​ ಸಭೆ

  ಖರ್ಗೆ-ರಾಹುಲ್​ ನೇತೃತ್ವದಲ್ಲಿ ‘ಕೈ’​​ ರಣನೀತಿ!

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್​ ಹೈಕಮಾಂಡ್ ಅಲರ್ಟ್​ ಆಗಿದೆ. ಕರ್ನಾಟಕ ಕಾಂಗ್ರೆಸ್ ನಾಯಕರೊಂದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್​ ಗಾಂಧಿ ಸಭೆ ನಡೆಸಿದ್ದಾರೆ. ಒಟ್ಟು ಎರಡು ಸುತ್ತಿನ ಸಭೆ ನಡೆದಿದ್ದು, ಈ ಸಭೆಯಲ್ಲಿ ನೀಡಲಾಗಿರುವ ಜವಾಬ್ದಾರಿಗೆ ಸಚಿವರ ಟೆನ್ಶನ್​​​ ಹೆಚ್ಚಿಸಿದೆ. ಅಲ್ಲದೆ, ಹಲವು ಸಚಿವರನ್ನ ಲೋಕ ಕದನಕ್ಕೆ ಅಣಿಯಾಗುವಂತೆ ಸೂಚನೆ ಕೂಡ ಹೊರಬಿದ್ದಿದೆ ಎಂದು ಗೊತ್ತಾಗಿದೆ.

ಡೆಲ್ಲಿ ಗದ್ದುಗೆಗಾಗಿ ಕಾಂಗ್ರೆಸ್​​ ಫೈನಲ್​ ಬ್ಯಾಟಲ್​ಗೆ ಇಳಿದಿದೆ. ಹೇಗಾದ್ರೂ ಮಾಡಿ 2004ರ ರಿಸಲ್ಟ್​​ ರಿಪೀಟ್​ ಮಾಡಲು ತಾಲೀಮು ಆರಂಭಿಸಿದೆ. ಕರ್ನಾಟಕ ಅಖಾಡದಲ್ಲಿ ಸಾಧಿಸಿದ ಗೆಲುವು, ಕೈಪಡೆಯ ರಣೋತ್ಸಾಹವನ್ನ ಇಮ್ಮಡಿಸಿದೆ. ಇಲ್ಲಿ ಬಳಸಿದ ಪಂಚತಂತ್ರವೇ ದೇಶದ ಉದ್ದಗಲಕ್ಕೂ ವಿಸ್ತರಿಸುವ ಇರಾದೆ ಹೊಂದಿದೆ. ಇವತ್ತು ಡೆಲ್ಲಿ ಅಂಗಳದಲ್ಲಿ ಲೋಕಸಭೆ ಮಹಾಯುದ್ಧದ ಚಿಂತನ ಮಂಥನ ನಡೆಸಿದೆ.. ಅದಕ್ಕೂ ಮುನ್ನ ಪಂಚರಾಜ್ಯ ಸೆಮಿಫೈನಲ್​​ ಬಾಕಿ ಇದೆ.

ಲೋಕಸಭೆಗೆ ಸಮರಾಭ್ಯಾಸ ಆರಂಭಿಸಿದ ಕೈಪಡೆ!

ಕೇಂದ್ರದಲ್ಲಿ ಶತಾಯಗತಾಯ ಅಧಿಕಾರಕ್ಕೆ ಬರಲು​ ಕಾಂಗ್ರೆಸ್​​ ಪಣತೊಟ್ಟಿದೆ. ಲೋಕಸಭೆ ಗೆಲ್ಲೋದಕ್ಕೆ ಕಾಂಗ್ರೆಸ್​​ ರಣತಂತ್ರ ಹೆಣೆಯುತ್ತಿದೆ. ಈ ಹಿನ್ನೆಲೆ ಇವತ್ತು ಹೈವೋಲ್ಟೇಜ್​ ಸಭೆ ನಡೆದಿದೆ. ಎಂಪಿ ಎಲೆಕ್ಷನ್​ ಕುರಿತು ಶಾಸಕರು, ಸಚಿವರ ಜೊತೆ ಚರ್ಚೆ ನಡೆಸಿದ್ದಾರೆ. ಯಾವ್ಯಾವ ಕ್ಷೇತ್ರದಲ್ಲಿ ಗೆಲ್ಲಲು ಅವಕಾಶವಿದೆ? ಕಡಿಮೆ ಅಂತರದಲ್ಲಿ ಸೋಲುವ ಕ್ಷೇತ್ರಗಳು ಯಾವುವು? ಆ ಕ್ಷೇತ್ರಗಳ ಗೆಲುವಿಗೆ ಏನು ತಂತ್ರಗಾರಿಕೆ? ಯಾರಿಗೆಲ್ಲಾ ಲೋಕಸಭೆ ಟಿಕೆಟ್ ನೀಡಬೇಕೆಂದು ಚರ್ಚೆ ಆಗಿದೆ.

ಕೈಪಡೆ ಹೈವೋಲ್ಟೇಜ್​​​ ಮೀಟಿಂಗ್​​!

ಕಡಿಮೆ ಅಂತರದಲ್ಲಿ ಸೋಲು ಕಂಡ ಕ್ಷೇತ್ರಗಳು ಯಾವುವು? ಲೋಕಸಭೆ ಯಾವ ಕ್ಷೇತ್ರಕ್ಕೆ ಯಾರಿಗೆ ಟಿಕೆಟ್ ನೀಡಬೇಕು ಅನ್ನೋದೇ ಹೆಚ್ಚು ಚರ್ಚೆ ಆಗಿದೆ. ಕ್ಷೇತ್ರಗಳ ಪ್ರಭಾವಿಗಳನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲು ಸೂಚನೆ ಕೂಡ ನೀಡಲಾಗಿದೆ.

ವಿಧಾನಸಭಾ ತಂತ್ರಗಾರಿಕೆ ಇಲ್ಲೂ ರೂಪಿಸಲು ಮುಂದಾಗಿದೆ. ಜಾತಿ, ಪ್ರದೇಶವಾರು ತಂತ್ರಗಾರಿಕೆ ಬದಲಿಸುವ ಬಗ್ಗೆ ಸಭೆ ಆಗಿದ್ದು, ಸಚಿವರಿಗೆ ಹೆಚ್ಚಿನ ಜವಾಬ್ದಾರಿ ನೀಡಲು ಚಿಂತನೆ ನಡೆದಿದೆ ಎಂದು ಗೊತ್ತಾಗಿದೆ. ಶೆಟ್ಟರ್, ಅಮರೇಗೌಡ ಬಯ್ಯಾಪುರಗೆ ಟಿಕೆಟ್​ ನೀಡ್ಬೇಕಾ ಅನ್ನೋ ಚರ್ಚೆ ಆಗಿದೆ. ಅಲ್ಲದೆ, ಗ್ಯಾರಂಟಿಗಳನ್ನ ಶಾಶ್ವತವಾಗಿ ಉಳಿಸಿಕೊಂಡು ಹೋಗಲು ಸೂಚನೆ ನೀಡಲಾಗಿದೆ.

ಇದು ಒಂದು ಹಂತದ ಚರ್ಚೆಯಾದ್ರೆ, 2ನೇ ಪ್ರಮುಖ ಚರ್ಚೆ ಸಚಿವರ ಎದೆಬಡಿತ ಹೆಚ್ಚಿಸಿದೆ. ಸಿಎಂ, ಡಿಸಿಎಂ ಸಹಿತ ಸಚಿವರ ಜೊತೆ ಮೀಟಿಂಗ್ ಆಗಿದ್ದು, ಸಚಿವರ ಹೆಗಲಿಗೆ ಚುನಾವಣೆಯ ಜವಾಬ್ದಾರಿ ನೀಡಲಾಗಿದೆ.

ಸಚಿವರಿಗೆ ಹೆಚ್ಚಿದ ಎದೆಬಡಿತ!

ಜಿಲ್ಲಾ ಉಸ್ತುವಾರಿ ಸಚಿವರ ಹೆಗಲಿಗೆ ಲೋಕಸಭಾ ಎಲೆಕ್ಷನ್​ ಜವಾಬ್ದಾರಿ ಬೀಳಲಿದೆ. ಕೆಲ ಕ್ಷೇತ್ರಗಳಲ್ಲಿ ಸಚಿವರನ್ನ ಟಿಕೆಟ್​​ ನೀಡಿ ಲೋಕ ಎಲೆಕ್ಷನ್​ ಅಖಾಡಕ್ಕಿಳಿಸಲು ಹೈಕಮಾಂಡ್​​​ ಪ್ಲಾನ್​​​ ರೂಪಿಸಿದೆ. ಇನ್ನು, ಸಭೆಯಲ್ಲಿ ಪಕ್ಷದ ಶಾಸಕರ ಅಸಮಾಧಾನ ಬಗ್ಗೆ ಹೈಕಮಾಂಡ್ ನಾಯಕರು ಕ್ಲಾಸ್ ತಗೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಇಲಾಖೆಯಲ್ಲಿನ ಪಾರದರ್ಶಕತೆ ಬಗ್ಗೆ ಸಚಿವರಿಗೆ ಪಾಠ ಆಗಿದೆ.

ಮತ್ತೊಂದು ಪ್ರಮುಖ ಬೆಳವಣಿಗೆಯಲ್ಲಿ ಕೆಪಿಸಿಸಿಯ ಅಮೂಲಾಗ್ರ ಬದಲಾವಣೆಗೆ ಎಐಸಿಸಿ ತಂತ್ರ ರೂಪಿಸಿದೆ. ಕೆಪಿಸಿಸಿಗೆ ಹೊಸ ಕಾರ್ಯಾಧ್ಯಕ್ಷರ ನೇಮಕಕ್ಕೆ ನಿರ್ಧರಿಸಲಾಗಿದೆ. ಐವರ ಪೈಕಿ ಮೂವರು ಸದ್ಯ ಸಚಿವರಾಗಿದ್ದು, ಆ ಸ್ಥಾನಗಳಿಗೆ ನೂತನ ನಾಯಕರ ನೇಮಕ ಸಾಧ್ಯತೆ ಇದೆ. ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಕಷ್ಟ ಅನ್ನೋ ಕಾರಣಕ್ಕೆ ಜವಾಬ್ದಾರಿ ಹಂಚಿಕೆ ಆಗ್ತಿದೆ.

ಇತ್ತೀಚೆಗೆ ಶಾಸಕರ ಪತ್ರ ಸಮರ, ಅನುದಾನ ಕೊರತೆ, ವರ್ಗಾವಣೆ ವಿಚಾರದಲ್ಲಿ ಕೆಲ ಸಚಿವರ ಮೇಲೆ ಮುನಿದಿದ್ದು, ಈ ಬಗ್ಗೆಯೂ ಸಭೆಯಲ್ಲಿ ಮಾಹಿತಿ ಪಡೆದಿದೆ. ರಾಜ್ಯ ನಾಯಕರ ಜೊತೆ ಒಟ್ಟು 2 ಸುತ್ತಿನ ಸಭೆ ನಡೆದಿದೆ. ಸಭೆಯಲ್ಲಿ ರಾಜ್ಯ ಕಾಂಗ್ರೆಸ್​ನಿಂದ 37ಕ್ಕೂ ಹೆಚ್ಚು ನಾಯಕರು ಭಾಗಿ ಆಗಿದ್ರು. ಒಟ್ಟಾರೆ, ವಿಧಾನಸಭೆ ಚುನಾವಣೆ ಬಳಿಕ ಮೊದಲ ಬಾರಿಗೆ ಹೈವೋಲ್ಟೇಜ್​​​ ಸಭೆ ನಡೆಸಿದ್ದು, ಲೋಕಸಭೆ ಚುನಾವಣೆಯಲ್ಲಿ 20 ಸೀಟ್​​ಗೆ ಟಾರ್ಗೆಟ್​​​ ನೀಡಲಾಗಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಲೋಕಸಭಾ ಚುನಾವಣೆ; ಕಾಂಗ್ರೆಸ್​ ಮಹತ್ವದ ಸಭೆ; ಕರ್ನಾಟಕದಲ್ಲಿ ಎಷ್ಟು ಸೀಟು ಗೆಲ್ಲೋ ಪ್ಲಾನ್​​ ಗೊತ್ತಾ?

https://newsfirstlive.com/wp-content/uploads/2023/08/Congress-meeting.jpg

Load More