ಬಿಬಿಎಂಪಿ ಚುನಾವಣೆ ಬಗ್ಗೆ ಮಾತನಾಡಿದ ಕಾಂಗ್ರೆಸ್ ಸಚಿವ
ಮುಂದಿನ 4 ತಿಂಗಳಲ್ಲಿ ಬಿಬಿಎಂಪಿ ಚುನಾವಣೆ ಎಂದ ರಾಮಲಿಂಗಾರೆಡ್ಡಿ
ಇಷ್ಟ ಇರಲಿ ಇಲ್ಲದೇ ಇರಲಿ ಬಿಬಿಎಂಪಿ ಎಲೆಕ್ಷನ್ ನಡೆಯಲಿದೆ ಎಂದ ಸಚಿವ
ಡಿಸೆಂಬರ್ ನಲ್ಲಿ ಬಿಬಿಎಂಪಿ ಚುನಾವಣೆ ನಡೆಯಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಯಾವ ಶಾಸಕರಿಗೆ ಇಷ್ಟ ಇರಲಿ ಇಲ್ಲದೇ ಇರಲಿ ಬಿಬಿಎಂಪಿ ಎಲೆಕ್ಷನ್ ನಡೆಯಲಿದೆ ಎಂದಿದ್ದಾರೆ.
ಬಳಿಕ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, ನಮ್ಮ ಎಲ್ಲ ಶಾಸಕರಿಗೆ ಗೊತ್ತಿದೆ ಎಲೆಕ್ಷನ್ ಆಗುತ್ತೆ ಅಂತ. ನಮ್ಮ ಹೊರಾಂಗಣ ಮೀಟಿಂಗ್ನಲ್ಲೇ ಮುಖ್ಯಮಂತ್ರಿ, ಡಿಸಿಎಂ ಕೂಡ ಡಿಸೆಂಬರ್ನಲ್ಲಿ ಎಲೆಕ್ಷನ್ ಆಗುತ್ತೆ ರೆಡಿಯಾಗಿರಿ ಎಂದಿದ್ದಾರೆ ಎಂದು ಹೇಳಿದ್ದಾರೆ.
ಬಹು ನಿರೀಕ್ಷಿತ ಬಿಬಿಎಂಪಿ ಚುನಾವಣೆಯೂ 225 ರಿಂದ 250 ವಾರ್ಡ್‌ಗಳಿಗೆ ಸೀಮಿತಗೊಳಿಸಿ ಡಿಸೆಂಬರ್ ವೇಳೆಗೆ ನಡೆಯಲಿದೆ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಈಗಾಗಲೇ ರಾಜಕೀಯ ಪಕ್ಷಗಳು 2024ರ ಚುನಾವಣೆ ಮೇಲೆ ಕಣ್ಣಿಟ್ಟು ತಂತ್ರಗಳನ್ನ ರೂಪಿಸುತ್ತಿವೆ. ಈ ಬೆನ್ನಲ್ಲೇ ಸಚಿವ ರಾಮಲಿಂಗಾ ರೆಡ್ಡಿ ಬಿಬಿಎಂಪಿ ಚುನಾವಣೆ ಬಗ್ಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಲೋಕಸಭೆ ಚುನಾವಣೆಗೂ ಮೊದಲೇ ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ರಾಜಕೀಯ ರಂಗು ಪಡೆಯಲಿದೆ.
ಸದ್ಯ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರ ಹೊರಡಿಸಿದ್ದ ಬಿಬಿಎಂಪಿ ವಾರ್ಡ್ ಮರುವಿಗಂಡಣೆ ಪಟ್ಟಿಯನ್ನು ಕೈ ಚೆಲ್ಲಿದೆ. ಡಿಸೆಂಬರ್ನಲ್ಲಿ ಚುನಾವಣೆ ನಡೆಯುವ ಬಗ್ಗೆ ಸಾರಿಗೆ ಸಚಿವರು ಹೇಳಿದ್ದರೂ ಹೊಸ ವಾರ್ಡ್ಗಳ ಮರುವಿಂಗಡಣೆ ಬಳಿಕವೇ ಪಾಲಿಕೆ ಚುನಾವಣೆ ನಡೆಯುವ ಸಾಧ್ಯತೆ ಎದ್ದು ಕಾಣುತ್ತಿದೆ. ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದಾಗ 243 ವಾರ್ಡ್ಗಳು ಒಳಪಟ್ಟಂತೆ ಚುನಾವಣೆ ನಡೆದಿತ್ತು. ಆದರೆ ಈ ಪಟ್ಟಿ ರದ್ದಾಗಿದ್ದು, ಕಾಂಗ್ರೆಸ್ ಸರ್ಕಾರ ಹೊಸದಾಗಿ ಎಷ್ಟು ವಾರ್ಡ್ಗಳನ್ನು ರಚಿಸುತ್ತದೆ ಎಂಬುದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ