newsfirstkannada.com

ಆರಗ ಜ್ಞಾನೇಂದ್ರ ತ್ರಿಪುರ ಸುಂದರ ಅಲ್ಲ.. ಖರ್ಗೆ ಬಣ್ಣದ ಬಗ್ಗೆ ಟೀಕಿಸಿದ್ದಕ್ಕೆ ಸಚಿವ ಶರಣಬಸಪ್ಪ ವಾಗ್ದಾಳಿ

Share :

03-08-2023

    ಕಾಂಗ್ರೆಸ್​​ ನಾಯಕ ಮಲ್ಲಿಕಾರ್ಜುನ ಖರ್ಗೆ ಬಣ್ಣದ ಬಗ್ಗೆ ಆರಗ ಜ್ಞಾನೇಂದ್ರ ಟೀಕೆ

    ಬಿಜೆಪಿ ನಾಯಕ ಆರಗ ಜ್ಞಾನೇಂದ್ರ ವಿರುದ್ಧ ಕಾಂಗ್ರೆಸ್​ ನಾಯಕನ ವಾಗ್ದಾಳಿ

    ಬಿಜೆಪಿಯವರಿಗೆ ಮಾತನಾಡಲು ಏನು ಇಲ್ಲ ಎಂದ ಸಚಿವ ಶರಣಬಸಪ್ಪ

ಯಾದಗಿರಿ: ಮಾಜಿ ಸಚಿವ ಆರಗ ಜ್ಞಾನೇಂದ್ರ ಕಾಂಗ್ರೆಸ್​​ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಬಣ್ಣದ ಬಗ್ಗೆ ಟೀಕೆ ಮಾಡಿದ್ದರು. ಆದರೀಗ ಈ ವಿಚಾರದ ಕುರಿತು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶಾನಾಪುರ ಮಾತನಾಡಿದ್ದಾರೆ.

ಯಾದಗಿರಿಯಲ್ಲಿ  ಮಾತನಾಡಿದ ಶರಣಬಸಪ್ಪ ದರ್ಶಾನಾಪುರ, ಬಿಜೆಪಿಯವರಿಗೆ ಮಾತನಾಡಲು ಏನು ಇಲ್ಲ. ಆರಗ ಜ್ಞಾನೇಂದ್ರ ಏನು ಪರಿಪೂರ್ಣ, ತ್ರಿಪುರ ಸುಂದರ ಅಲ್ಲ. ಭಾರತ ದೇಶದಲ್ಲಿ ನಾವು ಹೆಂಗ ಇರತೀವಿ ಹಂಗೆ ಇರತೀವಿ. ಬೇರೆ ದೇಶದಲ್ಲಿ ಇಂತಹ ವರ್ಣಬೇಧ ನೀತಿ ನಡಿಯುತ್ತೆ. ನಾನು ಇದನ್ನ ನೋಡಿಲ್ಲ, ನೋಡಿ ಈ ಬಗ್ಗೆ ಮಾತನಾಡ್ತಿನಿ ಎಂದು ಹೇಳಿದ್ದಾರೆ.

ಬಳಿಕ ಮಾತನಾಡಿದ ಅವರು, ಬಿಜೆಪಿಯವರು ಹತಾಶರಾಗಿ ಈ ರೀತಿ ಹೇಳಿಕೆ ಕೊಡ್ತಿದ್ದಾರೆ. ಬಿಜೆಪಿ ಅವರಿಗೆ ಇನ್ನೂ ವಿಪಕ್ಷ ನಾಯಕನ ಆಯ್ಕೆ ಮಾಡಲು ಆಗುತ್ತಿಲ್ಲ. ನಾವು ಕೇವಲ 15 ದಿನಗಳಲ್ಲಿ ಮಂತ್ರಿ ಮಂಡಲ ರಚನೆ ಮಾಡಿದ್ದೇವೆ ಎಂದು ಯಾದಗಿರಿಯಲ್ಲಿ ಸಚಿವ ದರ್ಶಾನಾಪುರ ಬಿಜೆಪಿ ನಾಯಕನ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆರಗ ಜ್ಞಾನೇಂದ್ರ ತ್ರಿಪುರ ಸುಂದರ ಅಲ್ಲ.. ಖರ್ಗೆ ಬಣ್ಣದ ಬಗ್ಗೆ ಟೀಕಿಸಿದ್ದಕ್ಕೆ ಸಚಿವ ಶರಣಬಸಪ್ಪ ವಾಗ್ದಾಳಿ

https://newsfirstlive.com/wp-content/uploads/2023/08/sharana-basappa-darshanapur.jpg

Load More