ಬಿಜೆಪಿ ವಿರುದ್ಧವೇ ಗುಡುಗಿದ ಮೈಸೂರು ಸಂಸದ ಪ್ರತಾಪ ಸಿಂಹ..!
ಸಂಸದರ ಆರೋಪಕ್ಕೆ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು
‘ಪ್ರತಾಪಸಿಂಹ ಮಾತಿಗೆ ತೂಕ ಇಲ್ಲ’ -ಸಚಿವ ಹೆಚ್.ಸಿ ಮಹಾದೇವಪ್ಪ
ರಾಜ್ಯ ರಾಜಕಾರಣದಲ್ಲಿ ಹೊಂದಾಣಿಕೆ ಪಾಲಿಟಿಕ್ಸ್ ಸದ್ದು ಮಾಡಿದೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲನ್ನಪ್ಪಿರುವ ಹೊತ್ತಲ್ಲಿ ಸಂಸದ ಪ್ರತಾಪಸಿಂಹ ಸಿಡಿಸಿರುವ ಬಾಂಬ್ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.
ನೇರ, ನಿಷ್ಠುರ ನುಡಿಗಳ ಬಾಂಬ್ ಸಿಡಿಸುವ ಸಂಸದ ಪ್ರತಾಪಸಿಂಹ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಅದು ಬೇರೆ ಯಾರ ಮೇಲೂ ಅಲ್ಲ, ಸ್ವಪಕ್ಷೀಯರ ವಿರುದ್ಧವೇ. ಕಾಂಗ್ರೆಸ್ ಜೊತೆ ಬಿಜೆಪಿಯ ಕೆಲವರು ಹೊಂದಾಣಿಕೆ ಪಾಲಿಟಿಕ್ಸ್ ಮಾಡ್ತಿದ್ದಾರೆ ಅಂತ ಗಂಭೀರ ಆರೋಪ ಮಾಡಿದ್ದಾರೆ. ಸಿ.ಟಿ.ರವಿ ಬಳಿಕ ಪ್ರತಾಪಸಿಂಹ ಕೂಡ ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್ ಬಗ್ಗೆ ಸ್ಫೋಟಕ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಜೊತೆ ಬಿಜೆಪಿ ನಾಯಕರು ಶಾಮೀಲಾದ್ರಾ?
ಕಾಂಗ್ರೆಸ್-ಬಿಜೆಪಿ ನಾಯಕರು ಹೊಂದಾಣಿಕೆ ರಾಜಕೀಯ ಮಾಡಿಕೊಂಡಿರುವ ಸಾಧ್ಯತೆ ಇದ್ದು ಸಿಎಂ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ಮೇಲಿನ ಎಲ್ಲ ಆರೋಪಗಳ ಕುರಿತು ತನಿಖೆ ಮಾಡಿಸಬೇಕು ಅಂತ ಸಂಸದ ಪ್ರತಾಪಸಿಂಹ ಆಗ್ರಹಿಸಿದ್ದಾರೆ. ಎರಡೂ ಪಕ್ಷದ ಕೆಲವರು ಪರಸ್ಪರ ಹೊಂದಾಣಿಕೆ ಮಾಡಿಕೊಂಡಿದ್ದು ಯಾರೂ, ಯಾರ ಮೇಲೆ ಆರೋಪ ಮಾಡದಂತೆ ಗೌಪ್ಯ ಒಡಂಬಡಿಕೆ ಮಾಡಿಕೊಂಡಂತೆ ವರ್ತಿಸ್ತಿದ್ದಾರೆ ಅಂತ ಆರೋಪಿಸಿದ್ದಾರೆ.
ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್ ಬಗ್ಗೆ ಸಿ.ಟಿ.ರವಿ ಜಾಣ ಉತ್ತರ!
ಇನ್ನು ಪ್ರತಾಪಸಿಂಹ ಆರೋಪಗಳ ಬಗ್ಗೆ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದು ಕೆಲವು ಸಂಗತಿಗಳನ್ನು ಮಾಧ್ಯಮಗಳ ಮುಂದೆ ಚರ್ಚೆ ಮಾಡಲು ಆಗಲ್ಲ, ನಮ್ಮ ಪಕ್ಷದ ವೇದಿಕೆಯಲ್ಲಿ ಮಾತಾಡುತ್ತೇವೆ ಅಂತ ಜಾರಿಕೊಂಡಿದ್ದಾರೆ.
ಎಲ್ಲ ರಾಜಕಾರಣಿಗಳು ಒಂದೇ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಕೆಲವರು ಹೊಂದಾಣಿಕೆ ರಾಜಕಾರಣ ಮೊದಲಿಂದಲೂ ಮಾಡಿಕೊಂಡು ಬಂದಿದ್ದಾರೆ. ಅದು ಕೆಲವರು ಇರೆಸ್ಪೆಕ್ಟಿವ್ ಆಫ್ ಪಾರ್ಟಿ. ಎಲ್ಲರೂ ಮಾಡಲ್ಲ. ಯಾರೂ ರಾಜೀ, ರಾಜಕಾರಣ ಮಾಡಲ್ಲ ಅವರ ಮೇಲೆ ಮುಗಿ ಬೀಳುತ್ತಾರೆ. ನನ್ನ ಜವಾಬ್ದಾರಿ ಕಾರಣಕ್ಕೆ ಕೆಲವೊಂದು ವಿಷಯಗಳನ್ನು ನಿಮ್ಮ ಮುಂದೆ ಚರ್ಚೆ ಮಾಡಲು ಆಗಲ್ಲ.
ಸಿ.ಟಿ.ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ
‘ಸಂಸದ ಪ್ರತಾಪಸಿಂಹಗೆ ಮಾಹಿತಿ ಇದ್ದರೆ ಕೊಡಲಿ’
ಸುಖಾಸುಮ್ಮನೆ ಆರೋಪ ಮಾಡಿದ್ರೆ ಆಗಲ್ಲ. ಮಾಹಿತಿ ಇದ್ರೆ ಸ್ಪಷ್ಟಪಡಿಸಿ, ನಾವು ದ್ವೇಷದ ರಾಜಕಾರಣ ಮಾಡಲ್ಲ, ಲೋಪಗಳಿದ್ರೆ ಸರಿಪಡಿಸ್ತೀವಿ ಅಂತ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.
ಪ್ರತಾಪಸಿಂಹ ಮಾತಿಗೆ ಸಚಿವ ಹೆಚ್.ಸಿ.ಮಹದೇವಪ್ಪ ಕಿಡಿ
ಪ್ರತಾಪಸಿಂಹ ಮಾತಿಗೆ ಗಾಂಭೀರ್ಯತೆ ಇಲ್ಲ. ತೂಕ ಇದ್ಯಾ ಇಲ್ಲ. ಯಾರ ಜೊತೆ ಯಾರು ಹೊಂದಾಣಿಕೆ ಮಾಡಿಕೊಂಡ್ರು ಅಂತ ಪ್ರತಾಪಸಿಂಹ ಹೇಳಬೇಕು ಅಂತ ಸಚಿವ ಹೆಚ್.ಸಿ.ಮಹದೇವಪ್ಪ ಸವಾಲು ಹಾಕಿದ್ದಾರೆ.
ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್ ಬಗ್ಗೆ ಸಂಸದ ಪ್ರತಾಪಸಿಂಹ ಮಾಹಿತಿ ಬಹಿರಂಗ ಮಾಡ್ತಾರಾ. ಈ ಬಗ್ಗೆ ಕಾಂಗ್ರೆಸ್ ಸರ್ಕಾರ ತನಿಖೆ ನಡೆಸುತ್ತಾ ಅಂತ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ