newsfirstkannada.com

ಸಚಿವರ ವಿರುದ್ಧ ಬರೆದ ಲೆಟರ್‌ ಬಾಂಬ್‌ಗೆ ಮೆಗಾ ಟ್ವಿಸ್ಟ್‌; ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್ ಹೇಳಿದ್ದೇನು?

Share :

25-07-2023

    ಪ್ರಿಯಾಂಕ್ ಖರ್ಗೆ, ನನ್ನ ಮಧ್ಯೆ ದ್ವೇಷ ತಂದಿಡೋ ಯತ್ನ!

    ಬಿ.ಆರ್ ಪಾಟೀಲ್ ಲೆಟರ್ ಹೆಡ್‌ ಬಳಸಿದವರು ಯಾರು?

    ಬಿಜೆಪಿ ಅವರೇ ಈ ಕೆಲಸ ಮಾಡಿರಬಹುದು ಎಂದ ಪಾಟೀಲ್

ಕಲಬುರಗಿ: ಸಚಿವರ ವಿರುದ್ಧ ಸಿಎಂ ಸಿದ್ದರಾಮಯ್ಯಗೆ ಕಾಂಗ್ರೆಸ್ ಶಾಸಕರು ಬರೆದಿದ್ದಾರೆ ಎನ್ನಲಾದ ಪತ್ರಕ್ಕೆ ಹೊಸ ತಿರುವು ಸಿಕ್ಕಿದೆ. ಆಳಂದ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ನನ್ನ ಹೆಸರಲ್ಲಿ ಸಿಎಂಗೆ ಬರೆದಿರುವ ಪತ್ರ ಫೇಕ್. ಸಚಿವ ಪ್ರಿಯಾಂಕ್‌ ಖರ್ಗೆ ಮತ್ತು ನನ್ನ ನಡುವೆ ದ್ವೇಷ ಹುಟ್ಟಿಸುವ ಸಲುವಾಗಿ ಈ ಕೆಲಸ ಮಾಡಲಾಗಿದೆ. ನನ್ನ ಹೆಸರಲ್ಲಿ ಫೇಕ್ ಲೆಟರ್ ಹೆಡ್ ಸೃಷ್ಟಿ ಮಾಡಿದ್ದು, ನನ್ನ ಸಹಿಯನ್ನು ಕೂಡ ಪೇಸ್ಟ್ ಮಾಡಿದ್ದಾರೆ. ನಾನು ಈ ರೀತಿ ಯಾವುದೇ ಪತ್ರ ಸಿಎಂಗೆ ಬರೆದಿಲ್ಲ. ನನ್ನ ಹಳೆ ಮನೆಯ ವಿಳಾಸ ಹಾಕಿ ಲೆಟರ್ ಬರೆಯಲಾಗಿದೆ. ಸಿಎಂಗೆ ಬರೆದಿರುವ ಪತ್ರ ಫೇಕ್ ಪತ್ರ. ಬಿಜೆಪಿ ಅವರೇ ಈ ಕೆಲಸ ಮಾಡಿರಬಹುದು. ಇದರ ಬಗ್ಗೆ ತನಿಖೆ ನಡೆಸಲು ಎಸ್‌ಪಿ ಅವರಿಗೆ ದೂರು ಕೊಡುತ್ತೇನೆ ಎಂದು ಬಿ.ಆರ್‌ ಪಾಟೀಲ್ ತಿಳಿಸಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ತಂದೆಗೆ ಎಷ್ಟು ಗೌರವ ಕೊಡುತ್ತಾರೋ ಅಷ್ಟೇ ನನಗೂ ಗೌರವ ಕೊಡುತ್ತಾರೆ. ಪ್ರಿಯಾಂಕ್ ಖರ್ಗೆ ಮತ್ತು ನನ್ನ ಮಧ್ಯೆ ದ್ವೇಷ ತಂದಿಡಲು ಈ ರೀತಿ ಫೇಕ್ ಲೆಟರ್ ಮಾಡಿದ್ದಾರೆ. ಅದು ನಾಲ್ಕು ವರ್ಷದ ಹಿಂದಿನ ಹಳೆ ಲೆಟರ್ ಹೆಡ್ ನನ್ನದೇ. ಅದರಲ್ಲಿ ನಾನು ವಾಸವಿದ್ದ ಹಳೇ ಮನೆಯ ವಿಳಾಸ ಇದೆ. ಈಗಿನ ನನ್ನ ಲೆಟರ್ ಹೆಡ್ ಬೇರೆ ಮನೆ ವಿಳಾಸ ಇದೆ‌. ಶಾಸಕಾಂಗ ಸಭೆ ನಡೆಸುವಂತೆ ನಾನು ಸಿಎಂಗೆ ಪತ್ರ ಬರೆದಿರೋ ಲೆಟರ್ ಬೇರೆ ಇದೆ. ಆದ್ರೆ ಹಳೇ ಲೆಟರ್ ಹೆಡ್ ಬಳಸಿ ಫೇಕ್ ಪತ್ರ ಬರೆಯಲಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ಕೊಡುತ್ತೇನೆ ಎಂದು ಕಲಬುರಗಿ ನಗರದಲ್ಲಿ ಆಳಂದ ಶಾಸಕ ಬಿ.ಆರ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: BREAKING: ‘ಮೂರನೇ ವ್ಯಕ್ತಿಗಳ ಮೂಲಕ ಹಣಕ್ಕೆ ಬೇಡಿಕೆ’- ಸಚಿವರ ವಿರುದ್ಧ ಸಿಡಿದೆದ್ದ ಕಾಂಗ್ರೆಸ್ ಶಾಸಕರು

ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ಇನ್ನು, ಶಾಸಕ ಬಿ.ಆರ್ ಪಾಟೀಲ್ ಪತ್ರ ಬರೆದ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಕೂಡ ಪ್ರತಿಕ್ರಿಯಿಸಿದ್ದಾರೆ. ನಾನೂ ಆ ಪತ್ರವನ್ನು ಗಮನಿಸಿದ್ದೇನೆ. ಗುರುವಾರ ಕಾಂಗ್ರೆಸ್ ಶಾಸಕಾಂಗ ಸಭೆ ಕರೆದಿದ್ದೇನೆ. ಅಂದೇ ಈ‌ ಕುರಿತು ಅವರೊಂದಿಗೆ ಚರ್ಚೆ ಮಾಡುತ್ತೇನೆ ಎಂದು ಹಾವೇರಿಯಲ್ಲಿ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಸಚಿವರ ವಿರುದ್ಧ ಬರೆದ ಲೆಟರ್‌ ಬಾಂಬ್‌ಗೆ ಮೆಗಾ ಟ್ವಿಸ್ಟ್‌; ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್ ಹೇಳಿದ್ದೇನು?

https://newsfirstlive.com/wp-content/uploads/2023/07/BR-Patil.jpg

Load More