‘ಎರಡೂವರೆ ವರ್ಷದ ಬಳಿಕ ಸಿಎಂ ಚೇಂಜ್ ಆಗ್ತಾರಾ?
ಡಿ.ಕೆ ಶಿವಕುಮಾರ್ಗೆ ಒಲಿಯುತ್ತಾ ಮುಖ್ಯಮಂತ್ರಿ ಪಟ್ಟ?
ಡಿಕೆಶಿ- ಸಿದ್ದು ಬಲಾಬಲ ಹೇಳಿದ ಶ್ರೀರಾಮುಲು!
ಅಧಿಕಾರಕ್ಕೆ ಬಂದು ಐದು ತಿಂಗಳಾದ್ರೂ ಇದೊಂದು ಗೊಂದಲ ಮಾತ್ರ ಮುಗಿಯುತ್ತಿಲ್ಲ.. ಪವರ್ ಕ್ಲೋಸ್ಡ್ ಡೋರ್ನಲ್ಲಿ ಆದ ಪವರ್ ಶೇರಿಂಗ್ ಬಗ್ಗೆ ಯಾರೂ ತುಟಿಬಿಚ್ಚಿಲ್ಲ. ಆದ್ರೆ ಆಗಾಗ ಡಿಕೆ ಬಣದಿಂದ ಇದೊಂದು ಅಸ್ತ್ರ ಪ್ರಯೋಗ ಆಗ್ತಿದೆ. ಎರಡೂವರೆ ವರ್ಷದ ಬಳಿಕ ಸಿಎಂ ಚೇಂಜ್ ಅನ್ನೋ ಕಿಡಿಹಾರಿ ಸದ್ದು ಮಾಡಿ ಸಂದು ಸೇರ್ತಿದೆ. ಈಗ ರಾಜ್ಯದಲ್ಲಿ ಮತ್ತೆ ಸಿಎಂ ಚೇಂಜ್ ಅನ್ನೋ ಸದ್ದು ಗದ್ದಲ ಎಬ್ಬಿಸಿದೆ.
ಎರಡೂವರೆ ವರ್ಷದ ಬಳಿಕ ಸಿಎಂ ಚೇಂಜ್ ಆಗ್ತಾರಾ?
ಮಂಡ್ಯ ಶಾಸಕ ಗಣಿಗ ರವಿಕುಮಾರ್ ಎಸೆದ ಬಾಂಬ್ ಸಿಎಂ ಚೇಂಜ್ ವಿಚಾರದಲ್ಲಿ ಮತ್ತೆ ಹಲ್ಚಲ್ ಎಬ್ಬಿಸಿದೆ.. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗೋದು ಗ್ಯಾರಂಟಿ ಅಂತ ಕಡ್ಡಿ ಗೀರಿದ್ದಾರೆ. ಎರಡೂವರೆ ವರ್ಷದ ಬಳಿಕ ಡಿಕೆಶಿ ಸಿಎಂ ಆಗ್ತಾರೆ ಅಂತ ಡಿಕೆ ಬಣದ ರವಿ ಕಂಪನ ಎಬ್ಬಿಸಿದ್ದಾರೆ. ಈ ಕಂಪನದ ಮಧ್ಯೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಡಿದ ಅದೊಂದು ಮಾತು ಹಲವು ಸಂಶಯಗಳನ್ನು ಹುಟ್ಟುಹಾಕಿದೆ.
ಮುಂದಿನ ಎರಡೂವರೆ ವರ್ಷ ಪೂರೈಸುತ್ತಿದ್ದಂತೆಯೇ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ. ಇದರಲ್ಲಿ ಯಾವುದೇ ಎರಡು ಮಾತಿಲ್ಲ. ಅವರೂ ಕೂಡ ಪಕ್ಷಕ್ಕಾಗಿ ದುಡಿದಿದ್ದಾರೆ. ಇದರಲ್ಲಿ ಯಾವುದೇ ಗೊಂದಲ ಕೂಡ ಬೇಡ ಎನ್ನುವ ಮೂಲಕ ಗಣಿಗ ರವಿಕುಮಾರ್ ರವಿ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.
ಸಿಎಂ ಚೇಂಜ್ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಜಾಣ ಹೆಜ್ಜೆ!
ಕಲಬುರ್ಗಿ ಏರ್ಪೋರ್ಟ್ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೊಟ್ಟ ಹೇಳಿಕೆ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.. ರಾಜ್ಯದಲ್ಲಿ ಇಬ್ಬರು ಸಿಎಂ ಚರ್ಚೆ ಬಗ್ಗೆ ಕೇಳಿದ ಪ್ರಶ್ನೆಗೆ ಖರ್ಗೆ ಬೊಟ್ಟು ಮಾಡಿದ್ದು ನೇರವಾಗಿ ಸಿಎಂ ಸಿದ್ದರಾಮಯ್ಯರತ್ತ.. ಈ ಪ್ರಶ್ನೆಯನ್ನ ಸಿಎಂ ಸಿದ್ದರಾಮಯ್ಯ ಬರ್ತಾರೆ ಅವರನ್ನೆ ಕೇಳಿ ಅಂತ ಜಾಣ ಉತ್ತರ ನೀಡಿದ್ದಾರೆ.. ಹಾಗಾದ್ರೆ, ಸಿದ್ದರಾಮಯ್ಯರನ್ನ ಖರ್ಗೆ ಬಾಣ ತೂರಿದ್ದೇಕೆ ಅನ್ನೋ ಪ್ರಶ್ನೆಗಳನ್ನ ಹುಟ್ಟುಹಾಕಿದೆ.
ಬಾಗಲಕೋಟೆಯಲ್ಲಿ ಮಾತ್ನಾಡಿದ ಸಚಿವ ಆರ್.ಬಿ.ತಿಮ್ಮಾಪೂರ, ಒಬ್ಬರು, ಇಬ್ರು ಶಾಸಕರು ಸಿಎಂ ಮಾಡಕ್ಕಾಗಲ್ಲ. ಶಾಸಕಾಂಗ ಪಕ್ಷದ ಆಯ್ಕೆ, ಎಐಸಿಸಿ ಅಧ್ಯಕ್ಷರು, ಸೋನಿಯಾ, ರಾಹುಲ್ ಗಮನಕ್ಕೆ ಬಂದು ಆಗುತ್ತೆ ಅಂತ ಹೇಳಿದ್ದಾರೆ.
ರಾಜ್ಯ ಹಸ್ತ ಪಡೆಯಲ್ಲಿ ಮೂರಲ್ಲ, ಆರು ಬಾಗಿಲು!
ಇತ್ತ ಹೊಸಪೇಟೆಯಲ್ಲಿ ಮಾತನಾಡಿದ ಮಾಜಿ ಸಚಿವ ಶ್ರೀರಾಮುಲು, ಈ ಹಿಂದೆ ಕಾಂಗ್ರೆಸ್‌ನಲ್ಲಿ ಎರಡು ಬಾಗಿಲು ಇತ್ತು.. ಇದೀಗ ಆರು ಬಾಗಿಲಾಗಿದೆ.. ಗ್ಯಾರಂಟಿ ಮೂಲಕ ಗೆದ್ದು ಬಂದ ಶಾಸಕರು ಡಿಕೆಶಿ ಮುಖ್ಯಮಂತ್ರಿ ಆಗಲಿ ಅಂತ ಅವರ ಪರ ನಿಂತಿದ್ದಾರೆ ಅಂತ ಹೇಳಿದ್ದಾರೆ. ಒಟ್ಟಾರೆ, ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನ ಆರದ ಬೆಂಕಿ ಆಗಿದೆ.. ಲೋಕಸಭಾ ಚುನಾವಣೆ ಬಳಿಕ ಈ ಬೆಂಕಿ, ಅಗ್ನಿಪರ್ವತವಾಗಿ ಬದಲಾಗೋದು ಖಚಿತ ಎಂದೆ ರಾಜಕೀಯ ಕಾಲಜ್ಞಾನಿಗಳು ಭವಿಷ್ಯ ನುಡಿತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ