newsfirstkannada.com

ಬೆಂಗಳೂರಿಗರೇ ಎಚ್ಚರ.. ಟ್ವಿಟ್ಟರ್ ಇಟ್ಟುಕೊಂಡು ಕಡಲೆ ಬೀಜ ತಿನ್ನುತ್ತಿದ್ದೀರಾ? ಎಂದ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್

Share :

30-08-2023

    ಯಾವುದೇ ಕಾರಣಕ್ಕೂ ಕಾವೇರಿ ನೀರು ಬಿಡುವ ಪ್ರಶ್ನೆಯೇ ಇಲ್ಲ

    ಕೆಆರ್‌ಎಸ್‌ನಿಂದ ಒಂದು ಅಡಿ ನೀರನ್ನು ತಮಿಳುನಾಡಿಗೆ ಬಿಡುವುದಿಲ್ಲ

    ಮೆಟ್ಟೂರು ಡ್ಯಾಂನಲ್ಲಿ ನೀರು ಇದೆಯಾ ಇಲ್ವೋ ವೀಕ್ಷಣೆ ಮಾಡಬೇಕು

ಮಂಡ್ಯ: ಬೆಂಗಳೂರಿಗರೇ ಎಚ್ಚರಗೊಳ್ಳಿ ಎಚ್ಚರಗೊಳ್ಳಿ. ಟ್ವಿಟ್ಟರ್ ಇಟ್ಟುಕೊಂಡು ಕಡಲೆ ಬೀಜ ತಿನ್ನುತ್ತಿದ್ದೀರಾ?. ನೀರಿಲ್ಲ, ನೀರು ಬಿಡಲು ಆಗಲ್ಲ ಎಂದು ಪ್ರಧಾನಿ ಮೋದಿ ಹ್ಯಾಶ್ ಟ್ಯಾಗ್ ಮಾಡಿ ಎಂದು ಕಾಂಗ್ರೆಸ್​​ ಶಾಸಕ ಗಣಿಗ ರವಿಕುಮಾರ್ ಹೇಳಿದ್ದಾರೆ.

ತಮಿಳುನಾಡಿಗೆ ಕಾವೇರಿ ನೀರು ಬಿಡಲು ಪ್ರಾಧಿಕಾರ ಸೂಚನೆ ನೀಡಿದ ವಿಚಾರವಾಗಿ ಮಂಡ್ಯದಲ್ಲಿ ಮಾತನಾಡಿದ ಅವರು, ಬೆಂಗಳೂರು ಜನರಿಗೆ ಟ್ವಿಟರ್ ಅಭಿಯಾನ ನಡೆಸುವಂತೆ ಕರೆಕೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ ನೀರು ಬಿಡುವ ಪ್ರಶ್ನೆ ಇಲ್ಲ. ಈ ಬಗ್ಗೆ ಸಿಎಂ, ಡಿಸಿಎಂ ರನ್ನು ಒತ್ತಾಯಿಸುತ್ತೇನೆ ಎಂದು ಗಣಿಗ ರವಿಕುಮಾರ್ ಹೇಳಿದ್ದಾರೆ.

ಕುಡಿಯುವ ಕಾವೇರಿ ನೀರು ಗಂಟಲಲ್ಲಿ ಇಳಿಯಬೇಕು

ಬೆಂಗಳೂರಿಗರು ಸುಮ್ಮನೆ ಕುಳಿತಿದ್ದಾರೆ. ಸಾಫ್ಟ್‌ವೇರ್, ಹಾರ್ಡ್‌ವೇರ್‌ನವರೇ ನಾವು ನೀರು ಕೊಟ್ಟಿಲ್ಲ ಎಂದರೆ ನಿಮಗೆ ನೀರಿಲ್ಲ. ಎಲ್ಲರೂ ಪ್ರಧಾನ ಮಂತ್ರಿ, ನೀರಾವರಿ ಇಲಾಖೆ ಹಾಗೂ ಪ್ರಾಧಿಕಾರಕ್ಕೆ ಹ್ಯಾಶ್‌‌ಟ್ಯಾಗ್ ಮಾಡಿ. ನೀರಿಲ್ಲ, ನೀರು ಬಿಡಲು ಸಾಧ್ಯವಿಲ್ಲ ಎಂದು ಟ್ಯಾಗ್ ಮಾಡಿ. ಟ್ವಿಟರ್ ಇಟ್ಟುಕೊಂಡು ಕಡಲೆ ಬೀಜ ತಿನ್ನುತ್ತಿದ್ದೀರಾ?. ನೀವು ಕುಡಿಯುವ ಕಾವೇರಿ ನೀರು ಗಂಟಲಲ್ಲಿ ಇಳಿಯಬೇಕು ಅಂದ್ರೆ ಈ ಕೆಲಸ ಮಾಡಿ ಎಂದಿದ್ದಾರೆ.

ಕಾವೇರಿ ಪ್ರಾಧಿಕಾರ ಧೃತರಾಷ್ಟ್ರನ ಪ್ರೇಮ ಮೆರೆಯುತ್ತಿದೆ

ಕಾವೇರಿ ವಿಚಾರವಾಗಿ ಧ್ವನಿ ಎತ್ತದ ಬೆಂಗಳೂರಿಗರ ವಿರುದ್ಧ ರವಿಕುಮಾರ್ ಅಸಮಾಧಾನ ಹೊರಹಾಕಿದ್ದು, ಕನ್ನಡಿಗರು ಸುಮ್ಮನಿದ್ದಾರೆ ಅಂತ ತಮಿಳುನಾಡು ಕಾಲು ಕೆರೆಯುತ್ತಿದೆ. ಬ್ರಿಟಿಷ್ ಆಡಳಿತದಲ್ಲಾದ ಒಪ್ಪಂದಗಳು ಕರ್ನಾಟಕದ ವಿರುದ್ಧ ಇದೆ. ಅದನ್ನ ಇವತ್ತಿಗೂ ತಿದ್ದುವ ಕೆಲಸ ಆಗಿಲ್ಲ. ಹಾಗಾಗಿ ಕರ್ನಾಟಕಕ್ಕೆ ಯಾವಾಗಲೂ ಹಿನ್ನಡೆ ಆಗ್ತಿದೆ. ನಮ್ಮ ಅಧಿಕಾರಗಳು ವಾಸ್ತವಾಂಶ ಮನವರಿಕೆ ಮಾಡಿಕೊಡಲು ಸಮರ್ಥಿದ್ದಾರೆ. ಆದರೆ ಕಾವೇರಿ ಪ್ರಾಧಿಕಾರ ಧೃತರಾಷ್ಟ್ರನ ಪ್ರೇಮ ಮೆರೆಯುತ್ತಿದೆ. ಇವತ್ತಿಗೂ ತಮಿಳುನಾಡು ಪರ ಇದೆ ಎಂದು ಗಣಿಗ ರವಿಕುಮಾರ್ ಹೇಳಿದ್ದಾರೆ.

ನಮ್ಮ ರೈತರಿಗೆ ಒಂದಿಂಚು ನೀರಿಲ್ಲ

ನಂತರ ಮಾತು ಮುಂದುವರಿಸಿದ ಶಾಸಕ ಗಣಿಗ ರವಿಕುಮಾರ್, ನಮ್ಮ ರೈತರಿಗೆ ನೀರಿಲ್ಲ, ಬೆಳೆ ಹಾಕಬೇಡಿ ಎಂದು ತಮಟೆ ಬಡೆದು ಸಾರಿದ್ದೀವಲ್ಲ. ತಮಿಳುನಾಡು ರೈತರಿಗೂ ಇದು ಹೇಳಬೇಕು. ಒಂದು ಅಡಿ ನೀರನ್ನು ತಮಿಳುನಾಡಿಗೆ ಬಿಡುವುದಿಲ್ಲ. ಇಲ್ಲಿ ಕುಡಿಯುವುದಕ್ಕೂ ಸಮಸ್ಯೆ ಇದೆ, ಒಂದಿಂಚು ಬಿಡಲು ಸಾಧ್ಯವಿಲ್ಲ. ಮಡಿಕೇರಿಯಲ್ಲಿ ಮಳೆಯಾದರೆ ಕೆಆರ್‌ಎಸ್‌ನಲ್ಲಿ ಬಂದು ನೋಡ್ತಾರೆ. ಹೊಗೆನಕಲ್, ಶಿಂಷಾ ವ್ಯಾಪ್ತಿಯಲ್ಲಿ ಮಳೆಯಾದರೆ ಮೆಟ್ಟೂರಿಗೆ ಸೇರುತ್ತದೆ. ಅವರ ಹಾಗೇ ವೀಕ್ಷಣೆ ಮಾಡಲು ನಮಗೂ ಅನುಮತಿ ಕೊಡಬೇಕು. ಮೆಟ್ಟೂರು ಡ್ಯಾಂನಲ್ಲಿ ನೀರು ಇದೆಯಾ ಇಲ್ವೋ ವೀಕ್ಷಣೆ ಮಾಡಬೇಕು. ಅಲ್ಲಿಂದ ನೀರು ಯಾಕೆ ಕೊಡಲ್ಲ, ನಮ್ಮ ನೀರೆ ಯಾಕೆ ಬೇಕು. ಮೂರ್ಖತನದ ಪರಮಾವಧಿ. ನಮ್ಮ ರೈತರಿಗೆ ಒಂದಿಂಚು ನೀರಿಲ್ಲ, ನೀರು ಬಿಡಲು ಸಾಧ್ಯವಿಲ್ಲ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿಗರೇ ಎಚ್ಚರ.. ಟ್ವಿಟ್ಟರ್ ಇಟ್ಟುಕೊಂಡು ಕಡಲೆ ಬೀಜ ತಿನ್ನುತ್ತಿದ್ದೀರಾ? ಎಂದ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್

https://newsfirstlive.com/wp-content/uploads/2023/08/ganiga-ravikumart.webp

Load More