ನಿಖಿಲ್‌ಗೆ ಸೋಲಿನ ರುಚಿ ತೋರಿಸಿದ ಇಕ್ಬಾಲ್
ನವ ರಾಮನಗರ ನಿರ್ಮಾಣಕ್ಕೆ ಹೊಸ ಸಂಕಲ್ಪ
ವೋಟ್ ಹಾಕಿದ ಜನ್ರಿಗೆ 'ಕೈ' ಶಾಸಕರ ವಾಗ್ದಾನ
ರಾಮನಗರ: ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಹೀನಾಯವಾಗಿ ಸೋಲನ್ನು ಕಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಒಟ್ಟು 87,690 ಮತಗಳನ್ನು ಭರ್ಜರಿ ಜಯ ಸಾಧಿಸಿದರೆ, ಜೆಡಿಎಸ್ ಪ್ರಬಲ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ 76,975 ಮತಗಳನ್ನು ಗಳಿಸಿ ಸೋಲನ್ನು ಅನುಭವಿಸಿದ್ದರು.
ಇನ್ನು, ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಇಕ್ಬಾಲ್ ಹುಸೇನ್, ನಾನು ಇಂದು ಪ್ರಮಾಣ ವಚನ ಸ್ವೀಕರಿಸಿದ್ದೇನೆ. ಈ ಕ್ಷೇತ್ರದ ಜನರಿಗೆ ಕೋಟಿ ಕೋಟಿ ನಮಸ್ಕಾರಗಳು. ಕಾಂಗ್ರೆಸ್ ಪಕ್ಷಕ್ಕೆ, ನನಗೆ ಸಹಕಾರ ನೀಡಿದವರಿಗೂ ಅಭಿನಂದನೆಗಳು. ಈ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳು ಇವೆ. ಅವುಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಮಾಡುತ್ತೇನೆ. ಜಿಲ್ಲಾ ಪಂಚಾಯಿತಿಯಲ್ಲಿ ನಾನು ಕೆಲಸ ಮಾಡುತ್ತೇನೆ. ಯುವಕರಿಗೆ ಉದ್ಯೋಗ ಕಲ್ಪಿಸಲು ಶ್ರಮಿಸುತ್ತೇನೆ.
ನಗರ ಹಾಗೂ ಗ್ರಾಮಾಂತರದಲ್ಲಿ ವಿಶೇಷ ಆದ್ಯತೆ ನೀಡಿ ಕೆಲಸ ಮಾಡುತ್ತೇನೆ. ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಪತ್ರದ ಮೂಲಕ ಸೂಚನೆ ನೀಡಿ ಸಭೆ ಕರೆದು ಮಾತನಾಡುತ್ತೇನೆ. ನವ ರಾಮನಗರ ನಿರ್ಮಾಣಕ್ಕೆ ಸಂಕಲ್ಪ ಮಾಡುತ್ತೇನೆ. ಕಳೆದ 25 ವರ್ಷದಿಂದ ಸಾಕಷ್ಟು ಹಿಂದೆ ಉಳಿದಿರೋ ನಗರವನ್ನ ಅಭಿವೃದ್ಧಿ ಪಡಿಸುವುದೇ ನನ್ನ ಗುರಿ. ಬಿಜೆಪಿ- ಜೆಡಿಎಸ್ ಸರ್ಕಾರದಲ್ಲಿ ಹಗರಣ, ಲಂಚ ಮುಕ್ತ ಮಾಡಿ ಆಡಳಿತ ನೀಡುತ್ತೇನೆ. ನಾನು ಯಾವತ್ತೂ ಕೂಡ ಲಂಚ ತೆಗೆದುಕೊಳ್ಳುವುದಿಲ್ಲ. ಅಧಿಕಾರದ ಆಸೆ, ಲಂಚದ ಆಸೆ ಇಲ್ಲ. ಜನರ ಸೇವೆಯೇ ನನ್ನ ಗುರಿ. ಜನರು ನನಗೆ ಅವಕಾಶ ಕೊಟ್ಟಿದ್ದಾರೆ ಅದನ್ನ ನಾನು ಸರಿಯಾಗಿ ಬಳಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ