newsfirstkannada.com

16 ರಿಂದ 18 ಜನ ಕಾಂಗ್ರೆಸ್​​​​ಗೆ ಬರಬಹುದು; ಶಾಸಕ ಕೋನರೆಡ್ಡಿ ಅಚ್ಚರಿಯ ಹೇಳಿಕೆ

Share :

27-08-2023

  ನಾನು ಜೋಶಿ ಅವರು ಪಕ್ಷಕ್ಕೆ ಬರ್ತೀನಿ ಅಂದ್ರು ಬೇಡ ಅನ್ನಲ್ಲ

  ಮಹದಾಯಿ ವಿಚಾರವಾಗಿ ಕೇಂದ್ರ ಸರ್ಕಾರ ಅನುಮತಿ ಕೊಡಲಿ

  ಸರ್ಕಾರ ಟೆಂಡರ್ ಕರೆಯದೆ ಹೋದ್ರೆ ನಾನು ಹುಬ್ಬಳ್ಳಿ ವಾಪಸ್ ಕಾಲಿಡಲ್ಲ

ಹುಬ್ಬಳ್ಳಿ: ರಾಜ್ಯಾದ್ಯಂತ ಕಾಂಗ್ರೆಸ್​​ ಆಪರೇಷನ್​ ಮಾಡಲು ಮುಂದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ನವಲಗುಂದ ಶಾಸಕ ಕೋನರೆಡ್ಡಿ ಇನ್ನು 16,18 ಜನ ಕಾಂಗ್ರೆಸ್ ಗೆ ಬರಬಹುದು ಎಂದು ಹೇಳಿದ್ದಾರೆ. ಸದ್ಯ ಈ ಹೇಳಿಕೆ ರಾಜ್ಯಾದ್ಯಂತ ಭಾರೀ ಕುತೂಹಲ ಕೆರಳಿಸಿದೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಶಾಸಕ ಕೋನರೆಡ್ಡಿ, ಶಂಕರಪಾಟೀಲ್ ಮುನೇನಕೊಪ್ಪ ಅವರ ಬಗ್ಗೆ ನನಗೇನೂ ಗೊತ್ತಿಲ್ಲ. ಅದನ್ನೆಲ್ಲ‌ ಪಾರ್ಟಿ ನೋಡುತ್ತೆ. ರಾಜಕೀಯ ಬೆಳವಣಿಗೆ ಏನು ನಡೆಯುತ್ತೆ ನೋಡಬೇಕು. ನಾನು ಜೋಶಿ ಅವರು ಪಕ್ಷಕ್ಕೆ ಬರ್ತೀನಿ ಅಂದ್ರು ಬೇಡ ಅನ್ನಲ್ಲ. ಮುನೇನಕೊಪ್ಪ ಅವರ ಪಕ್ಷಕ್ಕೆ ಸೇರೋ ಬಗ್ಗೆ ಚರ್ಚೆ ಆಗಿಲ್ಲ. ಜೋಶಿ ಸಾಹೇಬರು ಪಕ್ಷಕ್ಕೆ ಬರ್ತೀನಿ ಅಂದ್ರು ಬೇಡ ಅನ್ನಲ್ಲ. ಪಕ್ಷ ತೀರ್ಮಾನ ಮಾಡತ್ತೆ. ಕಾದು ನೋಡಣ ಪಟ್ಟಿ ಮಾಡಿದ್ದಾರೆ. 16.18 ಜನ ಬರಬಹುದು ಎಂದು ಹೇಳಿದ್ದಾರೆ.

ನಂತರ ಮಾತು ಮುಂದುವರಿಸಿದ ಅವರು, ಕೇಂದ್ರ ಸರಕಾರಕ್ಕೆ ಪ್ರೋಟೋಕಾಲ್ ಇಲ್ಲ. ಧಾರವಾಡ ಜಿಲ್ಲೆಯಲ್ಲಿ ನಮ್ಮ ಉಸ್ತುವಾರಿ ಸಚಿವರನ್ನೇ ಕಾರ್ಯಕ್ರಮಕ್ಕೆ ಕರೆಯಲ್ಲ. ಜೋಶಿ ಸಾಹೇಬರೇ ಊರಿಗೆ ಬಂದವರು ನೀರಿಗೆ ಬರಬೇಕು. ಲೋಕಸಭೆ ಚುನಾವಣೆ ಇದೆ. ಮಹದಾಯಿ ಯೋಜನೆ ಮಾಡಿಸಿಕೊಡಿ. ನಾನು ನಿಮಗೆ ಧನ್ಯವಾದ ಹೇಳ್ತೀನಿ ಎಂದು ಕೋನರೆಡ್ಡಿ ಹೇಳಿದ್ದಾರೆ.

ಮಹದಾಯಿ ವಿಚಾರವಾಗಿ ಕೇಂದ್ರ ಸರ್ಕಾರ ಅನುಮತಿ ಕೊಡಲಿ. ನಮ್ಮ ಸರ್ಕಾರ ಟೆಂಡರ್ ಕರೆಯದೆ ಹೋದ್ರೆ ನಾನು ಹುಬ್ಬಳ್ಳಿ ವಾಪಸ್ ಕಾಲಿಡಲ್ಲ. ನನಗೆ ಆ ತಾಕತ್ ಇದೆ, ಕೇಂದ್ರ ಸರ್ಕಾರ ಅನುಮತಿ ಕೊಟ್ರೆ, ನಮ್ಮ ಸರ್ಕಾರದಿಂದ ಟೆಂಡರ್ ಕರೆಸುತ್ತೇನೆ ಎಂದು ಶಾಸಕ ಕೋನರೆಡ್ಡಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

16 ರಿಂದ 18 ಜನ ಕಾಂಗ್ರೆಸ್​​​​ಗೆ ಬರಬಹುದು; ಶಾಸಕ ಕೋನರೆಡ್ಡಿ ಅಚ್ಚರಿಯ ಹೇಳಿಕೆ

https://newsfirstlive.com/wp-content/uploads/2023/08/Kona-reddy.jpg

Load More