ತಾಕತ್ ಇದ್ದರೆ ಪ್ರೂಫ್ ತೋರಿಸು ಎಂದ ಪ್ರದೀಪ್ ಈಶ್ವರ್
ಆರೋಪ ಪ್ರೂವ್ ಆದ್ರೆ ಮಲ್ಯ ತರ ದೇಶ ಬಿಟ್ಟು ಹೋಗ್ತಾರಾ?
ನಿಮಗೆ ನಾಚಿಕೆ, ಮಾನ, ಮರ್ಯಾದೆ ಏನಾದರೂ ಇದ್ಯಾ?
ಚಿಕ್ಕಬಳ್ಳಾಪುರ: ಮಾಜಿ ಸಚಿವ ಡಾ.ಕೆ ಸುಧಾಕರ್ ಹಾಗೂ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ನಡುವಿನ ಜಿದಾಜಿದ್ದಿನ ರಾಜಕೀಯ ಸಮರ ರೋಚಕ ಘಟ್ಟ ತಲುಪುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ನಿನ್ನೆ ಸುಧಾಕರ್ ಅವರು ತೀವ್ರ ವಾಗ್ದಾಳಿ ನಡೆಸಿದ ಬಳಿಕ ಪ್ರದೀಪ್ ಈಶ್ವರ್ ತಿರುಗೇಟು ಕೊಟ್ಟಿದ್ದಾರೆ. ನಮ್ಮ ಹುಡುಗರು ದಾಳಿ ಮಾಡಿ ಹಲ್ಲೆ ಮಾಡಿದ್ದಾರೆ ಅಂತಾ ಹೇಳಿದ್ದೀರಾ. ಸುಧಾಕರ್ ನಿಮಗೆ ತಾಕತ್ ಇದ್ದರೆ ಪ್ರೂಫ್ ತೋರಿಸು ನೋಡೋಣ. ಆ ಹುಡುಗ ನಿನ್ನ ವಿರುದ್ಧ ಮಾತನಾಡಿದ ಅಂತಾ ಜೈಲಿಗೆ ಕಳಿಸಿದ್ರಿ. ಈಗ ಅದೇ ಹುಡುಗನನ್ನ ಇಟ್ಟುಕೊಂಡು ಧರಣಿ ಮಾಡ್ತಿದ್ದೀರಿ. ಆತನಿಗೆ ದೈಹಿಕ ಹಾಗೂ ಮಾನಸಿಕ ಹಲ್ಲೆ ಆಗಿತ್ತು ಅಂತೀರಲ್ಲಾ ಸುಧಾಕರ್ ನಿಮಗೆ ನಾಚಿಕೆ, ಮಾನ, ಮರ್ಯಾದೆ ಏನಾದರೂ ಇದ್ಯಾ. ದೈಹಿಕ ಹಲ್ಲೆ ಆಗಿರೋದನ್ನ ತೋರಿಸಲಿ ನೋಡೋಣ ಎಂದು ಖಡಕ್ ಸವಾಲು ಹಾಕಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಗೂಂಡಾ ರಾಜಕೀಯ ಮಾಡಿದ್ದು ಯಾರು? ನನ್ನ ಅವಧಿಯಲ್ಲಿ ಯಾವನಾದ್ರೂ ಬಾಲ ಬಿಚ್ಚಲಿ ನೋಡೋಣ. ಅಧಿಕಾರದಲ್ಲಿ ಇಲ್ಲದೇ ಇದ್ದಾಗಲೇ ನಾನು ಯಾರ ಮಾತೂ ಕೇಳಲಿಲ್ಲ ಸುಧಾಕರ್, ನಿಮ್ಮ ಫಾಲೋಯರ್ಸ್‌ಗೆ ಹೇಳಿ ಬಾಲ ಬಿಚ್ಚಿದ್ರೆ ಕಟ್ ಮಾಡ್ತೀವಿ ಅಷ್ಟೇ ಎಂದು ಶಾಸಕ ಪ್ರದೀಪ್ ಈಶ್ವರ್ ಎಚ್ಚರಿಸಿದ್ದಾರೆ. ಕರ್ಮಾ ಈಸ್ ಬ್ಯಾಕ್ ಸರ್.. ಒಂದು ವರ್ಷದ ಹಿಂದೆ ನಾನು ವಾಟ್ಸಾಪ್ ವೀಡಿಯೋ ಮಾಡ್ತಿದ್ದೆ ಆಗ ಸುಧಾಕರ್ ಶಾಸಕರಾಗಿದ್ದರು. ಈಗ ಅವರು ವಾಟ್ಸಾಪ್ ವೀಡಿಯೋ ಮಾಡ್ತಿದ್ದಾರೆ ನಾನು ಶಾಸಕನಾಗಿದ್ದೇನೆ. ಆಗ ಆತ ಫೋನೇ ಎತ್ತುತ್ತಿರಲಿಲ್ಲ, ಈಗ ಆತನೇ ವಾಟ್ಸಾಪ್ ವೀಡಿಯೋ ಗ್ರೂಪ್‌ನಲ್ಲಿ ಶೇರ್ ಮಾಡ್ತಾರೆ. ಚಿಕ್ಕಬಳ್ಳಾಪುರದಲ್ಲಿ ನನಗೆ ಐದು ಸಾವಿರ ವೋಟಾದ್ರೂ ಬರುತ್ತೆ. ಡಾ.ಕೆ. ಸುಧಾಕರ್ ಮುಖ ನೋಡಿ ಐನೂರು ವೋಟು ಬರಲ್ಲ. ಸುಧಾಕರ್ ಹುಟ್ಟೂರಲ್ಲೇ ಆತನಿಗೆ ಗೌರವ ಮರ್ಯಾದೆ ಇಲ್ಲ. ಕಳೆದ ಚುನಾವಣೆಯಲ್ಲಿ ಇರೋ ಬರೋ ವೋಟುಗಳು ನನಗೆ ಬಂದಿವೆ. ನೀವ್ಯಾರು ನೋಡಿರದ ಡಾ.ಕೆ. ಸುಧಾಕರ್‌ನನ್ನು ನಾನು ನೋಡಿದ್ದೇನೆ. ನೀವು ಯಾರು ಸುಧಾಕರ್‌ನನ್ನು ನಂಬಿಕೊಳ್ಳಬೇಡಿ. ಸುಧಾಕರ್‌ನನ್ನು ನಂಬಿಕೊಂಡ್ರೆ ನಿಮಗೆ ಚಿಪ್ಪೆ ಗತಿ ಎಂದು ಪ್ರದೀಪ್ ಈಶ್ವರ್ ಹೇಳಿದರು.
‘ಕಾಂಗ್ರೆಸ್ ಲೋಕಸಭಾ ಟಿಕೆಟ್‌ಗೆ ಸುಧಾಕರ್ ಸರ್ಕಸ್’
ಡಾ.ಕೆ ಸುಧಾಕರ್ ಚಿಕ್ಕಬಳ್ಳಾಪುರದ ಕೆಲವು ಕಾಂಗ್ರೆಸ್ ಮುಖಂಡರನ್ನು ಕರೆದುಕೊಂಡು ಹೋಗಿ ಎಂಪಿ ಟಿಕೆಟ್ ಕೇಳಿದ್ದಾರೆ. ಇಬ್ಬರು ಮೂವರ ಭೇಟಿಗೆ ಸಮಯ ಕೇಳಿದ್ದಾರೆ. ಯಾರೋ ಒಬ್ಬರು ಸಿಕ್ಕಿದ್ದಾರೆ ಇನ್ನಿಬ್ಬರು ಸಿಕ್ಕಿಲ್ಲ. ನಮ್ಮ ಪಕ್ಷದಲ್ಲಿ ಒಂದು ಶಿಸ್ತು ಇದೆ. ಜಿಲ್ಲಾ ಉಸ್ತುವಾರಿ ಶಾಸಕರ ಒಪ್ಪಿಗೆ ಇಲ್ಲದೆ ಯಾರಿಗೂ ಟಿಕೆಟ್ ಕೊಡಲ್ಲ. ಪ್ರಯತ್ನ ಮಾಡೋದ್ರಲ್ಲಿ ತಪ್ಪೇನಿಲ್ಲ ಸುಧಾಕರ್‌ಗೆ ಕೆಲಸ ಇಲ್ಲವಲ್ಲ. ಯಾಕೆ ಟಿಕೆಟ್‌ಗೆ ಟ್ರೈ ಮಾಡ್ತಿದ್ದಾರೆ ಅಂದ್ರೆ ಕೋವಿಡ್ ಹಗರಣದ ಬಗ್ಗೆ ಅವರಿಗೆ ಭಯ ಬಂದುಬಿಟ್ಟಿದೆ. ಕೋವಿಡ್ ತನಿಖೆ ಸ್ವಲ್ಪ ನ್ಯೂಟ್ರಲ್ ಆಗಲಿ ಅಂತಾ ಟ್ರೈ ಮಾಡ್ತಿದ್ದಾರೆ ಎಂದು ಪ್ರದೀಪ್ ಈಶ್ವರ್ ಕಿಡಿಕಾರಿದ್ದಾರೆ. 28 ದಿನ ಲಂಡನ್‌ನಲ್ಲಿ ಇದ್ರಲ್ಲಾ ಯಾಕೆ ಅಂತಾ ಅವರಿಗೆ ಕೇಳಿ. ನಾಳೆ ಆರೋಪ ಪ್ರೂವ್ ಆದ್ರೆ ಮಲ್ಯ ತರ ದೇಶ ಬಿಟ್ಟು ಹೋಗೋಕಾ? ಲಂಡನ್‌ನಲ್ಲೇ ಸೆಟ್ಲ್ ಆಗ್ತಾರಾ ಅನ್ನೋ ಮಾತುಗಳು ಕೇಳಿಬಂದಿದೆ. ಸುಧಾಕರ್ ಚಿಕ್ಕಬಳ್ಳಾಪುರ ಬಿಟ್ಟು ಬೇರೆ ಕ್ಷೇತ್ರ ಹುಡುಕಿಕೊಂಡರೆ ಒಳ್ಳೆಯದು. ಇದೇ ಕ್ಷೇತ್ರದ ಬಗ್ಗೆ ನಂಬಿಕೆ ಇಟ್ಟುಕೊಂಡರೆ ಸುಧಾಕರ್ ಮತ್ತೆ ಸೋಲ್ತಾರೆ ಎಂದು ಪ್ರದೀಪ್ ಈಶ್ವರ್ ಭವಿಷ್ಯ ನುಡಿದಿದ್ದಾರೆ.
ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ನಿನ್ನೆ ಎಸ್ಪಿ ಕಚೇರಿ ಬಳಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಪ್ರತಿಭಟನೆ ನಡೆಸಿದ್ದರು. ಇದಕ್ಕೂ ಟಾಂಗ್ ಕೊಟ್ಟ ಪ್ರದೀಪ್ ಈಶ್ವರ್, ನಿನ್ನೆ ಎಸ್‌ಪಿ ಹತ್ತಿರ ನನ್ನ ಬಗ್ಗೆ ನನ್ನ ಕುಟುಂಬ ನನ್ನ ತಾಯಿ ಬಗ್ಗೆ ಏನೇನೋ ಬೈದಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಅವರು ಆ ರೀತಿ ಮಾತನಾಡಿದ್ರೆ ನನ್ನ ಏಕಾಗ್ರತೆಯನ್ನ ಕುಗ್ಗಿಸಲಾಗಲ್ಲ. ನಾನೇನಾದ್ರೂ ಸೋತಿದ್ದರೆ ಕೆಪಿಸಿಸಿ ಕಚೇರಿಯಲ್ಲಿ ಕಸ ಗುಡಿಸುತ್ತಿದ್ದೆ. ಈಗ ಸುಧಾಕರ್ ಸೋತಿದ್ದಾರೆ ಅವರು ಬಿಜೆಪಿ ಆಫೀಸ್‌ನಲ್ಲಿ ಕೆಲಸ ಮಾಡ್ತಾರಾ? ಕಾಂಗ್ರೆಸ್ ಪಕ್ಷದವರೂ ಇವರನ್ನ ಸೇರಿಸಲ್ಲ ಬಿಜೆಪಿಯವರೂ ಇಟ್ಟುಕೊಳಲ್ಲ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕರ್ಮ ಈ ಬ್ಯಾಕ್ ಸಾರ್.. ನಾಚಿಕೆ, ಮಾನ, ಮರ್ಯಾದೆ ಇದ್ಯಾ. ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಖಡಕ್ ಡೈಲಾಗ್. #NewsFirstKannada #pradeepeshwar #Drksudhakar #Chikkaballapur @DrSudhakar_ @eshwar_pradeep pic.twitter.com/I0krapgsu0
— NewsFirst Kannada (@NewsFirstKan) July 29, 2023