ಉಪಾಧ್ಯಕ್ಷರ ನಡೆ ಮೇಲೆ ಶಿವಲಿಂಗೇಗೌಡ ಕ್ಯೂಟ್ ಕೋಪ
‘ನಗಲಾರದೇ, ಅಳಲಾರದೇ’ ಪೇಚಿಗೆ ಸಿಲುಕಿದ ಇತರೆ ಸದಸ್ಯರು
ಶಿವಲಿಂಗೇಗೌಡರ ಕೋಪಕ್ಕೆ ಥಂಡಾ ಹೊಡೆದ ರುದ್ರಪ್ಪ ಲಮಾಣಿ
ವಿಧಾನಸಭೆ ಕಲಾಪದ ವೇಳೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಡೆಪ್ಯುಟಿ ಸ್ಪೀಕರ್ ವಿರುದ್ಧ ಕೋಪಿಸಿಕೊಂಡ ಪ್ರಸಂಗ ನಡೆಯಿತು. ಸ್ಪೀಕರ್ ಯು.ಟಿ. ಖಾದರ್ ಅನುಪಸ್ಥಿತಿಯಲ್ಲಿ ಕಲಾಪವನ್ನು ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಸ್ಪೀಕರ್ ಆಗಿ ನಡೆಸಿಕೊಡುತ್ತಿದ್ದರು.
ಕಲಾಪ ಆರಂಭವಾದ ಬೆನ್ನಲ್ಲೇ, ಶಿವಲಿಂಗೇಗೌಡ ರಾಜ್ಯದ ಜ್ವಲಂತ ಸಮಸ್ಯೆ ಹಾಗೂ ಹಿಂದಿನ ಬಿಜೆಪಿ ಸರ್ಕಾರದ ವೈಫಲ್ಯಗಳ ಬಗ್ಗೆ ತಮ್ಮದೇ ದಾಟಿಯಲ್ಲಿ ಛಾಟಿ ಬೀಸುತ್ತಿದ್ದರು. ಆಗ ಸ್ಪೀಕರ್ (ಡೆಪ್ಯುಟಿ ಸ್ಪೀಕರ್) ಮಧ್ಯ ಪ್ರವೇಶ ಮಾಡಿ, ‘ಶಿವಲಿಂಗೇಗೌಡ ಅವರೇ, ನಿಮ್ಮ ಭಾಷಣ ಮುಗಿಸಲು ಇನ್ನೂ ಎಷ್ಟು ಹೊತ್ತು ಬೇಕು..?’ ಎಂದು ಪ್ರಶ್ನೆ ಮಾಡಿದರು.
ಸ್ಪೀಕರ್ ಈ ಪ್ರಶ್ನೆ ಕೇಳ್ತಿದ್ದಂತೆಯೇ, ಕೋಪಿಸಿಕೊಂಡ ಶಿವಲಿಂಗೇಗೌಡ.. ‘ನಾನು ಎಸೆದು ಹೋಗಿ ಬಿಡ್ತೀನಿ’ ಅಂತಾ ಭಾಷಣದ ಪ್ರತಿಯನ್ನು ಟೇಬಲ್ ಮೇಲೆ ಎಸೆದರು. ಅಷ್ಟಕ್ಕೂ ಸುಮ್ಮನಾಗದ ಶಾಸಕರು, ‘ಹೋಗ್ರಿ, ರೀ.. ಇಂಥ ಭಾಷಣ ಮಾಡಬೇಕಾದ್ರೆ.. ಬರೀ 10-15 ನಿಮಿಷ ಕೊಟ್ಟು ಇಡೀ ಅಸೆಂಬ್ಲಿಯನ್ನು ಹಾಳು ಮಾಡಿ ಹಾಕಿದ್ರಿ’ ಎಂದು ಸ್ಪೀಕರ್ ಖುರ್ಚಿ ಹತ್ತಿರ ಕೈತೋರಿಸಿದರು.
ಅದಕ್ಕೆ ಸ್ಪೀಕರ್.. ‘ಆಯ್ತು, ಇನ್ನೂ ಎಷ್ಟು ಹೊತ್ತು ಬೇಕು..?’ ಅಂತಾ ಮರು ಪ್ರಶ್ನೆ ಮಾಡಿದ್ರು.. ಆಗ ಮತ್ತಷ್ಟು ಗರಂ ಆದ ಶಿವಲಿಂಗೇಗೌಡ, ‘ಒಂದು ನಿಮಿಷ.. ಎರಡು ನಿಮಿಷ ಯಾಕೆ ಕೊಡಬೇಕು..?’ ಎಂದು ಅಸಮಾಧಾನ ಹೊರ ಹಾಕಿದ್ರು. ‘ಇಲ್ಲ, ಇಲ್ಲ ಎಲ್ರೂ ಮಾತನಾಡ್ಬೇಕು ಎಂದು..’ ಸ್ಪೀಕರ್ ಸಮಜಾಯಿಸಿ ನೀಡಿದರು.
ಅಷ್ಟಕ್ಕೂ ಸುಮ್ಮನಾಗದ ಶಿವಲಿಂಗೇಗೌಡ, ‘ನೀವು ಕೊಟ್ಕೊಳ್ರಿ.. (ಸಮಯ). ಇಲ್ಲಿ ಕೂತ್ಕೊಳ್ಳೋಕೂ ಸ್ವಲ್ಪ ಘನತೆ, ಗೌರವ ಬೇಕು. ಹರಟೆ ಹೊಡೆಯೋರಿಗೆಲ್ಲ ಗಂಟೆಗಟ್ಟಲೇ ಮಾತನಾಡಲು ಅವಕಾಶ ಕೊಡ್ತೀರಿ.. ನಾನು ಇಡೀ ರಾಜ್ಯದ ಇತಿಹಾಸ ಹೇಳ್ತಿದ್ರೆ.. ಇನ್ನೆಷ್ಟು ಹೊತ್ತು ಮಾತಾಡ್ತೀರಿ..? ಅಂತಾ ಕೇಳ್ತೀರಿ..’ ಎಂದು ಆಕ್ರೋಶ ಹೊರಹಾಕಿದರು.
ಆಗ ಉಳಿದ ಸದಸ್ಯರು, ‘ಇರಲಿ ಬಿಡಿ.. ಕೋಪ ಮಾಡಿಕೊಳ್ಳಬೇಡಿ ಅಣ್ಣಾ’ ಎಂದು ಸಮಾಧಾನ ಮಾಡಿದರು. ಆಗಲೂ ಏರುಧ್ವನಿಯಲ್ಲೇ ಮಾತನಾಡಿದ ಶಿವಲಿಂಗೇಗೌಡ..‘ಒಂದು ವಾರದಿಂದ ಮಾತಾಡಲು ಅವಕಾಶ ಕೇಳ್ತಿದ್ದೇನೆ. ಕೊಡ್ತಾನೇ ಇಲ್ಲ. ಅವತ್ತಿಂದ ಮಾತನಾಡಲು ಅವಕಾಶ ಕೊಡ್ದೇನೆ ಹೋದ್ರು..’ ಅಂತಾ ಮತ್ತೆ ಮೇಜಿನ ಮೇಲೆ ಭಾಷಣದ ಪ್ರತಿಯನ್ನು ಇಟ್ಟು ಕಿಡಿಕಾರಿದರು.
ಮತ್ತೆ ಶಿವಲಿಂಗೇಗೌಡರ ಸಮಾಧಾನಕ್ಕೆ ಇತರೆ ಸದಸ್ಯರು ಮಾತನಾಡಿದರು. ಆಗ ಮಧ್ಯಪ್ರವೇಶಿಸಿದ ಸ್ಪೀಕರ್, ‘ಇನ್ನು ಹತ್ತು ನಿಮಿಷ ಮಾತನಾಡಿ ಗೌಡ್ರೇ..’ ಅಂತಾ ಹೇಳಿಬಿಟ್ರು. ಇದರಿಂದ ಮತ್ತಷ್ಟು ಕೆರಳಿದ ಶಿವಲಿಂಗೇಗೌಡ.. ‘ನೋಡ್ರಿ..’ ಎಂದು ಸ್ಪೀಕರ್ ಖುರ್ಚಿಯನ್ನು ಗುರಾಯಿಸಿದರು. ಆಗ ಇಡೀ ಸದನ ಜೋರಾಗಿ ನಕ್ಕಿತು.
ಡೆಪ್ಯುಟಿ ಸ್ಪೀಕರ್ ವಿರುದ್ಧ ಕೋಪಿಸಿಕೊಂಡ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ #Shivalingegowda #karnatakasession #KarnatakaAssembly pic.twitter.com/P9tjC57O8x
— NewsFirst Kannada (@NewsFirstKan) July 20, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ