ರೀ ಡಾಕ್ಟ್ರೇ.. ರೀ ಡಾಕ್ಟ್ರೇ.. ನಿಮ್ಗೆ ತಾಕತ್ ಇದ್ರೆ ಗೆದ್ದು ತೋರಿಸ್ರೀ
ಲೋಕಸಭಾ ಚುನಾವಣೆವರೆಗೂ ಇದನ್ನ ಬಿಡಲ್ಲ, ಹರಿತೀವಿ
ಶಿವಲಿಂಗೇಗೌಡರಿಗೆ ಲಕ್ಷ್ಮಣ ಸವದಿ, ಸಿದ್ದರಾಮಯ್ಯ ಸಾಥ್
ವಿಧಾನಸಭೆಯಲ್ಲಿ ಇವತ್ತು ಅರಸೀಕೆರೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಹಾಗೂ ಮಲ್ಲೇಶ್ವರಂ ಬಿಜೆಪಿ ಶಾಸಕ ಡಾ.ಸಿ. ಎನ್ ಅಶ್ವತ್ಥ್ ನಾರಾಯಣ ಅವರ ಮಧ್ಯೆ ಸಖತ್ ಟಾಕ್ ಫೈಟ್ ನಡೆದಿದೆ. ಬಿಜೆಪಿ ನಾಯಕರ ವಿರುದ್ಧ ತಿರುಗಿಬಿದ್ದ ಶಿವಲಿಂಗೇಗೌಡ, ರೀ ಡಾಕ್ಟ್ರೇ.. ರೀ ಡಾಕ್ಟ್ರೇ.. ನಿಮ್ಗೆ ತಾಕತ್ ಇದ್ರೆ ಮಲ್ಲೇಶ್ವರಂನಲ್ಲಿ ಕಾಂಗ್ರೆಸ್‌ನಿಂದ ಗೆದ್ದು ತೋರಿಸ್ರೀ ನೋಡೋಣ. ಯಾಕೆ ಸುಮ್ಮನೆ ಮಾತನಾಡ್ತೀರಾ. ನಾನು ನಿಮಗೆ ಸವಾಲ್ ಹಾಕುತ್ತೇನೆ. ಗೆದ್ದು ತೋರಿಸ್ರಿ ನಿಮಗೆ ತಾಕತ್ ಇದ್ರೆ ಎಂದು ಗುಡುಗಿದ್ದಾರೆ.
‘ಲೋಕಸಭಾ ಚುನಾವಣೆವರೆಗೂ ಹರಿತೀವಿ’
ಕೇಂದ್ರ ಸರ್ಕಾರ ರಾಜ್ಯಕ್ಕೆ ಅಕ್ಕಿ ಕೊಡದೆ ಅನ್ಯಾಯ ಮಾಡಿದೆ ಎಂದು ಶಿವಲಿಂಗೇಗೌಡ ಸದನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಆಗ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ಮಧ್ಯೆ ಜೋರು ವಾಕ್ಸಮರ ನಡೀತು. ಶಿವಲಿಂಗೇಗೌಡರು ಬಡವರಿಗೆ ನೀಡುವ ಅಕ್ಕಿಯನ್ನ ಕೇಂದ್ರ ಸರ್ಕಾರ ಯಾಕೆ ನೀಡುತ್ತಿಲ್ಲ. ಇದೇನಾ ಒಕ್ಕೂಟ ವ್ಯವಸ್ಥೆನಾ? ಕೊಟ್ಟು ತೆಗೆದುಕೊಳ್ಳೋದೇ ಒಕ್ಕೂಟ ವ್ಯವಸ್ಥೆ. ಕೊರೊನಾ ಕಾಲದಲ್ಲಿ ನಾವು ಸಹಕಾರ ನೀಡಲಿಲ್ಲವಾ? ನಾವು ಭಾರತ ಮಾತೆಗೆ ಜೈ ಅಂತಾ ಯಾಕೆ ಹೇಳುತ್ತೇವೆ. ಮೊದಲು ಅಕ್ಕಿ ಕೊಡುವುದಾಗಿ ಹೇಳಿ ಆಮೇಲೆ ಯಾಕೆ ಕೊಡೋದಿಲ್ಲ ಅಂದ್ರು. ಇದನ್ನ ಲೋಕಸಭಾ ಚುನಾವಣೆವರೆಗೂ ಬಿಡೋದಿಲ್ಲ. ಹಾಕೊಂಡು ಹರಿತೀವಿ. ಅಕ್ಕಿ ಕೊಡದಿರುವ ಪರಿಣಾಮ ಏನು ಅಂತಾ ಮುಂದೆ ತೋರಿಸುತ್ತೇವೆ ಎಂದು ಸವಾಲು ಹಾಕಿದರು.
ಶಿವಲಿಂಗೇಗೌಡರ ಈ ಮಾತಿಗೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಇಷ್ಟು ದಿನ ಜೆಡಿಎಸ್‌ನಲ್ಲಿ ಏನು ಅರಿದ್ರಿ.. ಈಗ ಕಾಂಗ್ರೆಸ್‌ನಲ್ಲಿ ಹೋಗಿ ಏನು ಅರಿದ್ರಿ ಅನ್ನೋದನ್ನು ಹೇಳ್ರಿ ಎಂದು ಶಾಸಕ ಸುನೀಲ್ ಕುಮಾರ್ ಕೇಳಿದರು. ಈ ಮಾತಿಗೆ ಮಧ್ಯಪ್ರವೇಶಿದ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಅವರು ಪಾಪ ನೀವು ಯಾಕೆ ಕೇಂದ್ರದ ಬಗ್ಗೆ ಮಾತನಾಡ್ತೀರಾ? ಪಾಪ ಅವರೆಲ್ಲ ಕಾಂಪಿಟೇಷನ್ ಲೈನ್‌ನಲ್ಲಿದ್ದಾರೆ. ಯಾರು ಹೆಚ್ಚು ಮಾತನಾಡ್ತಾರೆ, ಕಡಿಮೆ ಮಾಡ್ತಾರೆ. ಇದರ ಬಗ್ಗೆ ಎಲ್ಲವೂ ಪ್ರಿಂಟ್ ಆಗುತ್ತಿದೆ. ಅವರಿಗೆ ಅಲ್ಲಿ ಮಾರ್ಕ್ಸ್ ಬರ್ತಿದೆ. ನೀವು ಸುಮ್ಮನೆ ಅವರನ್ನ ಯಾಕೆ ಎಳೆಯುತ್ತೀರಿ ಎಂದು ಟಾಂಗ್ ಕೊಟ್ರು.
ಸದನದಲ್ಲಿ ಬಿಜೆಪಿ ಸದಸ್ಯರ ಅಡ್ಡಿಗೆ ಸಿಎಂ ಸಿದ್ದರಾಮಯ್ಯ ಕೂಡ ಗರಂ ಆಗಿದ್ದಾರೆ. ಅಶ್ವತ್ಥ್ ನಾರಾಯಣ್ ನೀವು ಸಚಿವರು, ಉಪಮುಖ್ಯಮಂತ್ರಿ ಆಗಿದ್ದವರು. ಅವರು ಮಾತನಾಡುವಾಗ ಎದ್ದುನಿಂತು ಡಿಸ್ಟರ್ಬ್ ಮಾಡಿದ್ರೆ ಹೇಗೆ? ಏನಾದರೂ ಇದ್ರೆ ವಿಷಯಾಂತರ ಆಗಿದ್ರೆ ಪಾಯಿಂಟ್ ಆಫ್ ಆರ್ಡರ್ ಮಾಡಿ. ಹೀಗೆ ಮಾಡಿದ್ರೆ ಅಸೆಂಬ್ಲಿ ನಡೆಯೋದು ಹೇಗೆ? ಶಿವಲಿಂಗೇಗೌಡರನ್ನ ಮಾತನಾಡೋಕೆ ಬಿಡಿ. ಏನಾದರೂ ಇದ್ರೆ ಅವರು ಮಾತನಾಡಿದ ಬಳಿಕ ಹೇಳಿ ಬೇಡ ಅಂದವರು ಯಾರು? ಶಿವಲಿಂಗೇಗೌಡ್ರೇ ನೀವು ಬಿಜೆಪಿಯವರ ಕಡೆ ನೋಡಿಕೊಂಡು ಮಾತನಾಡಬೇಡಿ. ಸ್ಪೀಕರ್ ಕಡೆ ನೋಡಿಕೊಂಡು ಮಾತನಾಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ್ರು ಹಾಗೂ ಬಿಜೆಪಿ ನಾಯಕ ಡಾ. ಸಿ.ಎನ್ ಅಶ್ವತ್ಥ್ ನಾರಾಯಣ ಅವರ ಮಧ್ಯೆ ಸಖತ್ ವಾಕ್ಸಮರ ನಡೆದಿದೆ. ರೀ ಡಾಕ್ಟ್ರೇ ನಿಮ್ಗೆ ತಾಕತ್ ಇದ್ರೆ ಅಂತಾ ಶಿವಲಿಂಗೇಗೌಡ್ರು ಸವಾಲು ಹಾಕಿದ್ರೆ, ಬಿಜೆಪಿ ಸದಸ್ಯರು ಕೌಂಟರ್ ಕೊಟ್ಟಿದ್ದಾರೆ. #NewsFirstKannada #Newsfirstlive #KannadaNews… pic.twitter.com/RprR2BlgAC
— NewsFirst Kannada (@NewsFirstKan) July 13, 2023