ಇನ್ನೂ ಸರ್ವೀಸ್ ರೋಡ್ ನಿರ್ಮಾಣ ಮಾಡದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ಸರ್ವೀಸ್ ರೋಡ್ ಮಾಡದೆ ಟೋಲ್ ಸಂಗ್ರಹಿಸಿದ್ರೆ ಹುಷಾರ್ ಎಂದ ಶಾಸಕ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿರುದ್ಧ ಶಾಸಕ ರವಕುಮಾರ್ ಗಣಿಗ ಆಕ್ರೋಶ
ಬೆಂಗಳೂರು: ಸದ್ಯ ಭಾರೀ ಸದ್ದು ಮಾಡುತ್ತಿರೋ ಹೆದ್ದಾರಿ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇ. ಕಾರಣ ಕಳೆದ 9 ತಿಂಗಳಲ್ಲಿ 850ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ. ಅದರಲ್ಲೂ 150ಕ್ಕೂ ಹೆಚ್ಚು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಹೀಗಾಗಿ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇ ಸೇಫ್ಟಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಮಧ್ಯೆ ಸರಿಯಾಗಿ ಸರ್ವೀಸ್ ರೋಡ್ ಮಾಡದೆ ಟೋಲ್ ಸಂಗ್ರಹ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮಂಡ್ಯದ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಮಾತಾಡಿದ ಶಾಸಕ ರವಿಕುಮಾರ್ ಗಣಿಗ, ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇ ಗುತ್ತಿಗೆದಾರನಿಗೆ ಪ್ರೀತಿಯಾಗಿರೋ ಹೆದ್ದಾರಿ. ನನ್ನ ಕ್ಷೇತ್ರದಲ್ಲಿ ಸರ್ವೀಸ್ ರೋಡ್ ಮಾಡದೆ ಟೋಲ್ ಸಂಗ್ರಹ ಮಾಡುವ ಮೂಲಕ ಜನರನ್ನು ಸಾಯಿಸುತ್ತಿದ್ದಾರೆ. ಸರ್ವಿಸ್ ರಸ್ತೆ ಇಲ್ಲದೆ ಜನ ಹೈವೆಗೆ ಬಂದು ಸಾಯಬೇಕಾಗಿದೆ ಎಂದರು.
ದಸರಾ ಸಂದರ್ಭದಲ್ಲಿ ಒಂದು ಕೆರೆ ಹೊಡೆದು ಹೋಗಿ ಹೈವೆ ಬಂದ್ ಆಗಿತ್ತು. ಈ ಬಾರಿ ಮಳೆ ಬಂದರೆ ಅಲ್ಲಿ ಮತ್ತೆ ಸಮಸ್ಯೆ ಆಗುತ್ತೆ. ಚಿಕ್ಕ ಮಂಡ್ಯದಲ್ಲಿ ಊರು ಮುಳುಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಕೊನೇ ಎಚ್ಚರಿಕೆ ನೀಡುತ್ತಿದ್ದೇನೆ. ಹೀಗೆ ಮುಂದುವರಿದರೆ ಟೋಲ್ ಪ್ಲಾಜಾಗಳನ್ನು ಪೀಸ್ ಪೀಸ್ ಮಾಡಲಾಗುತ್ತದೆ. ಮಂಡ್ಯದಲ್ಲಿ ಬಸ್, ಕಾರ್ ತಡೆದು ಹೋರಾಟ ಮಾಡೋದು ಗ್ಯಾರಂಟಿ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ