ಸೋನಿಯಾ ಗಾಂಧಿ ನೇತೃತ್ವದಲ್ಲಿ ಮಹತ್ವದ ಸಮಾಲೋಚನೆ
ಸಂಸದ ಸ್ಥಾನ ಮರಳಿ ಸಿಗುತ್ತಿದ್ದಂತೆ ‘ಇಂಡಿಯಾ’ ಸಂಭ್ರಮ
ಇಂಡಿಯಾ ಮೈತ್ರಿಕೂಟದ ಸಂಸದರಿಗೆ ಸಿಹಿ ತಿನ್ನಿಸಿದ ಖರ್ಗೆ
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇಂದು ಸಂಸತ್ ಭವನಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ. ಲೋಕಸಭಾ ಸ್ಪೀಕರ್ ಈ ಹಿಂದಿನ ಅನರ್ಹತೆ ಆದೇಶ ಹಿಂತೆಗೆದುಕೊಳ್ಳುತ್ತಿದ್ದಂತೆ ಕೈ ನಾಯಕರ ಸಂಭ್ರಮ ಮುಗಿಲು ಮುಟ್ಟಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಂಸತ್ ಭವನದ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರು ಸಿಹಿ ತಿನ್ನಿಸಿ ಸಂಭ್ರಮ ಆಚರಿಸಿದರು. ಮಲ್ಲಿಕಾರ್ಜುನ ಖರ್ಗೆ ಅವರು ಖುದ್ದು ಇಂಡಿಯಾ ಮೈತ್ರಿಕೂಟದ ಕೆಲ ಸಂಸದರಿಗೆ ಸಿಹಿ ತಿನ್ನಿಸಿ ಸಂತಸ ವ್ಯಕ್ತಪಡಿಸಿದರು. ಎಐಸಿಸಿ ನಾಯಕರಾದ ಕೆ.ಸಿ ವೇಣುಗೋಪಾಲ್, ಅಧಿರಂಜನ್ ಚೌಧರಿ, ಜಯರಾಮ್ ರಮೇಶ್ ಸೇರಿದಂತೆ ಹಲವರು ಹಾಜರಿದ್ದರು.
ಸಂಸತ್ ಭವನಕ್ಕೆ ಆಗಮಿಸುತ್ತಿದ್ದಂತೆ ರಾಹುಲ್ ಗಾಂಧಿ ಅವರನ್ನ ಇಂಡಿಯಾ ಮೈತ್ರಿಕೂಟದ ಸಂಸದರು ಘೋಷಣೆ ಕೂಗುತ್ತಾ ಭರ್ಜರಿಯಾಗಿ ಸ್ವಾಗತಿಸಿದರು. ಗಾಂಧಿ ಪ್ರತಿಮೆ ನಮಸ್ಕರಿಸಿದ ರಾಹುಲ್ ಗಾಂಧಿ ಅವರು ಸಂಸತ್ ಭವನಕ್ಕೆ ರೀ ಎಂಟ್ರಿ ಕೊಟ್ಟರು. ರಾಹುಲ್ ಗಾಂಧಿ ಅವರ ಸಂಸದ ಸ್ಥಾನ ವಾಪಸ್ ಆಗುತ್ತಿದ್ದಂತೆ ಇಂಡಿಯಾ ಮೈತ್ರಿಕೂಟದ ನಾಯಕರು ಮಹತ್ವದ ಸಭೆಯನ್ನು ನಡೆಸಿದ್ದಾರೆ. ಸಿಪಿಪಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಕೆಸಿ ವೇಣುಗೋಪಾಲ್ ಅವರೊಂದಿಗೆ ಮಣಿಪುರ ನಾಯಕರು ಮಹತ್ವದ ಚರ್ಚೆ ನಡೆಸಿದ್ದಾರೆ. ರಾಹುಲ್ ಗಾಂಧಿ ಅವರ ಸಂಸದ ಸ್ಥಾನ ಮರಳಿ ಸಿಗುತ್ತಿದ್ದಂತೆ ಇಂಡಿಯಾ ಮೈತ್ರಿಕೂಟಕ್ಕೆ ಹೊಸ ಜೋಶ್ ಬಂದಿದೆ. ಇದು 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ NDA ವರ್ಸಸ್ I.N.D.I.A ಯುದ್ಧಕ್ಕೆ ಹೊಸ ತಿರುವು ನೀಡಲಿದೆ. ರಾಹುಲ್ ಗಾಂಧಿ ಅವರನ್ನೇ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಬೇಕು ಅನ್ನೋ ಚರ್ಚೆಗಳು ನಡೆಯುತ್ತಿದೆ.
ಸಂಸತ್ ಸದಸ್ಯ ಸ್ಥಾನ ಮರಳಿ ಸಿಗುತ್ತಿದ್ದಂತೆ ರಾಹುಲ್ ಗಾಂಧಿ ಅವರು ಸಂಸತ್ ಅಧಿವೇಶನಕ್ಕೂ ಹಾಜರಾಗಿದ್ದಾರೆ. ಲೋಕಸಭೆಯಲ್ಲಿ ರಾಹುಲ್ ಗಾಂಧಿ ಅವರ ಹಾಜರಿ ಇಂದು ವಿಶೇಷವಾಗಿತ್ತು. ಇದರ ಜೊತೆ ರಾಹುಲ್ ಗಾಂಧಿ ಅವರಿಗೆ ಇಂದೇ ಹೊಸ ಸರ್ಕಾರಿ ನಿವಾಸ ನೀಡುವ ಸಾಧ್ಯತೆಯಿದೆ. ಕೆಲ ತಿಂಗಳ ಹಿಂದೆ ಸಂಸತ್ ಸ್ಥಾನದಿಂದ ಅನರ್ಹಗೊಂಡ ಬಳಿಕ ಅಧಿಕಾರಿಗಳು ಸರ್ಕಾರಿ ನಿವಾಸವನ್ನು ವಾಪಾಸ್ ಪಡೆದಿದ್ದರು. ಇಂದು ಸಂಸದ ಸ್ಥಾನ ವಾಪಸ್ ಸಿಗುತ್ತಿದ್ದಂತೆ ಸರ್ಕಾರಿ ನಿವೇಶನವೂ ಹಂಚಿಕೆ ಆಗುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ