ಪ್ರಧಾನಿ ನರೇಂದ್ರ ಮೋದಿ ಕಾಲೆಳೆದ ಕರ್ನಾಟಕ ಕಾಂಗ್ರೆಸ್
ನಿಮ್ಮ ನಿರ್ಧಾರದಿಂದ ಡಾಲರ್ ಮೌಲ್ಯ 15 ರೂ. ಆಗುತ್ತಾ?
ಟೀಂ ಇಂಡಿಯಾ ಹೆಸರು ಬದಲಿಸಿದ್ದಕ್ಕೆ ಕೈ ಕೆಂಡಾಮಂಡಲ
ಬೆಂಗಳೂರು: ದೇಶಕ್ಕೆ ಇಂಡಿಯಾ ಬದಲಿಗೆ ಭಾರತ ಎಂದು ಮರುನಾಮಕರಣ ಮಾಡುವ ಪ್ರಧಾನಿ ನರೇಂದ್ರ ಮೋದಿ ನಿರ್ಧಾರಕ್ಕೆ ಕಾಂಗ್ರೆಸ್ ಸೇರಿದಂತೆ ಕೇಂದ್ರ ವಿಪಕ್ಷಗಳು ಭಾರೀ ವಿರೋಧ ವ್ಯಕ್ತಪಡಿಸಿವೆ. ಇಂಡಿಯಾ, ಭಾರತ ಎನ್ನುವುದು ಮೊದಲೇ ಇತ್ತು. ಈಗ ಭಾರತ ಎಂದು ಮರುನಾಮಕರಣ ಮಾಡೋ ಅಗತ್ಯವೇನಿತ್ತು. ಇದು ಕೇವಲ ಲೋಕಸಭಾ ಚುನಾವಣೆ ಗಿಮಿಕ್ ಎಂದು ಕೆಂಡಾಕಾರುತ್ತಿವೆ. ಈ ಮಧ್ಯೆ ಕರ್ನಾಟಕ ಕಾಂಗ್ರೆಸ್ ಟ್ವೀಟ್ವೊಂದು ಮಾಡಿ ಮೋದಿ ಕಾಲೆಳೆದಿದೆ.
ಈ ಸಂಬಂಧ ಟ್ವೀಟ್ (X) ಮಾಡಿದ ಕರ್ನಾಟಕ ಕಾಂಗ್ರೆಸ್, ಇಂಡಿಯಾ ಹೆಸರು ಬದಲಿಸಿದರೆ ಒಂದು ಡಾಲರ್ ಹದಿನೈದು ರೂ. ಆಗುತ್ತದೆಯೇ? ಯುವಕರ ನಿರುದ್ಯೋಗ ಸಮಸ್ಯೆ ಬಗೆಹರಿದು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯಾಗುತ್ತದೆಯೇ? ಎಂದು ಪ್ರಶ್ನಿಸಿದೆ.
ಹಾಗೆಯೇ ಮುಂದುವರಿದ ಕಾಂಗ್ರೆಸ್, ಕುಸಿದ ಅರ್ಥ ವ್ಯವಸ್ಥೆ ಪುಟ್ಟಿದೇಳುವುದೇ? ಚೀನಾ ಆಕ್ರಮಿಸಿದ ಭಾರತದ ನೆಲವನ್ನು ಬಿಟ್ಟು ಇಂಡಿಯಾದ ನೆಲದತ್ತ ಗಮನಿಸುವುದೇ! ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಕುಸಿತ ಕಂಡಿದೆ. ಕೇಂದ್ರ ಸರ್ಕಾರ ಮಾತ್ರ ದೇಶದ ಹೆಸರಿನ ಬಗ್ಗೆ ತಲೆ ಕೆಡಿಸಿಕೊಂಡಿದೆ ಎಂದು ಕಿಡಿಕಾರಿದೆ.
ಪ್ರಧಾನಿ ಮೋದಿ ಹೇಳಿದ್ದೇನು..?
ಭಾರತ್ ಹೆಸರಿನ ಕುರಿತು ನಾನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಭಾರತ ಎನ್ನುವವರು ಭಾರತ ಎನ್ನಲಿ. ಇಂಡಿಯಾ ಎನ್ನುವವರು ಇಂಡಿಯಾ ಎನ್ನಲಿ. ಈ ಚರ್ಚೆಯನ್ನು ನಾವು ಹುಟ್ಟು ಹಾಕೇ ಇಲ್ಲ ಎಂದು ಮೋದಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ