ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಹಸ್ತಕ್ಕೆ ಆಹ್ವಾನ!
ಅಸೆಂಬ್ಲಿ ಕ್ಷೇತ್ರದ ನಾಯಕರ ಆಪರೇಷನ್ಗೆ ಪ್ಲಾನ್!
ಕುತೂಹಲ ಮೂಡಿಸಿದ ಎಂಪಿ ರೇಣುಕಾಚಾರ್ಯ ನಡೆ
ರಾಜ್ಯ ರಾಜಕೀಯದಲ್ಲೀಗ ಆಪರೇಷನ್ ಹಸ್ತದ್ದೇ ಸದ್ದು. ಬೆಂಗಳೂರು ಕೇಂದ್ರಿತ ರಾಜಕಾರಣ, ದಶ ದಿಕ್ಕಿನಲ್ಲೂ ಪ್ರತಿಫಲಿಸ್ತಿದೆ. ಕಾಂಗ್ರೆಸ್ ಬಿಟ್ಟು ಹೋದ ನಾಯಕರು, ಮೂಲ ಬಿಜೆಪಿಗರು ಕೂಡ ಹಸ್ತದತ್ತ ಚಿತ್ತ ನೆಟ್ಟಿದ್ದಾರೆ. ಡಿಕೆಶಿ ಉರುಳಿಸಿದ ದಾಳ, ಧಾರವಾಡ, ವಿಜಯನಗರ, ದಾವಣಗೆರೆಯಲ್ಲೂ ಫಲ ಕೊಡ್ತಿದೆ. ಚುನಾವಣೆ ಬಳಿಕ ಸಂಪ್ ಆಗ್ತಿದ್ದ ಜಂಪಿಂಗ್ ಈ ಬಾರಿ ಅದಕ್ಕೆ ತದ್ವಿರುದ್ಧವಾಗ್ತಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿಯುತ್ತಲೆ, ಘರ್ ವಾಪ್ಸಿಗೆ ಚಾಲನೆ ಕೊಟ್ಟಿದೆ. ಈಗಾಗಲೇ ಬಿಜೆಪಿ ಹಲವು ನಾಯಕರು, ಕಾಂಗ್ರೆಸ್ನ ಹೊಸ್ತಿಲಲ್ಲಿ ನಿಂತಿದ್ದಾರೆ. ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಈ ನಾಯಕರು, ಹಸ್ತಲಾಘವದಿಂದ ರಾಜಕೀಯ ಲಾಭ ಅಂತ ಲೆಕ್ಕಾಚಾರ ಹಾಕ್ತಿದ್ದಾರೆ. ಈ ಬೆನ್ನಲ್ಲೆ ಜಿಲ್ಲಾವಾರು ಬಲಿಷ್ಠ ನಾಯಕರನ್ನ ಪಕ್ಷಕ್ಕೆ ಸೆಳೆಯಲಾಗ್ತಿದೆ.
ಧಾರವಾಡ ಇಬ್ಬರು ಲಿಂಗಾಯತ ನಾಯಕರಿಗೆ ಆಪರೇಷನ್!
ಮುನೇನಕೊಪ್ಪ, ಚಿಕ್ಕನಗೌಡರ್ಗೆ ಕಾಂಗ್ರೆಸ್ ಹಾಕಿದ್ಯಾ ಗಾಳ?
ಬೆಂಗಳೂರಿನಲ್ಲಿ ಆಪರೇಷನ್ ಹಸ್ತದ ಕಾರ್ಯಾಚರಣೆಗೆ ಬ್ಲೂಪ್ರಿಂಟ್ ಸಿದ್ಧಗೊಳ್ತಿದೆ. ಶಿವಮೊಗ್ಗದ ಆಯನೂರು ಮಂಜುನಾಥ್, ಯಶವಂತಪುರದ ಸೋಮಶೇಖರ್ ಆಪ್ತರು ಹಸ್ತಾಕ್ಷರ ಹಾಕಿದ್ದಾರೆ. ಈಗ ದೂರದ ಧಾರವಾಡದಲ್ಲೂ ಆಪರೇಷನ್ ಹಸ್ತದ ದಾಳ ಉರುಳಿದೆ. ಲಿಂಗಾಯತ ನಾಯಕರಾದ ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, ಚಿಕ್ಕನಗೌಡರ್ ಕಾಂಗ್ರೆಸ್ ಸೇರ್ತಾರೆ ಅಂತ ಸ್ವತಃ ಸಚಿವ ಸಂತೋಷ ಲಾಡ್ ಮಾಹಿತಿ ರಿವೀಲ್ ಮಾಡಿದ್ದಾರೆ.
ಮಾಜಿ ಸಚಿವ ಆನಂದ್ ಸಿಂಗ್ಗೆ ಆಪರೇಷನ್ ಹಸ್ತ!

ಇತ್ತ, ಬಾಂಬೆ ಫ್ರೆಂಡ್ಸ್ನ ಪ್ರಮುಖ ನಾಯಕ ಮಾಜಿ ಸಚಿವ ಆನಂದ್ ಸಿಂಗ್ಗೂ ಆಪರೇಷನ್ ಹಸ್ತದ ಗಾಳ ಹಾಕಲಾಗಿದೆ. ಪುತ್ರನ ರಾಜಕೀಯ ಭವಿಷ್ಯದ ದಾಳ ಉರುಳಿಸಿದ ಡಿಕೆಶಿ, ಕಾಂಗ್ರೆಸ್ಗೆ ಬರುವಂತೆ ಆಹ್ವಾನ ನೀಡಿದ್ದಾರೆ ಅನ್ನೋ ಚರ್ಚೆ ಶುರುವಾಗಿದೆ. ಚುನಾವಣಾ ನಂತ್ರ ಬಿಜೆಪಿಯಲ್ಲಿದ್ರೂ ಹೆಚ್ಚಾಗಿ ಕಾಣಿಸದ ಆನಂದ್ ಸಿಂಗ್, ಡಿಕೆಶಿ ಬಳಿ ಸಮಯಾವಕಾಶ ಕೇಳಿದ್ದಾರೆ ಎನ್ನಲಾಗಿದೆ.
ಕಮಲಕ್ಕೆ ಅನುಮಾನ ತಂದ ರೇಣುಕಾಚಾರ್ಯ ನಿಗೂಢ ನಡೆ!
ಸಿಎಂ, ಡಿಸಿಎಂ ಬಳಿಕ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಭೇಟಿ
ಮಾಜಿ ಸಚಿವ ರೇಣುಕಾಚಾರ್ಯ ನಡೆ ಬಿಜೆಪಿಯನ್ನೇ ದಂಗು ಬಡಿಸ್ತಿದೆ. ದಾವಣಗೆರೆ ಲೋಕಸಭೆ ಟಿಕೆಟ್ ಮೇಲೆ ಕಣ್ಣಿಟ್ಟಿರುವ ರೇಣುಕಾಚಾರ್ಯ ನಡೆ ಅನುಮಾನ ಹೆಚ್ಚಿಸಿದೆ. ಒಬ್ಬರಾದ ಮೇಲೆ ಒಬ್ಬರಂತೆ ಕಾಂಗ್ರೆಸ್ ನಾಯಕರನ್ನ ರೇಣುಕಾಚಾರ್ಯ ಭೇಟಿ ಮಾಡ್ತಿದ್ದಾರೆ. ಸಿಎಂ, ಡಿಸಿಎಂ ಭೇಟಿ ಬಳಿಕ ಎಸ್.ಎಸ್ ಮಲ್ಲಿಕಾರ್ಜುನ್ ಭೇಟಿ ಆಗಿದ್ದಾರೆ. ಶಾಮನೂರು ಶಿವಶಂಕರಪ್ಪ ಬಳಿ ಪಕ್ಷ ಸೇರುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಡಿಸಿಎಂ ಡಿಕೆಶಿಯಿಂದ ಟಾರ್ಗೆಟ್ ಬೆಂಗಳೂರು ನಾರ್ಥ್
8 ಅಸೆಂಬ್ಲಿ ಕ್ಷೇತ್ರದ ನಾಯಕರ ಆಪರೇಷನ್ಗೆ ಪ್ಲಾನ್!
ಇತ್ತ, ರಾಜ್ಯ ರಾಜಧಾನಿ ಬೆಂಗಳೂರಿನ ಮೇಲೆ ನಿಯಂತ್ರಣ ಸಾಧಿಸಲು ಡಿಸಿಎಂ ಡಿಕೆಶಿ ಬಿಗ್ ಪ್ಲಾನ್ ರೂಪಿಸ್ತಿದ್ದಾರೆ. ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರ ಅಂದ್ರೆ ಅದು ಬೆಂಗಳೂರಿನ ಒಕ್ಕಲಿಗರ ಕೋಟೆ. ಸದ್ಯ ಇದೇ ಕೋಟೆ ಮೇಲೆ ಡಿಕೆಶಿ ಕಣ್ಣಿಟ್ಟಿದ್ದಾರೆ. ಈ ಕಾರಣಕ್ಕೆ ಎಂಟು ಅಸೆಂಬ್ಲಿ ಕ್ಷೇತ್ರದ ನಾಯಕರ ಆಪರೇಷನ್ಗೆ ಡಿಕೆಶಿ ಇಳಿದಿದ್ದಾರೆ. ಮಾಜಿ ಸಚಿವ ಎಸ್.ಟಿ ಸೋಮಶೇಖರ್ ಪ್ರತಿನಿಧಿಸುವ ಯಶವಂತಪುರ ಕ್ಷೇತ್ರ, ಬೈರತಿ ಬಸವರಾಜ್ ಅವರ ಕೆ.ಆರ್ ಪುರಂ, ಕೆ.ಗೋಪಾಲಯ್ಯ ಶಾಸಕರಾಗಿರುವ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರವನ್ನ ಡಿಕೆಶಿ ಟಾರ್ಗೆಟ್ ಮಾಡಿದ್ದಾರೆ. ದಾಸರಹಳ್ಳಿ ಕ್ಷೇತ್ರ ಮೇಲೂ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.
ಇತ್ತ, ರಾಜ್ಯ ರಾಜಕಾರಣ ಸದ್ದು ಮಾಡ್ತಿರುವ ಘರ್ವಾಪ್ಸಿ ಬಿಬಿಎಂಪಿಯಲ್ಲೂ ಸದ್ದು ಮಾಡ್ತಿದೆ. ಕಾಂಗ್ರೆಸ್ ತೆರೆದು ಹೋದವರು ಮರಳಿ ಗೂಡು ಸೇರ್ತಿದ್ದಾರೆ. ಶಾಸಕರು ಮಾತ್ರವಲ್ಲ ಅವರ ಬೆಂಬಲಿಗರೂ ಕಾಂಗ್ರೆಸ್ಗೆ ಸೇರ್ಪಡೆ ಆಗ್ತಿದ್ದಾರೆ. ಈಗಾಗಲೇ ಹಲವು ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಮರಳಿದ್ದು, ಇನ್ನೂ 50 ಹೆಚ್ಚು ಜನ ತವರಿಗೆ ಮರಳಲು ಸಿದ್ಧರಾಗಿದ್ದಾರಂತೆ. ಒಟ್ಟಾರೆ, ಬಿಬಿಎಂಪಿ ಚುನಾವಣೆ ಆ ಬಳಿಕ ಬರುವ ಲೋಕಸಭೆ ಕದನಕ್ಕೆ ಕಮಲ-ದಳಕ್ಕೂ ಮುನ್ನವೇ ಕಾಂಗ್ರೆಸ್ ಸಮರ ಸನ್ನದ್ಧಗೊಳ್ತಿದೆ. ರಾಜ್ಯದಲ್ಲಿ ಪಾರಮ್ಯ ಮೆರೆಯಲು ಕಾಂಗ್ರೆಸ್ ಹಸ್ತ ಎಂಬ ವ್ಯೂಹ ರಚಿಸಿದ್ದು, ಮುಂದಿನ ದಿನಗಳಲ್ಲಿ ಆಪರೇಷನ್ ತೀವ್ರಗೊಳ್ಳೋದು ಪಕ್ಕಾ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ