newsfirstkannada.com

ಆಂಧ್ರದಲ್ಲಿ ಅಣ್ಣ, ತೆಲಂಗಾಣದಲ್ಲಿ ತಂಗಿ! ಸಿಎಂ ಕೆಸಿಆರ್​​​ಗೆ ಶರ್ಮಿಳಾ ಸೆಡ್ಡು; ಸದ್ಯದಲ್ಲೇ ಕಾಂಗ್ರೆಸ್​​ ಸೇರ್ಪಡೆ

Share :

12-08-2023

    ತೆಲಂಗಾಣ ಗೆಲ್ಲಲು ಕಾಂಗ್ರೆಸ್​ನಿಂದ ಮಾಸ್ಟರ್​​ ಪ್ಲಾನ್​​​

    ವೈ.ಎಸ್​ ಶರ್ಮಿಳಾಗೆ ಗಾಳ ಹಾಕಿದ ಕಾಂಗ್ರೆಸ್​ ಪಾರ್ಟಿ

    ಸಿಎಂ ಜಗನ್​​ಗೂ ಸೆಡ್ಡು ಹೊಡೆಯುತ್ತಾರಾ ಶರ್ಮಿಳಾ?

ಹೈದರಾಬಾದ್​: ಮುಂದಿನ ಮೂರು ತಿಂಗಳಲ್ಲಿ ತೆಲಂಗಾಣ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದೆ. ಡಿಸೆಂಬರ್​​​ ತಿಂಗಳಲ್ಲಿ ನಡೆಯಲಿರೋ ಈ ಚುನಾವಣೆ ಗೆಲ್ಲಲು ಸಿಎಂ ಕೆ. ಚಂದ್ರಶೇಖರ್​​​ ರಾವ್​ ನೇತೃತ್ವದ ಭಾರತ ರಾಷ್ಟ್ರ ಸಮಿತಿ, ವೈ.ಎಸ್​ ಶರ್ಮಿಳಾ ನೇತೃತ್ವದ ವೈಎಸ್‌ಆರ್‌ ತೆಲಂಗಾಣ ಪಕ್ಷ ಸೇರಿದಂತೆ ಕಾಂಗ್ರೆಸ್ ಕೂ​​ ಭಾರೀ ತಯಾರಿ ನಡೆಸಿಕೊಂಡಿದೆ. ಇನ್ನೊಂದೆಡೆ ಜನಸೇನಾ, ಟಿಡಿಪಿ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿವೆ. ಹೀಗಿರುವಾಗ ಸಿಎಂ ಕೆಸಿಆರ್​​​ಗೆ ಸೆಡ್ಡು ಹೊಡೆಯಲು, ವೈ.ಎಸ್​ ಶರ್ಮಿಳಾ ಮತ್ತು ಕಾಂಗ್ರೆಸ್ಸಿಗರು​ ಮಾಸ್ಟರ್​​ ಪ್ಲಾನ್​​ ಮಾಡಿದ್ದಾರೆ.

ಹೌದು, ಕಾಂಗ್ರೆಸ್​ನೊಂದಿಗೆ ವೈ.ಎಸ್​ ಶರ್ಮಿಳಾ ನೇತೃತ್ವದ ವೈಎಸ್‌ಆರ್‌ ತೆಲಂಗಾಣ ಪಕ್ಷ ವಿಲೀನ ಆಗಲಿದೆ ಎಂದು ತಿಳಿದು ಬಂದಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್​​ ಜತೆ ಮಾತುಕತೆ ನಡೆಸಿರುವ ವೈ.ಎಸ್​ ಶರ್ಮಿಳಾ ಈ ಬಗ್ಗೆ ಮಹತ್ವದ ತೀರ್ಮಾನಕ್ಕೆ ಬಂದಿದ್ದಾರೆ. ಹೀಗಾಗಿ ಇನ್ನೇನು ಕೆಲವೇ ದಿನಗಳಲ್ಲಿ ಕಾಂಗ್ರೆಸ್​ ಜತೆ ತನ್ನ ಪಕ್ಷವನ್ನು ವಿಲೀನ ಮಾಡಲಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿ ಬಂದಿವೆ.

ಇತ್ತೀಚೆಗೆ ಹೈದರಾಬಾದ್​​​ ಇಂಟರ್​ನ್ಯಾಷನಲ್​​ ಏರ್ಪೋರ್ಟ್​​ನಲ್ಲಿ ಕಾಂಗ್ರೆಸ್​​ ನಾಯಕ ಕೋಮಟಿರೆಡ್ಡಿ ವೆಂಕಟ್ ರೆಡ್ಡಿ, ಶರ್ಮಿಳಾ ಅವರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್​ಗೆ ಬರುವಂತೆ ಆಹ್ವಾನ ನೀಡಿದ್ದರು. ಇದಾದ ಬಳಿಕ ಈ ರಾಜಕೀಯ ಬೆಳವಣಿಗೆ ಆಗಿದೆ.

ಶರ್ಮಿಳಾ ಮುಂದಿನ ನಡೆಯೇನು..?

ಅಣ್ಣ ವೈ.ಎಸ್​​ ಜಗನ್​ ಮೋಹನ್​ ರೆಡ್ಡಿ ಆಂಧ್ರ ಪ್ರದೇಶದಲ್ಲಿ ರಾಜಕೀಯ ಮಾಡಿದ್ರೆ, ತಂಗಿ ವೈ.ಎಸ್​​ ಶರ್ಮಿಳಾ ತೆಲಂಗಾಣದಲ್ಲಿ ರಾಜಕೀಯ ಮಾಡಲಿದ್ದಾರೆ. ಶರ್ಮಿಳಾ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಮಾತ್ರ ಸ್ಪರ್ಧಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಆಂಧ್ರಪ್ರದೇಶದಲ್ಲಿ ಲೋಕಸಭಾ ಚುನಾವಣೆಗೆ ಕಾಂಗ್ರೆಸ್​ ಪರ ಪ್ರಚಾರ ಮಾಡಲಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಂಧ್ರದಲ್ಲಿ ಅಣ್ಣ, ತೆಲಂಗಾಣದಲ್ಲಿ ತಂಗಿ! ಸಿಎಂ ಕೆಸಿಆರ್​​​ಗೆ ಶರ್ಮಿಳಾ ಸೆಡ್ಡು; ಸದ್ಯದಲ್ಲೇ ಕಾಂಗ್ರೆಸ್​​ ಸೇರ್ಪಡೆ

https://newsfirstlive.com/wp-content/uploads/2023/08/YS-Sharmila.jpg

Load More