newsfirstkannada.com

ತುಕಡೇ ತುಕಡೇ ಪಾರ್ಟಿ ಸೇರಿಸಿ ಮೋದಿ ಮೀಟಿಂಗ್‌.. NDA ಸಭೆಗೆ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯ

Share :

18-07-2023

    ಬಿಜೆಪಿ ಹಠಾವೋ, ಇಂಡಿಯಾ ಬಚಾವೋ ಘೋಷಣೆ

    ಇಲ್ಲಿಯವರೆಗೂ ಎನ್‌ಡಿಎ ಬಗ್ಗೆ ಮೋದಿಗೆ ನೆನಪಿರಲಿಲ್ಲ

    ನಮ್ಮ ಒಗ್ಗಟ್ಟು ನೋಡಿ ಪ್ರಧಾನಿ ಮೋದಿ ಬೆದರಿದ್ದಾರೆ

ಬೆಂಗಳೂರು: NDA ವಿರುದ್ಧ ‘INDIA’.. ಬಿಜೆಪಿ ಹಠಾವೋ, ಇಂಡಿಯಾ ಬಚಾವೋ.. ಇದು ವಿರೋಧ ಪಕ್ಷಗಳ ಒಕ್ಕೂಟ ಸಭೆಯಲ್ಲಿ ಕೇಳಿ ಬಂದಿರೋ ಘೋಷವಾಕ್ಯ. ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೋರಾಡಲು ಸಜ್ಜಾಗಿರುವ ಕಾಂಗ್ರೆಸ್ ನೇತೃತ್ವದಲ್ಲಿ ಮಿತ್ರಕೂಟ ಬೃಹತ್ ಶಕ್ತಿ ಪ್ರದರ್ಶಿಸಿವೆ. ಲೋಕಸಭಾ ಚುನಾವಣೆಗೆ ಹೋರಾಡಲು ವಿಪಕ್ಷಗಳ ಒಕ್ಕೂಟಕ್ಕೆ ‘INDIA’ ಎಂದು ನಾಮಕರಣ ಮಾಡಲಾಗಿದೆ.  ಈ ಮಹತ್ವದ ಸಭೆಯ ಬಳಿಕ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ವಿರೋಧಪಕ್ಷಗಳ ಸಭೆ ಅತ್ಯಂತ ಪ್ರಮುಖವಾಗಿತ್ತು. ಪ್ರಜಾಪ್ರಭುತ್ವ ರಕ್ಷಣೆಗೆ ದೇಶದ ಜನರ ರಕ್ಷಣೆಗೆ ಇದು ಅತ್ಯಗತ್ಯವಾಗಿತ್ತು. ಹೀಗಾಗಿ ನಾವೆಲ್ಲ ಒಂದುಗೂಡಿದ್ದೇವೆ. ಒಂದೇ ಧ್ವನಿಯಲ್ಲಿ ನಿರ್ಣಯ ಕೈಗೊಂಡಿದ್ದೇವೆ. ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವ, ದೇಶದ ಸಂವಿಧಾನವನ್ನೇ ನಾಶ ಮಾಡಲು ಹೊರಟಿದೆ. ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ‌ ಮಾಡಿಕೊಂಡು ವಿಪಕ್ಷಗಳ ವಿರುದ್ಧ ಆಯುಧವಾಗಿ ಬಳಸಿಕೊಂಡಿದೆ. ದೇಶದ ರಕ್ಷಣೆ ನಮ್ಮ ಹೊಣೆ. ಅದೇ ನಮ್ಮ ಮೊದಲ ಆದ್ಯತೆ. ಎಲ್ಲಾ ವಿಪಕ್ಷಗಳ ನಾಯಕರು ಇದಕ್ಕೆ ಸಲಹೆ ನೀಡಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.

ನಮ್ಮ ಒಗ್ಗಟ್ಟು ನೋಡಿ ಪ್ರಧಾನಿ ಮೋದಿ ಬೆದರಿದ್ದಾರೆ. ಮೊದಲು ಎನ್‌ಡಿಎ ಬಗ್ಗೆ ಮೋದಿಗೆ ನೆನಪಿರಲಿಲ್ಲ. ಅವರೇ ತುಕಡೇ ತುಕಡೇ ಆಗಿದ್ದರು. ಈಗ ಅವರು ಅವೆಲ್ಲವನ್ನೂ ಜೋಡಿಸುವ ಕೆಲಸ ಮಾಡ್ತಿದ್ದಾರೆ. ನಾವು ಯಾವ ಅಧಿಕಾರಕ್ಕಾಗಿಯೂ ಇಲ್ಲಿ ಸೇರಿಲ್ಲ. ಸಂವಿಧಾನ ರಕ್ಷಣೆಗೆ ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ ಸೇರಿದ್ದೇವೆ. ನಮ್ಮ ಗುರಿ ಒಂದೊಂದೇ ಸಮಸ್ಯೆಗಳನ್ನು ಬಗೆಹರಿಸುವುದಾಗಿದೆ. ಇನ್ನು, ನಮ್ಮ ಸಭೆಯನ್ನು ನೋಡಿ ಪ್ರಧಾನಿ ನರೇಂದ್ರ ಮೋದಿ 30 ಪಕ್ಷಗಳ ಎನ್‌ಡಿಎ ಸಭೆಯನ್ನು ಕರೆದಿದ್ದಾರೆ. ಇಷ್ಟೊಂದು ಪಕ್ಷಗಳು ಎನ್‌ಡಿಎನಲ್ಲಿ ಎಲ್ಲಿವೆ? ನಿಜಕ್ಕೂ ಇದು ನನಗೆ ಗೊತ್ತಿಲ್ಲ. ಈ ಹಿಂದೆ ಹಲವರು ಎನ್‌ಡಿಎ ತೊರೆದಿದ್ದರು. ಈಗ ಅವರನ್ನು ಒಂದುಗೂಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಗುಡುಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತುಕಡೇ ತುಕಡೇ ಪಾರ್ಟಿ ಸೇರಿಸಿ ಮೋದಿ ಮೀಟಿಂಗ್‌.. NDA ಸಭೆಗೆ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯ

https://newsfirstlive.com/wp-content/uploads/2023/07/Modi-Kharge.jpg

Load More